Home Archive by category ರಾಜ್ಯ (Page 6)

ಮಂಗಳೂರು ಡೆಡ್ ಸಿಟಿಯಾಗಿದೆ-ಜಿಲ್ಲೆಯ ಅಭಿವೃದ್ಧಿಗೆ ಹೊಸ ಅಲೋಚನೆ ಇದೆ -ಡಿಸಿಎಂ ಡಿಕೆಶಿ

ಮಂಗಳೂರು ಸಂಜೆ ಏಳು ಗಂಟೆಯ ನಂತರ ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್‌ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗುತ್ತಾ ಇವೆ. ಮಂಗಳೂರಿನಲ್ಲಿ ಧರ್ಮ ರಾಜಕೀಯ ಇದೆ, ಬಿಜೆಪಿ ಇಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಆಲೋಚನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.ಅವರು

ಕರಾವಳಿಗೆ ಭರಪೂರ ಕೊಡುಗೆ: ಮಂಜುನಾಥ ಭಂಡಾರಿ

ಮಂಗಳೂರು: ರಾಜ್ಯ ಸರಕಾರದ ಬಜೆಟ್ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ, ಮೀನುಗಾರಿಕೆ, ಉದ್ಯಮ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಿಗೆ ಪ್ರೋತ್ಸಾಹ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹೇಳಿದರು. ಅವರು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಅಯವ್ಯಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ರೈತ ಮಹಿಳೆಯರಿಗೆ ಹಸು-ಎಮ್ಮೆ ಖರೀದಿಗೆ ಸಾಲ ಸೌಲಭ್ಯ, ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರ ಮೊತ್ತ 3ಸಾವಿರ

ರಾಜ್ಯದ ಆರ್ಥಿಕತೆಗೆ ಚೈತನ್ಯ: ಹರೀಶ್ ಕುಮಾರ್

ಮಂಗಳೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ಧಿ ಶಕೆಯೇ ಆರಂಭವಾಗಿದೆ. ಇಂದು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಆರ್ಥಿಕತೆಗೆ ಚೈತನ್ಯ ತುಂಬಿದೆ ಎಂದು ವಿಧಾನ ಪರಿಷತ್‌ನ ಸದಸ್ಯರೂ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಹೇಳಿದರು. ಅವರು ರಾಜ್ಯ ಬಜೆಟ್ ಬಗೆಗೆ ಪ್ರತಿಕ್ರಿಯೆ ನೀಡಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಜನಸಾಮಾನ್ಯರು, ಮಧ್ಯಮ ವರ್ಗದವರ ಆರ್ಥಿಕತೆಗೆ ಚೈತನ್ಯ ನೀಡಿದ್ದು,

17ನೇ ಲೋಕ ಸಭೆಗೆ ವಿದಾಯ ಹೇಳುವ ಮೊದಲು

17ನೇ ಲೋಕ ಸಭೆಯು 88% ನಿಗದಿತ ಕೆಲಸ ಮಾಡಿದೆ ಎಂದು ವರದಿ ಆಗಿದೆ. ಆದರೆ ಅವರೆಲ್ಲ ಲೋಕಸಭೆಯಲ್ಲಿ ಗದ್ದಲ ಮಾಡಿದ್ದರ ಬಗೆಗೇ ಮಾಧ್ಯಮಗಳಲ್ಲಿ ಹೆಚ್ಚು ವರದಿಯಾಗಿತ್ತು. ಗದ್ದಲ ಮಾಡಿದ, ಕೂಗಾಡಿದ, ಕಲಾಪ ಮುಂದೂಡಿದ, ಹೊರ ನಡೆದ, ಹಾಜರಿ ಹಾಕಿ ಭತ್ಯೆ ಪಡೆದು ಕ್ಯಾಂಟೀನ್‍ನಲ್ಲಿ ಕುಳಿತ ಕಾಲ ಎಷ್ಟು ಎಂದು ಲೆಕ್ಕ ಸಿಕ್ಕಿಲ್ಲ. ಬಹುತೇಕ ಸಂಸದರು ತಮ್ಮ ಅನುಕೂಲದ ಹೊರತಾಗಿ ಬೇರೆಯದರ ಬಗೆಗೆ ತಲೆ ಕೆಡಿಸಿಕೊಂಡುದು, ತಲೆ ಓಡಿಸಿದ್ದು ಕಡಿಮೆ. ಹಾಲಿ ಲೋಕ ಸಭೆಯ ಅವಧಿ ಮುಗಿಯಲು

ಡ್ರೋನ್ ಮೂಲಕ ರೈತರ ಕಣ್ಣೀರು ತರಿಸಿದ ಸಂಶೋಧನೆ

ದಿಲ್ಲಿಗೆ ಪ್ರತಿಭಟನೆ ಮಾಡಲು ಬಂದ ರೈತರಿಗೆ ಗೃಹ ಮಂತ್ರಿ ಅಮಿತ್ ಶಾ ನಿರ್ವಹಣೆಯ ಪೊಲೀಸ್ರು ನೀವು ಊಟ ಕೊಟ್ರೆ ನಾವು ಲಾಠಿ ಬೀಸ್ತೀವಿ ಎಂದಿದ್ದಾರೆ. ಕೊಟ್ಟ ಊಟಕ್ಕೆ ನ್ಯಾಯ ಬೆಲೆ ಕೇಳಿದರೆ ಡ್ರೋಣ್ ಮೂಲಕ ಹೊಗೆ ಬಾಂಬು ಸಿಡಿಸಿ ಕಣ್ಣೀರು ತರಿಸ್ತೀವಿ ಎಂದೂ ಹೊಸ ಸಂಶೋಧನೆ ಮಾಡಿ ತೋರಿಸಿದ್ದಾರೆ. ಗದ್ದೆಯಲ್ಲಿ ಇರಬೇಕಾದವರು ದಿಲ್ಲಿಗೆ ಬಂದ್ರೆ ನಾವು ಎಲ್ಲಿಗೆ ಹೋಗಬೇಕು, 144 ಸೆಕ್ಷನ್ ತಿಂಗಳುಗಟ್ಟಲೆ ಹಾಕ್ತೀವಿ ಎಂದು ಮೋದಿಯವರ ಸರಕಾರ ಪಣ ತೊಟ್ಟಂತಿದೆ. ಸದ್ಯ

ಮತ ಯತ್ನದ ಭಾರತ ರತ್ನ 

ಭಾರತ ರತ್ನ ಪ್ರಶಸ್ತಿಯ ಬಗೆಗೆ ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಹೆಸರು ಸೂಚಿಸುತ್ತಾರೆ. ಅದಕ್ಕೆ ರಾಷ್ಟ್ರಪತಿ ಅವರು ಅಂಗೀಕಾರ ಮುದ್ರೆ ಒತ್ತುತ್ತಾರೆ. ಹಿಂದೆಲ್ಲ ಸಮಿತಿ ರಚನೆ, ಅಭಿಪ್ರಾಯ, ಮಂತ್ರಿ ಮಂಡಲದಲ್ಲಿ ಚರ್ಚೆ ಮೂಲಕ ಹೆಸರನ್ನು ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುತ್ತಿದ್ದರು. ಈಗ ಪ್ರಧಾನಿ ಮೋದಿಯವರು ಕಿಸೆಯಿಂದ ತೆಗೆದುಕೊಟ್ಟಂತೆ ಭಾರತ ರತ್ನ ಎಂದು ಸದ್ದು ಮಾಡಿದ್ದಾರೆ. ಕ್ರಮ ಪ್ರಕಾರ ಕರ್ಪೂರಿ ಠಾಕೂರ್, ಆಮೇಲೆ ಲಾಲ್ ಕೃಷ್ಣ ಅಡ್ವಾಣಿ,

ಅಂಕಿ ಅಂಶದ ಪ್ರಶ್ನೆಗೆ ಸೊನ್ನೆ ಸೊನ್ನೆ ಉತ್ತರ

ಜಿಎಸ್‍ಟಿ ವಂಚನೆಯಲ್ಲಿ ಗುಜರಾತ್ ಮತ್ತು ಮುಂಬಯಿಯ ಗುಜರಾತ್ ಉದ್ಯಮಿಗಳೇ ಮೊದಲ ಸ್ಥಾನದಲ್ಲಿರುವುದು ವರದಿಯಾಗಿದೆ. ಕರ್ನಾಟಕದ ಕಾಂಗ್ರೆಸ್ ಸರಕಾರವು ಒಕ್ಕೂಟ ಸರಕಾರವು ತನಗೆ ಮಾಡಿರುವ ಹಣಕಾಸು ವಂಚನೆಯ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ನಡುವೆ ಲೋಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿಯವರು ತೆರಿಗೆ ಪಾಲು ನೀಡಿಕೆ ಮತ್ತು ಅನುದಾನ ಕೊಡುವುದರಲ್ಲಿ ಬಿಜೆಪಿಯೇತರ ಸರಕಾರಗಳನ್ನು ಒಕ್ಕೂಟ ಸರಕಾರವು ವಂಚಿಸಿದೆ ಎಂದು ಆಳುವವರನ್ನು

ಸಿನಿ ರಾಜಕೀಯ ಈಜಿದವರು, ಮುಳುಗಿದವರು

ತಮಿಳು ನಟ ವಿಜಯ್ ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಆ ಹೆಸರಿನ ಅರ್ಥ ತಮಿಳುನಾಡು ವಿಜಯ ಸಂಘಟನೆ. ವಿಜಯ್ ಎಂದರೆ ಗೆಲುವು, ವೆಟ್ರಿ ಎಂದೇ ಅರ್ಥ. ನಟಿಸುತ್ತಿರುವ ಎರಡು ಸಿನಿಮಾ ಮುಗಿಸಿ ಚಿತ್ರ ರಂಗಕ್ಕೆ ವಿದಾಯ ಹೇಳುವುದಾಗಿ ಸಹ ವಿಜಯ್ ಹೇಳಿದ್ದಾರೆ. ಕ್ರಿಶ್ಚಿಯನ್ ತಂದೆ ಎಸ್. ಎ. ಚಂದ್ರಶೇಖರ್, ಹಿಂದೂ ತಾಯಿ ಶೋಭಾ ಪುತ್ರ ವಿಜಯ್‍ರ ಮಡದಿ ಶ್ರೀಲಂಕಾ ತಮಿಳದಿ. ಹುಟ್ಟು ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ವಿಜಯ್ ರಾಜಕೀಯ ಪಕ್ಷ

ಪ್ರತ್ಯೇಕತೆ ಕೆರಳಿಸಿದ ಆಯವ್ಯಯ

ಚುನಾವಣಾ ಪೂರ್ವ ಮಧ್ಯಾವಧಿ ಆಯವ್ಯಯ ಮಂಡನೆ ಆಗಿದೆ. ಸಂಸದ ಶಶಿ ತರೂರ್ ಪ್ರಕಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಅಂಕಿ ಅಂಶಗಳಿಗಿಂತ ಹೆಚ್ಚಾಗಿ ಗಿಲೀಟಿನ ಮಾಮೂಲಿ ಶಬ್ದಗಳದ್ದಾಗಿದೆ. ಈ ಮಾತನ್ನು ನಿರ್ಮಲಾರ ಗಂಡ ಪರಕಾಲ ಪ್ರಭಾಕರ್ ಅವರು ಬಿಜೆಪಿ ಸರಕಾರದ ಒಟ್ಟಾರೆ ಶಬ್ದಗಳ ಕಸರತ್ತು ಗಮನಿಸಿ ಹಿಂದೆಯೇ ಟೀಕಿಸಿದ್ದಾರೆ. ಬಜೆಟ್ ಮಂಡನೆ ವೇಳೆ ಸಂಸದರ ಹಾಜರಾತಿ ಕಡಿಮೆ ಇತ್ತು. ಗ್ಯಾಲರಿಯಲ್ಲಿ ನಿರ್ಮಲಾರ ಮಗಳು ವಂಗಮಯಿ ಪರಕಾಲ ಕುಳಿತಿದ್ದರು.

ತೆಕ್ಕಿಲ್ ಶಾಲಾ ವತಿಯಿಂದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರಿಗೆ ಸನ್ಮಾನ

ಸುಳ್ಯದ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ವತಿಯಿಂದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಇವರು ಮೈಸೂರು ಪೇಟ ತೊಡಿಸಿ ಶಾಲು, ಹಾರ ಮತ್ತು ಸ್ಮರಣಿಕೆ, ತೆಕ್ಕಿಲ್ ದಶದೀವಿಕೆ ಹಾಗು ಬೆಳಕಿನೆಡೆಗೆ 10 ಮುಸ್ಲಿಂ ಕತೆಗಳ ಪುಸ್ತಕ ನೀಡಿ ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ ಇವರು ಶಾಲೆಯ ಶಿಕ್ಷಕ