Home Archive by category ಕರಾವಳಿ (Page 6)

ಮಡುಂಬು ಹಿಂದೂ ರುದ್ರಭೂಮಿಯ ಶಿವನ ಮೂರ್ತಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಅನಾವರಣ

ಕಾಪು:ಇನ್ನಂಜೆ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಯುವಸೇನೆ ಮಡುಂಬು ಪ್ರಾಯೋಜಕತ್ವದಲ್ಲಿ ಮಡುಂಬು ಹಿಂದೂ ರುದ್ರಭೂಮಿ ಮುಂಭಾಗಲ್ಲಿ ನಿರ್ಮಿಸಿರುವ ಶಿವನ ಮೂರ್ತಿಯನ್ನು ದಿನಾಂಕ 15-02-2026 ಭಾನುವಾರದಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಉಪಾಧ್ಯಕ್ಷರಾದ ಸುರೇಖಾ

ಅಬಾಕಸ್ ಸ್ಪರ್ಧೆಯಲ್ಲಿ ಬ್ರಾಹ್ಮಿ ಸಿ. ಶೆಟ್ಟಿ ರಾಜ್ಯ ಚಾಂಪಿಯನ್

ಪಡುಬಿದ್ರಿ:ತುಮಕೂರಿನ ಟಿ.ಆರ್.ಎಸ್. ಅಬಾಕಸ್ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬ್ರಾಹ್ಮಿ ಸಿ. ಶೆಟ್ಟಿ ಚಾಂಪಿಯನ್ ಆಗಿ ಸಾಧನೆ ಮಾಡಿದ್ದಾರೆ. ಮಂಗಳೂರಿನ ಸೆಂಟ್ ತೆರೆಸಾ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಬ್ರಾಹ್ಮಿ ಸಿ. ಶೆಟ್ಟಿ ಅವರು ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಪದಕ ವಿಜೇತರಾಗಿದ್ದಾರೆ. ಅವರು ಮಂಗಳೂರಿನ ಕದ್ರಿಯ ನಿವಾಸಿಯಾಗಿದ್ದು, ಎರ್ಮಾಳ್ ಎಲ್ಲದಡಿ ಚಂದ್ರಹಾಸ್ ಶೆಟ್ಟಿ ಮತ್ತು ಅಮೃತಾ ಶೆಟ್ಟಿ

ಲೇಖಕಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರ ಹೊಸ ಕೃತಿ ‘ಇನ್‌ಕ್ರೆಡಿಬಲ್ ಭಾರತ್: ವಿಷನ್ ಫಾರ್ ವಿಕ್ಷಿತ್ ಭಾರತ್’ ಪುಸ್ತಕ ಬಿಡುಗಡೆಗೆ ಸಿದ್ಧ

ಮೂಡುಬಿದಿರೆ : ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಲೇಖಕಿ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ ಅವರು ತಮ್ಮ ಹೊಸ ಕೃತಿ ‘ಇನ್‌ಕ್ರೆಡಿಬಲ್ ಭಾರತ್: ವಿಷನ್ ಫಾರ್ ವಿಕ್ಷಿತ್ ಭಾರತ್’ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿದೆ. ರೆಶೆಲ್ ಫೆರ್ನಾಂಡಿಸ್ ಎಬಿವಿಪಿ ಸದಸ್ಯೆಯಾಗಿದ್ದು, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ. ಪ್ರಸ್ತುತ ಅವರು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿದ್ದಾರೆ. ದೇಶಭಕ್ತಿ,

ಶೀರ್ಷಿಕೆ: ತಂತ್ರಜ್ಞಾನದ ಮೂಲಕ ಶಿಕ್ಷಣಕ್ಕೆ ಒತ್ತು: ಎಸ್.ಜೆ.ಇ.ಸಿ 25ನೇ ಪ್ರತಿಷ್ಠಾಪನಾ ದಿನಾಚರಣೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿಗೆ ಸಂಬಂಧ ಹೊಂದಿರುವ ಸ್ವಾಯತ್ತ ಸಂಸ್ಥೆಯಾದ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಆಟೊನೊಮೌಸ್), ಮಂಗಳೂರು, ಉನ್ನತ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನ 25 ವರ್ಷದ ಪಯಣವನ್ನು ಪೂರ್ಣಗೊಳಿಸುತ್ತಿದ್ದು, ಬೆಳ್ಳಿ ಮಹೋತ್ಸವ ವರ್ಷಕ್ಕೆ ಕಾಲಿಟ್ಟಿದೆ. ಎನ್.ಎ.ಎ.ಸಿ A+ ಮಾನ್ಯತೆ ಹೊಂದಿರುವ ಈ ಸಂಸ್ಥೆಯ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳು ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಬಿ.ಎ)ಯಿಂದ ಮಾನ್ಯತೆ

ಉಳ್ಳಾಲ: ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ & ಸರ್ವೀಸ್ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನ ಮಳಿಗೆ ಶುಭಾರಂಭ

ಉಳ್ಳಾಲ ಬೈಲ್‌ನ ಮಾತಾ ಕಾಂಪ್ಲೆಕ್ಸ್‌ನಲ್ಲಿ ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವೀಸ್ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಸರ್ಫ್‌ರಾಝ್ ಮತ್ತು ಅಬ್ದುಲ್ ಲತೀಫ್ ಅವರ ಮಾಲಕತ್ವದಲ್ಲಿ ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವೀಸ್ ಮಳಿಗೆ ನೂತನವಾಗಿ ಶುಭಾರಂಭಗೊಂಡಿತು. ವಿಧಾನಸಭೆಯ ಸ್ಪೀಕರ್ ಮತ್ತು ಶಾಸಕರಾದ ಯು.ಟಿ. ಖಾದರ್ ಸಹಿತ ಗಣ್ಯರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಸ್ಪೀಕರ್

ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ತಂದು ತಲಪಾಡಿಯಲ್ಲಿ ಮಾರಾಟಕ್ಕೆ ಯತ್ನ ; ಮೂವರ ಬಂಧನ

ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಖರೀದಿಸಿ ತಂದು ಅದನ್ನು ಮಂಗಳೂರಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಳ್ಳಾಲ ತಾಲೂಕಿನ ತಲಪಾಡಿ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೆÇಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 118 ಗ್ರಾಮ್ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಫೆ.12 ರಂದು ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಕಾರನ್ನು ಪತ್ತೆಹಚ್ಚಿ ಕಾರ್ಯಾಚರಣೆ ನಡೆಸಿದ್ದಾರೆ. ಮುಕ್ಕಚೇರಿಯ

ಮುಂದಿನ ಬಜೆಟ್ ನಲ್ಲಿ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಒತ್ತು: ಮಂಡಳಿಯಲ್ಲಿ ಜನಪ್ರತಿನಿಧಿಗಳ ಬೇಡಿಕೆ

ಮಂಗಳೂರು: ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ ನಲ್ಲಿ ನೀಡಬೇಕೆಂದು ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ. ಗುರುವಾರ ಸ್ಪೀಕರ್ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾ ಸೌಧ’ದಲ್ಲಿ ನಡೆದ ಕರಾವಳಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಚಿವರು, ಶಾಸಕರು ಭಾಗವಹಿಸಿ, ಕರಾವಳಿಯ ಅಭಿವೃದ್ಧಿಯನ್ನು

ಕೆಡ್ಡಸ ದಿನಾಚರಣೆ–2026: ಸುಳ್ಯದಲ್ಲಿ ಸಂಭ್ರಮಾಚರಣೆ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ ಹಾಗೂ ಮಹಾತ್ಮಗಾಂಧಿ ಮಲ್ನಾಡು ಆಂಗ್ಲಮಾಧ್ಯಮ ಪ್ರೌಢಶಾಲೆ, ಕೊಡಿಯಾಲಬೈಲು ಇವರ ಸಂಯುಕ್ತ ಆಶ್ರಯದಲ್ಲಿ ಕೆಡ್ಡಸ ದಿನಾಚರಣೆ–2026 ಕಾರ್ಯಕ್ರಮವು ಫೆಬ್ರವರಿ 14ರಂದು ಬೆಳಿಗ್ಗೆ 10 ಗಂಟೆಗೆ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಲಿದ್ದು, ನೆಹರು ಮೆಮೋರಿಯಲ್ ಕಾಲೇಜು ಸುಳ್ಯದ ವಿಶ್ರಾಂತ ಪ್ರಾಂಶುಪಾಲರಾದ

ಕಾರು-ಬೈಕ್ ಡಿಕ್ಕಿ : ಗಾಯಗೊಂಡಿದ್ದ ವಿದ್ಯಾಥಿ೯ ಸಾವು

ಮೂಡುಬಿದಿರೆ: ಗುರುವಾರ ರಾತ್ರಿ ಬನ್ನಡ್ಕದಲ್ಲಿ ನಡೆದ ಕಾರು-ಬೈಕ್ ಢಿಕ್ಕಿಯಲ್ಲಿ ತೀವೃವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಹ ಸವಾರ ರೋಟರಿ ಪಿಯುಸಿ ಕಾಲೇಜಿನ ವಿದ್ಯಾಥಿ೯ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟ ದುಘ೯ಟನೆ ನಡೆದಿದೆ. ಮರ‍್ಪಾಡಿ ಗ್ರಾಮದ ಕೋಟೆಬಾಗಿಲಿನ ಸದಾನಂದ ಸುರ‍್ಣ- ರಾಜಶ್ರೀ ದಂಪತಿಯ ಪುತ್ರ ಶ್ರವಣ್ ಮೃತ ದರ‍್ದೈವಿ. ಕಾಮಗಾರಿ ಹಂತದಲ್ಲಿರುವ ಕರ‍್ಕಳ–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕದಲ್ಲಿ ಘಟನೆ ಸಂಭವಿಸಿತ್ತು. ಖ್ಯಾತ

ಕಾರ್ಮಿಕ ಸಂಹಿತೆಗಳ ವಿರುದ್ದ ಅಖಿಲ ಭಾರತ ಮಹಾಮುಷ್ಕರ – ಮಂಗಳೂರಿನಲ್ಲಿ ರಸ್ತೆತಡೆ ಹಾಗೂ ಪ್ರತಿಭಟನಾ ಪ್ರದರ್ಶನ

ಕಾರ್ಮಿಕ ವರ್ಗದ 29 ಪ್ರಮುಖ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಪರ 4 ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರಕಾರದ ವಿರುದ್ಧ ಇಂದು (ಫೆಬ್ರವರಿ – 12) ರೈತ ಕಾರ್ಮಿಕರ ನೇತ್ರತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ಅತ್ಯಂತ ಯಶಸ್ವಿಯಾಗಿ ಜರುಗಿದ್ದು,ಅದರ ಭಾಗವಾಗಿ ಮಂಗಳೂರಿನ ಹೃದಯಭಾಗದ ಕ್ಲಾಕ್ ಟವರ್ ಬಳಿಯಲ್ಲಿ ವಿವಿಧ ವಿಭಾಗದ ಕಾರ್ಮಿಕರು ನೌಕರರು ಜತೆಯಾಗಿ ಸೇರಿ ರಸ್ತೆತಡೆ ನಡೆಸಿ ಬಳಿಕ ಪ್ರತಿಭಟನಾ ಸಭೆಯನ್ನು ನಡೆಸಿದರು 500ಕ್ಕೂ ಮಿಕ್ಕಿದ