Home ಕರಾವಳಿ Archive by category ಸುರತ್ಕಲ್

Big Breaking: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ

ಭಾರತದ ಹೆಮ್ಮೆಯ ಹಾಗೂ ಮಧ್ಯಮ ವರ್ಗದ ಪ್ರೀತಿಯ ರತನ್‌ ಟಾಟಾ ಅವರು ಇನ್ನಿಲ್ಲ. ರತನ್‌ಟಾಟಾ ಅವರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ

ಸುರತ್ಕಲ್: ರಸ್ತೆ ಮಧ್ಯೆ ಬೆಂಕಿಗಾಹುತಿಯಾದ ಕಾರು

ರಾಷ್ಟ್ರಿಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ಸುರತ್ಕಲ್ ಎನ್ ಐಟಿಕೆ ಹಳೆ ಟೋಲ್ ಗೇಟ್ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ. ಸುಟ್ಟು ಕರಕಲಾದ ಕಾರು ಬಿಎಂಡಬ್ಲ್ಯೂ ಕಂಪೆನಿಯ ಕಾರೆಂದು ಹೇಳಲಾಗುತ್ತಿದ್ದು, ಕಾರು ಕುಂದಾಪುರ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಂಗಳೂರು ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಎನ್ ಐಟಿಕೆ ಬಳಿ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ ಎಂದು ತಿಳಿದು

ಬಿಎಂಆರ್ ಗೋಲ್ಡ್ & ಡೈಮಂಡ್ಸ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.14ರಂದು ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆ

ಸುರತ್ಕಲ್ ಕೃಷ್ಣಾಪುರದ ಬಿಎಂಆರ್ ಗೋಲ್ಡ್, ಗೋಲ್ಡ್ & ಡೈಮಂಡ್ಸ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಟಿಪಳ್ಳದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಆಟೋಟ ಸ್ಪರ್ಧೆಗಳನ್ನು ಆಗಸ್ಟ್ 14ರಂದು ಆಯೋಜಿಸಲಾಗಿದೆ. ಬೆಳಿಗ್ಗೆ 9.30ಕ್ಕೆ ಸರಿಯಾಗಿ ಕಾರ್ಯಕ್ರಮವು ಆರಂಭವಾಗಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ 6ನೇ ಬ್ಲಾಕ್ ಕಾಟಿಪಳ್ಳದ ಮಕ್ಕಳಿಗೆ ಮಾತ್ರ

ಬೈಕಂಪಾಡಿ ಪರಿಸರದಲ್ಲಿ ಅನಧಿಕೃತ ಅಂಗಡಿಗಳಿಗೆ ಟೈಗರ್ ಕಾರ್ಯಾಚರಣೆ

ಮಂಗಳೂರು ಮಹಾನಗರ ಪಾಲಿಕೆಯು ಟೈಗರ್ ಕಾರ್ಯಾಚರಣೆಯ ಮೂಲಕ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಯು ಇಂದು ಬೈಕಂಪಾಡಿ ಪರಿಸರದಲ್ಲಿ ನಡೆಯುತ್ತಿದೆ. ಇಂದು ನಗರದ ಸುರತ್ಕಲ್ – ಬೈಕಂಪಾಡಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಬೈಕಂಪಾಡಿ ಪರಿಸರದಲ್ಲಿ ಗಿಡನೆಡುವ ಮೂಲಕ ಕಾರ್ಯಾಚರಣೆಗೆ ಚಾಲನೆಯನ್ನು ನೀಡಲಾಯಿತು. ಮನಪಾ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆ ಮೂಲಕ ಕಾರ್ಯಾಚರಣೆ ನಡೆಸಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ.

ಉಡುಪಿ: ದುರಂತದಿಂದ ಪಾರಾದ ಮತ್ಸ್ಯ‌ಗಂಧ ಎಕ್ಸ್‌ಪ್ರೆಸ್ ರೈಲು

ಲೋಕೊ ಪೈಲಟ್ ಗಳ ಸಕಾಲಿಕ ತುರ್ತು ಕ್ರಮದಿಂದ ಇಂದು ಬೆಳಗ್ಗೆ ಮುಂಬಯಿಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯ‌ಗಂಧ ಎಕ್ಸ್‌ಪ್ರೆಸ್ ರೈಲು ದೊಡ್ಡ ದುರಂತದಿಂದ ಪಾರಾದ ಘಟನೆ ಬಾರಕೂರು – ಉಡುಪಿ ನಿಲ್ದಾಣಗಳ ನಡುವೆ ನಡೆದಿದೆ.ಕೊಂಕಣ ರೈಲು ಮಾರ್ಗದಲ್ಲಿ ಬಾರಕೂರು ಹಾಗೂ ಉಡುಪಿ ನಿಲ್ದಾಣಗಳ ನಡುವೆ ಬೆಳಗ್ಗೆ 9:18ಕ್ಕೆ ಮಣಿಪಾಲದ ಪೆರಂಪಳ್ಳಿ ಬಳಿ ದೊಡ್ಡ ಮರವೊಂದು ಭಾರೀ ಮಳೆಯಿಂದ ಹಳಿಗೆ ಅಡ್ಡವಾಗಿ ಬಿದ್ದಿರುವುದನ್ನು ರೈಲಿನ ಲೋಕೋಪೈಲಟ್ ಗಳು ತೀರಾ ಸಮೀಪದಲ್ಲಿ

ಸುರತ್ಕಲ್ ಬಂಟರ ಸಂಘದಲ್ಲಿ ಸಸಿ ವಿತರಣೆ, ಸಾಧಕರಿಗೆ ಸನ್ಮಾನ

ಸುರತ್ಕಲ್: ಬಂಟರ ಸಂಘ ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದ ವಿ.ಕೆ ಸಮೂಹ ಸಂಸ್ಥೆ ಮುಂಬಯಿ ಇದರ ಸಿಎಂಡಿ ಕರುಣಾಕರ ಎಂ. ಶೆಟ್ಟಿ

ಸುರತ್ಕಲ್ ಬೃಹತ್ ಮಾರುಕಟ್ಟೆ ಕಾಮಗಾರಿ ಪುನರಾರಂಭ – ಡಾ. ಭರತ್ ಶೆಟ್ಟಿ

ಸುರತ್ಕಲ್: ಸುರತ್ಕಲ್ ನಗರದಲ್ಲಿ ಬಹುಕೋಟಿ ವೆಚ್ಚದ ಮಾರುಕಟ್ಟೆ ನಿರ್ಮಾಣ ಕಾಮಗಾರಿಯು ಕೊರೋನಾ ಬಳಿಕ ಮಾರುಕಟ್ಟೆಯಲ್ಲಿ ಸರಕುದರ ಏರಿಕೆ ಹಾಗೂ ಜಿಎಸ್‌ಟಿಯನ್ಬು ಟೆಂಡರ್ ನಲ್ಲಿ ತೋರಿಸದ ಹಿನ್ನಲೆಯಲ್ಲಿ ಕಾಮಗಾರಿ ಹಿನ್ನಡೆ ಕಂಡಿದ್ದು ಸತತ ಪ್ರಯತ್ನದ ಬಳಿಕಇದೀಗ 64 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಡಾ. ಭರತ್ ಶೆಟ್ಟಿ ವೈ ತಿಳಿಸಿದ್ದಾರೆ. ಕಳೆದ ಬಾರಿ ಅಂದಾಜು 16 ಕೋಟಿಯ ಕಾಮಗಾರಿ ನಡೆದಿತ್ತು. ಬಳಿಕ ಗುತ್ತಿಗೆದಾರರು ಎಸ್ ಆರ್ ದರ ಹಾಗೂ ಜಿ ಎಸ್

ರಸ್ತೆ ಕಾಮಗಾರಿಗೆ ಸ್ಥಳೀಯರ ಆಗ್ರಹ

ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಪಕ್ಷಿಕೆರೆಯಿಂದ ಪಂಜ ಮೂಲಕ ಸುರತ್ಕಲ್ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆ ತೀವ್ರ ಕೆಟ್ಟು ಹೋಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಈ ರಸ್ತೆಯ ಕೆಮ್ರಾಲ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ದಿ.ಶಾಂತರಾಮ ಶೆಟ್ಟಿ ಶಾಲೆಯ ಬಳಿ ತೀವ್ರ ಹದಗೆಟ್ಟಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ರೋಡ್, ತೋಡಾಗಿ ಪರಿಣಮಿಸಿದ್ದು ಸ್ಥಳೀಯರು ಸಂಬಂಧಪಟ್ಟವರಿಗೆ ಹಿಡಿ ಶಾಪ

ನಿತ್ಯ ಅಪಘಾತ ವಲಯವಾಗಿ ರೂಪುಗೊಳ್ಳುತ್ತಿದೆ ಪಡುಬಿದ್ರಿ ಸೇತುವೆ ಪ್ರದೇಶ

ಎರ್ಮಾಳು-ಪಡುಬಿದ್ರಿ ಗಡಿಭಾಗ ರಾಷ್ಟ್ರೀಯ ಹೆದ್ದಾರಿ 66ರ ಕಿರು ಸೇತುವೆ ಬಳಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಅಪಘಾತ ವಲಯವಾಗಿ ರೂಪುಗೊಳ್ಳುತ್ತಿದೆ. ಸೋಮವಾರ ರಾತ್ರಿ ಗೂಡ್ಸ್ ಟೆಂಪೊವೊಂದು ಹೆದ್ದಾರಿಯಲ್ಲಿ ಶೇಕರಣೆಗೊಂಡಿರುವ ನೀರಿನ ಮೇಲಿಂದ ಚಲಿಸಿ ರಸ್ತೆ ವಿಭಜಕವೇರಿ ಮಗುಚಿ ಬಿದ್ದಿದೆ. ಭಾನುವಾರ ರಾತ್ರಿ ಕಾರೊಂದು ಅದೇ ಪ್ರದೇಶದಲ್ಲಿ ಪಲ್ಟಿಯಾಗಿ ನಾಲ್ವರು ಪ್ರಾಣಾಪಾಯದಿಂದ ಪಾರದ ಘಟನೆ ಹಚ್ಚ ಹಸುರಾಗಿರುವಾಗಲೇ ಮತ್ತೆ ಅಪಘಾತ. ಈ ಅಪಘಾತಕ್ಕೆ

ಸ್ಕೂಟರ್ ಗೆ ಅಡ್ಡ ಬಂದ ದನ, ಹಾರಿ ಹೋಯ್ತು ಯುವಕನ ಪ್ರಾಣ!!

ಸುರತ್ಕಲ್: ಸ್ಕೂಟರ್ ಗೆ ದನ ಅಡ್ಡ ಬಂದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ಯುವಕ ರಸ್ತೆಗೆಸೆಯಲ್ಪಟ್ಟು ದಾರುಣ ಸಾವನ್ನಪ್ಪಿದ ಘಟನೆ ಆದಿತ್ಯವಾರ ಸಂಜೆ ಪಣಂಬೂರು ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ಕುಳಾಯಿ ನಿವಾಸಿ ಉಜ್ವಲ್(26) ಸಾವನ್ನಪ್ಪಿದ ದುರ್ದೈವಿ.ಮಂಗಳೂರು ಉತ್ತರ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.