Home Archive by category ಹಾನಿ

ವಿಟ್ಲ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

ವಿಟ್ಲ: ನಿಯಂತ್ರಣ ತಪ್ಪಿ ಕ್ರೇಟಾ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲ ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಪವಾಡ ಎಂಬಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೋಟೆಕಾರು : ಕಾರು ಢಿಕ್ಕಿ – ಪಾದಚಾರಿ ಸಾವು

ಉಳ್ಳಾಲ: ಕಾರು ಢಿಕ್ಕಿ ಹೊಡೆದು ಪಾದಚಾರಿ ಬಿಜೆಪಿ ಕಾರ್ಯಕರ್ತ ಮೃತಪಟ್ಟ ಘಟನೆ ರಾ.ಹೆ.66 ರ ಕೋಟೆಕಾರು ಬಳಿಯ ಅಡ್ಕ ಎಂಬಲ್ಲಿ ನಡೆದಿದೆ. ಕೋಟೆಕಾರು ನೆಲ್ಲಿ ಸ್ಥಳ ಕಾಳಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಶ್ರೀಕಾಂತ್ (46)ಮೃತರು.ಶ್ರೀಕಾಂತ್ ಆಟೋ ಇಲೆಕ್ಟ್ರೀಷಿಯನ್ ಕೆಲಸ ಮಾಡುತ್ತಿದ್ದರು.ಇಂದು ಮದ್ಯಾಹ್ನ ಅಡ್ಕದಲ್ಲಿ ಹೆದ್ದಾರಿ ದಾಟುತ್ತಿದ್ದ ವೇಳೆ ಕೇರಳದಿಂದ ಧಾವಿಸುತ್ತಿದ್ದ ಕಾರು ಶ್ರೀಕಾಂತ್ಗೆ ಢಿಕ್ಕಿ ಹೊಡೆದಿದೆ.ಗಂಭೀರ ಗಾಯಗೊಂಡ ಶ್ರೀಕಾಂತ್ ರನ್ನು ಅಪಘಾತ

ದಕ್ಷಿಣ ಚೀನಾದ ಗೌಂಗ್‌ಝೋ ನಗರಕ್ಕೆ ಅಪ್ಪಳಿಸಿದ ಸುಂಟರಗಾಳಿ: ಐವರ ಸಾವು: 33ಮಂದಿಗೆ ಗಾಯ

ದಕ್ಷಿಣ ಚೀನಾದ ಗೌಂಗ್‌ಝೋ ನಗರಕ್ಕೆ ಸುಂಟರಗಾಳಿ ಅಪ್ಪಳಿಸಿದೆ. ಘಟನೆಯಲ್ಲಿ ಐವರು ಮೃತಪಟ್ಟು, 33 ಮಂದಿ ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ ನಗರದ ಬೈಯುನ್ ಜಿಲ್ಲೆಯಲ್ಲಿ ಪ್ರಬಲವಾದ ಸುಂಟರಗಾಳಿ ಬೀಸಿದೆ. ಪರಿಣಾಮ 141 ಕಾರ್ಖಾನೆ ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೈಯುನ್ ಜಿಲ್ಲೆಯ ಲಿಯಾಂಗ್ಟಿಯಾನ್ ಹಳ್ಳಿಯಲ್ಲಿರುವ ಹವಾಮಾನ ಕೇಂದ್ರದಲ್ಲಿ ಸೆಕೆಂಡಿಗೆ ಗರಿಷ್ಠ 20.6 ಮೀಟರ್ ಗಾಳಿ ದಾಖಲಾಗಿದೆ. ಸುಂಟರಗಾಳಿ ಬಳಿಕ ದಕ್ಷಿಣ

ದೇರಳಕಟ್ಟೆ : ಸ್ವೀಟ್ ಕಾರ್ನ್ ಸ್ಟಾಲ್‌ನಲ್ಲಿ ಗ್ಯಾಸ್ ಸಿಡಿದು ಬೆಂಕಿ

ದೇರಳಕಟ್ಟೆ : ರಸ್ತೆಬದಿಯಲ್ಲಿ ಇರಿಸಲಾದ ಸ್ವೀಟ್ ಕಾರ್ನ್ ಸ್ಟಾಲ್ ಒಂದರ ಗ್ಯಾಸ್ ಸಿಲಿಂಡರಿನಲ್ಲಿ ಗ್ಯಾಸ್ ಸೋರಿಕೆ ಉಂಟಾಗಿ ಬೆಂಕಿ ಅವಘಡ ಸಂಭವಿಸಿದ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ. ಬಶೀರ್ ಎಂಬವರು ವ್ಯವಹಾರದಲ್ಲಿ ತೊಡಗಿದ್ದ ಸಂದರ್ಭ ಗ್ಯಾಸ್ ಸೋರಿಕೆ ಉಂಟಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಅಲ್ಲಿದ್ದ ಗ್ರಾಹಕರು ಹಾಗೂ ಸ್ಟಾಲ್ ಮಾಲೀಕರು ಓಡಿ ಪಾರಾಗಿದ್ದಾರೆ. ಬೆಂಕಿ ತೀವ್ರಗೊಂಡಿದ್ದು, ಸಾರ್ವಜನಿಕರು ಹೊಯ್ಗೆ, ನೀರು ಹಾಯಿಸಿ ಬೆಂಕಿ ನಂದಿಸಲು

ಗೋಳಿತ್ತೊಟ್ಟು: ಕಾಡಾನೆ ದಾಳಿ-ಕೃಷಿ ನಾಶ

ನೆಲ್ಯಾಡಿ: ಗೋಳಿತ್ತೊಟ್ಟು ಪರಿಸರದಲ್ಲಿ ಕಳೆದ 1 ವಾರದಿಂದ ಕಾಡಾನೆಯೊಂದು ಕೃಷಿ ತೋಟಗಳಿಗೆ ದಾಳಿ ನಡೆಸಿ ಅಪಾರ ಕೃಷಿ ನಾಶಗೊಳಿಸಿರುವುದಾಗಿ ವರದಿಯಾಗಿದೆ. ಗೋಳಿತ್ತೊಟ್ಟು ಗ್ರಾಮದ ಚೆನ್ನಪ್ಪ ಗೌಡ ಕುದ್ಕೋಳಿ, ಚಿದಾನಂದ ಗೌಡ ಅನಿಲ, ಪಿಲಿಫ್ ಬಳಕ ಹಾಗೂ ಪರಿಸರದ ನಿವಾಸಿಗಳ ತೋಟಗಳಿಗೆ ಕಾಡಾನೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಕೃಷಿ ನಾಶಗೊಳಿಸಿದೆ. ಗ್ರಾಮಸ್ಥರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಎ.11ರಂದು ಪರಿಸರಕ್ಕೆ ಭೇಟಿ ನೀಡಿದ್ದು ಅರಣ್ಯದಂಚಿನಲ್ಲಿ

ಬಂಟ್ವಾಳ: ಬೆಂಕಿಗೆ ಸುಟ್ಟು ಕರಕಲಾದ ಕಾರು

ಬಂಟ್ವಾಳ: ಚಲಿಸುತ್ತಿದ್ದ ಕಾರೊಂದು ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಘಟನೆ ರಾಯಿ- ಕುದ್ಕೊಳಿಯ ಮಧ್ಯೆ ನಡೆದಿದ್ದು ಡಸ್ಟರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ.‌ ಬೆಂಕಿಯ ಕೆನ್ನಲಿಗೆಗೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಏಳಿಂಜೆಯ ಕೊಲ್ಲೆಟ್ಟು ನಿವಾಸಿ ಶರತ್ ಶೆಟ್ಟಿ ಅವರಿಗೆ ಸೇರಿದ ಕಾರು ಅದಾಗಿದ್ದು, ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಕೊಂಡಿದೆ. ಬೆಂಕಿ ಕಾಣಿಸಿಕೊಂಡ

ಪುತ್ತೂರಿನ ಹರ್ಷ ಶೋರೂಂನ ಗೋದಾಮಿನಲ್ಲಿ ಅಗ್ನಿ ಅವಘಡ

ಪುತ್ತೂರು: ಪುತ್ತೂರು ದರ್ಬೆ ಸಂತೃಪ್ತಿ ಹೋಟೆಲ್ ಹಿಂಬದಿ ಹರ್ಷ ಶೋರೂಮ್ ಗೋದಾಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೋಟ್ಯಾಂತರ ಮೌಲ್ಯದ ಸೊತ್ತುಗಳು ಹಾನಿಗೊಂಡಿವೆ. ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಪುತ್ತೂರು ನಗರ ಪೊಲೀಸರು ಸಹಕರಿಸುತ್ತಿದ್ದಾರೆ.

ಬಿಹಾರದಲ್ಲಿ ಕಟ್ಟುತ್ತಿದ್ದ ಸೇತುವೆ ಕುಸಿತ- ಒಂದು ಸಾವು, ಹಲವರಿಗೆ ಗಾಯ

ಬಿಹಾರದ ಸುಪೌಲ್ ಎಂಬಲ್ಲಿ ಕಟ್ಟುತ್ತಿದ್ದ ಸೇತುವೆ ಕುಸಿದುದರಿಂದ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಇನ್ನೂ ಅವಶೇಷಗಳಡಿ ಹಲವರು ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.ಕೋಸಿ ನದಿಗೆ 984 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ಕಟ್ಟಲಾಗುತ್ತಿದೆ. ಇತ್ತೀಚೆಗೆ ಬಾಗಲ್ಪುರದಲ್ಲೂ ಕಟ್ಟುತ್ತಿದ್ದ ಸೇತುವೆಯೊಂದು ಹೀಗೇ ಕುಸಿದು ಅನಾಹುತವಾಗಿತ್ತು. ಬಿಜೆಪಿ- ಜೆಡಿಎಸ್ ಭ್ರಷ್ಟಾಚಾರದ ಫಲ ಇದು ಎಂದು ಪ್ರತಿಪಕ್ಷಗಳು ಟೀಕಿಸಿವೆ. ಸುಪೌಲ್

ಉಳ್ಳಾಲ: ಸಮುದ್ರದಲ್ಲಿ ಕಲ್ಲುಬಂಡೆಗೆ ಬಡಿದು ಮುಳುಗಿದ ಮೀನುಗಾರಿಕಾ ದೋಣಿ, ಐವರು ಮೀನುಗಾರರ ರಕ್ಷಣೆ

ಉಳ್ಳಾಲ: ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರ್ರಾಲ್‍ಬೋಟೊಂದು ಶುಕ್ರವಾರ ನಸುಕಿನ ಜಾವ ಸಮುದ್ರದ ಕಲ್ಲೊಂದಕ್ಕೆ ಬಡಿದು ಮುಳುಗಿದ್ದು, ಸ್ಥಳೀಯ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‍ನ ಮೀನುಗಾರರು ಬೋಟ್‍ನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್‍ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ಲಕ್ಷಾಂತರ ಮೌಲ್ಯದ ಬೋಟ್‍ಗೆ ಹಾನಿಯಾಗಿದೆ. ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರಿಗೆ ಸೇರಿದ`ನವಾಮಿ –

ಮಂಗಳೂರು: ಗೂಗಲ್ ನಕ್ಷೆಯಲ್ಲಿ ಮಂಗಳಾದೇವಿ ದೇವಾಲಯದ ಹೆಸರು ತಿರುಚು.

ಮಂಗಳೂರು ಬೋಳಾರದ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್ ಭೂಪಟದಲ್ಲಿ ಯಾರೋ ಕಿಡಿಗೇಡಿಗಳು ಪೀರ್ ದರ್ಗಾ ಕಾಂಪೌಂಡ್ ಎಂದು ತಿದ್ದಿರುವುದಾಗಿ ತಿಳಿದು ಬಂದಿದೆ. ಇದನ್ನು ಸರಿಪಡಿಸುವಂತೆ ದೇವಾಲಯದ ಆಡಳಿತ ಮಂಡಳಿಯವರು ದೂರು ದಾಖಲಿಸಿದ್ದಾರೆ. ಇದು ಕುಕೃತ್ಯ ಎಂದೂ ಖಂಡಿಸಿದ್ದಾರೆ.