Home Archive by category ಕರಾವಳಿ (Page 127)

🛑ನೆಲ್ಯಾಡಿ: ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ಭರ್ಜರಿ ಬೇಟೆ, ಲಾರಿ ಸಮೇತ ಸೊತ್ತು ವಶ

ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎನ್.ಎಚ್. 75ರ ಲಾವತ್ತಡ್ಕ ಎಂಬಲ್ಲಿ ಅಕ್ರಮವಾಗಿ ಅಕೇಶಿಯಾ ಉರುವಲು ಸಾಗಾಟ ಮಾಡುತ್ತಿದ್ದ ಕೆಎ21 ಬಿ 3478 ಸಂಖ್ಯೆಯ ಲಾರಿಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ರವರ ಮಾರ್ಗದರ್ಶನದಲ್ಲಿ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕೊಕ್ಕಡ ಸಾಹುಲ್ ಹಮೀದ್ ಪರಾರಿಯಾಗಿದ್ದಾನೆ. ರೆಖ್ಯ ಉಪ ವಲಯ ಅರಣ್ಯಾಧಿಕಾರಿ

ಮಂಗಳೂರು: ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸಕ್ರೀಯ ರೌಡಿಗಳ ಪರೇಡ್

ಮಂಗಳೂರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರದ ಎಲ್ಲಾ ಪೆÇಲೀಸ್ ಠಾಣೆಗಳ ವ್ಯಾಪ್ತಿಯ ಸಕ್ರೀಯ ರೌಡಿಗಳ ಪರೇಡ್ ನಡೆಸಲಾಯಿತು. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ನೇತೃತ್ವದಲ್ಲಿ ನಡೆದ ಪರೇಡ್‍ನಲ್ಲಿ 262 ಸಕ್ರೀಯ ರೌಡಿಗಳನ್ನು ಸಂಬಂಧಪಟ್ಟ ಎಸಿಪಿರವರು ಪೆÇಲೀಸ್ ಆಯುಕ್ತರ ಮುಂದೆ ಹಾಜರುಪಡಿಸಿದರು. ಎಲ್ಲಾ ರೌಡಿಗಳಿಗೆ ತಮ್ಮ ಅಪರಾಧಿಕ ಚಟುವಟಿಕೆಗಳನ್ನು ಬಿಟ್ಟು ಕಾನೂನನ್ನು ಗೌರವಿಸುವ ಪ್ರಜೆಗಳಾಗಬೇಕೆಂದು ಪೆÇಲೀಸ್

ಮೂಡುಬಿದಿರೆ: ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು-ಇರುವೈಲು ಗ್ರಾಮಸಭೆ ರದ್ದು

ಮೂಡುಬಿದಿರೆ: ವಿವಿಧ ಇಲಾಖೆಗಳ ಅಧಿಕಾರಿಗಳಿಲ್ಲದೆ ಗ್ರಾಮಸಭೆ ನಡೆಸಬಾರದೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸಭೆಯನ್ನು ರದ್ದುಗೊಳಿಸಿದ ಘಟನೆ ಇರುವೈಲಿನಲ್ಲಿ ನಡೆದಿದೆ. ಇರುವೈಲು ಗ್ರಾ.ಪಂನ ಎರಡನೇ ಸುತ್ತಿನ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷೆ ಲಲಿತಾ ಮೊಗೇರ ಅವರ ಅಧ್ಯಕ್ಷತೆಯಲ್ಲಿ ತೋಡಾರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ, ಅರಣ್ಯ ಇಲಾಖೆಯ

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿ ಸಾವು

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿಯೋರ್ವಳು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ೭೫ ರ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ. ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ (೨೩) ಮೃತಪಟ್ಟ ಯುವತಿ. ಬಿ.ಸಿ.ರೋಡಿನ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಂಜೆ ಕೆಲಸ ಬಿಟ್ಟು ದಾಸಕೋಡಿ ಎಂಬಲ್ಲಿ ಬಸ್ಸಿನಿಂದ ಇಳಿದು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಕಾರು ಡಿಕ್ಕಿ ಹೊಡೆದಿದೆ

ಬ್ರಹ್ಮಾವರ: ಒಂದು ತಂತಿಯಿಂದ ನಾದ ಹೊರಹೊಮ್ಮಿಸುವ ಕಿಂದರಜೋಗಿ

ದಸರಾ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕರಾವಳಿ ಭಾಗಕ್ಕೆ ಬಂದು ದಾಸರ ಮತ್ತು ಸಂತರ ಪದಗಳನ್ನು ಹಾಡಿ ಜನರನ್ನು ಬೆರಗುಗೊಳಿಸುತ್ತಿದ್ದರು. ಇದೀಗ ದಾವಣಗೆರೆ ಮೂಲದ ಭೈರಪ್ಪ ಅವರು ಕರಾವಳಿ ಭಾಗಕ್ಕೆ ಆಗಮಿಸಿದ್ದು, ದಾಸರ ಮತ್ತು ಸಂತರ ಪದಗಳನ್ನು ಹಾಡಿ ಜೀವನದ ಮೌಲ್ಯವನ್ನು ಬಿತ್ತರಿಸುವ ಕಾಯಕಕ್ಕೆ ಮುಂದಾಗಿದ್ದಾರೆ. 4 ಅಡಿ ಉದ್ದದ ಬಿದಿರಿನ ದಂಡವೊಂದಕ್ಕೆ 3 ಸ್ಥರದ ಸೋರೆ ಕಾಯಿ ಬುರುಡೆಗೆ ತಂತಿಯೊಂದನ್ನು ಅಳವಡಿಸಿ ಹಾಡು ಹಾಡುವಾಗ ಸ್ವರ ತಂತುಗಳು ತಂತಿ ಮೂಲಕ

ಕಡಬ: ನನ್ನ ಮಣ್ಣು ನನ್ನ ದೇಶ ಅಮೃತ ಕಲಶ ಯಾತ್ರೆ ಜಾಥಾಕ್ಕೆ ಚಾಲನೆ

ದೇಶದ ರಕ್ಷಣೆಯೊಂದಿಗೆ ನಮ್ಮಲ್ಲರ ರಕ್ಷಣೆ ಮಾಡುವ ಯೋಧರಿಗೆ ಸ್ಮಾರಕ ನಿರ್ಮಾಣ ಮಾಡುವ ಕಾರ್ಯಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿಯವರು ಯೋಧರಿಗೆ ಅತ್ಯತ ಹೆಚ್ಚು ಗೌರವ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಸುಳ್ಯ ಕ್ಷೇತ್ರ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಕಡಬದಲ್ಲಿ ನೆಹರು ಯುವ ಕೇಂದ್ರ ಮಂಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಸ,ಪ.ಪೂ.ಕಾಲೇಜು ಕಡಬ ,ತಾಲೂಕು ಯುವಜನ ಒಕ್ಕೂಟ ಕಡಬ, ತಾ.ಪಂ.ಕಡಬ ,ಪಟ್ಟಣ

ಬೈಂದೂರು: 62ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್, ಮಣಿಕಾಂತ ಹೋಬಳಿದಾರ್‍ಗೆ ಚಿನ್ನದ ಪದಕ

62ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಬೈಂದೂರಿನ ಮಣಿಕಾಂತ ಹೋಬಳಿದಾರ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ. 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಸರ್ವಿಸರ್ಸ್ ತಂಡವನ್ನು ಪ್ರತಿನಿಧಿಸಿದ 21 ವರ್ಷದ ಮಣಿಕಾಂತ ಹೋಬಳಿದಾರ್ ಅವರು 100 ಮೀ. ಓಟದ ಸೆಮಿಫೈನಲನ್ನು ಕೇವಲ 10.23 ಸೆಕೆಂಡ್‍ಗಳಲ್ಲಿ ಓಡುವ ಮೂಲಕ ರಾಷ್ಟ್ರೀಯ ದಾಖಲೆ ಬರೆದು ಅಗ್ರಸ್ಥಾನದೊಂದಿಗೆ ಫೈನಲ್‍ಗೆ

ಮಂಜೇಶ್ವರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎನ್‍ಆರ್ ಇಜಿ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ

ಮಂಜೇಶ್ವರ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸುವ ಕ್ರಮವನ್ನು ಕೊನೆಗೊಳಿಸಿ, ಹೆಚ್ಚಿಸಿದ ಮಜೂರಿಯನ್ನು ಕೂಡಲೇ ವಿತರಿಸಿ, ಕಡಿತಗೊಳಿಸಿದ ಲೇಬರ್ ಬಜೆಟ್ ಪುನಸ್ತಾಪಿಸಿ ಇತ್ಯಾದಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಎನ್‍ಆರ್‍ಇಜಿ ಯೂನಿಯನ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನೆ ನಡೆಸಿದರು. ಸಭೆಯನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಏ. ಕರೀಂ ಉದ್ಘಾಟಿಸಿದರು. ಮೀಂಜ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಅಧ್ಯಕ್ಷತೆ

ಮಂಗಳೂರು: ರಾಜ್ಯಾದ್ಯಂತ “ಕುದ್ರು” ಸಿನಿಮಾ ಬಿಡುಗಡೆ

ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿತು. ನಗರದ ಭಾರತ್ ಮಾಲ್‍ನ ಬಿಗ್ ಸಿನಿಮಾಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಿಕೆದ ಬೊಳ್ಳಿ ನಟ ಡಾ. ದೇವದಾಸ್ ಕಾಪಿಕಾಡ್ ಅವರು ದೀಪ ಬೆಳಗಿಸುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಸಿನಿಮಾ

ನೆಲ್ಯಾಡಿ :ವಿಶ್ವವಿದ್ಯಾನಿಲಯ ಕಾಲೇಜು : ವಿದ್ಯಾರ್ಥಿ ಸಂಘದ ಆಯ್ಕೆ

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿರುವ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಪದವಿ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ತೃತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ಸಂದೀಪ್ ಕುಮಾರ್ ಎಂ.ಬಿ ಕಾರ್ಯದರ್ಶಿಯಾಗಿ ಅನುಪ್ರಿಯ, ಸಹ ಕಾರ್ಯದರ್ಶಿಯಾಗಿ ವನಿತಾ, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ಕೌಶಲ್ಯ ಡಿ.ಬಿ, ಲಲಿತಕಲಾ ಸಂಘದ ಜೊತೆ ಕಾರ್ಯದರ್ಶಿಯಾಗಿ ಮಾಲಿನಿ ಸಿ.ಎ, ಹಾಗೂ