ಕುಂದಾಪುರ ತಾಲೂಕು ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದ ರವಿರಾಜ್ ಎಂಬಾತನನ್ನು ಖಚಿತ ಮಾಹಿತಿ ಮೇರೆಗೆ ಎಸ್ಪಿ, ಡಿಎಸ್ಪಿ, ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ ಹಾಗೂ ಎಎಸ್ಐ ರಘುರಾಮ್ ಮತ್ತು ಪೊಲೀಸ್ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಆಪಾದಿತ ರವಿರಾಜ್ ಎಂಬಾತನನ್ನು ಬಂಧಿಸಿ ಮಾರಾಟ
ಮೈಸೂರು: ಮೈಸೂರಿನಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇದ್ದು ಸಾಂಸ್ಕೃತಿಕ ನಗರಿ ಜನತೆಯ ನಿದ್ದೆಗಡಿಸಿದೆ. ಇದೀಗ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎನ್ನಲಾಗಿದ್ದು ಜನತೆಯನ್ನು ಆತಂಕಕ್ಕೆ ನೂಕಿದೆ. ಹಾಡುಹಗಲಲ್ಲೇ ಯುವಕನಿಗೆ ಗುಂಡು ಹಾರಿಸಿ ಜ್ಯುವೆಲಲ್ಲರಿ ಶಾಪ್ ದರೋಡೆ, ಯುವತಿಗೆ ಚಾಕುವಿನಿಂದ ಇರಿತ ಪ್ರಕರಣಗಳು ಮಾಸುವ ಮುನ್ನವೇ ಬೆಚ್ಚಿ ಬೀಳಿಸುವ ಸುದ್ದಿಯೊಂದು ಹೊರಬಿದ್ದಿದೆ. ಮೈಸೂರು ನಿವಾಸಿ ಖಾಸಗಿ
ಬಂಟ್ವಾಳ: ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಬ್ರಹ್ಮರಕೂಟ್ಲು ಹಾಗೂ ಕಳ್ಳಿಗೆ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಬುಧವಾರ ಶಾಲೆಯಲ್ಲಿ ನಡೆಯಿತು. ಮಾಜಿ ಸಚಿವ, ಕಳ್ಳಿಗೆ ಗ್ರಾಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಿ ಸಾಂಕೇತಿಕವಾಗಿ ಪುಸ್ತಕ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು ಶಿಕ್ಷಣ ಪ್ರಗತಿಯ ಸಂಕೇತ ಆದರೆ ಹಿಂದೆಲ್ಲಾ ಎಲ್ಲರಿಗೂ ಶಿಕ್ಷಣ ಪಡೆಯುವ
ಬಂಟ್ವಾಳ: ಶಾಸಕ ರಾಜೇಶ್ ನಾಕ್ ನೇತೃತ್ವದಲ್ಲಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅವರಿದ್ದ ನಿಯೋಗ ಬುಧವಾರ ಬೆಂಗಳೂರಿನ ಕಚೇರಿಯಲ್ಲಿ ರಾಜ್ಯ ಪ್ರಾಥಮಿಕ ಹಾಗೂ ಪೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರನ್ನು ಭೇಟಿ ಮಾಡಿತು. ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿರುವ ಶಾಲೆಗಳನ್ನು ಒಂದನೇ ತರಗತಿಯಿಂದಲೇ ಆರಂಭಿಸಬೇಕು ಎನ್ನುವ ನಿಯೋಗದ ಮನವಿಗೆ ಸ್ಪಂದಿಸಿದ ಸಚಿವರು 9 ಮತ್ತು 10ನೇ ತರಗತಿಗಳು ಆರಂಭಗೊಂಡ ಬಳಿಕ ಎರಡು ದಿನದಲ್ಲಿ
ಮಂಗಳೂರಿನ ನೀರುಮಾರ್ಗ ಗ್ರಾಮ ಪಂಚಾಯತ್‌ನಲ್ಲಿ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿತರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ನೀರುಮಾರ್ಗ ಗ್ರಾಮ ಪಂಚಾಯತ್‌ನಲ್ಲಿ ಅಭಿವೃದ್ದಿ ವಿಚಾರದಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಅನುದಾನ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿತ ಸದಸ್ಯರು ಧ್ವನಿ ಎತ್ತಿದ್ದಾರೆ. ಮಾತ್ರವಲ್ಲದೆ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬಂಗ್ರಕೂಳೂರು ವಾರ್ಡ್ 16 ರ ಸಮಗ್ರ ಅಭಿವೃದ್ಧಿಗಾಗಿ 33.07 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಇಂದು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆಯ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ಶ್ರೀ ಕಿರಣ್ ಕುಮಾರ್, ಹಿರಿಯರಾದ ಗೋಪಾಲ್ ಕೋಟ್ಯಾನ್, ಹಾಗೂ ಶ್ರೀ ಮಹಾಗಣಪತಿ ಭಜನಾ ಮಂದಿರ ಕೋಡಿಕಲ್ ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮೂಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ಪುರಸಭೆ ಮತ್ತು ಗ್ರಾ.ಪಂಚಾಯತ್ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಆಧಾರ ಕಾರ್ಯಕರ್ತರು. ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು ಮತ್ತು ವಿಚಾರವಂತರಾಗಿ ಸಾಗಬೇಕೆನ್ನುವ ದೃಷ್ಠಿಕೋನದಿಂದ ಪ್ರಶಿಕ್ಷಣ ವರ್ಗ ರೂಪುಗೊಂಡಿದೆ. ಹಲವು ವರ್ಷಗಳ ನಂತರ ಜನರು
ಬಹುನಿರೀಕ್ಷಿತ ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನವು ಮಂಗಳೂರಿನ ಪ್ರಶಾಂತವಾದ ಕುಳಾಯಿ ಕೋಡಿಕೆರೆ ಎಂಬಲ್ಲಿ 1.5 ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿದೆ. ಆಗಸ್ಟ್ 27ರಂದು ಭೂಮಿ ಪೂಜೆಯನ್ನು ನೆರವೇರಿಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶ್ರೀ ರಾಧಾ ಗೋವಿಂದ ದೇವಸ್ಥಾನದ ನಾಮ ನಿಷ್ಠ ದಾಸ್ ಅವರು ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆಯು ಸಂಸದ ನಳಿನ್ ಕುಮಾರ್
ಪುತ್ತೂರು: ಆ 24 ರಂದು ರಾತ್ರಿ ಪುತ್ತೂರಿನ ದರ್ಬೆಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್’ಹಾಕಿಸುತ್ತಿದ್ದ ಸಂದರ್ಭ ತಂಡವೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಕೃತ್ಯವೊಂದರ ಸಾಕ್ಷಿ ನುಡಿಯುವ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಮನೆ ನಿವಾಸಿ ರಾಧಾಕೃಷ್ಣ
ಪರಿಸರ ಉಳಿಸಬೇಕು, ಪರಿಸರ ಬೆಳೆಸಬೇಕು ಎನ್ನುವುದು ಕೇವಲ ಭಾಷಣ ಹಾಗೂ ಸೆಮಿನಾರ್ ಗಳಿಗೆ ಸೀಮಿತವಾಗಿದೆ. ಫೀಲ್ಡ್ ಗೆ ಇಳಿದು ಪ್ರಕೃತಿಯನ್ನು ಸಂರಕ್ಷಿಸುವ ಕೆಲಸಗಳು ಕೇವಲ ಬೆರಳೆಣಿಕೆಯ ಜನರಿಂದ ಮಾತ್ರ ಆಗುತ್ತಿದೆ. ಇಂಥಹುದೇ ಒರ್ವ ಪರಿಸರ ಸಂರಕ್ಷಕ ಹಾಗೂ ಕೃತಕ ಕಾಡುಗಳ ಸೃಷ್ಟಿಕರ್ತ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ಮನೆಯ ಸಣ್ಣ ಜಾಗದಲ್ಲೇ ದಟ್ಟ ಕಾಡುಗಳನ್ನು ಹೇಗೆ ಬೆಳೆಸಬಹುದು ಎನ್ನುವುದಕ್ಕೆ ಮಾದರಿಯಾಗಿರುವ ಈ ವ್ಯಕ್ತಿ ಯಾರು ಹಾಗೂ ಇವರ ಸಾಧನೆಯೇನು


















