Home Archive by category ರಾಷ್ಟ್ರೀಯ (Page 20)

ಬಿಜೆಪಿಗೆ ನಾಲ್ಕರಲ್ಲಿ ಮೂರು ಎರಡು ಲಾಭ, ಹೇಗೆ? ಭಾರತ, ಇಂಡಿಯಾಕ್ಕೆ ಸೋಲು, ಎಲ್ಲಿ?

ನಾಲ್ಕು ರಾಜ್ಯಗಳ‌ ಚುನಾವಣೆಯ ಫಲಿತಾಂಶ ಬಿಜೆಪಿಗೆ ಲಾಭ ನೀಡಿದೆ. ಕಾಂಗ್ರೆಸ್ ಬಲ ನಿಂತ ನೀರಾಗಿದೆ. ಭಾರತ, ಇಂಡಿಯಾಗಳು ಸೋತು ಹೋಗಿವೆ. ಬಿಜೆಪಿಯಯ 142 ಹೆಚ್ಚು ಶಾಸಕರನ್ನು ಗೆದ್ದಿದೆ. ನಾಲ್ಕು ರಾಜ್ಯಗಳಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ ಮತ ಭಾರ ಭಾರೀ ಇಳಿಯದಿದ್ದರೂ ಒಟ್ಟು 66 ಶಾಸಕರನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ

ಸುಳ್ಳು ಸುದ್ದಿ ಹರಡುವ 9 ಯೂಟ್ಯೂಬ್ ಚಾನೆಲ್‌ಗಳ ಪಟ್ಟಿ ಬಿಡುಗಡೆ

ಸುಳ್ಳು ಸುದ್ದಿ ಹರಡಿ ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ಒಂಬತ್ತು ಫೇಕ್ ನ್ಯೂಸ್ ಚಾನೆಲ್‌ಗಳ ಪಟ್ಟಿ ಬಿಡುಗಡೆ ಆಗಿದೆ.ಸರ್ಕಾರಿ ಯೋಜನಾ ಅಫೀಶಿಯಲ್, ಸನ್ನಾನಿ‌ ಲೈವ್, ಬಜರಂಗ್ ಎಜುಕೇಶನ್, ಆಫ್ ಕ ಗುರೂಜಿ, ಬಿಜೆ ನ್ಯೂಸ್, ಅಬ್ ಬೋಲೇಗಾ ಭಾರತ್, ಜಿವಿಟಿ ನ್ಯೂಸ್, ಡೈಲಿ ಸ್ಟಡಿ, ಭಾರತ್ ಏಕ್ತಾ ನ್ಯೂಸ್ ಇವೇ ಆ ಸುಳ್ಳು ಸುದ್ದಿ ಶೂರ ಯೂಟ್ಯೂಬ್ ಚಾನೆಲ್‌ಗಳು.ಇವುಗಳಲ್ಲಿ ಆಫ್ ಕ ಗುರೂಜಿ 34 ಲಕ್ಷ ಮತ್ತು ಬಜರಂಗ್ ಎಜುಕೇಶನ್ 25 ಲಕ್ಷ

ಮಹಾಮಾರಿ ಏಡ್ಸ್

ಏನಿದು ಏಡ್ಸ್ ?ಏಡ್ಸ್ ಎನ್ನುವುದು ಎಚ್.ಐ.ವಿ ಎಂಬ ವೈರಾಣುವಿನ ಸೋಂಕಿನಿಂದ ಉಂಟಾಗುವ ರೋಗ ಲಕ್ಷಣಗಳ ಗುಚ್ಚವಾಗಿರುತ್ತದೆ. ಎಚ್.ಐ.ವಿ ಎಂದರೆ ಹ್ಯೂಮನ್ ಇಮ್ಯೂನೋ ಡೆಫಿಷಿಯನ್‍ಸ್ಸಿ ವೈರಸ್ ಆಗಿರುತ್ತದೆ. ಈ ಎಚ್.ಐ.ವಿ ವೈರಾಣುವಿನಿಂದ ಸೋಂಕು ಹೊಂದಿದ ವ್ಯಕ್ತಿಗಳೆಲ್ಲಾ ಏಡ್ಸ್ ರೋಗದಿಂದ ಬಳಲಬೇಕೇಂದಿಲ್ಲ. ಆದರೆ ಏಡ್ಸ್ ಇರುವವರೆಲ್ಲಾ ಎಚ್.ಐ.ವಿ ವೈರಾಣುವಿನಿಂದ ಸೋಂಕಿತರಾಗಿರುತ್ತಾರೆ. ಏಡ್ಸ್ ಎನ್ನುವುದು ತಮ್ಮ ದೇಹದ ರೋಗ ನೀರೋಧಕ ಶಕ್ತಿಗೆ ಸಂಬಂಧಪಟ್ಟ

ಮನುಕುಲವನ್ನು ಬೆಚ್ಚಿ ಬೀಳಿಸಿದ ಮಹಾಮಾರಿ ಏಡ್ಸ್

ಪ್ರತಿ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಎಚ್.ಐ.ವಿ ಎಂಬ ವೈರಸ್‍ನಿಂದ ಉಂಟಾಗುವ ಈ ರೋಗದ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ 1988ರಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು,ಮಾರಣಾಂತಿಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದ ಒಳಗೆ ಬರುವ ಏಡ್ಸ್‍ರೋಗ ಮನುಕುಲದ ಬಹುದೊಡ್ಡ ಶತ್ರು. 2013ರ ಅಂಕಿಅಂಶಗಳ ಪ್ರಕಾರ ಸುಮಾರು 36 ಮಿಲಿಯನ್ ಮಂದಿ (1981-2012ರ ವರೆಗೆ) ಸಾವನ್ನಪ್ಪಿದ್ದಾರೆ

ಚಿನ್ನದ ನವಿಲು ಗೆದ್ದ ಎಂಡ್‌ಲೆಸ್ ಬಾರ್ಡರ್ಸ್‌, ಡ್ರಿಫ್ಟ್‌ಗೆ ಯುನೆಸ್ಕೋ ಗಾಂಧಿ ಪ್ರಶಸ್ತಿ, ರಿಷಬ್ ಶೆಟ್ಟಿಗೆ ತೀರ್ಪುಗಾರರ ಪ್ರಶಸ್ತಿ

ಗೋವಾದ ಪಣಜಿಯ ಐನಾಕ್ಸ್‌ನಲ್ಲಿ ನಡೆದ ಎಂಟು ದಿನದ 54ನೇ ಚಲನಚಿತ್ರೋತ್ಸವ ಮುಗಿದಿದ್ದು, ಪರ್ಶಿಯಾದ ಅಬ್ಬಾಸ್ ಅಮಿನಿ ಅವರ ಎಂಡ್‌ಲೆಸ್ ಬಾರ್ಡರ್ಸ್ ಚಿತ್ರವು ಬಂಗಾರದ ನವಿಲು ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ಗಳಿಸಿತು. ಆಂಟನಿ ಚೆನ್ ಅವರ ಡ್ರಿಫ್ಟ್ ಚಲನಚಿತ್ರವು ಯುನೆಸ್ಕೋ ಗಾಂಧಿ ಪ್ರಶಸ್ತಿಯನ್ನು ಪಡೆಯಿತು. ಕಾಂತಾರಕ್ಕಾಗಿ ರಿಷಬ್ ಶೆಟ್ಟಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದರು

ಜಮ್ಮು-ಕಾಶ್ಮೀರ: ಕಲಕೋಟ್ ಅರಣ್ಯದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ: ಇಬ್ಬರು ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ರಾಜೋರಿಯಲ್ಲಿ ಉಗ್ರರೊಂದಿಗಿನ ಗುಂಡಿನ ಚಕಮಕಿ ಹೋರಾಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ರಾಜೌರಿ ಜಿಲ್ಲೆಯ ಕಲಕೋಟ್ ಅರಣ್ಯದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಹುತಾತ್ಮರಾದವರ ಇಬ್ಬರು ಸೇನಾಧಿಕಾರಿಗಳ ಪೈಕಿ ಒಬ್ಬರು ಕರ್ನಾಟಕದ ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್(29) ಎಂಬುದು ದೃಢಪಟ್ಟಿದೆ. ಕ್ಯಾಪ್ಟನ್ ಪ್ರಾಂಜಲ್ ಮಂಗಳೂರಿನ ಎಂ.ಆರ್.ಪಿ.ಎಲ್ ತೈಲ ಕಂಪನಿಯಲ್ಲಿ ಹಲವು ವರ್ಷಗಳ ಕಾಲ ವ್ಯವಸ್ಥಾಪಕ ನಿರ್ದೇಶಕರಾಗಿ

ಉತ್ತರಕಾಶಿಯಲ್ಲಿ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ಸುರಕ್ಷತೆಗಾಗಿ ಪ್ರಾರ್ಥನೆ

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಸುರಕ್ಷತೆ ಮತ್ತು ರಕ್ಷಣೆಗಾಗಿ ಪ್ರಾರ್ಥಿಸಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್‍ನಲ್ಲಿ ಮರಳು ಕಲಾಕೃತಿಯನ್ನು ರಚಿಸಿದ್ದಾರೆ.`ಕಾರ್ಮಿಕರು ಆದಷ್ಟು ಬೇಗ ಸುರಕ್ಷಿತವಾಗಿ ಹೊರಬರಲು ನಾವು ಜಗನ್ನಾಥನನ್ನು ಪ್ರಾರ್ಥಿಸುತ್ತಿದ್ದೇವೆ. ಸಿಕ್ಕಿಬಿದ್ದಿರುವ 41 ಕಾರ್ಮಿಕರಲ್ಲಿ 5 ಮಂದಿ ಒಡಿಶಾದವರಿದ್ದಾರೆ. ಎಲ್ಲ ಕಾರ್ಮಿಕರ ರಕ್ಷಣೆಗಾಗಿ ನಾವೆಲ್ಲರೂ ಒಗ್ಗೂಡಬೇಕು

ವಿಶ್ವ ಮೂಲವ್ಯಾಧಿ ದಿನ-ನವೆಂಬರ್ 20

ಪ್ರತಿ ವರ್ಷ ನವೆಂಬರ್ 20 ರಂದು ವಿಶ್ವ ಮೂಲವ್ಯಾಧಿ ದಿನ ಎಂದು ಆಚರಿಸಿ ಮೂಲವ್ಯಾಧಿ ರೋಗದ ಬಗ್ಗೆ ಇರುವ ಅಪನಂಬಿಕೆಗಳನ್ನು ನಿವಾರಿಸಿ ರೋಗದ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿ ರೋಗವನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬಗ್ಗೆ ಜನರಿಗೆ ಮನದಟ್ಟು ಮಾಡುವ ಸದುದ್ದೇಶವನ್ನು ಈ ಆಚರಣೆ ಹೊಂದಿದೆ. ಇದೊಂದು ಅತ್ಯಂತ ಯಾತನಾಮಯ ಮತ್ತು ಮುಜುಗರ ತರಿಸುವಂತಹಾ ಖಾಯಿಲೆಯಾಗಿದ್ದು, ಯಾರಲ್ಲೂ ಹೇಳಿಕೊಳ್ಳಲಾಗದೆ ರೋಗಿ ರೋಗವನ್ನು

ವಿಶ್ವ ವಿಕಿರಣ ಶಾಸ್ತ್ರದಿನ – ನವೆಂಬರ್ 8

ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ ದಿನ” ಎಂದು ಆಚರಿಸಿ ವಿಕರಣ ಶಾಸ್ತ್ರದಿಂದ ವೈದ್ಯಕೀಯ ರಂಗಕ್ಕೆ ಉಂಟಾಗುವ ಸಹಾಯಗಳನ್ನು ಸ್ಮರಿಸಲಾಗುತ್ತದೆ. ಈ ಆಚರಣೆ 2012 ನವೆಂಬರ್ 8 ರಂದು ಆರಂಭಿಸಲಾಯಿತು. ಸುಮಾರು 200 ರಾಷ್ಟ್ರಗಳಲ್ಲಿ ಈ ಆಚರಣೆ ಮಾಡಲಾಗುತ್ತಿದೆ. 1895ನೇ ನವೆಂಬರ್ 8ರಂದು ವಿಲಿಯಮ್ ಕೊನ್ರಾಡ್ ರೊಂಟ್‍ಜೆನ್ ಎಂಬ ವಿಜ್ಞಾನಿ ಕ್ಷ-ಕಿರಣಗಳನ್ನು ಪತ್ತೆ ಹಚ್ಚಿದನು. ಕ್ಯಾಥೋಡ್ ಕಿರಣಗಳ ಬಗ್ಗೆ ಸಂಶೋಧನೆ ನಡೆಸುವಾಗ

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ನವೆಂಬರ್ 7

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ – ಪ್ರತಿ ವರ್ಷ ಭಾರತದಾದ್ಯಂತ ನವಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಎಂದು ಆಚರಿಸಿ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ, ಆರಂಭಿಕ ಹಂತದಲ್ಲಿ ಗುರುತಿಸುವುದರ ಮಹತ್ವ ಮತ್ತು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ. ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ಭಾರತದಲ್ಲಿ 1975 ರಲ್ಲಿ ಆರಂಭವಾಯಿತು. ಆದರೆ