ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿಯವರ ಸಮಾವೇಶದ ತಾಣವಾಗಿರುವ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ಸುಮಾರು 2 ಲಕ್ಷ ಮಂದಿ ಕುಳಿತುಕೊಳ್ಳಲು ಸಾಧ್ಯವಾಗು ವಂತಹ ಶೀಟ್‍ಗಳನ್ನು ಅಳವಡಿಸಿ ಬೃಹತ್ ಚಪ್ಪರ ಹಾಕುವ ಕಾಮಗಾರಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೆ.2ರಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷರು ಹಾಗೂ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಅವರು, ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಡಾ.ವೈ ಭರತ್ ಶೆಟ್ಟಿ ಅವರೊಂದಿಗೆ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.ಈ ವೇಳೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಪೊಲೀಸ್
ಬಂಟ್ವಾಳ: ಸ್ವಾತಂತ್ರ್ಯ ಅಮೃತಮಹೋತ್ಸವದ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ಕಾರ್ಯಕ್ರಮ ಆ.23 ರಂದು ಮಂಗಳವಾರದಂದು ಹಮ್ಮಿಕೊಳ್ಳಲಾಗಿದ್ದು ನಾವೂರ ಗ್ರಾಮದ ಮಣ್ಣಿಹಳ್ಳ ಜಂಕ್ಷನಲ್ಲಿ ಬೆಳಿಗ್ಗೆ 9.30ಕ್ಕೆ ಪಾದಾಯಾತ್ರೆ ಪ್ರಾರಂಭಗೊಳ್ಳಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು. ಅವರು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಪಾದಯಾತ್ರೆಯು ಜಕ್ರಿಬೆಟ್ಟು ಮೂಲಕ ಸಾಗಿ
ಪುತ್ತೂರು: ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ವ್ಯಕ್ತಿಯಾಗಿರದೆ ರಾಷ್ಟ್ರಕ್ಕೆ ಶಕ್ತಿಯಾಗಿದ್ದರು. ರಾಜಕೀಯವಾಗಿ ಜನಪ್ರತಿನಿಧಿ, ಕಾರ್ಯಕರ್ತ ಹೇಗಿರಬೇಕು ಎಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅವರು ನುಡಿನಮನ ಸಲ್ಲಿಸಿದರು. ವಾಜಪೇಯಿ ಅವರದ್ದು ಅಪರೂಪದ
ಲಯನ್ಸ್ ಕ್ಲಬ್ ಮಂಗಳೂರು ಪಂಪ್ ವೆಲ್ ಕಲ್ಪವೃಕ್ಷ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೇವಾ ಸಪ್ತಾಹ 8-8-2022ರಿಂದ 15.8.22ರ ವರೆಗೆ ಆರೋಗ್ಯಮಾಹಿತಿ ಕಾರ್ಯಗಾರ, ಆರ್ಥಿಕ ,ವೈದ್ಯಕೀಯ, ಶೈಕ್ಷಣಿಕ ನೆರವು, ಹಾಗೂ ಶಾಲಾ ವಠಾರ ನೈರ್ಮಲೀಕರಣ ಕಾರ್ಯಕ್ರಮ ನಡೆಯಲಿದ್ದು, ಸೋಮವಾರ ದ.ಕ.ಜಿಲ್ಲಾ ಪಂ. ಇರಿಯ ಪ್ರಾಥಮಿಕ ಶಾಲೆ ಬಗಂಬಿಲದಲ್ಲಿ ನಡೆಯಿತು. ಶಾಲಾ ವಠಾರ ನೈರ್ಮಲೀಕರಣ ಕಾರ್ಯಕ್ರಮಕ್ಕೆ ಶಾಸಕ ಯು.ಟಿ.ಖಾದರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಟ್ಠಳ್ಳಿಯಲ್ಲಿ ಮಳೆಯಿಂದಾಗಿ ಅಪಾರ ಹಾನಿಗೊಳಗಾಗಿದ್ದು, ಸಿಎಂ ಬಸರವಾಜ್ ಬೊಮ್ಮಾಯಿ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಮುಟ್ಠಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತವಾದ ಸ್ಥಳ ವೀಕ್ಷಣೆ ಮಾಡಿದರು. ನಿನ್ನೆ ದಿನ ಲಕ್ಷ್ಮಿ ನಾರಾಯಣ ನಾಯ್ಕ ರವರ ಮನೆಯಮೇಲೆ ಗುಡ್ಡ ಕುಸಿದು ಅನಂತನಾಯ್ಕ(,35), ಮಗಳು ಲಕ್ಷ್ಮಿ ನಾಯ್ಕ, (40) ಮೊಮ್ಮಗ ಪ್ರವೀಣ್ (16) ಒಟ್ಟು ನಾಲ್ಕು ಜನ ಭೂಸಮಾದಿಯಾಗಿದ್ದರು. ಮೃತ
ಪುತ್ತೂರು:ಜಿಲ್ಲೆಯಲ್ಲಿ ಮೂರು ಹತ್ಯೆಗಳಾಗಿದ್ದು, ಈ ಮೂವರ ಮನೆಗೆ ತೆರಳಿ ಸಾಂತ್ವನ ಹೇಳಬೇಕಾಗಿದ್ದ, ಪರಿಹಾರ ನೀಡಬೇಕಾಗಿದ್ದ ರಾಜ್ಯದ ಮುಖ್ಯಮಂತ್ರಿಗಳ ಪಕ್ಷಪಾತ ಧೋರಣೆಯನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿರುವಾಗಲೇ ಸುರತ್ಕಲ್‍ನಲ್ಲಿ ಫಾಝಲ್ ಹತ್ಯೆಯಾಗಿದೆ. ಅಲ್ಲದೆ ಬೆಳ್ಳಾರೆಯಲ್ಲಿ ಮೃತ ಪ್ರವೀಣ್
ಪುತ್ತೂರು :ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪ್ರವೀಣ್ ತಂದೆ, ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿ ಸಹಾಯಧನದ ಚೆಕ್ ವಿತರಿಸಿದರು. ಕುಮಾರಸ್ವಾಮಿ ಅವರು ಮನೆಯವರಿಗೆ 5 ಲಕ್ಷ ರೂ ಚೆಕ್ ವಿತರಿಸಿದರು.ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಎಂ.ಎಲ್.ಸಿ ಬಿ.ಎಂ ಫಾರೂಕ್, ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಪುತ್ತೂರು ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ,
ಕೇರಳದ ಕಾಸರಗೋಡು ಜಿಲ್ಲೆಯ ತಾಳಿಪಡ್ಪುವಿನ ಆರ್.ಎಸ್.ಎಸ್ ಕಾರ್ಯಕರ್ತ ರಮೇಶ್ ನಿವಾಸಕ್ಕೆ ಸಚಿವ ಎಸ್.ಅಂಗಾರ ಭೇಟಿ, ಮಾತುಕತೆ ನೀಡಿದರು.ಇನ್ನು ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಮೆರವಣಿಗೆ ವೇಳೆ ಪೊಲೀಸರು ಲಾಠಿ ಜಾರ್ಚ್ ನಡೆಸಿದ್ರು. ಈ ವೇಳೆ ಆರ್.ಎಸ್.ಎಸ್ ಕಾರ್ಯಕರ್ತ ರಮೇಶ್ ಪೊಲೀಸರ ನಡುವೆ ವಾಗ್ವಾದ ನಡೆಸಿದರು. ರಾಜ್ಯ ಸರ್ಕಾರ ತೀವ್ರ ಮುಖಭಂಗದ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದು, ರಮೇಶ್ ಮೇಲೆ ಲಾಠಿ ಚಾರ್ಜ್ ಬಗ್ಗೆ ಭಾರೀ ವಿವಾದ
ಪ್ರವೀಣ್ ನೆಟ್ಟಾರು ಕೊಲೆಯನ್ನು ಖಂಡಿಸಿ ಆರ್ಯ ಈಡಿಗ ಮಹಾಮಂಡಲದ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರಣಾವನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಗುರುವಾರದಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.ಬೆಂಗಳೂರು ಕಬ್ಬನ್ ಪಾರ್ಕ್ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶ್ರೀ ಪ್ರಣಾವನಂದ ಸ್ವಾಮೀಜಿ ಅವರು , ಮೃತ ಪ್ರವೀಣ್ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಹಾಗೂ ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.