Home Archive by category ಕರಾವಳಿ (Page 296)

ರಾಜ್ಯದಲ್ಲಿ ರಂಗೇರಿದ ರಾಜಕೀಯ ಚಟುವಟಿಕೆ

ರಾಜ್ಯ ವಿಧಾನಸಭೆ ಚುನಾವಣೆಗೆ ನಾಳೆ ಅಧಿಸೂಚನೆ ಪ್ರಕಟವಾಗಲಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.ಏಪ್ರಿಲ್ 24ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಮೇ 10 ರಂದು ಮತದಾನ, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ

ಹಾಲಿ ಶಾಸಕರಿಗೆ ಸಿಗದ ಬಿಜೆಪಿ ಟಿಕೆಟ್ : ಬೈಂದೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ

ಬೈಂದೂರು: ಬಿಜೆಪಿಯ ಬೈಂದೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರಿಗೆ ಮುಂದಿನ ಚುನಾವಣೆಯಲ್ಲಿ ಸೀಟು ತಪ್ಪಿರುವ ವಿಚಾರ ತಿಳಿದ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ ಮಂಗಳವಾರ ರಾತ್ರಿ ಬಿ.ಎಂ. ಸುಕುಮಾರ ಶೆಟ್ಟಿಯವರಿಗೆ ಸೀಟು ಸಿಕ್ಕಿಲ್ಲ ಎನ್ನುವ ಮಾಹಿತಿ ಖಚಿತಗೊಳ್ಳುತ್ತಿದ್ದಂತೆ ಶಾಸಕರ ಮನೆ ಮುಂದೆ ತಂಡೋಪತಂಡವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರ ಅಭಿಮಾನಿಗಳು ಜಮಾಯಿಸಿದರು. ಸುಮಾರು ಐನೂರಕ್ಕೂ ಹೆಚ್ಚು

ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಮತ್ತು ಫಾತಿಮಾ ಶೇಖ್ ಗೌರವ ಪ್ರಶಸ್ತಿ ಪ್ರದಾನ

ಮಂಗಳೂರಿನ ಉರ್ವ ಸ್ಟೋರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಾಹಿತ್ಯ ಸದನದಲ್ಲಿ ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ ಬರವುದಪ್ಪೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾಲವು ಅಳಿಸಲಾಗದ ಹೆಸರು ಶಕ್ತಿಯುತ ಬಂಡಾಯ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರದು. ಏಪ್ರಿಲ್ 11 ಜ್ಯೋತಿಬಾ ಫುಲೆ ಅವರ ಜನ್ಮ ದಿನ. ಭಾರತದಲ್ಲಿ ನೆಲದ ಮಕ್ಕಳ ಬದುಕಿಗೆ ಮೊದಲು ದನಿ ನೀಡಿದ ಹೆಸರುಗಳು ಇವು ಎಂದು ಅಧ್ಯಕ್ಷತೆ

ಕಿನ್ನಿಗೋಳಿ ಪಂಚಾಯತ್‍ನಿಂದ ಪೂರೈಸುವ ನಳ್ಳಿ ನೀರಿನಲ್ಲಿ ವ್ಯತ್ಯಯ : ಶಾಂತಿನಗರ-ಗುತ್ತಕಾಡು ಪರಿಸರದ ನಾಗರಿಕರ ನಿಯೋಗ ಮುಖ್ಯಾಧಿಕಾರಿ ಭೇಟಿ

ಕಿನ್ನಿಗೋಳಿ: ಪಂಚಾಯತ್ ವತಿಯಿಂದ ಪೂರೈಸುವ ನಳ್ಳಿ ನೀರಿನಲ್ಲಿ ವ್ಯತ್ಯಯ ಉಂಟಾಗಿದ್ದು ಈ ಕುರಿತು ಶಾಂತಿನಗರ – ಗುತ್ತಕಾಡು ಪರಿಸರದ ನಾಗರಿಕರ ನಿಯೋಗ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚಿಸಿತು. ಇತ್ತೀಚೆಗೆ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ತಾಳಿಪಾಡಿ ಗ್ರಾಮದ ಶಾಂತಿನಗರ ಗುತ್ತಕಾಡು ಪ್ರದೇಶದಲ್ಲಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಖಿಲ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ

ರಾಜಕೀಯದಿಂದ ನಿವೃತ್ತಿ ಘೋಷಿಸಿದ ಅಂಗಾರ

ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಹೇಳಿದ ಅಂಗಾರರು, ನಾನು ಇನ್ನು ರಾಜಕಾರಣದಲ್ಲಿಲ್ಲ. ಚುನಾವಣಾ ಪ್ರಚಾರ ಕಣದಲ್ಲೂ ಇಲ್ಲ. ಹೊಸ

ಸಚಿವರಾದ ಎಸ್.ಅಂಗಾರರಿಗೆ ಟಿಕೆಟ್ ತಪ್ಪಿದ ಹಿನ್ನೆಲೆ : ವೆಂಕಟ್ ವಳಲಂಬೆ ರಾಜೀನಾಮೆ

ಕಳೆದ 30 ವರ್ಷಗಳ ಕಾಲ ಕ್ಷೇತ್ರ ಮತ್ತು ಪಕ್ಷಕ್ಕೆ ಯಾವುದೇ ಚ್ಯುತಿ ಬಾರದ ರೀತಿ ದುಡಿದ ಸಾಮಾನ್ಯ ಮನೆತನದಿಂದ ಬಂದಿರುವ ಸರಳ ಸಜ್ಜನಿಕೆಯ ಎಲ್ಲರ ಜನಮನ ಗೆದ್ದಿರುವ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುವ ಶ್ರೀ ಎಸ್.ಅಂಗಾರರಂತಹ ಪ್ರಾಮಾಣಿಕ ಕಾರ್ಯಕರ್ತನೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಅಭ್ಯರ್ಥಿ ಘೋಷಣೆ ಮಾಡಿರುವುದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿರುತ್ತದೆ. ಆದುದರಿಂದ ನನ್ನ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಈ ಕ್ಷಣದಿಂದಲೇ

ಪಡುಬಿದ್ರಿ : ಚುನಾವಣಾ ಪೂರ್ವ ಪೊಲೀಸ್ ಪಥ ಸಂಚಲನ

ಮುಂದಿನ ವಿಧಾನ ಸಭೆ ಚುನಾವಣೆ ನಿರ್ಭೀತಿಯಾಗಿ ನಡೆಯ ಬೇಕೆಂಬ ಉದ್ದೇಶದಿಂದ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗಜ್ಜಿ ನೇತ್ರತ್ವದಲ್ಲಿ ಪಡುಬಿದ್ರಿ ಕಾರ್ಕಳ ರಸ್ತೆಯಿಂದ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರಗೆ ಪೊಲೀಸ್ ಹಾಗೂ ಕೇಂದ್ರಿಯ ಮೀಸಲು ಪಡೆ ಸಿಬ್ಬಂದಿಗಳ ಪಥಸಂಚಲನ ನೆರವೇರಿದೆ. ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಇದು ಸಾರ್ವಜನಿಕರನ್ನು ಹೆದರಿಸಲು ಮಾಡಿದ ಪ್ರಯತ್ನವಲ್ಲ, ಜನರಿಗೆ ಧೈರ್ಯ ತುಂಬಲು ಹಾಗೂ ಜನರು ತಮ್ಮ ಹಕ್ಕು..ಮತ ಚಲಾಯಿಸಲು ಯಾರಿಗೂ ಹೆದರ

ಹೆಜಮಾಡಿ ಬಂದರು ಕಾಂಗ್ರೆಸ್ ಪ್ರಯತ್ನ : ವಿನಯ ಕುಮಾರ್ ಸೊರಕೆ

ಹೆಜಮಾಡಿ ಮೀನುಗಾರಿಕಾ ಬಂದರು ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಜೂರು ಮಾಡಿದ್ದು ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾದ  ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ  ಹೆಜಮಾಡಿ ಬಂದರನ್ನು ಎಲ್ಲಾ ಪೂರಕ ದಾಖಲೆಗಳನ್ನು ಕ್ರೋಡೀಕರಿಸಿ ಮಂಜೂರು ಮಾಡಿದ್ದರು. ಆ ಸಂದರ್ಭ ಕೇಂದ್ರ ಸರ್ಕಾರ 75 ಶೇಕಡ ಹಾಗೂ ರಾಜ್ಯ ಸರ್ಕಾರ 25 ಶೇಕಡ ಹಣ

ಉಡುಪಿ : ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್‍ರಾಜ್ ಕಾಂಚನ್‍ರಿಂದ ಮತ ಪ್ರಚಾರ

ಉಡುಪಿಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿದ್ದ ಭಿನ್ನ ಮತ ಶಮನಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಟಿಕೆಟ್ ಅಕಾಂಕ್ಷಿಗಳು ನಿನ್ನೆ ನಡೆದ ಸಭೆಯಲ್ಲಿ ಒಮ್ಮತವನ್ನು ಪ್ರದರ್ಶಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪ್ರಚಾರವೂ ಕೂಡ ಜೊರಾಗಿಯೇ ನಡೆಯುತ್ತಿದೆ. ಮನೆ ಮನೆ ಭೇಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದ್ದು ಮತದಾರರಿಂದ ಉತ್ತಮ ಪ್ರತಿಕ್ರಿಯೆ

ತಡೆಯಾಜ್ಞೆ ತಂದ ಉಮಾನಾಥ ಕೋಟ್ಯಾನ್

ಟಿಕೆಟ್ ಘೋಷಣೆಗೆ ಕ್ಷಣ ಗಣನೆ ನಡೆಯುತ್ತಿರುವ ಹೊತ್ತಲ್ಲಿ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ತನ್ನ ವಿರುದ್ಧ ಯಾವುದೇ ಮಾನಹಾನಿಕಾರಕ ಸುದ್ದಿ ,ಪೊಟೋ , ವಿಡಿಯೊ ಪ್ರಕಟ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ 40 ಕ್ಕೂ ಹೆಚ್ಚು ಮಾಧ್ಯಮಗಳಲ್ಲಿ ಯಾವುದೇ ಆಕ್ಷೇಪಕಾರಿ ಸುದ್ದಿ ಪ್ರಕಟಿಸಸಂತೆ ಉಮನಾಥ ಕೋಟ್ಯಾನ್ ಅವರು ಮಂಗಳೂರು ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ತಡೆಯಾಜ್ಞೆ