Home Archive by category ಕರಾವಳಿ (Page 192)

ಸುಳ್ಯದಲ್ಲಿ ಕಾಂಗ್ರೇಸ್ ಬಣಗಳ ನಡುವೆ ವಾಕ್ಸಮರ, ಬಡಿದಾಟ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ಎರಡು ಬಣಗಳ ಮಧ್ಯೆ ಅಸಮಾಧಾನ ಸ್ಪೋಟಗೊಂಡು, ಬಡಿದಾಟ ಮಾರಾಮಾರಿ ನಡೆದಿದೆ. ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಪರಾಮರ್ಶೆ ಸಭೆಯು ಕಾಂಗ್ರೇಸ್ ಮುಖಂಡರಾದ ಜಿ.ಕೃಷ್ಣಪ್ಪ ಹಾಗೂ ನಂದಕುಮಾರ್ ಬಣದ ನಾಯಕರ ಕಾರ್ಯಕರ್ತರ ವಾಕ್ಸಮರ, ಕೈ ಕೈ ಮಿಲಾಯಿಸಿಕೊಳ್ಳವ ರಣರಂಗಕ್ಕೆ ವೇದಿಕೆಯಾಯಿತು.

ಹೆಜಮಾಡಿ : ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಹೊಡೆದಾಟ ಹಲವರಿಗೆ ಗಾಯ

ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿ ಹಲವು ಮಂದಿ ಗಾಯಗೊಂಡ ಘಟನೆ ಹೆಜಮಾಡಿಯಲ್ಲಿ ನಡೆದಿದೆ. ಕ್ರಿಕೆಟ್ ಬೆಟ್ಟಿಂಗ್ ವಿಚಾರವಾಗಿ ಎರಡು ತಂಡಗಳ ಮಧ್ಯೆ ಮಾರಕಾಯುಧಗಳಿಂದ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಸಂದೇಶ್ ಶೆಟ್ಟಿ ಹಾಗೂ ಸೂರಜ್ ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ ಪರಸ್ಪರ ರೋಷದಿಂದ ಬೈದಾಡಿಕೊಂಡ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂದೇಶ್ ಶೆಟ್ಟಿ ಮತ್ತಿತರರು ಕಾರಿನಲ್ಲಿ ಬಂದು

ಶಾಸಕ ವೇದವ್ಯಾಸ್ ಕಾಮತ್ ಅವರ ವತಿಯಿಂದ ಸರ್ಕಸ್ ತುಳು ಸಿನಿಮಾ ಆಶ್ರಮದ ಮಕ್ಕಳಿಗೆ ಉಚಿತ ಪ್ರದರ್ಶನ

ಯಶಸ್ವೀ ಪ್ರದರ್ಶನಗಳನ್ನು ಕಾಣುತ್ತಿರುವ ಸರ್ಕಸ್ ಸಿನಿಮಾ ಇದೀಗ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಶಾಸಕ ವೇದವ್ಯಾಸ್ ಕಾಮತ್ ಅವರ ವತಿಯಿಂದ ವಿವಿಧ ಆಶ್ರಮದ ಮಕ್ಕಳಿಗೆ ಉಚಿತ ಪ್ರದರ್ಶನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಎಲ್ಲಾ ಮಕ್ಕಳು ಉತ್ಸಾಹದಿಂದಲೇ ಸರ್ಕಸ್ ಸಿನಿಮಾ ವೀಕ್ಷಿಸಿದರು. ದೇಶ ವಿದೇಶ ಮತ್ತು ಕರಾವಳಿಯಲ್ಲಿ ಸರ್ಕ್‍ಸ್ ಸಿನಿಮಾ ಹೌಸ್‍ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ಸಿನಿಮಾ ಪ್ರೇಕ್ಷಕರು ಸಿನಿಮಾ ವೀಕ್ಷಿಸಿ

ಇಸ್ರೋ ಚಂದ್ರಯಾನ-3 ನೌಕೆ ಉಡಾವಣೆ ಯಶಸ್ವಿ

ಇಸ್ರೋ ಮಹತ್ತ್ವಾಕಾಂಕ್ಷೆಯ ಚಂದ್ರಯಾನ-3 ವಿಶೇಷತೆಗಳನ್ನು ನೋಡುವುದಾದರೆ, ಲ್ಯಾಂಡರ್​, ರೋವರ್ ಯಂತ್ರ ಒಳಗೊಂಡಿದೆ. ಚಂದ್ರಯಾನ-3 ನೌಕೆ ನಭಕ್ಕೆ ಹೊತ್ತೊಯ್ಯುವ GSLV-MK3 ರಾಕೆಟ್, GSLV-MK3 ರಾಕೆಟ್​​-43.5 ಮೀಟರ್ ಎತ್ತರ, 640 ಟನ್ ತೂಕ ಹೊಂದಿದೆ. ಚಂದ್ರಯಾನ-3 ಯೋಜನೆಗೆ 630 ಕೋಟಿ ರೂ. ಆಗಿರುವ ವೆಚ್ಚ ತಗುಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ ಅಂತ್ಯದ ವೇಳೆಗೆ ಚಂದ್ರಯಾನ -3 ಮಿಷನ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ

ತಿಮಿಂಗಲದ ಅಂಬರ್‌ಗ್ರೀಸ್ ಎಂದು ಹೇಳಿ ಮಾರಾಟಕ್ಕೆ ಯತ್ನ : ಮೂವರು ಆರೋಪಿಗಳ ಬಂಧನ

ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10 ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ ಘಟನೆ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಶಿವಮೊಗ್ಗ

ಮೂಡುಬಿದರೆ : ಜೈನ ಮುನಿಯ ಹತ್ಯೆ ಪ್ರಕರಣ, ಜೈನ ಸಮುದಾಯದಿಂದ ಪ್ರತಿಭಟನೆ

ಬೆಳಗಾಂ ಜಿಲ್ಲೆಯ ಚಿಕ್ಕೋಡಿ ಹಿರೇಕೊಡಿಯ ಪರಮಪೂಜ್ಯ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಜೈನ ಸಮಾಜದ ಮುನಿ ಸಂತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮೂಡುಬಿದಿರೆಯ ಸಮಸ್ತ ಜೈನ ಸಮುದಾಯದ ಬಾಂಧವರು ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಸಾವಿರ ಕಂಬದ ಬಸದಿಯಲ್ಲಿ ಖಂಡನಾ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ

ವಿಟ್ಲ : ಮನೆಯ ಮೇಲೆ ಬಿದ್ದ ಪಿಕಪ್ ವಾಹನ, ಮನೆಯೊಳಗೆ ಸಿಲುಕಿಕೊಂಡ ಮಹಿಳೆ

ವಿಟ್ಲ: ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ. ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯ ಒಳಗೆ ಮಹಿಳೆ ಮಲಗಿದ್ದ ಸಂದರ್ಭ ಘಟನೆಯಾಗಿದ್ದು, ಗಂಭೀರ ಪರಿಸ್ಥಿಯಲಿದ್ದಾರೆ. ವಾಹನವನ್ನು ತೆರವು ಮಾಡದೆ ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ

ಬ್ರಹ್ಮಾವರದಲ್ಲಿ ಭಾರೀ ಮಳೆಗೆ ಮನೆ ಕುಸಿತ

ಬ್ರಹ್ಮಾವರದಲ್ಲಿ ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಬ್ರಹ್ಮಾವರ ರಥ ಬೀದಿಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಬಳಿ ಇರುವ ಮನೆಯೊಂದು ಕುಸಿದು ಬಿದ್ದಿದೆ. ಗೋಪಾಲ ಪೂಜಾರಿ ಎನ್ನುವವರ ಮನೆಯು ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಬ್ರಹ್ಮಾವರ ತಾಲೂಕು ತಹಶೀಲ್ದಾರ್ ರಾಜಶೇಖರ ಮೂರ್ತಿ ಕಂದಾಯ ನೀರೀಕ್ಷಕ ಲಕ್ಷ್ಮೀ ಮೀನಾರಾಯಣ ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕುಸಿತಗೊಂಡ ಸಂದರ್ಭದಲ್ಲಿ ಗೋಪಾಲ ಪೂಜಾರಿಯವರ

ಜೈನ ಮುನಿಯ ಹತ್ಯೆ ಪ್ರಕರಣ : ಕಡಬದಲ್ಲಿ ಜೈನ ಸಮುದಾಯದವರಿಂದ ಪ್ರತಿಭಟನೆ

ಹಿರೇಕೋಡಿ ನಂದಿ ಪರ್ವತ ಆಶ್ರಮದ ಆಚಾರ್ಯ 108 ಶ್ರೀ ಕಾಮಕುಮಾರ ನಂದಿ ಮುನಿಶ್ರೀ ಮಹಾರಾಜರ ಹತ್ಯೆಯನ್ನು ಖಂಡಿಸಿ, ಘಟನೆಯ ಸಮಗ್ರ ತನಿಖೆಗಾಗಿ ಮತ್ತು ಮುಂದಿನ ದಿನಗಳಲ್ಲಿ ಜೈನ ಮುನಿಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವಂತೆ ಆಗ್ರಹಿಸಿ ಕಡಬ ತಾಲೂಕಿನ ಜೈನ ಸಮಾಜ ಬಾಂಧವರು ಕಡಬ ತಾಲೂಕು ಆಡಳಿತ ಸೌಧದ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಕಡಬದ ಸಿ.ಎ.ಬ್ಯಾಂಕ್ ವಠಾರದಿಂದ ಕಡಬದ ಮುಖ್ಯರಸ್ತೆಯಲ್ಲಿ ಮೌನ ಮೆರವಣಿಗೆಯ ಮೂಲಕ ಸಾಗಿದ ಪ್ರತಿಭಟನಾಕಾರರು ಕಡಬ ತಾಲೂಕು ಆಡಳಿತ

ಹಲಸು-ವಿಧ್ಯಮಯ ಹಣ್ಣುಗಳ ಮಹಾಮೇಳ “ಸಮೃದ್ಧಿ”ಗೆ ವಿದ್ಯಾಗಿರಿ ಸಜ್ಜು

ಮೂಡುಬಿದಿರೆ: ಕೃಷಿ ಋಷಿ ಡಾ.ಎಲ್.ಸಿ.ಸೋನ್ಸ್ ಸ್ಮರಣಾರ್ಥ ನಾಳೆಯಿಂದ ಮೂರು ದಿನಗಳ ಕಾಲ ನಡೆಯುವ ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ “ಸಮೃದ್ಧಿ”ಗೆ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ ಸಭಾಭವನವು ಸಿಂಗರಿಸಿಕೊಂಡು ಸಜ್ಜಾಗಿದೆ. ಹಲಸು ವೈವಿಧ್ಯಮಯ ಹಣ್ಣುಗಳ ಮಹಾಮೇಳ ಸಮಿತಿವತಿಯಿಂದ ಹಿರಿಯ ಕೃಷಿ ತಜ್ಞ ಡಾ| ಎಲ್ ಸಿ ಸೋನ್ಸ್ ಸ್ಮರಣಾರ್ಥ “ಸಮೃದ್ಧಿ”ಹಲಸು