Home ಕರಾವಳಿ Archive by category ಉಡುಪಿ (Page 110)

ಉಚ್ಚಿಲ ಅಪಾಯಕಾರಿ ಡೈವರ್ಷನ್ ಮುಚ್ಚುಗಡೆ : ಬೆಂಬಲ ವ್ಯಕ್ತ ಪಡಿಸಿದ ಸಾರ್ವಜನಿಕರು

ಬಹಳಷ್ಟು ಅಮಾಯಕರು ಪ್ರಾಣ ಕಳೆದುಕೊಂಡ ಉಚ್ಚಿಲದ ಪಣಿಯೂರು ತಿರುವು ಬಳಿಯ ಡೈವರ್ಷನ್ ಮುಚ್ಚುವ ಮೂಲಕ ನವಯುಗ್ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಕೆಲ ವರ್ಷಗಳ ಹಿಂದೆ ಸರ್ವಿಸ್ ರಸ್ತೆ ನಿರ್ಮಾಣದ ಬೇಡಿಕೆ ಮುಂದಿರಿಸಿದ ಸಾರ್ವಜನಿಕರು, ಸರ್ವಿಸ್ ರಸ್ತೆ ನಿರ್ಮಾಣ ಮಾಡುವ ವರಗೆ ಪಣಿಯೂರು ಕ್ರಾಸ್ ಬಳಿ ಡೈವರ್ಷನ್ ತೆರೆಯುವಂತೆ ಆಗ್ರಹಿಸಿದ ಹಿನ್ನಲೆಯಲ್ಲಿ

ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ : ಸಾಣೂರಿನಲ್ಲಿ ವಾಹನಗಳ ತಪಾಸಣೆ

ಕಾರ್ಕಳ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಕಾರ್ಕಳ ತಾಲೂಕಿನ ಗಡಿಭಾಗದಲ್ಲಿ ಅಕ್ರಮವನ್ನು ತಡೆಗಟ್ಟಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಚುನಾವಣಾ ಆಯೋಗದಿಂದ ಬಂದ ಕಟ್ಟುನಿಟ್ಟಿನ ಆದೇಶದ ಬಂದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಗಡಿಭಾಗವಾದ ಸಾಣೂರಿನಲ್ಲಿ ನಗರ ಠಾಣ ಸಿಬ್ಬಂದಿಗಳಾದ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಪ್ರತಿಯೊಂದು ವಾಹನವನ್ನು ನಿಲ್ಲಿಸಿ ಕಟ್ಟುನಿಟ್ಟಿನ ತಪಾಸಣೆಯನ್ನು ಮಾಡುತ್ತಿದ್ದರು. ಕಾರ್ಕಳ ನಗರ ಠಾಣಾ

ಕಾರ್ಕಳ : ನಕಲಿ ಪತ್ರಕರ್ತರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕೆಲವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಾರ್ಕಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಕಾರ್ಕಳ ಗ್ರಾಮಾಂತರ ಎಸ್‍ಐ ತೇಜಸ್ವಿ ಅವರಿಗೆ ಮನವಿ ಸಲ್ಲಿಸಿತು.ಇತ್ತೀಚೆಗೆ ಕೆಲವು ವ್ಯಕ್ತಿಗಳು ಪತ್ರಕರ್ತರ ಸಂಘ ಮತ್ತು ಪತ್ರಕರ್ತರ ಹೆಸರು ಹೇಳಿ ಹಣ ಸಂಗ್ರಹಿಸುವ, ವಸೂಲಿ ಮಾಡುವ ಹಾಗೂ ಬೆದರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿವುದು ಸಂಘದ ಗಮನಕ್ಕೆ ಬಂದಿದೆ. ಯಾವುದೇ

ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಅಂಬುಲೆನ್ಸ್ : ರೋಗಿಗಳು ಸಣ್ಣಪುಟ್ಟ ಗಾಯಗಳಿಂದ ಪಾರು

ಕಾರ್ಕಳ ಬಂಗ್ಲೆ ಗುಡ್ಡೆ ಬಳಿ, ಖಾಸಗಿ ಆಸ್ಪತ್ರೆಯ ರೋಗಿಗಳನ್ನು ತಮ್ಮ ಮನೆಗೆ ಬಿಡಲು ಕಾರ್ಕಳದಿಂದ ಕಡ್ತಲಕ್ಕೆ ಹೋಗುವಾಗ ಬಂಗ್ಲೆ ಗುಡ್ಡೆ ಬಳಿ ಅತಿ ವೇಗದಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋಗಿ ಆಂಬುಲೆನ್ಸ್ ಮಾರ್ಗದಲ್ಲಿ ಪಲ್ಟಿ ಯಾದ ಘಟನೆ ನಡೆದಿದೆ. ಈ ವೇಳೆಯಲ್ಲಿ ಅಂಬುಲೆನ್ಸಿನ ಒಳಗಿದ್ದ ರೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳದ ಮಣಿಪಾಲ ರೋಟರಿ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ಎದುರಿನಿಂದ ವೇಗವಾಗಿ

ಚುನಾವಣೆ ಅಕ್ರಮ ತಡೆಗೆ 17 ಕಡೆ ಚೆಕ್ ಪೋಸ್ಟ್, ಈವರೆಗೆ 42 ಲಕ್ಷ ರೂ.ವಶ ಎಸ್ಪಿ ಅಕ್ಷಯ್ ಎಂ. ಎಚ್ ಮಾಹಿತಿ

ಉಡುಪಿ:ಚುನಾವಣಾ ಅಕ್ರಮಗಳು ನಡೆಯದಂತೆ ಹಾಗೂ ವಾಹನಗಳ ವಿಶೇಷ ತಪಾಸಣೆಗಾಗಿ ಜಿಲ್ಲೆಯ 17 ಕಡೆಗಳಲ್ಲಿ ಚೆಕ್‍ಪೆÇೀಸ್ಟ್‍ಗಳನ್ನು ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಎಚ್ ತಿಳಿಸಿದ್ದಾರೆ. ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯೊಳಗೆ ಸಂಚರಿಸುವ ಹಾಗೂ ಹೊರಜಿಲ್ಲೆಗಳ ಸಂಚಾರಗಳ ಮೇಲೆ ನಿಗಾ ಇರಿಸಲು ಈ

ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ರವಿಶಾಸ್ತ್ರಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರು ಹಾಗೂ ಮಾಜಿ ಕೋಚ್‍ಗಳಾದ ರವಿಶಾಸ್ತ್ರಿ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ್ ಶೆಟ್ಟಿ ಅವರು ಸನ್ಮಾನ ಮಾಡಿ ಪ್ರಸಾದ ನೀಡಿ ಗೌರವಿಸಿದರು ವ್ಯವಸ್ಥಾಪನ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಚುನಾವಣೆ ಹಿನ್ನೆಲೆ; ರಾ.ಹೆದ್ದಾರಿಗಳಲ್ಲಿ ಸಾಗುತ್ತಿರುವ ವಾಹನಗಳ ತಪಾಸಣೆ

ವಿಧಾನಸಭೆ ಚುನಾವಣೆ ಪೂರ್ವ ತಯಾರಿಯಾಗಿ ಅಂಗವಾಗಿ ತಪಾಸಣೆ ಹಾಗೂ ಸಾಗರ ಕವಚ ಅಣಕು ಕಾರ್ಯಾಚರಣೆ ಬೈಂದೂರು ತಾಲೂಕಿನ ಅರೆಹೊಳೆ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯಿತು. ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಗಳನ್ನು ಪೊಲೀಸ್ ಅಧಿಕಾರಿಗಳು ತಪಾಸಣೆಯನ್ನು ನಡೆಸಿದರು.ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ ಬೈಂದೂರು ಪಿಎಸ್‍ಐ ನಿರಂಜನ್ ಗೌಡ ಗಂಗೊಳ್ಳಿ ಪಿ ಎಸ ಐ ವಿನಯ್ ,ಕೊಲ್ಲೂರ್ ಪಿಎಸ್‍ಐ ಈರಣ್ಣ ಸಿರಗುಪ್ಪಿ

ನನಗೆ ಗೆಲುವಿನೊಂದಿಗೆ ವಿದಾಯ ಹೇಳಿ ಸೋಲಿನೊಂದಿಗೆ ಬೇಡ : ವಿನಯಕುಮಾರ್ ಸೊರಕೆ

ನನ್ನ ಕೊನೆಯ ಚುನಾವಣೆ ಇದಾಗಿದ್ದು, ಕ್ಷೇತ್ರದ ಜನತೆ ನನಗೆ ಗೆಲುವಿನ ವಿದಾಯ ಹೇಳಿ.. ಸೋಲಿನೊಂದಿಗೆ ಬೇಡ ಎಂಬುದಾಗಿ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ. ಕಾಪುವಿನಲ್ಲಿ ಅವರು ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯೆ ನಾನು ನನ್ನ ಅಂತಿಮ ಚುನಾವಣೆ ಎಂದಿದ್ದೆ. ಆದರೆ ನಮ್ಮ ಅತೀಯಾದ ಆತ್ಮವಿಶ್ವಾಸ ನಮಗೆ ಮುಳುವಾಗಿ ನಾನು ಸೋಲು ಕಂಡಿದ್ದೆ. ಸೊಲು ಕಂಡರೂ ನಾನು ಎಲ್ಲೊ ದೂರದ

ಎಣ್ಣೆಹೊಳೆ ಡ್ಯಾಮ್‍ನಲ್ಲಿ ಕ್ರಿಕೆಟ್ ಆಡಿ ಪ್ರತಿಭಟಿಸಿದ ಮುತಾಲಿಕ್ ಟೀಮ್

ಅಜೆಕಾರು ಎಣ್ಣೆಹೊಳೆ ಎಂಬಲ್ಲಿ ಸ್ವರ್ಣ ನದಿಗೆ ನಿರ್ಮಿಸಲಾಗಿದ್ದ ಎಣ್ಣೆಹೊಳೆ ಏತನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ. ರೂ. 138 ಕೋಟಿ ಹಣವನ್ನು ಪೋಲುಮಾಡಲಾಗಿದೆ. ಮಹಾಭ್ರಷ್ಟಾಚಾರ ಇದಾಗಿದ್ದು, ಸಂಬಂಧ ಪಟ್ಟ ಇಲಾಖಾಧಿಕಾರಿಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತೇನೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಕೆಲವೇ ಕೆಲ ವ್ಯಕ್ತಿಗಳು ಅಭಿವೃದ್ಧಿ ಹೊಂದುತ್ತಿದ್ದಾರೆ. ಬಿಟ್ಟಿ

ಬಾವಿಗೆ ಬಿದ್ದ ಶ್ವಾನದ ರಕ್ಷಣೆ : ವಿಡಿಯೋ ವೈರಲ್

ಮುದರಂಗಡಿಯಲ್ಲಿ ತೆರೆದ ಬಾವಿಯಲ್ಲಿ ಸ್ಥಳೀಯ ಸಾಕು ನಾಯಿ ಬಿದ್ದ ಮಾಹಿತಿ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ಸಿಕ್ಕಿದ್ದು ತಕ್ಷಣ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ಸಿಬ್ಬಂದಿಗಳು ಬಾವಿಯಲ್ಲಿ ಬಿದ್ದ ನಾಯಿಯನ್ನು ರಕ್ಷಿಸಿದ ಘಟನೆ ಮುದರಂಗಡಿಯಲ್ಲಿ ನಡೆದಿದೆ.ಇವರ ಈ ಕಾರ್ಯಕ್ಕೆ ಸ್ಥಳೀಯರ ಮೆಚ್ಚುಗೆ ವ್ಯಕ್ತವಾಗಿದೆ ನಾಯಿಯನ್ನು ರಕ್ಷಿಸುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದೆ