ಕಾರ್ಕಳ ವಿಧಾನ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಹಾಗೂ ಸಾವಿತ್ರಿ ಸತ್ಯವಾನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಮಮತಾ ಹೆಗ್ಡೆ ರವರು ಕಾರ್ಕಳ ತಾಲೂಕಿನ ಎಣ್ಣೆ ಹೊಳೆಯ ಸುಮಾರು 138 ಕೋಟಿಯ ಕಳಪೆ ಕಾಮಗಾರಿಯನ್ನು ವೀಕ್ಷಿಸಿದರು.ಎಣ್ಣೆ ಹೊಳೆಯ ಅಣೆಕಟ್ಟಿನ ಕಾಮಗಾರಿಯು ಕಳಪೆ ದರ್ಜೆಯ ಕಾಮಗಾರಿಯಾಗಿದ್ದು , ತೆರಿಗೆದಾರರ ಹಣವನ್ನು ದುರುಪಯೋಗ ಮಾಡಲಾಗಿದೆ ಎಂದು ಮಮತಾ
ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ಪಕ್ಷವನ್ನು ಎರಡೂವರೆ ಸಾವಿರ ಮತಗಳಿಂದ 75 ಸಾವಿರ ಮತಗಳವರೆಗೆ ಬೆಳೆಸಿದ್ದೇವೆ. ಮುಂದೆಯೂ ಬಿಜೆಪಿ ಕ್ಷೇತ್ರವನ್ನಾಗಿ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಲಾಲಾಜಿ ಆರ್. ಮೆಂಡನ್ ಹೇಳಿದರು. ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಲಾಲಾಜಿ ಮೆಂಡನ್ ಅವರ ಮನೆಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದರು. ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಲಾಲಾಜಿ ಮೆಂಡನ್
ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ತಪ್ಪುತ್ತಲೇ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರ ಮನೆಯತ್ತ ದೌಡಾಯಿಸುತ್ತಿದ್ದಾರೆ. ಅಭಿಮಾನಿಗಳನ್ನು ಕಂಡು ರಘುಪತಿ ಭಟ್ ಭಾವುಕರಾಗಿದ್ದಾರೆ. ನಾನು ಶಾಕ್ ನಲ್ಲಿದ್ದೇನೆ ಏನು ಹೇಳುವ ಸ್ಥಿತಿಯಲಿಲ್ಲ ಎಂದು ರಘುಪತಿ ಭಟ್ ಹೇಳಿದ್ದರು. ಪಕ್ಷ ನನ್ನನ್ನು ನಡೆಸಿಕೊಂಡ ಬಗ್ಗೆ ತುಂಬಾ ಬೇಸರವಿದೆ. ಕನಿಷ್ಠ ಜಿಲ್ಲಾ ಮಟ್ಟದ ನಾಯಕರು ಕೂಡ ಕರೆ ಮಾಡಿ ಮಾತನಾಡಿಲ್ಲ. ಜಾತಿಯ ಕಾರಣಕ್ಕೆ ನನಗೆ ಟಿಕೆಟ್ ತಪ್ಪಿದೆ ಅನ್ನೋದು
ಬೈಂದೂರು: ಬಿಜೆಪಿಯ ಬೈಂದೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರಿಗೆ ಮುಂದಿನ ಚುನಾವಣೆಯಲ್ಲಿ ಸೀಟು ತಪ್ಪಿರುವ ವಿಚಾರ ತಿಳಿದ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ ಮಂಗಳವಾರ ರಾತ್ರಿ ಬಿ.ಎಂ. ಸುಕುಮಾರ ಶೆಟ್ಟಿಯವರಿಗೆ ಸೀಟು ಸಿಕ್ಕಿಲ್ಲ ಎನ್ನುವ ಮಾಹಿತಿ ಖಚಿತಗೊಳ್ಳುತ್ತಿದ್ದಂತೆ ಶಾಸಕರ ಮನೆ ಮುಂದೆ ತಂಡೋಪತಂಡವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರ ಅಭಿಮಾನಿಗಳು ಜಮಾಯಿಸಿದರು. ಸುಮಾರು ಐನೂರಕ್ಕೂ ಹೆಚ್ಚು
ಮುಂದಿನ ವಿಧಾನ ಸಭೆ ಚುನಾವಣೆ ನಿರ್ಭೀತಿಯಾಗಿ ನಡೆಯ ಬೇಕೆಂಬ ಉದ್ದೇಶದಿಂದ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗಜ್ಜಿ ನೇತ್ರತ್ವದಲ್ಲಿ ಪಡುಬಿದ್ರಿ ಕಾರ್ಕಳ ರಸ್ತೆಯಿಂದ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರಗೆ ಪೊಲೀಸ್ ಹಾಗೂ ಕೇಂದ್ರಿಯ ಮೀಸಲು ಪಡೆ ಸಿಬ್ಬಂದಿಗಳ ಪಥಸಂಚಲನ ನೆರವೇರಿದೆ. ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಇದು ಸಾರ್ವಜನಿಕರನ್ನು ಹೆದರಿಸಲು ಮಾಡಿದ ಪ್ರಯತ್ನವಲ್ಲ, ಜನರಿಗೆ ಧೈರ್ಯ ತುಂಬಲು ಹಾಗೂ ಜನರು ತಮ್ಮ ಹಕ್ಕು..ಮತ ಚಲಾಯಿಸಲು ಯಾರಿಗೂ ಹೆದರ
ಹೆಜಮಾಡಿ ಮೀನುಗಾರಿಕಾ ಬಂದರು ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮಂಜೂರು ಮಾಡಿದ್ದು ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾದ ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ ಹೆಜಮಾಡಿ ಬಂದರನ್ನು ಎಲ್ಲಾ ಪೂರಕ ದಾಖಲೆಗಳನ್ನು ಕ್ರೋಡೀಕರಿಸಿ ಮಂಜೂರು ಮಾಡಿದ್ದರು. ಆ ಸಂದರ್ಭ ಕೇಂದ್ರ ಸರ್ಕಾರ 75 ಶೇಕಡ ಹಾಗೂ ರಾಜ್ಯ ಸರ್ಕಾರ 25 ಶೇಕಡ ಹಣ
ಉಡುಪಿಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿದ್ದ ಭಿನ್ನ ಮತ ಶಮನಕ್ಕೆ ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಟಿಕೆಟ್ ಅಕಾಂಕ್ಷಿಗಳು ನಿನ್ನೆ ನಡೆದ ಸಭೆಯಲ್ಲಿ ಒಮ್ಮತವನ್ನು ಪ್ರದರ್ಶಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪ್ರಚಾರವೂ ಕೂಡ ಜೊರಾಗಿಯೇ ನಡೆಯುತ್ತಿದೆ. ಮನೆ ಮನೆ ಭೇಟಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲಾಗುತ್ತಿದ್ದು ಮತದಾರರಿಂದ ಉತ್ತಮ ಪ್ರತಿಕ್ರಿಯೆ
ಪಡುಬಿದ್ರಿ ಸೇತುವೆ ಬಳಿ ಸ್ಕೂಟರ್ ವೊಂದಕ್ಕೆ ಪಿಕಪ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರು ಪಲಿಮಾರು ಶಾಂಭವಿ ಕಂಪೌಂಡು ನಿವಾಸಿ ವಿಜಯ ಪೂಜಾರಿ(68) ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದು, ಉಡುಪಿಯಿಂದ ಮರಳಿ ಮನೆಗೆ ಬರುತ್ತಿದ್ದ ಇವರು ಸೇತುವೆ ಬಳಿ ಬರುತ್ತಿರುವ ಸಂದರ್ಭ ಅದೇ ಕಡೆಯಿಂದ ಬಂದ ಪಿಕಪ್ ಡಿಕ್ಕಿಯಾಗಿದೆ. ಸವಾರ ಎಸೆಯಲ್ಪಟ್ಟರೆ ಸ್ಕೂಟರ್
ನಿರುದ್ಯೋಗ ಎಂದಾಕ್ಷಣ ಯುವಕರು ವಾಲುವುದು ದುಶ್ಚಟಗಳಿಗೆ…ಈ ಅಪವಾದಗಳನ್ನು ಮೆಟ್ಟಿನಿಂತ ಪಡುಬಿದ್ರಿಯ ಯುವಕರ ತಂಡವೊಂದು ದಿನವೊಂದಕ್ಕೆ ಸಹಸ್ರಾರು ರೂಪಾಯಿ ಸಂಪಾದಿಸುವ ಕಾಯಕಕ್ಕೆ ಕೈ ಹಾಕುವ ಮೂಲಕ ಕಷ್ಟ ಪಟ್ಟರೆ ನಿರುದ್ಯೋಗ ನಿವಾರಣೆ ನಮ್ಮಿಂದಲೇ ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದಾರೆ.ಮಾವು ಎಂದರೆ ಯಾರ ಬಾಯಲ್ಲಿ ನೀರೂರದೆ ಇರಲು ಸಾಧ್ಯಹೇಳಿ..? ಅದೂ ಕೂಡ ಬರೋಬ್ಬರಿ 62ಬಗೆಯ ಮಾವಿನ ಹಣ್ಣುಗಳನ್ನು ದೂರದ ಊರುಗಳಿಂದ ತಂದು ಪಡುಬಿದ್ರಿ ಯ ಬಾಡಿಗೆ ಕಟ್ಟಡದಲ್ಲಿ
ಹೆಬ್ರಿ ತಾಲೂಕಿನ ಮುನಿಯಾಲ್ ಮುದ್ರಾಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಯಲ್ಲೇ ವಿದ್ಯಾಬ್ಯಾಸ ಮುಂದುವರಿಸಿರುವ ವಿಶೇಷ ಚೇತನ ಮಕ್ಕಳ ಮನೆಗಳಿಗೆ ಕಾರ್ಕಳದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಹಾಗೂ ಸತ್ಯವಾನ್ ಸಾವಿತ್ರಿ ಟ್ರಸ್ಟ್ ಅಧ್ಯಕ್ಷೆ ಡಾ. ಮಮತಾ ಹೆಗ್ಡೆ ಅವರು ಭೇಟಿ ನೀಡಿದರು.ವಿಶೇಷ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಬಗ್ಗೆ ಮಮತಾ ಹೆಗ್ಡೆ ಅವರು ಮಕ್ಕಳ ಪೋಷಕ ರೊಂದಿಗೆ ಸಮಾಲೋಚನೆ ನಡೆಸಿದರು .ನೆಕ್ರೆಯಲ್ಲಿ ನಡೆದ ನಾಗಮಂಡಲ ಪೂಜೆಯಲ್ಲಿ ಭಾಗವಹಿಸಿದ ಮಮತಾ ಹೆಗ್ಡೆ




























