Home Archive by category ರಾಜ್ಯ (Page 9)

ಅಟ್ಟಣಿಗೆಯಿಂದ ಸಂಸತ್ತಿನ ಒಳಕ್ಕೆ ದಾಳಿ : ಒಟ್ಟು ಆರು ಮಂದಿಯ ಬಣ್ಣದ ಹೊಗೆಯ ಮುಸುಕು

ಸೆಪ್ಟೆಂಬರ್ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಸ್ವೀಕಾರದ ವೇಳೆ ಅಟ್ಟಣಿಗೆಯಿಂದ ಕೆಲವರು ಮೋದೀಜಿ ಜೈ ಎಂದು ಕೂಗಿದ್ದರು. ಇದು ಭದ್ರತಾ ಲೋಪ, ನಾಳೆ ಅಟ್ಟಣಿಗೆಯಿಂದ ದಾಳಿ ಆಗಬಹುದು, ಬಾಂಬು ಎಸೆಯಬಹುದು ಎಂದು ಹಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು. ಈಗ ಇಬ್ಬರು ಗ್ಯಾಲರಿಯಿಂದ ಲೋಕಸಭೆಯೊಳಕ್ಕೆ ನುಗ್ಗಿ ಬಂದು ಹಾರಿ ಸಿಕ್ಕಿ ಬಿದ್ದಿದ್ದಾರೆ.

ರಾಜಭವನಕ್ಕೆ ಬಾಂಬ್ ಕರೆ: ಪರಿಶೀಲಿಸಿ ಸುಳ್ಳು ಎಂದ ಪೋಲೀಸರು

ದೊಮ್ಮಲೂರು ಎನ್‍ಐಎ ಕೊಠಡಿಗೆ ಕರೆ ಮಾಡಿ ಬೆಂಗಳೂರಿನಲ್ಲಿರುವ ರಾಜ ಭವನಕ್ಕೆ ಬಾಂಬ್ ಇಡಲಾಗಿದೆ ಎಂದು ಹೇಳಿರುವುದು ಹುಸಿ ಕರೆ ಎಂದು ಪೋಲೀಸರು ತಿಳಿಸಿದರು.ಕರೆಯ ಸತ್ಯಾಸತ್ಯತೆ ಅರಿಯಲು ಬಾಂಬ್ ನಿಷ್ಕ್ರಿಯ ಪಡೆಯೊಂದಿಗೆ ರಾಜ ಭವನಕ್ಕೆ ಧಾವಿಸಿದರು. ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿ ; ಬಕೆಟ್ ಜನತಾ ಪಾರ್ಟಿ ಬಿಜೆಪಿ – ಕಾಂಗ್ರೆಸ್ ಪಕ್ಷದಿಂದ ಲೇವಡಿ

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯ ವಿಶ್ವನಾಥ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಅಶೋಕ್‍ರನ್ನು ಬಕೆಟ್ ಹಿಡಿದುಕೊಂಡೇ ರಾಜಕೀಯ ಮಾಡುವವರು ಎಂದು ಟೀಕಿಸಿರುವುದು ಬಿಜೆಪಿಯ ಬಕೆಟ್ ರಾಜಕೀಯವನ್ನು ಬಹಿರಂಗಗೊಳಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಗೇಲಿ ಮಾಡಿದೆ. ಬಿಜೆಪಿಯ ಎಸ್. ಆರ್. ವಿಶ್ವನಾಥ್ ಹೇಳಿಕೆಯನ್ನು ಪ್ರಸ್ತಾಪಿಸಿ, ಅಶೋಕ್ ಅವರೆ ಪ್ರತಿಪಕ್ಷದ ನಾಯಕ ಸ್ಥಾನ ಹಿಡಿಯಲು ಯಾರಿಗೆ ಬಕೆಟ್ ಹಿಡಿದಿರಿ

ಯತ್ನಾಳರಿಂದ ದೂರ ತಂತ್ರ ; ಪ್ರಧಾನಿ ಬಾಯಿ ತೆರೆಸಲು ಕೆರಳಿಸುವ ಹೇಳಿಕೆಗಳು

ಮಾಜೀ ಬಿಜಾಪುರ ಬದಲಾದ ವಿಜಯಪುರದ ಮೌಲ್ವಿ ಹಾಶ್ಮಿ ಅವರು ಪ್ರಧಾನಿ ಮೋದಿಯವರ ಜೊತೆಗೆ ಇರುವ ಫೆÇೀಟೋ ಹೊರ ಬೀಳುವುದರೊಂದಿಗೆ ಶಾಸಕ ಯತ್ನಾಳರ ಐಸಿಸ್ ಆರೋಪ ನೆಲನಡುಕ ತರುತ್ತಿದೆ. ಕೆಲವರ ಪ್ರಕಾರ ಬಿಜೆಪಿ ಶಾಸಕ ಯತ್ನಾಳರ ಮೂಲಕವೇ ಹಾಶ್ಮಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಆಗಿದ್ದಾರೆ. ಹಾಶ್ಮಿಯವರ ಕುಟುಂಬ ಮತ್ತು ಯತ್ನಾಳರ ಕುಟುಂಬಗಳು ವಿಜಯಪುರದಲ್ಲಿ ಬಿಡದಿ ಹೋಟೆಲಿನಿಂದ ಹಿಡಿದು ನಾನಾ ಉದ್ಯಮ ಪಾಲುದಾರಿಕೆ ಹೊಂದಿವೆ. ಅಧಿಕಾರದಲ್ಲಿ ಯಾರು ಇದ್ದರೂ ಹೋಗುವ

ಬೆಂಗಳೂರು ; ಆನ್‍ಲೈನ್‍ನಲ್ಲಿ ಮಹಿಳೆಗೆ 80,000 ರೂಪಾಯಿ ಟೋಪಿ

ಬೆಂಗಳೂರಿನ ಮಹಿಳೆ ಒಬ್ಬರಿಗೆ ವಿಶೇಷ ಪೂಜೆ ಸಲ್ಲಿಸುವುದಾಗಿ ಆನ್‍ಲೈನ್ ಮೂಲಕ ವಂಚಿಸಿರುವ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ವಿಶೇಷ ಪೂಜೆಗೆ ಹುಡುಕುವಾಗ ಆನ್‍ಲೈನ್‍ನಲ್ಲಿ ಶರಣ್ ಭಟ್ ಎಂಬ ಪೂಜಾರಿಯ ಫೋನ್ ನಂಬರ್ ಯಾರೋ ಕೊಟ್ಟರು. ನನ್ನ ಖಾತೆಗೆ 50,000 ರೂಪಾಯಿ ಹಾಕಿ. ದೇವರ ಮುಂದೆ ಪೂಜೆ ಸಲ್ಲಿಸಿ ಮನೆಗೆ ಬಂದು ವಿಶೇಷ ಪೂಜೆ ಮಾಡುವೆ ಎಂದು ಶರಣ್ ಭಟ್ ತಿಳಿಸಿದಂತೆ ಹಣ

ಸಾಬೀತು ಮಾಡದಿದ್ದರೆ ಪಾಕ್‍ಗೆ ಹೋಗಲು ಯತ್ನಾಳ್‍ಗೆ ‘ಹಾಶ್ಮಿ’ ಸವಾಲು

ನನಗೆ ಐಸಿಸ್ ಸಂಪರ್ಕ ಇರುವುದನ್ನು ಸಾಬೀತು ಪಡಿಸಿದರೆ ನಾನು ದೇಶವನ್ನೇ ಬಿಡುತ್ತೇನೆ. ನೀವು ಸಾಬೀತು ಪಡಿಸದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಬಿಜೆಪಿ ಶಾಸಕ ಯತ್ನಾಳರಿಗೆ ವಿಜಯಪುರದ ಹಜರತ್ ಹಾಸಿಂ ಪೀರ ದರ್ಗಾದ ಧರ್ಮಾಧಿಕಾರಿ ಸಯ್ಯದ್ ಮೊಹಮದ್ ತನ್ಸೀರ್ ಹಾಶ್ಮಿ ಸವಾಲು ಹಾಕಿದ್ದಾರೆ. ಇದೇ ವೇಳೆ ಹಾಶ್ಮಿಯವರು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಮತ್ತು ಕೆಲವು ಬಿಜೆಪಿ ನಾಯಕರ ಜೊತೆಗೆ ಇರುವ ಫೆÇೀಟೋ ಸಹ ಬಹಿರಂಗ ಆಗಿದೆ. ಹಾಶ್ಮಿ ಐಸಿಸ್ ಜನ, ಮುಖ್ಯಮಂತ್ರಿ

ತೆಲಂಗಾಣದಲ್ಲಿ ಮಂತ್ರಿ ಆದ ಮಾಜೀ ನಕ್ಸಲ್

ತೆಲಂಗಾಣದ ಹೊಸ ಸಂಪುಟದಲ್ಲಿ ಬುಡಕಟ್ಟು ಪ್ರತಿನಿಧಿಯಾಗಿ ಇರುವವರು ದನ್ಸರಿ ಅನಸೂಯ. ಇವರು ಜನರ ನಡುವೆ ಸೀತಕ್ಕ ಎಂದೇ ಪ್ರಸಿದ್ಧರು. ಸಣ್ಣ 14ರ ಪ್ರಾಯದಲ್ಲೇ ಜನಶಕ್ತಿ ನಕ್ಸಲ್ ಗುಂಪು ಸೇರಿ ಹೋರಾಟ ಮಾಡಿದವರು. ಅನಂತರ ಭ್ರಮ ನಿರಸನಗೊಂಡು ಸಾರ್ವಜನಿಕ ಕ್ಷಮಾದಾನದಡಿ ಶರಣಾಗಿದ್ದರು. ಮುಂದೆ ಓದಿ ವಕೀಲೆ ಆದುದಲ್ಲದೆ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಮಾಡಿದರು. ಈ ನಡುವೆ ಬುಡಕಟ್ಟು ಜನರ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು, ತೆಲುಗು ದೇಶಂ ಸೇರಿ

ಅಟೋ ರಿಕ್ಷಾಕ್ಕೂ ಹೆಲ್ಮೆಟ್ ಕಡ್ಡಾಯ..!

ಅಟೋ ರಿಕ್ಷಾವೊಂದರ ಮಾಲಿಕರಿಗೆ ಶ್ವಾಕ್…ಅಟೋ ಚಲಾಯಿಸುವ ಸಂದರ್ಭ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಶಿವಮೊಗ್ಗ ದಿಂದ ಎರ್ಮಾಳಿನ ಅಟೋ ಚಾಲಕರೊರ್ವರಿಗೆ 500 ರೂಪಾಯಿ ದಂಡ ಪಾವತಿಸುವಂತೆ ನೋಟಿಸು ಜಾರಿಯಾಗಿದೆ. ಅಟೋ ರಿಕ್ಷಾದ ನೋಂದಾವಣೆ ಸಂಖ್ಯೆ, ಫೋಟೋ ದ್ವಿಚಕ್ರವಾಹನದ್ದಾಗಿದ್ದು, ಹೆಲ್ಮೆಟ್ ಧರಿಸದೆ ಸಂಚಾರ ನಿಯಮ ಉಲ್ಕಘಿಸಿದ ನೀವು ದಂಡ ಕಟ್ಟುವಂತೆ ಮೊಬೈಲ್ ಗೆ ಮ್ಯಾಸೇಜ್ ಬಂದಾಗ ಅಟೋ ಚಾಲಕ ತಬ್ಬಿಬ್ಬು ನಾನು ಶಿವಮೊಗ್ಗ ಕಡೆ ಹೋಗಿಯೇ ಇಲ್ಲ, ಅಲ್ಲದೆ ಎಲ್ಲಿಯೂ

ಬೆಂಗಳೂರಿನಬಟ್ಟೆ ವ್ಯಾಪಾರಿ ಈಗ ರಾಜಸ್ತಾನದ ಶಾಸಕ

ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ವ್ಯಾಪಾರಿ ಹಾಗೂ ಜೂಗನಹಳ್ಳಿಯ ಬಂಗಲೆ ವಾಸಿ ಲಾಡುಲಾಲ್ ಪಿಟ್ಲಿಯಾ ಅವರು ಈಗ ರಾಜಸ್ತಾನದ ಸಹಾರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ 31 ಲಕ್ಷ ಮತ ಪಡೆದಿದ್ದರು. ಈ ಬಾರಿ ಬಿಜೆಪಿ ಟಿಕೆಟ್ ಪಡೆದು 1.17 ಲಕ್ಷ ಮತ ಪಡೆದು ಗೆದ್ದಿದ್ದಾರೆ. ಸೋತ ಕಾಂಗ್ರೆಸ್ ಅಭ್ಯರ್ಥಿ 55 ಸಾವಿರ ಮಾತ್ರ ಪಡೆದಿದ್ದಾರೆ.ಬೆಂಗಳೂರಿನ ಲಾಡುಲಾಲರ ವ್ಯವಹಾರವನ್ನು ಈಗ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ.

ರಜಪೂತ ಕರ್ಣಿ ಸೇನಾ ಅಧ್ಯಕ್ಷರ ಕೊಲೆ – ಇಂದು ರಾಜಸ್ತಾನ ಬಂದ್

ಜೈಪುರದ ಮನೆಗೇ ನುಗ್ಗಿ ರಜಪೂತ ಕರ್ಣಿ ಸೇನಾದ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೋಗಮೇಡಿಯವರನ್ನು ಕೊಲೆ ಮಾಡಿದ ಸಂಬಂಧ ಇಂದು ರಾಜಸ್ತಾನ ಬಂದ್ ನಡೆಯುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದೆ. ಬೈಕಿನಲ್ಲಿ ಬಂದ ಮೂವರು ಮನೆಗೆ ನುಗ್ಗಿ ಸುಖದೇವ್‍ರನ್ನು ಪಿಸ್ತೂಲಿನಿಂದ ಗುಂಡಿಟ್ಟು ಕೊಂದಿದ್ದಾರೆ. ಅವರ ಜೊತೆಗಿದ್ದ ಇಬ್ಬರನ್ನು ಗುಂಡಿನಿಂದ ಬೆದರಿಸಿದ್ದಾರೆ. ಈಗ ಮಾಜೀ ಮುಖ್ಯಮಂತ್ರಿ ಆಗುತ್ತಿರುವ ಅಶೋಕ್ ಗೆಹ್ಲೋಟ್ ಅವರ ಉಸ್ತುವಾರಿ