Home Archive by category ಕರಾವಳಿ (Page 860)

ಗೋವು ನಮ್ಮೆಲ್ಲರ ತಾಯಿ – ಗೋ ಸೇವೆಯೇ ನಮಗೆ ಕರ್ತವ್ಯ –  ದಯಾನಂದ ಜಿ. ಕತ್ತಲ್‌ಸಾರ್

ಮಂಗಳೂರು:  ಗೋವು ಜಗತ್ತಿನೆಲ್ಲರ ತಾಯಿ. ಆಕೆಯ ಸೇವೆಯನ್ನು ಮಾಡ ಬೇಕಾದುದು ನಮಗೆ ಕರ್ತವ್ಯ. ನಮ್ಮ ತಾಯಿಯ ನಂತರದ ಸ್ಥಾನ ಆಕೆಗೇ ಹೋಗುತ್ತದೆ. ಮೂರು ಮೂರ್ತಿಗಳು, ಮೂವತ್ತು ಮೂರು ಕೋಟಿ ದೇವತೆಗಳು ಅಷ್ಟ ಲಕ್ಷ್ಮೀಯರು, ರತಿ, ವಾಣಿ, ಗಿರಿಜೆಯರು ನೆಲೆಗೊಂಡಿದ್ದಾರೆ ಆಕೆಯ ಮೈ ಮೇಲೆ ಹಾಗಾಗಿ ಆಕೆ ಸರ್ವತ್ರ ಪೂಜ್ಯಳು. ಸರ್ವವಂದ್ಯಳೂ ಆಗಿದ್ದಾಳೆ. ಅಂತಹಾ ಗೋಮಾತೆಯ

ಮಂಗಳೂರಿನ ಸರಕು ಸಾಗಾಟದ ಘನ ಲಾರಿಗಳ ಸಂಚಾರಕ್ಕೆ ಗುಂಡ್ಯದಲ್ಲಿ ತಡೆ

ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿ ಕುಸಿತಗೊಂಡಿರುವ ಕಾರಣದಿಂದ ಶಿರಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ಹಾಸನ ಜಿಲ್ಲಾಧಿಕಾರಿಯವರು ನಿರ್ಬಂಧ ಹೇರಿದ್ದು, ಇದರ ಮಾಹಿತಿ ತಿಳಿಯದೇ ಮಂಗಳೂರು ಕಡೆಯಿಂದ ಆಗಮಿಸಿರುವ ನೂರಾರು ಸರಕು ಸಾಗಾಟದ ಘನ ಲಾರಿಗಳ ಸಂಚಾರಕ್ಕೆ ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಉಪ್ಪಿನಂಗಡಿ ಪೊಲೀಸರು ತಡೆಯೊಡ್ಡಿದ್ದಾರೆ. ಇದರಿಂದಾಗಿ ಕಳೆದ ಮೂರ್‍ನಾಲ್ಕು ದಿನಗಳಿಂದ ನೂರಾರು ಮಂದಿ ಲಾರಿ ಚಾಲಕ, ಕ್ಲೀನರ್‌ಗಳು

ಆಕ್ಸಿಜನ್ ಉತ್ಪಾದನಾ ಘಟಕ ವೀಕ್ಷಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕುಂದಾಪುರ: ಸಾರ್ವಜನಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ನಿಮಿಷಕ್ಕೆ ಐನೂರು ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯದ ಆಕ್ಸಿಜನ್ ಘಟಕ ಈಗಾಗಲೇ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಉದ್ಘಾಟನೆಗೆ ಪೆಟ್ರೋಲಿಯಂ ಸಚಿವರು ಬರುತ್ತಾರೆಂಬ ಮಾಹಿತಿ ಇದೆ. ಹೀಗಾಗಿ ಸ್ವಲ್ಪ ದಿನದ ಬಳಿಕ ಈ ಘಟಕವನ್ನು ಉದ್ಘಾಟನೆ ಮಾಡುತ್ತೇವೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು. ಕೇಂದ್ರ

ಮೋದೀಜಿ ಮಂತ್ರಿ ಮಂಡಲಕ್ಕೆ ಸಣ್ಣ ಕಪ್ಪುಚುಕ್ಕೆಯೂ ಬಾರದಂತೆ ಕೆಲಸ ಮಾಡುವೆ: ಸಚಿವೆ ಶೋಭಾ ಕರಂದ್ಲಾಜೆ

ಕುಂದಾಪುರ: ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷದವರು ನೂತನ ಸಚಿವರ ಪರಿಚಯಕ್ಕೂ ಅವಕಾಶ ನೀಡದೆ ಗದ್ದಲ ಎಬ್ಬಿಸಿದ್ದರಿಂದ ನಮ್ಮನ್ನು ನಾವು ಪರಿಚಯಿಸಿಕೊಳ್ಳಲು ಜನಾಶೀರ್ವಾದ ಯಾತ್ರೆ ಆರಂಭಿಸಿದ್ದೇವೆ. ನರೇಂದ್ರ ಮೋದೀಜಿಯವರ ಸರ್ಕಾರಕ್ಕೆ ಚಿಕ್ಕ ಕಪ್ಪು ಚುಕ್ಕೆಯೂ ಬಾರದಂತೆ ಅತ್ಯಂತ ಪಾರದರ್ಶಕವಾಗಿ ಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹೇಳಿದರು. ಕೇಂದ್ರ ಸಚಿವೆಯಾಗಿ ಆಯ್ಕೆಗೊಂಡ ಬಳಿಕ

ಉದ್ಯಾವರ ಸೇತುವೆಯಲ್ಲಿ ಕಾರು ಲಾರಿ ಅಪಘಾತ: ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಉದ್ಯಾವರ ಸೇತುವೆಯಲ್ಲಿ ಲಾರಿ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬಹಳಷ್ಟು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.   ಕಾರು ಬಹುತೇಕ ಜಖಂಗೊಂಡು ಚಲಿಸದ ಕಾರಣ ಸ್ಥಳಕ್ಕೆ ಬಂದ ಕಾಪು ಪೊಲೀಸರು ಬಾರ ಎತ್ತುವ ಯಂತ್ರ ತರಿಸಿ ಕಾರನ್ನು ಸೇತುವೆ ಮೇಲಿಂದ ತೆರವುಗೊಳಿಸಲಾಯಿತು.

ಬಿಜೆಪಿ ಜಿಲ್ಲೆಗೆ ಹೊಸ ಯೋಜನೆಗಳನ್ನು ತಂದಿಲ್ಲ- ಮಾಜಿ ಸಚಿವ ರಮಾನಾಥ ರೈ ಹೇಳಿಕೆ

ಮಂಗಳೂರಿನ ಉರ್ವಸ್ಟೋರ್ ಬಳಿ ಇತ್ತೀಚಿಗೆ ಉದ್ಘಾಟನೆಗೊಂಡ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನವನ್ನು ಮಾಜಿ ಸಚಿವ ಬಿ.ರಮಾನಾಥ್ ರೈ ಸೇರಿದಂತೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ರು. ತದ ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅದರಲ್ಲೂ, ಹೊಸ ಜಿಲ್ಲಾಧಿಕಾರಿ ಕಚೇರಿ, ಜಿಲ್ಲೆಗೆ ಪಶುವೈದ್ಯಕೀಯ ಕಾಲೇಜು ನಿರ್ಮಾಣ, ಕೆಲವೊಂದು

ನಿರಪರಾಧಿಯಾಗಿ ಬಿಡುಗಡೆಗೊಂಡು ಕೊನೆಗೂ ಕುಟುಂಬ ಸೇರಿದ ಹರೀಶ್ ಬಂಗೇರ

ಕುಂದಾಪುರ: ಮೆಕ್ಕಾದ ಕುರಿತು ಅವಹೇಳನಕಾರಿ ಬರೆಹ ಪ್ರಕಟಿಸಿದ ಆರೋಪದಡಿ ಸೌದಿ ಅರೇಬಿಯಾದಲ್ಲಿ ಜೈಲುಪಾಲಾಗಿದ್ದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಕೊನೆಗೂ ಬಿಡುಗಡೆಗೊಂಡು ಗುರುವಾರ ಕುಟುಂಬ ಸಮೇತರಾಗಿ ಆನೆಗುಡ್ಡೆ ಶ್ರೀ ವಿನಾಯಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜನಸೇವಾ ಟ್ರಸ್ಟ್ ಹಾಗೂ ಟೀಮ್ ಅಭಿಮತ ನೇತೃತ್ವದಲ್ಲಿ ಕೋಟೇಶ್ವರ ದೇವಸ್ಥಾನದವರೆಗೆ ಗುರುವಾರ ಮುಂಜಾನೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿಯೂ ಪೂಜೆ ಸಲ್ಲಿಸಿ ಮನೆಗೆ ತೆರಳಿದರು. ತಾವು ವಾಸವಿದ್ದ

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ಗೆ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದಿಂದ ಮನವಿ

ಬಿಐಎಸ್ ಹಾಲ್‌ಮಾರ್ಕ್ ಕಡ್ಡಾಯದ ನಂತರದ ನಿಯಮಗಳಿಂದ ಚಿನ್ನದ ಕುಶಲಕರ್ಮಿಗಳು ಹಾಗೂ ಸಣ್ಣ ವ್ಯಾಪಾರಿಗಳ ಜೀವನದಲ್ಲಿ ಉಂಟಾದ ಸಂಕಷ್ಟವನ್ನು ಮಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಸಚಿವರಾಗಿರುವ ಶ್ರೀ ರಾಜೀವ ಚಂದ್ರಶೇಖರ ಅವರಲ್ಲಿ ದ.ಕ. ಚಿನ್ನದ ಕೆಲಸಗಾರರ ಸಂಘ ಹಾಗೂ ದೈವಜ್ಞ ಬ್ರಾಹ್ಮಣರ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಮುಖೇನ ಮನವಿಯನ್ನು ಸಲ್ಲಿಸಲಾಯಿತು.ಸಭೆಯಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಚಿನ್ನಾಭರಣ

ಕಾಫಿ ಪುಡಿಯಿಂದ ಅರಳಿದ ಕಟೀಲಿನ ಭ್ರಮರಾಂಭೆ

ಪೈಂಟಿಂಗ್, ಕ್ಯಾನ್ ವಾಸ್, ಅಶ್ವತ್ಥದ ಎಲೆ ಹಾಗೂ ಮೊಳೆಗಳನ್ನು ಬಳಸಿ ಚಿತ್ರಗಳನ್ನು ಬಿಡಿಸಿ ಹಲವಾರು ಕಲಾವಿದರು ಈಗ ಗಮನ ಸೆಳೆಯುತ್ತಿರುವ ಮಧ್ಯೆಯೇ ಇದೀಗ ಕಾಲೇಜು ವಿದ್ಯಾರ್ಥಿ ಶ್ರವಣ್ ಪೂಜಾರಿ ಮಾರ್ನಾಡು ಕಾಫಿ ಹುಡಿಯನ್ನು ಬಳಸಿ ಹಲವು ಗಣ್ಯರ ಚಿತ್ರ ಬಿಡಿಸಿದ್ದಲ್ಲದೆ, ನೆನೆದವರ ಮನದಲ್ಲಿ ನೆಲೆಯಾಗಿ, ನಂಬಿರುವ ಭಕ್ತರ ರಕ್ಷೆಯಾಗಿ, ಸಹಸ್ರಾರು ಭಕ್ತರ ಪೂಜೆ ಹಾಗೂ ಹರಕೆಗಳನ್ನು ಪಡೆದು, ಪರಿಮಳ ಭರಿತ ಮಲ್ಲಿಗೆ ಹೂವಿನಲ್ಲಿ ಸಿಂಗಾರಗೊಂಡು, ತುಳುನಾಡ ತಮೆರಿ ಎಂದೆ

ಅಪಘಾತವಾದರೂ ಆಂಬುಲೆನ್ಸ್ ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು!

ಕುಂದಾಪುರ: ಪದವಿ ಪರೀಕ್ಷೆ ಬರೆಯಲು ತೆರಳುತ್ತಿದ್ದಾಗ ಬೈಕ್ ಗಳೆರಡರ ಮಧ್ಯೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡು ಆಂಬುಲೆನ್ಸ್ ಮೂಲಕವೇ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಇಲ್ಲಿನ ಕಾಲೇಜು ವಿದ್ಯಾರ್ಥಿಗಳಾದ ಶಿರೂರು ನಿವಾಸಿ ಮಸಾಯಿದ್ ಮತ್ತು ಗಂಗೊಳ್ಳಿ ನಿವಾಸಿ ವಾಜಿದ್ ಗಾಯಗೊಂಡು ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು. ಜಿಲ್ಲೆಯ ಗಡಿಭಾಗವಾದ ಶಿರೂರಿನಿಂದ