ಕಿನ್ನಿಗೋಳಿ ಪಂಚಾಯತ್‍ನಿಂದ ಪೂರೈಸುವ ನಳ್ಳಿ ನೀರಿನಲ್ಲಿ ವ್ಯತ್ಯಯ : ಶಾಂತಿನಗರ-ಗುತ್ತಕಾಡು ಪರಿಸರದ ನಾಗರಿಕರ ನಿಯೋಗ ಮುಖ್ಯಾಧಿಕಾರಿ ಭೇಟಿ

ಕಿನ್ನಿಗೋಳಿ: ಪಂಚಾಯತ್ ವತಿಯಿಂದ ಪೂರೈಸುವ ನಳ್ಳಿ ನೀರಿನಲ್ಲಿ ವ್ಯತ್ಯಯ ಉಂಟಾಗಿದ್ದು ಈ ಕುರಿತು ಶಾಂತಿನಗರ – ಗುತ್ತಕಾಡು ಪರಿಸರದ ನಾಗರಿಕರ ನಿಯೋಗ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅವರನ್ನು ಭೇಟಿಯಾಗಿ ಚರ್ಚಿಸಿತು.

ಇತ್ತೀಚೆಗೆ ಕುಡಿಯುವ ನೀರಿನ ಅಸಮರ್ಪಕ ಪೂರೈಕೆಯಿಂದ ತಾಳಿಪಾಡಿ ಗ್ರಾಮದ ಶಾಂತಿನಗರ ಗುತ್ತಕಾಡು ಪ್ರದೇಶದಲ್ಲಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಖಿಲ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅಬ್ದುಲ್ ಖಾದರ್ ನೇತೃತ್ವದಲ್ಲಿ ತೆರಳಿದ ನಿಯೋಗವು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂಎಲ್ ನಾಗರಾಜ್ ಅವರೊಂದಿಗೆ ಚರ್ಚಿಸಿ, ಮನವಿ ಸಲ್ಲಿಸಿತು. ಈ ಸಂದರ್ಭ ಮುಖ್ಯಾಧಿಕಾರಿ ಅವರು, ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು.

ನಿಯೋಗದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಟಿ.ಎಚ್. ಮಯ್ಯದ್ದಿ, ಬಿ. ಸೈದಾಲಿ, ಯೂತ್ ಕಾಂಗ್ರೆಸ್ ನ ಅರ್ಷದ್ ಗುತ್ತಕಾಡು, ಯು. ಹಸನಬ್ಬ, ಶಾಕೀರ್ ಗುತ್ತಕಾಡು, ಬಿ. ಮೊಹಮ್ಮದ್, ಗುಲಾಂ ಹುಸೇನ್, ನಾಸಿರ್ ಗುತ್ತಕಾಡು ಮತ್ತಿತ್ತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.