Home Archive by category ಕರಾವಳಿ (Page 867)

ಗದ್ದೆಗಿಳಿದ ಚಿತ್ರನಟ ರಕ್ಷಿತ್ ಶೆಟ್ಟಿ

ಉಡುಪಿಯ ವಾರಂಬಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ರಮದಲ್ಲಿ ಚಿತ್ರನಟ ರಕ್ಷಿತ್ ಶೆಟ್ಟಿ ಭಾಗಿಯಾದರು. ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಪ್ರತಿಷ್ಠಾನದ ಸಂಯೋಜನೆಯಲ್ಲಿ ಕೃಷಿ ಕಾರ್ಯ ಆಯೋಜಿಸಲಾಗಿತ್ತು. ಬ್ರಹ್ಮಾವರ ತಾಲೂಕು ವ್ಯಾಪ್ತಿಯ ವಾರಂಬಳ್ಳಿ ಬಳಿಯ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ನಟ ರಕ್ಷಿತ್ ಶೆಟ್ಟಿ,

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ದ.ಕ ಜಿಲ್ಲಾಧಿಕಾರಿ ಭೇಟಿ

ಕೋವಿಡ್ ಭೀತಿ ಮಧ್ಯೆಯೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 179 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಂಗಳೂರಿನ ನಂತೂರಿನ ಪದವು ಹಾಗೂ ಕಪಿತಾನಿಯ ಶಾಲೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ|ಕೆ.ವಿ. ರಾಜೇಂದ್ರ ಅವರು ಭೇಟಿ ನೀಡಿ. ಪರಿಶೀಲನೆ ನಡೆಸಿದರು. ಕೊರೋನ ಮಾರ್ಗಸೂಚಿ ಅನ್ವಯ ಮುಂಜಾಗ್ರತಾ

ಪುತ್ತೂರಿನ ಕಜೆ ಎಂಬಲ್ಲಿ ಆವರಣಗೋಡೆ ಕುಸಿತ : ಅಪಾಯದ ಅಂಚಿನಲ್ಲಿ ಮನೆ

ಪುತ್ತೂರು ಕಜೆ ದೇವಿ ನಗರ ಎಂಬಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಸಂತೋಷ್ ಕುಲಾಲ್ ಅವರ ಮನೆಯ ಆವರಣ ಗೋಡೆ ಕುಸಿದಿದ್ದು ಮನೆಯು ಅಪಾಯದ ಅಂಚಿನಲ್ಲಿದೆ ಇಲ್ಲಿಗೆ ರೈ ಎಸ್ಟೇಟ್ ಮಾಲಕರಾದ ಅಶೋಕು ಕುಮಾರ ರೈ ಕೋಡಿಂಬಾಡಿ ಉದ್ಯಮಿಗಳು ಮಂಗಳೂರು ಇವರು ಭೇಟಿ ನೀಡಿ ವೀಕ್ಷಿಸಿದರು ಆವರಣಗೋಡೆ ಕಟ್ಟಲು ಅಂದಾಜು ಸುಮಾರು ಎಂಟು ಲಕ್ಷ ತಗುಲಲಿದ್ದು ಸರಕಾರ ಹಾಗೂ ಸ್ಥಳೀಯರ ಸಹಕಾರದೊಂದಿಗೆ ತಾನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದರು

ನಾಳೆ ಪಿಯುಸಿ ಫಲಿತಾಂಶ: ಎಷ್ಟು ಗಂಟೆಗೆ ..? ರಿಸಲ್ಟ್ ನೋಡುವುದು ಹೇಗೆ ಇಲ್ಲಿದೆ ಮಾಹಿತಿ..

ಯುಸಿ ವಿದ್ಯಾರ್ಥಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಫಲಿತಾಂಶವನ್ನು ನಾಳೆ ಅಂದರೆ ಜುಲೈ 20ರಂದು ಪ್ರಕಟಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಸಂಜೆ 4.30 ಗಂಟೆಗೆ ಫಲಿತಾಂಶ ನೋಡಬಹುದಾಗಿದೆ. ಇದಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿರುವಂತೆ ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳು ಹಾಗೂ ಇಂಟರ್ನಲ್ ಅಸೆಸ್‍ಮೆಂಟ್ ಪರಿಗಣಿಸಿ ಫಲಿತಾಂಶ ನೀಡಲಾಗುತ್ತದೆ. ಈ ಕುರಿತು ಸುರೇಶ್ ಕುಮಾರ್

ಅದಮಾರು ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ

ಕಾಪು ತಾಲೂಕಿನ ಅದಮಾರು ಮಠದ ಆಧೀನ ಅದಮಾರು ಪೂರ್ಣ ಪ್ರಜ್ಞಾ ವಿದ್ಯಾಸಂಸ್ಥೆ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವಾಗಿದ್ದು, ಇಲ್ಲಿ ಸುತ್ತಲ ಎಂಟು ಶಾಲೆಗಳಿಂದ 235ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಜರಾಗಿದ್ದಾರೆ. ಪಡುಬಿದ್ರಿ ಲಯನ್ಸ್ ಆಂಗ್ಲ ಮಾದ್ಯಮ, ಸಾಗರ್ ವಿದ್ಯಾ ಮಂದಿರ್ ಆಂಗ್ಲ ಮಾದ್ಯಮ, ಗಣಪತಿ ಪ್ರೌಢಶಾಲೆ ಪಡುಬಿದ್ರಿ, ಎರ್ಮಾಳ್ ತೆಂಕ ಸರ್ಕಾರಿ , ಎರ್ಮಾಳು ಬಡಾ ಸರ್ಕಾರಿ ಪ್ರೌಢಶಾಲೆ, ಎರ್ಮಾಳು ವಿದ್ಯಾ ಪ್ರಭೋಧಿನಿ ಆಂಗ್ಲ ಮಾದ್ಯಮ,

“ಯಾರಿಗೂ ಹೇಳ್ಬೇಡಿ” – ಸಚಿವ ಸ್ಥಾನ ಹೋದ್ರು ಪರವಾಗಿಲ್ಲ: ಸಚಿವ ಈಶ್ವರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಮತ್ತು ಅದರಲ್ಲಿ ಉಲ್ಲೇಖಿತ ಶೆಟ್ಟರ್, ಈಶ್ವರಪ್ಪ ಸೈಡ್ ಲೈನ್ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಯಾರು ಆಡಿಯೋ ವೈರಲ್ ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಲಿದೆ. ನಳಿನ್ ಕುಮಾರ್ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಯಾರೋ ಹುಚ್ಚರು ಆಡಿಯೋವನ್ನು ಸೃಷ್ಟಿ ಮಾಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಆಡಿಯೋ ನನ್ನದಲ್ಲ ಎಂದು

ದ.ಕ ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್ ನಲ್ಲಿ ಬಾಕಿಯಾದ ಮಹಿಳೆ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಲಿಫ್ಟ್ ನಲ್ಲಿಮಹಿಳೆ ಜಾಂ ಆಗಿ ರಕ್ಷಣೆ ಮಾಡಿದ ಘಟನೆ ನಡೆದಿದೆ. ಇಂದು ಮುಂಜಾನೆ 8 ಗಂಟೆಯ ಸುಮಾರಿಗೆ ಮಹಿಳೆಯು ಲಿಫ್ಟ್ ಬಳಸುವಾಗ ದಿಢೀರ್‍ನೇ ಸ್ಥಗಿತಗೊಂಡಿತು. ತಕ್ಷಣವೇ ಸ್ಥಳಾಕ್ಕಾಗಮಿಸಿದ ಪಾಂಡೇಶ್ವರ ಆಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಹ್ರೈಡೋಲಿಕ್ ಸಪರೇಟರ್ ಡಿವೈಸ್ ಅಳವಡಿಸಿ ಲಿಫ್ಟ್ ತೆಗೆದು ವೀಣಾರನ್ನು ರಕ್ಷಣೆ ಮಾಡಲಾಗಿದೆ.    

ವೈರಲ್ ಆಗ್ತಿರೋ ವಿಡಿಯೋ ನನ್ನದಲ್ಲ: ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ- ನಳಿನ್ ಕುಮಾರ್ ಕಟೀಲ್

ನಾಯಕತ್ವ ಬದಲಾವಣೆ ಕುರಿತಂತೆ ವೈರಲ್ ಆಗಿರುವ ವಿಡಿಯೋಗೂ ನನಗೂ ಸಂಬಂಧವಿಲ್ಲ. ಮುಖ್ಯಮಂತ್ರಿಗಳಿಗೆ ಈ ಪತ್ರ ಬರೆಯುತ್ತೇನೆ ಹಾಗೂ ತನಿಖೆಗೆ ಆಗ್ರಹಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆಡಿಯೋ ವೈರಲ್ ಕುರಿತಾಗಿ ಮಂಗಳೂರಲ್ಲಿ ಮಾತನಾಡಿದ್ರು. ತನಿಖೆಯ ಬಳಿಕ ಆಡಿಯೋದ ಸತ್ಯಾಸತ್ಯತೆ ಹೊರ ಬರಲಿದೆ. ನಾಯಕತ್ವದ ಬದಲಾವಣೆ ಕುರಿತು ನಮ್ಮಲ್ಲಿ ಯಾವುದೇ ಚರ್ಚೆಗಳಿಲ್ಲ.ನಮ್ಮ ಪಾರ್ಟಿಗೆ ಆತ್ಮ ಯಡಿಯೂರಪ್ಪ. ಅವರೇ ನಮ್ಮ ಸರ್ವ ಸಮ್ಮತದ

ಇಂದಿನಿಂದ ರಾಜ್ಯದಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ

ಕೇರಳ ರಾಜ್ಯದ 441 ವಿದ್ಯಾರ್ಥಿಗಳು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಇದೀಗ ಆರಂಭಗೊಂಡಿದೆ. ಕೋವಿಡ್ ಸೋಂಕಿನ ಎರಡನೇ ಅಲೆಯ ಭೀತಿಯ ನಡುವೆಯೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೇರಳ ರಾಜ್ಯದ ಗಡಿ ಭಾಗದಿಂದ ಮಂಗಳೂರು ಸೇರಿದಂತೆ ಜಿಲ್ಲೆಯೊಳಗೆ ಇಂದಿನಿಂದ ಷರತ್ತು ಬದ್ಧವಾಗಿ ಬಸ್ ಸಂಚಾರ ಆರಂಭಗೊಂಡಿದೆ. ಅಲ್ಲದೇ, ರೈಲು ಸಂಚಾರದ ವ್ಯವಸ್ಥೆಯೂ ಇದ್ದು, ವಿದ್ಯಾರ್ಥಿಗಳಿಗೆ ದ.ಕ.ಜಿಲ್ಲೆಯೊಳಗಿನ ಪರೀಕ್ಷಾ ಕೇಂದ್ರಗಳಿಗೆ

ಹಡೀಲು ಭೂಮಿಯಲ್ಲಿ ಕೃಷಿಕ್ರಾಂತಿ:ಅಮ್ಮುಂಜೆಯಲ್ಲಿ ಶಾಸಕ ರಾಜೇಶ್ ನಾಯಕ್‌ ರಿಂದ ಚಾಲನೆ

ಬಂಟ್ವಾಳ: ಹಡಿಲು ಭೂಮಿಯಲ್ಲಿ ಕೃಷಿಕ್ರಾಂತಿ ಎಂಬ ಬಂಟ್ವಾಳ ಶಾಸಕರ ಯೋಜನೆಯಂತೆ ಬಿಜೆಪಿ ಯುವಮೋರ್ಚಾ ತಂಡದ ವತಿಯಿಂದ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿಯವರ ಮುಂದಾಳತ್ವದಲ್ಲಿ ಅಮ್ಮುಂಜೆ ಪರಿಸರದ ಸುಮಾರು 5 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಭಾನುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಯುವ ಸಮುದಾಯ ಕೃಷಿಯತ್ತ ಒಲವು ತೋರಿದರೆ ಈ ದೇಶದಲ್ಲಿ ಕೃಷಿಯಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯ ಎಂದು