Home ಕರಾವಳಿ Archive by category ಉಡುಪಿ (Page 149)

ಕಾಪು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಮಾಹಿತಿ ಕಾರ್ಯಾಗಾರ

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುದರಂಗಡಿ ಪ. ಪೂ. ಕಾಲೇಜಿನಲ್ಲಿ ಪತ್ರಿಕಾ ಮಾಹಿತಿ ಕಾರ್ಯಗಾರ ನೆರವೇರಿತು.ಪತ್ರಿಕಾ ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿ ಉಡುಪಿ ಎಂಜಿಎಂ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಾಗ ಬೇಕಾದವರು ಪ್ರಮುಖವಾಗಿ ಯಾವುದೇ ವಿಚಾರವನ್ನು ಸೂಕ್ಷ್ಮವಾಗಿ

ಸುರತ್ಕಲ್ ರಸ್ತೆ ಅಪಘಾತ, ಕಟಪಾಡಿ ಮೂಡಬೆಟ್ಟು ದೇವಸ್ಥಾನದ ಅರ್ಚಕ ದುರ್ಮರಣ

ಕಟಪಾಡಿ : ಸುರತ್ಕಲ್ ನಲ್ಲಿ ಲಾರಿ ಮಟ್ಟು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಉಡುಪಿ ಕಟಪಾಡಿ ಬಳಿಯ ಮಟ್ಟು ನಿವಾಸಿ, ದೇಗುಲದ ಅರ್ಚಕ ಅಕ್ಷಯ್ ಕೆ. ಆರ್ (33) ದುರ್ಮರಣ ಹೊಂದಿದ್ದಾರೆ. ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿದ್ದ ಅಕ್ಷಯ್ ಸುರತ್ಕಲ್ ನಲ್ಲಿ ಪೂಜೆ ಮುಗಿಸಿ ಕಟಪಾಡಿ ಗೆ ಹಿಂತಿರುಗಿ ಬರುವ ವೇಳೆಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಮೃತರು ತಾಯಿಯನ್ನು ಅಗಲಿದ್ದಾರೆ

ಪಾದೆಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಡುಬಿದ್ರಿ ಇನ್ನರ್ ವೀಲ್ ವತಿಯಿಂದ ಪುಸ್ತಕ ವಿತರಣೆ

ಪಡುಬಿದ್ರಿಯ ಪಾದೆಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲಾ ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪಡುಬಿದ್ರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಉಚಿತವಾಗಿ ನೋಟ್ ಬುಕ್ ವಿತರಿಸಲಾಯಿತು. ಪುಸ್ತಕ ವಿತರಿಸಿ ಮಾತನಾಡಿದ ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ವಿಮಲ ಕೆ. ಸಾಲ್ಯಾನ್, ಕೊರೋನಾ ರೋಗದ ಬಳಿಕ ಜೀವನ ಬಹಳಷ್ಟು ಕಷ್ಟಕರವಾಗಿದ್ದು, ಮಕ್ಕಳ ಹೆತ್ತವರಿಗೆ ಮಕ್ಕಳ ಶಿಕ್ಷಣದ ಬಗೆಗಿನ ಹಾಗು ಹೋಗುಗಳ ಸಣ್ಣ ಅಗತ್ಯತೆಗಳನ್ನು ನೀಗಿಸಲು ಸಮಸ್ಯೆಯಾಗುತ್ತಿದ್ದು, ಈ

ಹಿರಿಯ ಚಿಂತಕ ಲೇಖಕ ಜಿ. ರಾಜಶೇಖರ್ ನಿಧನ

ನಾಡಿನ ಹಿರಿಯ ಚಿಂತಕ, ಲೇಖಕ, ವಿಮರ್ಶಕ ಹಾಗು ಜನಪರ ಹೋರಾಟಗಾರ ಉಡುಪಿ ಕೊಳಂಬೆಯ ನಿವಾಸಿ ಜಿ.ರಾಜಶೇಖರ್ (75) ಅನಾರೋಗ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು. 2019ರಿಂದ ಪ್ರೋಗ್ರೆಸ್ಸಿವ್ ಸುಪ್ರ ನ್ಯೂಕ್ಲಿಯರ್ ಪಾಲ್ಸಿ (ಪಾರ್ಕಿಂಸನ್ ಪ್ಲಸ್) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಶ್ವಾಸಕೋಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತೀರಾ ಗಂಭೀರ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ

ಮೃತ್ಯುಕೂಪದಂತಿರುವ ರಾಷ್ಟ್ರೀಯ ಹೆದ್ದಾರಿ, ಪ್ರತಿನಿತ್ಯ ಹೆದ್ದಾರಿಗಳಲ್ಲಿ ಅಪಘಾತಗಳ ಸರಮಾಲೆ

ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನಗಳಿಗೆ ನಿತ್ಯ ಆಸರೆಯಾಗುವ ಹೆದ್ದಾರಿಯು ಮರಣ ಗುಂಡಿಗಳಾಗಿ ಬದಲಾಗುತ್ತಿದೆ. ಹೆದ್ದಾರಿಯ ಬಹುತೇಕ ಭಾಗಗಳಲ್ಲಿ ಹೊಂಡಗಳೇ ತುಂಬಿಕೊಂಡಿದ್ದು, ಸಂಚಾರ ಕಷ್ಟಕರವಾಗಿದೆ.ಇಲ್ಲಿರುವ ಗುಂಡಿಗಳು ಸವಾರರ ಮತ್ತು ಪ್ರಯಾಣಿಕರ ಹೃದಯಬಡಿತ ಹೆಚ್ಚಿಸುವಂತಿದೆ.ಸ್ವಲ್ಪ ಎಚ್ಚರ ತಪ್ಪಿದ್ರೆ ಸಾಕು ವಾಹನ ಹೊಂಡಕ್ಕೆ ಬೀಳುವುದು ಖಚಿತ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೃಹತ್ತಾಕಾರದ ಹೊಂಡಗುಂಡಿಗಳಿಂದ ವಾಹನ ಸವಾರ ನರಕಯಾತನೆ ಅನುಭವಿಸುವಂತಾಗಿದೆ.

ಜಿ.ರಾಜಶೇಖರ ನಿಧನಕ್ಕೆ ಎಡ ಸಂಘಟನೆಗಳಿಂದ ತೀವ್ರ ಸಂತಾಪ

ಖ್ಯಾತ ವಿಮರ್ಶಕ, ಚಿಂತಕ, ಬರಹಗಾರ ಜಿ ರಾಜಶೇಖರ ನಿಧನಕ್ಕೆ ಮಂಗಳೂರಿನ ಎಡ ಹಾಗು ಜನಪರ ಪಕ್ಷ, ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಕೋಮುವಾದ, ಫ್ಯಾಸಿಸಂ ವಿರುದ್ದದ ದೃಢ ಧ್ವನಿಯಾಗಿದ್ದ ರಾಜಶೇಖರರವರು ಒಂದೆರಡು ತಲೆಮಾರನ್ನು ಪ್ರಭಾವಿಸಿದ ಮಹಾನ್ ಚಿಂತಕ ಎಂದು ಸಂತಾಪ ಸಂದೇಶದಲ್ಲಿ ಬಣ್ಣಿಸಿದೆ.ಜಿ ರಾಜಶೇಖರರವರು ದಣಿವಿಲ್ಲದೆ ದುಡಿದ ಕೋಮುವಾದ ವಿರೋಧಿ ದಾರಿಯಲ್ಲಿ ರಾಜಿಯಿಲ್ಲದೆ ಸಾಗುವುದು ಅವರಿಗೆ ಸಲ್ಲಿಸುವ ಶ್ರದ್ದಾಂಜಲಿ ಎಂದು ಸಿಪಿಐಎಂ ದ ಕ ಜಿಲ್ಲಾ

ಉಡುಪಿ : ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಆಟಿಡೊಂಜಿ ದಿನ

ತುಳುನಾಡ ರಕ್ಷಣಾ ವೇದಿಕೆಯು ಕಳೆದ 13 ವರ್ಷಗಳಲ್ಲಿ ಹಲವಾರು ಜನಪರ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಘಟಕ ವತಿಯಿಂದ ಉಡುಪಿ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ವಿಜ್ಞಾಪನಾ ಪತ್ರವನ್ನು ಜೈನ ದಿಗಂಬರ ಮಠ ಮೂಡುಬಿದಿರೆ ಜಗದ್ಗುರು ಪರಮ ಪೂಜ್ಯ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಯವರ ದಿವ್ಯ

ಟೋಲ್‍ಗೇಟ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಆಂಬ್ಯುಲೆನ್ಸ್ ಮೂವರು ಮೃತ್ಯು

ಅತಿವೇಗದಿಂದ ಬಂದ ಅಂಬ್ಯುಲೆನ್ಸ್ ವೊಂದು ಟೋಲ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಶಿರೂರು ಟೋಲ್ ಗೇಟ್ ನಲ್ಲಿ ಬುಧವಾರ ನಡೆದಿದೆ. ಹೊನ್ನಾವರದಿಂದ ಕುಂದಾಪುರದ ಆಸ್ಪತ್ರೆಗೆ ರೋಗಿಯನ್ನು ಕರೆ ತರುವ ವೇಳೆ ಅತಿವೇಗದಿಂದ ಬಂದ ಅಂಬ್ಯುಲೆನ್ಸ್ ಶಿರೂರು ಟೋಲ್ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಂಬ್ಯುಲೆನ್ಸ್ ನಲ್ಲಿ ಹೊನ್ನಾವರದ ಆಸ್ಪತ್ರೆಯಿಂದ ಲೋಕೇಶ್ ಮಾದೇವ ನಾಯ್ಕ

ಉಡುಪಿಯಲ್ಲಿ ಐಗ್ಲಾಸಸ್ ಕನ್ನಡಕ ಮಳಿಗೆ ಶುಭಾರಂಭ , ಶೇ.50 ರಷ್ಟು ರಿಯಾಯಿತಿ

ಉಡುಪಿಯ ಗರ್ಲ್ಸ್ ಕಾಲೇಜಿನ ಸಮೀಪದ ಕಟ್ಟಡದಲ್ಲಿ ತೆರೆಯಲಾದ ಐಗ್ಲಾಸಸ್ ಕನ್ನಡಕ ಮಳಿಗೆಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಮಳಿಗೆಯ ಉದ್ಘಾಟನಾ ಪ್ರಯುಕ್ತ ಶೇ.೫೦ರಷ್ಟು ರಿಯಾಯಿತಿ ದರದಲ್ಲಿ ಕನ್ನಡಕ ಹಾಗೂ ಪವರ್ ಲೆನ್ಸ್‌ಗಳನ್ನು ನೀಡಲಾಗುವುದು. ೨೦ ನಿಮಿಷದಲ್ಲಿ ಲೆನ್ಸ್‌ಗಳನ್ನು ತಯಾರಿಸಿ ಕೊಡಲಾಗುವುದು. ಅತ್ಯಂತ ಕಡಿಮೆ ದರದಲ್ಲಿ ಕನ್ನಡಕಗಳನ್ನು ಲೆನ್ಸ್ ಜನತೆಗೆ ಎಲ್ಲ ಬಗೆಯ ಬ್ರ್ಯಾಂಡೆಡ್ ಲೆನ್ಸ್‌ಗಳು, ಬ್ಲೂ ಫಿಲ್ಟರ್ ಲೆನ್ಸ್‌ಗಳು ಕಡಿಮೆ ದರದಲ್ಲಿ ಲಭ್ಯವಿದೆ.

ಯುವವಾಹಿನಿ-ಬಿರುವೆರ್ ಕಾಪು ವತಿಯಿಂದ ಆಟಿಕೂಟ

ಕಾಪು ಯುವವಾಹಿನಿ ಹಾಗೂ ಬಿರುವೆರ್ ಕಾಪು ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ಆಟಿಕೂಟ ಬಹಳ ವಿಭಿನ್ನವಾಗಿ ಕಾಪುವಿನ ಖಾಸಗಿ ರೆಸಾರ್ಟ್‍ವೊಂದರಲ್ಲಿ ನಡೆಯಿತು.ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಂತೋಷ್ ಉದ್ಯಾವರ, ಇದೀಗ ನಾವು ಆಟಿ ತಿಂಗಳ ದಿನಗಳಲ್ಲಿ ಹಬ್ಬವಾಗಿ ಆಚರಿಸಿ ಸೇವಿಸುವ ಸೊಪ್ಪು ತರಕಾರಿಗಳು ಅಂದು ಬಡತನದ ಅನಿವಾರ್ಯ ಆಹಾರಗಳಾಗಿತ್ತು, ಈ ಆಟಿ ಕೂಟಗಳಲ್ಲಿ ಯುವ ಪೀಳಿಗೆಗೆ ಅಂದಿನ ಕಷ್ಟದ