Home Archive by category ಕರಾವಳಿ (Page 126)

ಬೈಂದೂರು: ಬಾಲಭವನ ಉದ್ಘಾಟನಾ ಕಾರ್ಯಕ್ರಮ

ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಮೊವಾಡಿ ಶಾಲೆಯಲ್ಲಿ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಸುಮಾರು 3.5 ಲಕ್ಷ.ರೂ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಸುಸಜ್ಜಿತವಾದ ನೂತನ ಬಾಲ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕೆನರಾ ಬ್ಯಾಂಕ್ ಮಣಿಪಾಲ ಸರ್ಕಲ್ ಡಿಜಿಎಂ ಶ್ರೀಜೀತ್ ಬಾಲವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳ ಕಲಿಕಾ ಚಟುವಟಿಕೆಗೆ ಬಾಲ ಭವನ ಬಹಳಷ್ಟು

ಪುತ್ತೂರು: ಕರುವನ್ನು ಕೊಂದು ರಬ್ಬರ್ ಮರದ ಕೊಂಬೆಯಲ್ಲಿ ನೇತು ಹಾಕಿದ ಚಿರತೆ…!

ಒಂದೆರಡು ವರ್ಷಗಳಿಂದ ಪುತ್ತೂರು ಮತ್ತು ಆಸುಪಾಸಿನ ನಾನಾ ಕಡೆ ಚಿರತೆ ಓಡಾಟದ ಹೆಜ್ಜೆಗುರುತುಗಳು ಗೋಚರವಾದ ನಡುವೆಯೇ, ಇದೇ ಮೊದಲ ಬಾರಿಗೆ ಚಿರತೆಯು ತನ್ನ ಬೇಟೆಯನ್ನು ಮರದ ಮೇಲಿಟ್ಟು ನಾಪತ್ತೆಯಾದ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ ರಬ್ಬರ್ ಮರವೊಂದರ ಕೊಂಬೆಯಲ್ಲಿ ಸತ್ತ ದನದ ಕರುವಿನ ಕಳೇಬರ ಪತ್ತೆಯಾಗಿದ್ದು, ಇದು ಚಿರತೆಯದ್ದೇ ಕೆಲಸ ಎಂದು ಅರಣ್ಯ ಇಲಾಖೆ

ಸುಬ್ರಹ್ಮಣ್ಯ :ಕುಮಾರಪರ್ವತ ಚಾರಣಕ್ಕೆ ಮತ್ತೆ ಅವಕಾಶ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣ ಅ. 7ರ ಶನಿವಾರದಿಂದ ಆರಂಭಗೊಳ್ಳಲಿದೆ. ಇದೀಗ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಚಾರಣಕ್ಕೆ ಅವಕಾಶ ಒದಗಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾದ್ಯಮಕ್ಕೆ ತಿಳಿಸಿದ್ದಾರೆ. ಈ ಹಿಂದೆ ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಭಾರೀ ಮಳೆಯ ಕಾರಣ ಚಾರಣಿಗರ ಹಿತದೃಷ್ಟಿಯಿಂದ ಕುಮಾರಪರ್ವತ ಚಾರಣವನ್ನು ಅ. 3ರಿಂದ ನಿಷೇಧಿಸಲಾಗಿತ್ತು. ಅದಕ್ಕಿಂತ ಮೊದಲು ಮೇ ತಿಂಗಳಿನಿಂದ ಸೆ.29ರ ತನಕ ಅರಣ್ಯ

ಮಂಜೇಶ್ವರ: ರಸ್ತೆ ದಾಟುತ್ತಿದ್ದ ವಿದ್ಯಾರ್ಥಿಗೆ ಕಾರು ಢಿಕ್ಕಿ- ಗಂಭೀರ ಗಾಯ

ಮಂಜೇಶ್ವರ: ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಮಿತ ವೇಗದಿಂದ ಬಂದ ಇನೋವಾ ಕಾರೊಂದು ರಸ್ತೆದಾಟುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗಳೊಂದಿಗೆ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಉದ್ಯಾವರ ಮಾಡ ಕ್ಷೇತ್ರ ಸಮೀಪದ ರಘುನಾಥ ಆಳ್ವ ಎಂಬವರ ಪುತ್ರ ಮಂಗಳೂರು ನಿಟ್ಟೆ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸುಮಂತ್ (17) ಗಾಯಗೊಂಡ ವಿದ್ಯಾರ್ಥಿ. ಈತನನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಸರಗೋಡು: ಮಂಗಲ್ಪಾಡಿ-ಕೈಕಂಬ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ

ಕಾಸರಗೋಡು: ಮಂಗಲ್ಪಾಡಿ- ಕೈಕಂಬ 12*4 ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ ದೊರೆತಿದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಚಿವ ವಿ. ಮುರಳಿಧರನ್ ಅವರಿಗೆ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾದ ಕೆ. ಸುರೇಂದ್ರನ್, ಜಿಲ್ಲಾಧ್ಯಕ್ಷರಾದ ರವೀಶ್ ತಂತ್ರಿ ಕುಂಟಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಅವರು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದರು.ಇದೀಗ ಸ್ಪಂದಿಸಿರುವ ಕೇಂದ್ರ ಸರ್ಕಾರ ಮಂಗಲ್ಪಾಡಿ-ಕೈಕಂಬ ಅಂಡರ್ ಪಾಸ್

ಕಡಬ: ದೈವಾರಾಧನೆಯ ನರ್ತನ ಪ್ರದರ್ಶನ ಮೆರವಣಿಗೆಗಳಲ್ಲಿ ಪ್ರದರ್ಶಿಸುವುದು ತರವಲ್ಲ: ಕಿಟ್ಟು ಕಲ್ಲುಗುಡ್ಡೆ

ನಮ್ಮ ಧಾರ್ಮಿಕ ಆಚರಣೆಯ ಮೆರವಣಿಗೆಗಗಳಲ್ಲಿ ದೈವಾರಾಧನೆಯ ನರ್ತನ ಪ್ರದರ್ಶನ ಮಾಡುವುದು ಸರಿಯಲ್ಲ. ಈ ಬಗ್ಗೆ ಜನರಿಗೆ ತಿಳವಳಿಕೆ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ದೈವಾರಾಧನ ಸಮಿತಿಯ ಕಡಬ ತಾಲೂಕು ಅಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಹೇಳಿದರು. ಅವರು ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೈವಗಳ ನರ್ತನ ದೈವದ ಕೊಡಿಯಡಿಯಲ್ಲೇ ನಡೆಯಬೇಕು ಹೊರತು ಹಾದಿಬೀದಿಯಲ್ಲಿ ನಡೆಯಬಾರದು ಯಾಕೆಂದರೆ ಅದಕ್ಕೊಂದು ಕಟ್ಟುಕಟ್ಟಲೆ ನೀತಿ ನಿಯಮವಿದೆ.

ಅರಸೀಕೆರೆ: ಋಷಿಮುನಿಗಳು ಉಪಯೋಗಿಸುವ ಪಾದುಕೆ, ಕಮಂಡಲ ಪತ್ತೆ

ಹಾಸನ ಜಿಲ್ಲೆ ಅರಸೀಕೆರೆ ತಿಪಟೂರು ನ್ಯಾಷನಲ್ ಹೈವೆ ಪಕ್ಕದ ಹೊನ್ನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಋಷಿಮುನಿಗಳು ಉಪಯೋಗಿಸುವಂತ ವಸ್ತುಗಳು ಸರಿಸಮಾನವಾಗಿ ಜೋಡಿಸಿರುವ ರೀತಿಯಲ್ಲಿ ಕಂಡುಬಂದಿದೆ. ಬೋರೇಗೌಡ ಎಂಬರಿಗೆ ಸೇರಿದ ಜಮೀನಿನಲ್ಲಿ ಈ ವಿಸ್ಮಯ ಘಟನೆ ನಡೆದಿದೆ. ತಕ್ಷಣ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಮಾರು 12 ಜೊತೆ ಪಾದುಕೆಗಳು ಹಾಗೂ 28 ಕಮಂಡಲಗಳು ಪತ್ತೆಯಾಗಿವೆ. ಈ ಅಚ್ಚರಿಯ ಘಟನೆಯನ್ನು ವೀಕ್ಷಿಸಲು ಜನರು ಸಾಲು ಸಾಲಾಗಿ ಬರುತ್ತಿದ್ದರು.

ಅಮೇರಿಕಾದಲ್ಲಿ ಕೋಟದ ಕುವರಿ ಅದಿತ್ರಿ ಪೈಯಿಂದ ಕಾಂತಾರ ಸಿನಿಮಾ ಹಾಡು

ಉಡುಪಿ ಜಿಲ್ಲೆ ಕೋಟ ಮೂಲದ 10 ವರ್ಷದ ಕುವರಿ ಅದಿತ್ರಿ ಪೈ ಅಮೇರಿಕಾದಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂತಾರ ಸಿನಿಮಾ ಹಾಡು ಹಾಡಿ ಜನಮೆಚ್ಚುಗೆ ಪಡೆದಿದ್ದಾಳೆ. ಅಮೇರಿಕಾದ ಒಹಾಯೋ ರಾಜ್ಯದ ಲೈಮಾದಲ್ಲಿ ಮಲ್ಟಿ ಕಲ್ಚರಲ್ ಎಕ್ಸ್ ಪೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂತಾರಾ ಸಿನಿಮಾದ ವರಾಹ ರೂಪಂ ಹಾಡಿನ ಟ್ಯಾಕ್‍ಗೆ ಶಾಸ್ತ್ರೀಯ ರಾಗದ ಕನ್ನಡ ಗೀತೆಯೊಂದನ್ನು ಅದಿತ್ರಿ ಪೈ ಸ್ವರ ಮಾಧುರ್ಯದಿಂದ ಹಾಡಿ ಜನಮೆಚ್ಚುಗೆ ಗಳಿಸಿದ್ರು. ಅಮೇರಿಕಾದಲ್ಲಿ ಮೆಕ್ಯಾನಿಕಲ್

ಮಂಗಳೂರು : ಎಸ್ ಸಿಡಿಸಿಸಿ ಬ್ಯಾಂಕ್ ಗೆ ಪ್ರತಿಷ್ಠಿತ “ಬ್ಯಾಂಕೊ ಬ್ಲೂ ರಿಬ್ಬನ್ ” ಪ್ರಶಸ್ತಿ

ಸಹಕಾರ ರಂಗದ ಅಗ್ರಮಾನ್ಯ ಬ್ಯಾಂಕ್ ಎನಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ ಬ್ಯಾಂಕ್)ಗೆ ಮಹಾರಾಷ್ಟ್ರದ ಅವಿಸ್ ಪಬ್ಲಿಕೇಶನ್ ನೀಡುವ ಪ್ರತಿಷ್ಠಿತ “ಬ್ಯಾಂಕೊ ಬ್ಲೂ ರಿಬ್ಬನ್ – 2023 ಪ್ರಶಸ್ತಿ”ಯನ್ನು ಮುಂಬಯಿಯಲ್ಲಿ ಪ್ರದಾನ ಮಾಡಲಾಯಿತು. ದಮನ್ ನ ಡೆಲ್ಟಿನ್ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಮೂರು ದಿನಗಳ ವಾರ್ಷಿಕ ಶೃಂಗಸಭೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ

ಪುತ್ತೂರು: ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಕೂಟ- ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ತಂಡ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸರಕಾರಿ ಪ್ರೌಢಶಾಲೆ ಏನೆಕಲ್ಲು ಇದರ ಸಂಯುಕ್ತ ಆಶಯದಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಕೂಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಇಲ್ಲಿಯ ಪ್ರೌಢ ಶಾಲಾ ಮತ್ತು ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.ಈ ಪಂದ್ಯಕೂಟದಲ್ಲಿ ಬೆಥನಿ ಶಾಲೆಯ ಆಯುಶಾ ಹಿಬಾ ಬೆಸ್ಟ್ ಆಲ್ ರೌಂಡರ್ ಆಗಿ ಹಾಗೂ