ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ನಿಮಿತ್ತ ಕಾರ್ತಿಕ ಶುದ್ಧ ಚೌತಿಯಂದು ಪವಿತ್ರ ಪಲ್ಲಪೂಜೆ, ಮಂಗಳವಾರ ಮತ್ತು ಬುಧವಾರ ಎಳೆಯಲಿರುವ ಪಂಚಮಿ ರಥ ಹಾಗೂ ಬ್ರಹ್ಮರಥಗಳ ಶಿಖರ (ಕಳಶ) ಪೂಜೆ, ಎಡೆಸ್ನಾನ ಪೂಜಾ ವಿಧಿವಿಧಾನಗಳು ನಡೆದವು. ಬೆಳಗ್ಗೆ ದೇವಸ್ಥಾನದ ಒಳಾಂಗಣದಲ್ಲಿ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿ
ಮಲ್ಪೆ ಪ್ರದೇಶದಲ್ಲಿ ಉಂಟಾದ ಸರಕಾರಿ ಜಾಗ ವಿವಾದದಿಂದ ಸ್ಥಳೀಯ ಮೀನುಗಾರರಲ್ಲಿ ಉಂಟಾದ ಆತಂಕ ನಿವಾರಣೆ, ನೈಜ ಮೀನುಗಾರರ ರಕ್ಷಣೆ ಹಾಗೂ ಸರ್ಕಾರ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವ ಕುರಿತು ಉಡುಪಿ ಜಿಲ್ಲಾಧಿಕಾರಿಗೂ ಹಾಗೂ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ವತಿಯಿಂದ ಮನವಿ ನೀಡಲಾಯಿತು. ಮಲ್ಪೆ ಪರಿಸರದಲ್ಲಿ ಇತ್ತೀಚೆಗೆ ಸರಕಾರಿ ಮೀನುಗಾರಿಕಾ ಜಾಗಕ್ಕೆ ಸಂಬAಧಿಸಿದAತೆ ಸರ್ಕಾರದಿಂದ ಹೊರಡಿಸಿದ ಆದೇಶದಿಂದ
ಸುಳ್ಯ: ಕಳೆದ ಎರಡು ದಶಕಗಳಿಂದ ಮಂಡೆಕೋಲು ಗ್ರಾಮಸ್ಥರನ್ನು ಕಾಡುತ್ತಿರುವ ಕಾಡಾನೆ ಹಾಗೂ ಇತರ ವನ್ಯಮೃಗಗಳ ಹಾವಳಿ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ಮಂಡೆಕೋಲಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೆಳಗ್ಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ನೂರಾರು ಗ್ರಾಮಸ್ಥರು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಮಾತನಾಡಿ,
ಎಂಸಿಸಿ ಬ್ಯಾಂಕ್, ಮಂಗಳೂರು ತನ್ನ 15ನೇ ಎಟಿಎಂ ಅನ್ನು ನವಂಬರ್ 23, 2025ರ ರವಿವಾರ ಉಡುಪಿ ಶಾಖೆಯಲ್ಲಿ ಉದ್ಘಾಟಿಸಲಾಯಿತು.ಈ ಎಟಿಎಂ ಅನ್ನು ಉದ್ಯಾವರದ ಸೇಂಟ್ ಕ್ಸೇವಿಯರ್ ಚರ್ಚ್ ಧರ್ಮಗುರು ವಂದನೀಯ ಫಾ| ಅನಿಲ್ ಡಿಸೋಜಾ ಉದ್ಘಾಟಿಸಿದರು. ಉಡುಪಿಯ ಶೋಕಮಾತೆ ಚರ್ಚ್ ಧರ್ಮಗುರು ವಂದನೀಯ ಫಾ| ಚಾರ್ಲ್ಸ್ ಮಿನೇಜಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂನಿAದ ಮೊದಲ ನಗದು ಹಿಂಪಡೆಯುವಿಕೆಯನ್ನು ತಲ್ಲೂರಿನ ಶ್ರೀ ಶಿವಪ್ರಸಾದ್ ಶಿವರಾಮ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನ. 23ರಂದು ಸಂಭವಿಸಿದ ದಾರುಣ ಘಟನೆ ಗ್ರಾಮಸ್ಥರನ್ನು ಕಣ್ಣೀರಲ್ಲಿಟ್ಟುಬಿಟ್ಟಿದೆ. ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ದಂಪತಿ ದುರಂತವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಟ್ಟೆ ತೊಳೆಯುವ ಸಂದರ್ಭ ದೀಪು ಕಾಲು ಜಾರಿಬಿದ್ದು ನಾಲೆಗೆ ಬಿದ್ದಾಳೆ. ತಕ್ಷಣವೇ ಪತ್ನಿಯನ್ನು ರಕ್ಷಿಸಲು ಗೋಪಾಲ್ ನಾಲೆಗೆ ಇಳಿದರೂ, ನಾಲೆಯಲ್ಲಿ ಹರಿಯುತ್ತಿದ್ದ ಭಾರೀ ಪ್ರಮಾಣದ ನೀರಿನ ಹರಿವು
ಸುಳ್ಯ. ಬೆಳ್ಳಾರೆ.ಇತ್ತೀಚೆಗೆ ನಿಧನರಾದ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಉದ್ಯೋಗಿ ಜತ್ತಪ್ಪ ಕೆ.ಪಡ್ಪು ರವರಿಗೆ ಬೆಳ್ಳಾರೆ ಸಹಕಾರಿ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆಯು ನ.24 ರಂದು ಸಂಘದ ಸಭಾಭವನದಲ್ಲಿ ನಡೆಯಿತುಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಸಂಘದಲ್ಲಿ ಜತ್ತಪ್ಪಣ್ಣನರವರು 32 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ. ಒಳ್ಳೆಯ ವ್ಯಕ್ತಿತ್ವದಿಂದ
ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಆಯ್ಕೆ ಪ್ರಕ್ರಿಯೆ ಬೆಂಗಳೂರಿನಲ್ಲಿ .ಬಾಲಕರ ಮತ್ತು ಬಾಲಕಿಯರ 49ನೇ ಜೂನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ 2025 ರ ಡಿಸೆಂಬರ್ 16 ರಿಂದ 21 ರವರೆಗೆ ರಾಜಸ್ಥಾನದ ಜುನ್ಜುನುವಿನ ಪಿಲಾನಿಯಲ್ಲಿ ನಡೆಯಲಿದೆ . ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಗೆ .ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆ ಪ್ರಕಾರ ದಿನಾಂಕ: 27ನೇ ಮತ್ತು 28 ನವೆಂಬರ್ 2025 ರಂದು ಬೆಳಗ್ಗೆ 9 ಗಂಟೆಗೆ ಭಾರತೀಯ ಕ್ರೀಡಾ
“ಮನಸ್ಸು ಮತ್ತು ಬುದ್ಧಿಯ ಹತೋಟಿ ದುಶ್ಚಟ ಮುಕ್ತ ಸಮಾಜಕ್ಕೆ ಬುನಾದಿ”ಡಾ. ಅನುರಾಧಾ ಕುರುಂಜಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಸುಳ್ಯ ವತಿಯಿಂದ ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು 24-11-2025 ರಂದು ನಡೆಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ಪ್ರಕಾಶ್ ಕಣೆಮರಡ್ಕ ರವರು ವಹಿಸಿದ್ದರು. ಕಾರ್ಯಕ್ರಮವನ್ನು ಅಜ್ಜಾವರ ವಲಯದ ಜನ ಜಾಗೃತಿ ಅಧ್ಯಕ್ಷರಾದ ಶ್ರೀ
ಕಳೆದ 7 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ವಂಚಿಸುತ್ತಾ ಬಂದಿರುವ ಬೀಡಿ ಮಾಲಕರ ವಿರುದ್ಧ ಹಾಗೂ ಕನಿಷ್ಠ ಕೂಲಿ ಜಾರಿ ಮಾಡಲು ಮೀನಾ ಮೇಷ ಎಣಿಸುವ ರಾಜ್ಯ ಸರಕಾರದ ವಿರುದ್ದ ಬೀಡಿ ಕಾರ್ಮಿಕರು CITU ನೇತ್ರತ್ವದಲ್ಲಿ ಇಂದಿನಿಂದ (24-11-2025) ನಗರದ ಕ್ಲಾಕ್ ಟವರ್ ಬಳಿಯಲ್ಲಿ ರಾತ್ರಿ ಹಗಲು ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.ಪ್ರಾರಂಭದಲ್ಲಿ ಧರಣಿನಿರತರು ಬೀಡಿ ಮಾಲಕರು ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ
ಮೂಡುಬಿದಿರೆ: ಇಲ್ಲಿನ ಕಡಲಕೆರೆಯಲ್ಲಿರುವ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರೀತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ರಾಜ್ಯ ಮಟ್ಟದಲ್ಲಿ ಸಮಗ್ರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 4 x 100 ಮೀಟರ್ ರಿಲೇ: ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿಂದೆ ಅವರು 400 ಮೀಟರ್ ಫ್ರೀ ಸ್ಟೈಲ್- ದ್ವಿತೀಯ ಸ್ಥಾನ, 400 ಮೀಟರ್ ಫ್ರೀ ಸ್ಟೈಲ್- ಪ್ರಥಮ




























