Home Archive by category ರಾಷ್ಟ್ರೀಯ (Page 18)

ಲೋಕಸಭೆಯಲ್ಲಿ ಭದ್ರತಾ ಲೋಪ: ಒಳನುಗ್ಗಿದ ಇಬ್ಬರು ಅಪರಿಚಿತರು, ಬಂಧನ

ಬುಧವಾರ ಡಿಸೆಂಬರ್ 13ರಂದು ಲೋಕಸಭೆಯೊಳಕ್ಕೆ ಇಬ್ಬರು ಅಪರಿಚಿತರು ಪ್ರವೇಶ ಪಡೆದಿದ್ದುದು ಸ್ವಲ್ಪ ಕಾಲ ಸಂಸದರು ಕಕ್ಕಾಬಿಕ್ಕಿಯಾಗಿ ಎದ್ದೋಡುವಂತೆ ಮಾಡಿತು. ಆದರೆ ಅವರನ್ನು ಅಲ್ಲೇ ಸೆರೆ ಹಿಡಿಯಲಾಯಿತು. ಅವರು ಗ್ಯಾಲರಿಗೆ ಪಾಸ್ ಪಡೆದು ಅಲ್ಲಿಂದ ಲೋಕಸಭೆಯೊಳಕ್ಕೆ ಇಳಿದಿರುವುದಾಗಿ ತಿಳಿದು ಬಂದಿದೆ. ಲೋಕ ಸಭೆಯ ಕಲಾಪ ನಡೆಯುತ್ತಿದ್ದಾಗಲೇ ಈ ಇಬ್ಬರು ಅಪರಿಚಿತರು

ಕೇರಳ ಮುಖ್ಯಮಂತ್ರಿಯಿಂದ ಹಲ್ಲೆಗೆ ಸಂಚು:ರಾಜ್ಯಪಾಲ ಆರಿಫ್ ಮೊಹಮದ್ ಖಾನ್

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನನ್ನ ಮೇಲೆ ಹಲ್ಲೆಗೆ ಸಂಚು ನಡೆಸಿದ್ದಾರೆ ಎಂದು ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮದ್ ಖಾನ್ ಆರೋಪ ಮಾಡಿದ್ದಾರೆ. ದಿಲ್ಲಿಗೆ ಹೊರಟಿದ್ದ ರಾಜ್ಯಪಾಲರನ್ನು ವಿಮಾನ ನಿಲ್ದಾಣದ ಬಳಿ ತಡೆದ ಸಿಪಿಎಂ ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‍ಎಫ್‍ಐನವರು ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕೂಡಲೆ ರಾಜ್ಯಪಾಲ ಆರಿಫ್ ಖಾನ್ ಅವರು ಸ್ಥಳಕ್ಕೆ ಬಂದ ಮಾಧ್ಯಮದವರಿಗೆ ನೀಡಿದ ಮಾಹಿತಿ ಇದು. ಮುಖ್ಯಮಂತ್ರಿ ಪಿಣರಾಯಿ

ಮತ್ತೆ ಗೃಹ ಬಂಧನದಲ್ಲಿ ಇಡಿ- ಮೆಹಬೂಬಾ

ತೀರ್ಪು ಕೇಂದ್ರ ಸರಕಾರದ ಪರ ಆದ ಮತ್ತು ಚುನಾವಣೆ ನಡೆಸಲು ಇನ್ನೂ ಹತ್ತು ತಿಂಗಳಷ್ಟು ಕಾಲಾವಕಾಶ ಕೊಟ್ಟಿರುವುದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರಿಗೆ ತೃಪ್ತಿ ತಂದಿಲ್ಲ. ಮತ್ತೆ ಬಂಧಿಸಿ ಗೃಹ ಬಂಧನದಲ್ಲಿ ಇಡುವಂತೆ ಮಾಜೀ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಒತ್ತಾಯಿಸಿದರು.ಆದರೆ ಲೆಫ್ಟಿನೆಂಟ್ ಗವರ್ನರ್ ಅದಕ್ಕೆ ಸಮ್ಮತಿಸಿಲ್ಲ. ಕಾಶ್ಮೀರದ ಎಲ್ಲ ಕಡೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಉಸಿರು ಕಟ್ಟಿಸುವಂತಿದೆ. ನನ್ನನ್ನೂ ಬಂಧನದಲ್ಲಿಡಿ ಎಂದು ಮೆಹಬೂಬಾ

ಜಮ್ಮು-ಕಾಶ್ಮೀರ: ವಿಶೇಷ ಸ್ಥಾನಮಾನ ರದ್ದು: ಕೇಂದ್ರದ ಆದೇಶ ಎತ್ತಿಹಿಡಿದ ಸುಪ್ರೀಂ: 2024ರ ಸೆ.30ರೊಳಗೆ ಚುನಾವಣೆ ನಡೆಸಲು ಆದೇಶ

370ನೇ ವಿಧಿಯ ವಿಶೇಷ ಅಧಿಕಾರವನ್ನು ಜಮ್ಮು ಮತ್ತು ಕಾಶ್ಮೀರದಿಂದ ಕಿತ್ತುಕೊಂಡು 4 ವರುಷವಾದ ಬಳಿಕ ಇಂದು ಸುಪ್ರೀಂ ಕೋರ್ಟು ನೀಡುವ ತೀರ್ಪಿನತ್ತ ಎಲ್ಲರ ಕಣ್ಣೋಟವಿತ್ತು. ವಿಭಜನೆಯನ್ನು ಮಾನ್ಯ ಮಾಡಿ ಸುಪ್ರೀ ಕೋರ್ಟು ಒಟ್ಟಾರೆ ತೀರ್ಪು ನೀಡಿದೆ. ಪಂಚ ನ್ಯಾಯಾಧೀಶರ ಏಕಾಭಿಪ್ರಾಯದ ತೀರ್ಪು ಎನ್ನಲಾಗಿದೆಯಾದರೂ ಮೂರು ವಿಭಿನ್ನ ಅಭಿಪ್ರಾಯದ ತೀರ್ಪು ಹೊರಬಂದಿದೆ. ಸರಕಾರದ, ಸಂಸತ್ತಿನ ತೀರ್ಮಾನ ಆದೇಶವನ್ನು ಅಲ್ಲಗಳೆಯಲಾಗದು. ಒಕ್ಕೂಟ ಸೇರಿದ ಮೇಲೆ ಪ್ರತ್ಯೇಕ

ಒಡಿಶಾ, ಜಾರ್ಖಂಡ್ ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ – 290 ಕೋಟಿ ಕಳ್ಳ ಹಣ ವಶ

ಶನಿವಾರ dec 9 ;- ಇಡಿ- ಜಾರಿ ನಿರ್ದೇಶನಾಲಯದವರು ಒಡಿಶಾ ಮೂಲದ ಡಿಸ್ಟಿಲರಿ ಅವ್ಯವಹಾರಕ್ಕೆ ಸಂಬಂಧಿಸಿದ ಒಡಿಶಾ, ಜಾರ್ಖಂಡ್ ಪಶ್ಚಿಮ ಬಂಗಾಳದ ಮೂರು ಡಿಸ್ಟಿಲರಿಗೆ ದಾಳಿ ಮಾಡಿ 290 ಕೋಟಿ ರೂಪಾಯಿ ಲೆಕ್ಕ ಇಲ್ಲದ ಹಣ ವಶಪಡಿಸಿಕೊಂಡರು.ಈ ದಾಳಿ ವೇಳೆ ಒಂಬತ್ತು ಲಾಕರ್ ಮತ್ತು ಏಳು ಮುಚ್ಚಿದ ಕೋಣೆಗಳನ್ನು ತಪಾಸಣೆ ಮಾಡಲಾಯಿತು. ಕಪಾಟುಗಳಲ್ಲದೆ ಪೀಠೋಪಕರಣಗಳಲ್ಲೂ ಹಣ ಅಡಗಿಸಿಡಲಾಗಿತ್ತು. ಇದೇ ವೇಳೆ ಒಡಿಶಾದ ಮಹಿಳಾ ಮಂತ್ರಿ ಒಬ್ಬರು ಈ ಡಿಸ್ಟಿಲರಿಯ ಜೊತೆ ವೇದಿಕೆ

ತೆಲಂಗಾಣ – ಅಕ್ಬುರುದ್ದೀನ್ ಒವೈಸಿ ಹಂಗಾಮಿ ಸಭಾಪತಿ ; ಪ್ರಮಾಣವಚನ ಬಹಿಷ್ಕರಿಸಿದ ಬಿಜೆಪಿ

ತೆಲಂಗಾಣ ರಾಜ್ಯ ವಿಧಾನ ಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಪ್ರಮಾಣವಚನ ಸ್ವೀಕಾರವನ್ನು ಡಿಸೆಂಬರ್ 9ರ ಶನಿವಾರ ಇಟ್ಟುಕೊಳ್ಳಲಾಗಿದ್ದು, ಅಕ್ಬರುದ್ದಿನ್ ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಇದನ್ನು ವಿರೋಧಿಸಿ ಬಿಜೆಪಿಯ ಶಾಸಕರು ಪ್ರಮಾಣವಚನ ಸಮಾವೇಶವನ್ನೇ ಬಹಿಷ್ಕರಿಸಿದರು. ಘೋಷಾಮಹಲಿನಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಅವರು ನಾನು ಬದುಕಿರುವವರೆಗೆ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಆವೇಶದಿಂದ ಘೋಷಣೆ ಮಾಡಿದರು.

ಐಸಿಸ್ ಸಂಚು ಪ್ರಕರಣ, ಎನ್‍ಐಎ ದಾಳಿ

ಎನ್‍ಐಎ- ರಾಷ್ಟ್ರೀಯ ತನಿಖಾ ಏಜೆನ್ಸಿಯವರು ಐಎಸ್‍ಐಎಸ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಕಡೆ ದಾಳಿ ನಡೆಸಿ, ಹಲವರನ್ನು ಪ್ರಶ್ನಿಸಿ, 13 ಜನರನ್ನು ಡಿಸೆಂಬರ್ 9ರ ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.ಪೂನಾದ ಎರಡು ಕಡೆ, ಮುಂಬಯಿ ಹೊರ ವಲಯದ ಥಾಣೆಯ 9 ಕಡೆ, ಥಾಣೆ ಹೊರ ವಲಯದ 31 ಕಡೆ, ಬಾಯಂದರ್‍ನ ಒಂದು ಕಡೆ ಮತ್ತು ಕರ್ನಾಟಕದ ಬಡಗಣ ಭಾಗದ ಕೆಲವೆಡೆ ಶನಿವಾರ ಏಕ ಕಾಲಕ್ಕೆ ದಾಳಿ ಮಾಡಿದರು. ಅಲ್ ಕೈದಾ

ದಶಕದಲ್ಲಿ ದಲಿತರ ವಿರುದ್ಧ ದೌರ್ಜನ್ಯ 48%ದಷ್ಟು ಹೆಚ್ಚಳ

ಕಳೆದೊಂದು ದಶಕದಲ್ಲಿ ದಲಿತರ ಮೇಲಿನ ಅಪರಾಧಗಳು ಭಾರತದಲ್ಲಿ 48 ಶೇಕಡಾದಷ್ಟು ಹೆಚ್ಚಾಗಿರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗ್ರಾಫ್ ಪೋಸ್ಟ್ ಮಾಡುವ ಮೂಲಕ ಬಿಜೆಪಿಯ ಸಬ್ ಕ ಸಾಥ್ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.ಎನ್‍ಸಿಆರ್‍ಬಿ- ರಾಷ್ಟ್ರೀಯ ಅಪರಾಧ ವರದಿಯ ಆಧಾರದ ಮೇಲೆ ಈ ಗ್ರಾಫ್ ತಯಾರಾಗಿದೆ. ದಲಿತರ ಮೇಲೆ 46.12% ಮತ್ತು ಬುಡಕಟ್ಟು ಜನರ ಮೇಲೆ 48.15% ದೌರ್ಜನ್ಯ ಅಧಿಕವಾಗಿರುವುದು ಅಂಕಿಅಂಶದಲ್ಲಿದೆ.ಚುನಾವಣೆ ಮುಗಿದ

ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಮಂಗಳೂರಿನ ಮೊಹಮ್ಮದ್ ಆಶಿಕ್

ಮಂಗಳೂರಿನ ಮೊಹಮ್ಮದ್ ಆಶಿಕ್ ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಹೊರಹೊಮ್ಮಿದರು. ನಂಬಿ ಜೆಸ್ಸಿಕಾ ಮರಕ್ ಮತ್ತು ರುಖ್ಸಾರ್ ಸಯೀದ್, ಸೂರಜ್ ಅವರೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಸ್ಥಾನಗಳನ್ನು ಪಡೆದರು. ಮೊಹಮ್ಮದ್ ಆಶಿಕ್ ಇದಿಗ ಮಂಗಳೂರಿನಲ್ಲಿ ಚಿರಪರಿಚಿತ ಹೆಸರು ಮಂಗಳೂರಿನ ಕುಲುಕಿ ಹಬ್ ಎನ್ನುವ ಸಣ್ಣ ಜ್ಯೂಸ್ ಮಳಿಗೆಯಿಂದ ಸಾಗಿ ಇಂದು ಭಾರತದ ದೊಡ್ಡ ರಿಯಾಲಿಟಿ ಶೋ ಸೋನಿ ಟಿವಿಯ ಮಾಸ್ಟರ್ ಚೆಫ್ ಇಂಡಿಯಾದಲ್ಲಿ ವಿಜೆತರಾದವರು.ಹೋಟೆಲ್

ರಾಜಸ್ತಾನ – ಹಾಸ್ಟೆಲ್ಲಿನ ಹುಡುಗಿಯರನ್ನು ನೋಡಲು ಬಂದ ಚಿರತೆ

ಶನಿವಾರ ಬೆಳ್ಳಂಬೆಳಿಗ್ಗೆ ಉದಯಪುರದ ಬಾಲಕಿಯರ ಹಾಸ್ಟೆಲ್ಲಿಗೆ ಚಿರತೆಯೊಂದು ಮೆಲ್ಲನೆ ಬಂದು ಅಲ್ಲಿದ್ದ ಎಲ್ಲರೂ ಗಡಗಡ ನಡುಗುವಂತೆ ಮಾಡಿತು.ರಾಜಸ್ತಾನದ ಉದಯಪುರದಲ್ಲಿ ಈ ಚಿರತೆ ಇಣುಕುವಿಕೆ ನೋಡುತ್ತಲೇ ಹುಡುಗಿಯರು ಮತ್ತು ವಾರ್ಡನ್ ಎಲ್ಲರೂ ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಂಡರು. ಭಯದಿಂದ ಹೊರಗೆ ಇಣುಕಿ ನೋಡುತ್ತಲಿದ್ದರು. ಒಂದು ಸುತ್ತು ಆಚೀಚೆ ಹಾಕಿದ ಚಿರತೆಯು ಮೆಲ್ಲನೆ ಬೆಳಗಾಗುವಾಗ ಬಂದ ದಾರಿಯಲ್ಲಿಯೇ ಹಿಂದಕ್ಕೆ ಹೋಯಿತು