Home ಕರಾವಳಿ Archive by category ಉಡುಪಿ (Page 22)

ಬೈಂದೂರು:; ತ್ರಾಸಿ ಬೀಚಿನಲ್ಲಿ ವಾಟರ್ ಸ್ಪೋರ್ಟ್ಸ್ ಜಸ್ಕಿ ರೈಡರ್ ಸಮುದ್ರದಲ್ಲಿ ನಾಪತ್ತೆ!

ಬೈಂದೂರು: ಬೇಲುಗ ವಾಟರ್ ಸ್ಪೋರ್ಟ್ಸ್ ಜಸ್ಕಿ ರೈಡರ್ ಶನಿವಾರ ಸಂಜೆಯ ವೇಳೆ ಪ್ರವಾಸಿಗರನ್ನು ಸಮುದ್ರದಲ್ಲಿ ರೈಡಿಗೆ ಕರೆದುಕೊಂಡು ಹೋದಾಗ ಅಬ್ಬರದ ಸಮುದ್ರದ ಅಲೆಗೆ ಜಸ್ಕಿ ಪಲ್ಟಿ ಪಡೆದ ಪರಿಣಾಮ ಜಸ್ಕಿ ರೈಡರ್ ರವಿ ಎಂಬ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಪ್ರಕರಣ ನಡೆದಿದೆ. ಸಮುದ್ರದಲ್ಲಿ ಜಸ್ಕಿ ರೈಡಿಗೆ ಹೋದ ಪ್ರವಾಸಿಗ ಪ್ರಾಣಅಪಾಯದಿಂದ ಪಾರಾಗಿ

ಕಾರ್ಕಳ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕಾರ್ಕಳ ರಾಕ್ ಸಿಟಿ ಉದ್ಘಾಟನೆ, ಪದ ಪ್ರಧಾನ ಕಾರ್ಯಕ್ರಮ

ಕಾರ್ಕಳ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕಾರ್ಕಳ ರಾಕ್ ಸಿಟಿಯ ಉದ್ಘಾಟನೆ ಶಿರಿಡಿ ಸಾಯಿ ಮಂದಿರದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ಚಿತ್ರ ಕುಮಾರ್ ರವರು ದೀಪ ಬೆಳಗಿಸುವ ಮೂಲಕ ನೂತನ ಘಟಕದ ಉದ್ಘಾಟನೆಯನ್ನು ನೆರವೇರಿಸಿದರು ಸಮಾರಂಭದಲ್ಲಿ ನೂತನ ಘಟಕ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷರಾಗಿ ಸುಧಾಕರ್ ಪೂಜಾರಿ ಕಾರ್ಕಳ, ಉಪಾಧ್ಯಕ್ಷರಾಗಿ ಅನಿಲ ಪೂಜಾರಿ ಮಾಳ ಮತ್ತು ಹರೀಶ್ ಅಮೀನ್ ನಲ್ಲೂರು, ಕಾರ್ಯದರ್ಶಿಯಾಗಿ ವೇಲೇರಿಯನ್

ಬೈಂದೂರು: ಫ್ರೆಂಡ್ಸ್ ಕ್ಲಬ್ ಕಿರೀಮಂಜೇಶ್ವರ ವತಿಯಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಫ್ರೆಂಡ್ಸ್ ಕ್ಲಬ್ ಕಿರೀಮಂಜೇಶ್ವರ ವತಿಯಿಂದ ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ನಡೆಯಿತು. ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು ಹಾಗೂ ಅಂಕಣದ ಉದ್ಘಾಟನೆಯನ್ನು ಮಾಜಿ ಶಾಸಕರಾದ ಶ್ರೀಗೋಪಾಲ ಪೂಜಾರಿಯವರು ಉದ್ಗಾಟಿಸಿದರು. ಸಭೆಯ ಅಧ್ಯಕ್ಷತೆ ಯನ್ನು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಉಮೇಶ್ ನಾಯರಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಎನ್ ವಿ ಪ್ರಕಾಶ್ ಐತಾಳ್ ಶೇಖರ್ ಖಾರ್ವಿ ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜೇಶ್ ನಾಯರಿ

ಕಾಪು ಶ್ರೀ ಮಾರಿಗುಡಿ ದೇವಸ್ಥಾನಕ್ಕೆ ಕೆ.ರಘುಪತಿ ಭಟ್ ಭೇಟಿ

ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ನವದುರ್ಗಾ ಲೇಖನ ಯಜ್ಞ ಆಯೋಜಿಲಾಗಿದ್ದು, ಈ ಲೇಖನವನ್ನು ಬರೆಯುವ ಕಾರ್ಯಕ್ರಮವನ್ನು ಯಶಸ್ವಿಗೊಳ್ಳಿಸುವ ನಿಟ್ಟಿನಲ್ಲಿ ಎಸ್ ಅರ್ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಟಿಟ್ಯೂಟ್ ವಿದ್ಯಾಸಂಸ್ಥೆಗೆ ಉಡುಪಿಯ ನಿಕಟಪೂರ್ವ ಶಾಸಕರು, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷರಾದ ಕೆ ರಘುಪತಿ ಭಟ್ ಅವರು ಭೇಟಿ ಮಾಡಿ ನವದುರ್ಗಾ

ಚಿತ್ರಾಪುರ:ಶ್ರೀ ಕೃಷ್ಣ ಬಾಲಾಂಜನೇಯ ಮಂದಿರ ಹಾಗೂ ಬೊಬ್ಬರ್ಯ ಬಂಟ ದೈವದ ಧರ್ಮ ಚಾವಡಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಚಿತ್ರಾಪುರ: ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡ ಶ್ರೀ ಕೃಷ್ಣ ಬಾಲಾಂಜನೇಯ ಮಂದಿರ ಹಾಗೂ ಬೊಬ್ಬರ್ಯ ಬಂಟ ದೈವದ ಧರ್ಮ ಚಾವಡಿ,ರಂಗ ಮಂದಿರ ದ ಉದ್ಘಾಟನೆ ಮತ್ತು ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ, ಶಾಸಕರಾದ ಡ.ಭರತ್ ಶೆಟ್ಟಿ ವೈ ಅವರು ಗುರುವಾರ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿಸಿದರು.ಚಿತ್ರಾಪುರ

ಕಳತ್ತೂರು: ದ.ಸಂ.ಸ ಕಳತ್ತೂರು ಗ್ರಾಮ ಶಾಖೆ ಉದ್ಘಾಟನೆ

ಶ್ರೀ ಬಬ್ಬುಸ್ವಾಮಿ ದೇವಸ್ಥಾನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಪ್ರೋ.ಕೃಷ್ಣಪ್ಪ ಸ್ಥಾಪಿತ ಕಳತ್ತೂರು ಶಾಖೆ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆ ನೇರವೆರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೊರಕೆ, ದೇಶದಲ್ಲಿ ಅಸ್ಪೃಶ್ಯತೆ ಅಸಮಾನತೆ ಸೃಷ್ಟಿಯಿಂದ ಪ್ರಾರಂಭವಾಗಿದ್ದಲ್ಲ,ಅದು ಮಾನವರಿಂದ ಆದದ್ದು, ಅದರ ವಿರುದ್ಧ ಅಂಬೇಡ್ಕರರು ನ್ಯಾಯೋಚಿತ ಹೋರಾಡಿ ಸಂವಿಧಾನವನ್ನು ರಚಿಸಿದರು ಅದನ್ನು ಉಳಿಸಿ ಪೋಷಿಸಿದರೆ

ಉಡುಪಿ: ಪತ್ನಿ ಸಾವಿಗೀಡಾದ ಮರುದಿನವೇ ಪತಿ ನಿಧನ

ಪತ್ನಿ ಸಾವಿಗೀಡಾದ ಮರುದಿನವೇ ಪತಿ ಕೂಡ ನಿಧನರಾದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದಿದೆ. ಸಾಮಾಜಿಕ ಮತ್ತು ಧಾರ್ಮಿಕವಾಗಿ ಸಕ್ರಿಯವಾಗಿದ್ದ ದಂಪತಿಗಳು ಈ ಮೂಲಕ ಒಂದೇ ಸಮಯದಲ್ಲಿ ಕೊನೆಯಸಿರೆಳೆದಿದ್ದಾರೆ. ಉದ್ಯಾವರದ ಚರ್ಚ್ ಪಾಲನಾ ಮಂಡಳಿಯಲ್ಲಿ ಸಕ್ರಿಯರಾಗಿದ್ದ ಲಾರೆನ್ಸ್ ಡೇಸಾ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರ ಪತ್ನಿ ಶಿಕ್ಷಕಿ ಜೂಲಿಯಾನ ಹೆಲೆನ್ ರೆಬೆಲ್ಲೋ ಒಂದು ದಿನದ ಮುಂಚೆ ಸಾವನ್ನಪ್ಪಿದ್ದರು. ಈ ಆಘಾತದಿಂದ ಅನಾರೋಗ್ಯ

ಹೆಬ್ರಿ: ಮರದಿಂದ ಬಿದ್ದು ಪ್ರಗತಿಪರ ಕೃಷಿಕ ಮೃತ್ಯು

ಹೆಬ್ರಿ: ಕಬ್ಬಿನಾಲೆ ಹೊನ್ನ ಕೊಪ್ಪಲ ಎಂಬಲ್ಲಿ ಪ್ರಗತಿಪರ ಕೃಷಿಕ ಜ್ಞಾನೇಶ್ವರ ಹೆಬ್ಟಾರ್‌(62) ಅವರು ಮರದಿಂದ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅವರು ಮರದ ಗೆಲ್ಲು ಕಡಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೃಷಿ ಕೆಲಸಕ್ಕೆ ಹೋದ ತನ್ನ ಪತಿ ಮನೆಗೆ ಊಟಕ್ಕೆ ಬಾರದಿರುವುದನ್ನು ಗಮನಿಸಿದ ಪತ್ನಿ ಹಾಗೂ ಮಗಳು ಹುಡುಕುತ್ತಾ ಹೋದಾಗ ಮರದಡಿ ಬಿದ್ದಿದ್ದರು.ಮುನಿಯಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್‌ ಡಿಎಂಸಿ ಅಧ್ಯಕ್ಷರಾಗಿ, ಕಬ್ಬಿನಾಲೆ

ಬೈಂದೂರು : ಅಕ್ರಮ-ಸಕ್ರಮ ಅರ್ಜಿ ಅಧಿಕಾರಿಗಳ ಹಂತದಲ್ಲಿ ತಿರಸ್ಕಾರ ಮಾಡಕೂಡದು – ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರು : ಅಕ್ರಮ- ಸಕ್ರಮ ( ಬಗರ್ ಹುಕುಂ ) ಸಮಿತಿಯ ಅವಗಾಹನೆಗೆ ತರದೇ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಅರ್ಜಿ ತಿರಸ್ಕರಿಸುವುದು ಅಥವಾ ವಿಲೇವಾರಿ ಮಾಡುವಂತಿಲ್ಲ. ಸಮಿತಿಯ ಮುಂದೆ ತಂದು ಅಕ್ರಮ-ಸಕ್ರಮಕ್ಕೆ ಸಮಿತಿಯ ಸೂಚನೆಯಂತೆ ನಿರ್ಧರಿಸಬೇಕು.‌ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಲ್ಲಿ ಬಹುದೊಡ್ಡ ಹೋರಾಟ ರೂಪಿಸಬೇಕಾಗುತ್ತದೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಎಚ್ಚರಿಕೆ ನೀಡಿದ್ದಾರೆ.ಕಾಡಿನಂಚಿನ ಗ್ರಾಮಗಳಲ್ಲಿ ಕಳೆದ ಅನೇಕ ವರ್ಷದಿಂದ

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ಎಲೆವೆಂಶಿಯಾ 2ಕೆ24 ಫೆಸ್ಟ್

ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಬಿ.ಸಿ.ಎ ವಿಭಾಗದ ವತಿಯಿಂದ ಎಲೆವೆಂಶಿಯಾ 2ಕೆ24 ಎಂಬ ಫೆಸ್ಟ್ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಲಕ್ಷ್ಮೀ ಶೆಟ್ಟಿ ಎಚ್ .ಆರ್ ರೋಬೊಸಾಫ್ಟ್ ಉಡುಪಿ ಮತ್ತು ಸಮಾಜ ಸೇವಕ ಈಶ್ವರ್ ಮಲ್ಪೆ ಇವರು ಆಗಮಿಸಿದರು. ವಿದ್ಯಾರ್ಥಿಗಳಿಗೆ ಜೊತೆ ಮಾತನಾಡಿ ಬಿ.ಸಿ.ಎ ವಿಭಾಗದಲ್ಲಿರುವ ಅವಕಾಶಗಳು ಹಾಗೂ ಹೊಸ ರೀತಿಯ ಪ್ರೋಗ್ರಾಮ್ ಗಳನ್ನು ನಡೆಸುವ ಕುರಿತು ವೈಯಕ್ತಿಕ ಸಾಧನೆಯನ್ನು