ನಶಿಸುತ್ತಿರುವ ಭತ್ತದ ಕೃಷಿಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ ಕಾರ್ಯಕ್ರಮ ಮಿತ್ತಳಿಕೆಗುತ್ತು ಕುಟುಂಬಸ್ಥರ ಸಹಕಾರದೊಂದಿಗೆ ಅಳಿಕೆ ಗ್ರಾಮದ ಮಿತ್ತಳಿಕೆಯ ಗದ್ದೆಯಲ್ಲಿ ನಡೆಯಿತು .ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಂಟ್ವಾಳ
ಬಂಟ್ವಾಳದ ತಾಲೂಕಿನ ಜನತೆಗೆ ಉತ್ಕೃಷ್ಟ ವಾದ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಸಂಚಾರಿ ಆರೋಗ್ಯ ಬಸ್ ಆರಂಭಿಸಲಾಗಿದೆ. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರ ಮುತುವರ್ಜಿಯಿಂದ ಸಂಚಾರಿ ಆರೋಗ್ಯ ಬಸ್ ವ್ಯವಸ್ಥೆ ಮಾಡಲಾಗಿದೆ. ಜನರ ಆರೋಗ್ಯದ ಸುರಕ್ಷತೆಯ ಜಾಗೃತಿಯ ಸಲುವಾಗಿ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನ ಮಾಡಲಾಗಿದೆ. ಇನ್ನು ಕಾವಳಮೂಡುರು ಗ್ರಾಮ ಪಂಚಾಯತ್ ನ ಕೆದ್ದಳಿಕೆ ಶಾಲಾ ವಠಾರಕ್ಕೆ ಸಂಚಾರಿ ಆರೋಗ್ಯ ಬಸ್ ಆಗಮಿಸಿತು. ಇದರ ಸದುಪಯೋಗವನ್ನು
ಬಂಟ್ವಾಳ: ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಎಂಬಲ್ಲಿನ ರೈಲ್ವೇ ಹಳಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಲಕ್ಷ್ಮಣ ಎಂಬವರ ಮಗ ಕಾರ್ತಿಕ್ ಎಂಬಾತನ ಮೃತದೇಹವಿದಾಗಿದ್ದು ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ. ಸಂಜೆಯ ವೇಳೆ ಮನೆಯಿಂದ ಹೊರಟ ಕಾರ್ತಿಕ್ ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಮಂದಿ ಹುಡುಕಾಟ ಆರಂಭಿಸಿದ್ದರು. ಇಂದು ಮುಂಜಾನೆ ೩ ಗಂಟೆಯ ವೇಳೆಗೆ ಮೃತದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ
ಮಂಗಳೂರು: ಕುಸಿದಿದ್ದ ಮರವೂರು ಸೇತುವೆ ದುರಸ್ತಿ ಪೂರ್ಣಗೊಂಡು ಶುಕ್ರವಾರ ಸಾಯಂಕಾಲದಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೇರ ಸಂಪರ್ಕ ಕಲ್ಪಿಸಲು ಸಹಕಾರಿಯಾಗಿದ್ದ ಮರವೂರು ಸೇತುವೆ ಒಂದುವರೆ ತಿಂಗಳ ಹಿಂದೆ ಎರಡು ಅಡಿಯಷ್ಟು ಕುಸಿದಿತ್ತು. ಬೆಂಗಳೂರಿನಿಂದ ಬಂದ ತಜ್ಞ ಇಂಜಿನಿಯರ್‌ಗಳು ಪರಿಶೀಲಿಸಿ, ಸರಿಪಡಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು
ದಕ್ಷಿಣ ಭಾರತ ಪ್ರವಾಸೋದ್ಯಮ ಉತ್ಸವವನ್ನು ಆಯೋಜಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯು ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಈ ಉತ್ಸವವು ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮ ಚಟುವಟಿಕೆಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರಾದ ಕಿಶನ್ ರೆಡ್ಡಿ ಅವರು ಅಭಿಪ್ರಾಯ ಪಟ್ಟರು. ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಪ್ರವಾಸೋದ್ಯಮ
ಕೋವಿಡ್ ಸಮಸ್ಯೆ, ಆರ್ಥಿಕ ತೊಂದರೆಗಳಿಂದ ಭಾರೀ ಸಂಕಷ್ಟದಲ್ಲಿರುವ ರಾಜ್ಯದ ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದ್ಯತೆ ನೀಡಬೇಕು ಎಂದು ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕಾರಣಿ ಆಗ್ರಹಿಸಿದೆ. ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್ ರಕ್ಷಾ ರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್
ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಇದನ್ನ ಮನಗಂಡ ತಾಯಿ ಹಾಗೂ ಮಗಳು ಸೇರಿಕೊಂಡು ಹೊಂಡಗಳಿಗೆ ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಕಿಂಡೋವಿನಲ್ಲಿ ರಸ್ತೆಯಲ್ಲಿ ಉಂಟಾಗುವ ಗುಂಡಿಗಳನ್ನು ಸ್ಥಳೀಯ ಆಶಾ ಕಾರ್ಯಕರ್ತೆಯೂ ಆಗಿರುವ ಅನಂತಾವತಿ ಮತ್ತು ತಾಯಿ ಸೇಸಮ್ಮ ಸೇರಿಕೊಂಡು ಮಣ್ಣು ಮತ್ತು
ಕುಂದಾಪುರದ ಬೈಂದೂರು ತಾಲೂಕು ನೆರೆ ಪೀಡಿತ ಪ್ರದೇಶಗಳಾದ ನಾಡ, ಮರವಂತೆ, ಬಡಾಕೆರೆ ಮತ್ತು ಹೇರೂರು ಗ್ರಾಮ ಪಂಚಾಯಿತಿಗಳಿಗೆ ದೋಣಿಯನ್ನು ಜಿಲ್ಲಾಡಳಿತದಿಂದ ಹಸ್ತಾಂತರಿಸಿದ್ರು. ಕುಂದಾಪುರದ ಬೈಂದೂರು ತಾಲೂಕಿನ ಪ್ರದೇಶದಲ್ಲಿ 5 ಕಡೆಗಳಲ್ಲಿ ಪ್ರಾಕೃತಿವಿಕೋಪದಿಂದ ಸಾಕಷ್ಟು ತೊಂದರೆ ಆಗಿದ್ದು, ಅಲ್ಲಿನ ಸಮಸ್ಯೆಗಳ ಕುರಿತು ವಿ೪ನ್ಯೂಸ್ ವಿಸ್ಕೃತವಾಗಿ ವರದಿ ಮಾಡಿತ್ತು. ಈ ವರದಿಗೆ ಎಚ್ಚೆತ್ತುಕೊಂಡು, ನೆರೆ ಪೀಡಿತ ಪ್ರದೇಶಗಳಾದ ನಾಡ, ಮರವಂತೆ, ಬಡಾಕೆರೆ ಮತ್ತು
ಮಂಗಳೂರಿನ ಪ್ರತಿಷ್ಟಿತ ಬೆಸೆಂಟ್ ಮಹಿಳಾ ಕಾಲೇಜು ವತಿಯಿಂದ ಬೆಸೆಂಟ್ ಕನ್ನಡ ಮಾಧ್ಯಮವಿದ್ಯಾರ್ಥಿಗಳಿಗೆ ಮತ್ತು ಶಾಲಾ ಸಪೋರ್ಟಿಂಗ್ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯುತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ಬೆಸೆಂಟ್ ಕನ್ನಡ ಮಾಧ್ಯಮ ಶಾಲೆಯ ಸಂಚಾಲಕ ಸತೀಶ್ ಭಟ್ ಮಾತನಾಡಿ, ಈ ಕಾರ್ಯಕ್ರವನ್ನು ಪ್ರಚಾರಕ್ಕಾಗಿ ಮಾಡುವುದಲ್ಲಿ ಇನ್ನುಳಿದವರಿಗೆ ಇದು ಪ್ರೇರಣೆಯಾಗಬೇಕು ಎನ್ನುವು ನಿಟ್ಟಿನಲ್ಲಿ ಆಯೋಜಿಸಲಾಗಿದೆ.
ಚಲನಚಿತ್ರದ ಹಾಸ್ಯ ನಟಿ ವಿನ್ನಿ ಫೆರ್ನಾಂಡೀಸ್ ಹೃದಯಘಾತದಿಂದ ನಿಧನ ಹೊಂದಿದ್ದಾರೆ.ಅವರಿಗೆ 63 ವಯಸ್ಸಾಗಿತ್ತು. ಕನ್ನಡ, ತುಳು ಮತ್ತು ಕೊಂಕಣಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರು ಕನ್ನಡ ಮತ್ತು ಕೊಂಕಣಿ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದರು. ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲಿ ನಟಿಸಿದರು.ಇವರು ರಾಜ್ಯೋತ್ಸವ ಪ್ರಶಸ್ತಿಯನ್ನ ಪಡೆದಿದ್ದಾರೆ. ಪತಿ ವಿನ್ಸೆಂಟ್,


















