Home ಕರಾವಳಿ Archive by category ಮೂಡಬಿದರೆ (Page 9)

ಮೂಡುಬಿದಿರೆ : ದ್ವಿಚಕ್ರ ವಾಹನದಿಂದ ಬಿದ್ದು ಸಂಶಯಾಸ್ಪದ ಸಾವು

ಮೂಡುಬಿದಿರೆ : ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ಗುರುವಾರ ಸಂಜೆ ಬೈಕ್‌ನಿಂದ ಬಿದ್ದು ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ(49) ಮೃತಪಟ್ಟಿದ್ದು ಪೋಲಿಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬಂಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು

ಮೂಡುಬಿದಿರೆ: ಕಂಬಳದಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮ – ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

ಮೂಡುಬಿದಿರೆ: ಜಾನಪದ ಕ್ರೀಡೆ ಕಂಬಳ ನಮ್ಮ ಹೆಮ್ಮೆಯ ಕ್ರೀಡೆ. ಇಲ್ಲಿ ತೀರ್ಪುಗಾರರು ಪಾರದರ್ಶಕವಾಗಿ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಅವರು ನೀಡುವ ತೀರ್ಪುಗಾರರು ನೀಡುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಒಂಟಿಕಟ್ಟೆಯ ಸೃಷ್ಠಿ ಗಾರ್ಡನ್ ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬಗ್ಗೆ ಮಾತನಾಡಿದ

ಮೂಡುಬಿದಿರೆ : ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

ಶ್ರೀ ಮಹಾವೀರ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ. ನೇಮಿರಾಜ ಹೆಗ್ಡೆ (84) ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತಃ ಪಡಂಗಡಿ ಯವರಾದ ನೇಮಿರಾಜ ಹೆಗ್ಡೆ ಅವರು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯು, ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಬಿಎಸ್ ಸಿ ಪದವಿ, ಮೈಸೂರಿನಲ್ಲಿ ಬಿ. ಪಿ.ಎಡ್. ಪದವಿ ಗಳಿಸಿದರು. ‘ಮೂಡುಬಿದಿರೆ ಶ್ರೀಮಹಾವೀರ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿ ಪೂರ್ಣ ಸೇವೆ

ಕಲ್ಲಬೆಟ್ಟು : ಸ್ವಚ್ಛತಾ ಅರಿವು ಕಾರ್ಯಕ್ರಮ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ಯುವರೆಡ್ ಕ್ರಾಸ್ ಘಟಕದ 25ಸ್ವಯಂ ಸೇವಕರು ದ.ಕ.ಜಿ.ಪ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಬೆಟ್ಟುಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಅರಿವು ಮೂಡಿಸಿದರು. ಸ್ವಯಂ ಸೇವಕಿ ತನುಜಾ ಸ್ವಚ್ಛತೆಯ ಮಹತ್ವದ ಬಗ್ಗೆ ಮಾತನಾಡಿದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ ಸ್ವಯಂ ಸೇವಕರು ಮಕ್ಕಳಿಗೆ ಮನೋರಂಜನೆಯ ಆಟವನ್ನು ಆಡಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಮಾರ್ಗರೇಟ್ ಮಾತನಾಡಿ, ‘ಸ್ವಚ್ಛತೆಯ ಅರಿವು

ಮೂಡುಬಿದಿರೆ; ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಶೈಕ್ಷಣಿಕ ಸಮ್ಮೇಳನ

ಮೂಡುಬಿದಿರೆ : ಕ.ರಾ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ದ.ಕ. ಜಿಲ್ಲಾ ಘಟಕ ಮತ್ತು ಮೂಡುಬಿದಿರೆ ತಾಲೂಕು ಘಟಕ ಇವುಗಳ ಸಹಯೋಗದಲ್ಲಿ ಇಲ್ಲಿನ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಜಿಲ್ಲಾ ಶೈಕ್ಷಣಿಕ ಸಮ್ಮೇಳನ,ಪ್ರತಿಭಾ ಪುರಸ್ಕಾರ, ಅಭಿನಂದನ ಕಾರ್ಯಕ್ರಮವು ನಡೆಯಿತು.ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಉದ್ಘಾಟಿಸಿ ಮಾತನಾಡಿ ಸರಕಾರ ಎಲ್ಲ ಸರಕಾರಿ, ಅನುದಾನಿತ ಶಾಲೆಗಳಿಗೆ ಪೂರ್ಣಾವಧಿ ಶಿಕ್ಷಕರು, ಅಗತ್ಯ ಸೌಕರ್ಯಗಳನ್ನು

ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಮಲ್ಲಕಂಬ ಸ್ಪರ್ಧೆ: ಆಳ್ವಾಸ್ ಶಾಲೆಗೆ ತಂಡ ಪ್ರಶಸ್ತಿ

ಮೂಡುಬಿದಿರೆ: ನ. 18ರಿಂದ 20ರವರೆಗೆ ನಡೆದ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬಾಗಲಕೋಟೆ, ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬಾಗಲಕೋಟೆ, ಹ.ಉ.ಪೂ ಸರಕಾರಿ ಪ್ರೌಢ ಶಾಲೆ, ತುಳಸಿಗಿರಿ, ಸರಕಾರಿ ಕುವೆಂಪು ಶತಮಾನೋತ್ಸವ ಮಾದರಿ ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಜೆ.ಪಿ ತುಳಸಿಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 14ವರ್ಷ ಮತ್ತು 17 ವರ್ಷ ವಯೋಮಿತಿಯ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಮತ್ತು

ಮೂಡುಬಿದಿರೆ: ಶ್ರೀಕ್ಷೇತ್ರ ಪುತ್ತಿಗೆಯಲ್ಲಿ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

ಮೂಡುಬಿದಿರೆ: ಇಲ್ಲಿನ ಚೌಟರ ಅರಮನೆಯ ಆಡಳಿತಕ್ಕೆ ಒಳಪಟ್ಟ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಫೆ.28ರಿಂದ ಮಾರ್ಚ್ 7ರವರೆಗೆ ಧಾರ್ಮಿಕ ಕಾರ್ಯಕ್ರಮ, ಮಾರ್ಚ್ 6ರಂದು ಬ್ರಹ್ಮಕಲಶೋತ್ಸವ‌‌ ನಡೆಸುವುದೆಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಭಾನುವಾರ ಸಾಯಂಕಾಲ ದೇವಳದ ಆವರಣದಲ್ಲಿ ನಡೆದ ಸಭೆಯ ಮೊದಲು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕವನ್ನು ತಂತ್ರಿವರೇಣ್ಯರು, ಅರ್ಚಕವರ್ಗ,

ಮೂಡುಬಿದಿರೆ: ರಾಜ್ಯಮಟ್ಟದ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ : ಯೆನೆಪೋಯ ಕಾಲೇಜ್ ತಂಡ ಚಾಂಪಿಯನ್

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ತೋಡಾರಿನ ಯೆನೆಪೋಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು 2 ಚಿನ್ನ ಮತ್ತು 2 ಬೆಳ್ಳಿಯ ಪದಕದೊಂದಿಗೆ ತಂಡ ಚಾoಪಿಯನ್ ಪ್ರಶಸ್ತಿ ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ 1 ಚಿನ್ನದ ಪದಕ,1 ಬೆಳ್ಳಿಯ ಪದಕ, 3 ಕಂಚಿನ ಪದಕ ಗೆದ್ದು ತೃತಿಯ ತಂಡ ಚಾoಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪುರುಷರ 67 ಕೆ.

ಪ್ರಾಥಮಿಕ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ – ಆಳ್ವಾಸ್ ಶಾಲೆಗೆ 11 ಪದಕದೊಂದಿಗೆ ತಂಡ ಪ್ರಶಸ್ತಿ

ಮೂಡುಬಿದಿರೆ : ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 03 ಚಿನ್ನ, 06 ಬೆಳ್ಳಿ ಮತ್ತು 02 ಕಂಚಿನ ಪದಕಗಳೊಂದಿಗೆ 11

ಮೂಡುಬಿದಿರೆಯಲ್ಲಿ 45 ಎಕ್ರೆ ಜಾಗ ವಕ್ಫ್ ಗೆ ಮೀಸಲು ಬಿಜೆಪಿಯಿಂದ ಸುಳ್ಳು ಸುದ್ಧಿ – ಅರುಣ್ ಶೆಟ್ಟಿ ಆರೋಪ

ಮೂಡುಬಿದಿರೆ ತಾಲೂಕಿನ ಪಡುಕೊಣಾಜೆ ಗ್ರಾಮದಲ್ಲಿ ಸುಮಾರು 45 ಎಕ್ರೆ ಜಾಗವನ್ನು ಸರಕಾರ ವಕ್ಫ್ ಗೆ ಮೀಸಲಿಟ್ಟಿದೆ ಎಂದು ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿ ಹಬ್ಬಿಸಿ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ ಎಂದು ಮೂಡುಬಿದಿರೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಅವರು ಆರೋಪಿಸಿದ್ದಾರೆ. ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈ ಸುದ್ಧಿಯ