ಸನಾತನ ಹಿಂದೂ ಧರ್ಮದಲ್ಲಿ ಭಜನೆಗೆ ತುಂಬಾ ಮಹತ್ವವಿದೆ. ನಮ್ಮ ಪೂರ್ವಜರು ಅನಾಧಿಕಾಲದಿಂದಲೂ ಭಜನೆ ಹಾಗೂ ದೇವರ ನಾಮ ಸಂಕೀರ್ತನೆಯನ್ನು ಮಾಡುತ್ತಾ ಬಂದಿದ್ದಾರೆ. ಭಜನೆಯಿಂದ ವಿಭಜನೆ ಇಲ್ಲ. ಭಜನೆ ಎಲ್ಲರನ್ನೂ ಒಂದು ಮಾಡುವ ಆಧ್ಯಾತ್ಮಿಕ ಪ್ರಕ್ರಿಯೆ ಎಂದು ನಿವೃತ್ತ ಅಧ್ಯಾಪಕ ಸಾಯಿನಾಥ ಶೆಟ್ಟಿ ಹೇಳಿದರು. ಅವರು ಪೊಸ್ರಾಲ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ
ರಕ್ತಕ್ಕೆ ಯಾವುದೇ ಜಾತಿ ಧರ್ಮ ಇಲ್ಲ. ರಕ್ತದಾನ ಮಾನವೀಯತೆಯ ಸಂಕೇತವಾಗಿದೆ. ದಾನದಲ್ಲಿ ಶ್ರೇಷ್ಠ ದಾನ ರಕ್ತದಾನ. ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು. ರಕ್ತದಾನದಿಂದ ಅನೇಕ ದೈಹಿಕ ಪ್ರಯೋಜನಗಳಿವೆ ಎಂದು ಪೊಂಪೈ ಕಾಲೇಜಿನ ಪ್ರಾಂಶುಪಾಲ ಡಾ. ಪುರುಷೋತ್ತಮ ಕೆ ಬಿ ಹೇಳಿದರು . ಅವರು ಲಯನ್ಸ್ ಕ್ಲಬ್ ಮುಂಡ್ಕೂರು ಕಡಂದಲೆ ಆಶ್ರಯದಲ್ಲಿ ಎ.ಜೆ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್ ಮಂಗಳೂರು ಇವರ ನೇತೃತ್ವದಲ್ಲಿ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 18ರಂದು ನಡು ರಸ್ತೆಯಲ್ಲಿಯೇ ನಡೆದ ಗ್ಯಾಂಗ್‌ವಾರ್ ಗೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಆರಕ್ಕೇರಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್ (26), ತೋನ್ಸೆ ಹೂಡೆಯ ರಾಕೀಬ್ (21) ಹಾಗೂ ಮೇ 25ರಂದು ಸಕ್ಲೈನ್ (26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೆ ಮೂವರನ್ನು ಉಡುಪಿ ನಗರ
ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ನೀಡುತ್ತಿದ್ದ ವಿನಾಯಿತಿಯನ್ನು ಏಕಾಏಕಿಯಾಗಿ ರದ್ದುಗೊಳಿಸುವ ಹುನ್ನಾರ ನಡೆಸುತ್ತಿರುವುದನ್ನು ಮನಗಂಡ. ಹೆಜಮಾಡಿ ಟೋಲ್ ಹೋರಾಟ ಸಮಿತಿ, ವಿನಾಯಿತಿ ಮುಂದುವರಿಸುವಂತ್ತೆ ಒತ್ತಾಯಿಸಿ ವಿವಿಧ ಸಂಘ-ಸಂಸ್ಥೆಗಳನ್ನು ಸೇರಿಸಿಕೊಂಡು ಟೋಲ್ ಅಧಿಕಾರಿಗೆ ಮನವಿ ಹಸ್ತಾಂತರಿಸಿದ್ದು, ನಮ್ಮ ಮನವಿಗೆ ಮಾನ್ಯತೆ ನೀಡದೆ ಇದ್ದಲ್ಲಿ ಉಗ್ರಹೋರಾಟ ನಡೆಸುವ ಎಚ್ಚರಿಕೆನ್ನು ಹೋರಾಟ ಸಮಿತಿ ನೀಡಿದೆ.ನೂರಕ್ಕೂ ಅಧಿಕ ಮಂದಿ ಸೇರಿಕೊಂಡು
ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟು ಬಳಿ ಸಿಡಿಲಾಘತಕ್ಕೆ ಕಾಲೇಜು ವಿದ್ಯಾರ್ಥಿ ಬಲಿಯಾದ ಘಟನೆ ಕಳೆದ ರಾತ್ರಿ ನಡೆದಿದೆ ಶಿರ್ವ ಎಂ ಎಸ್ ಆರ್ ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿ ರಕ್ಷಿತ್ ಪೂಜಾರಿ (20 )ಮೃತಪಟ್ಟವರು. ಕಳೆದ ರಾತ್ರಿ ಸ್ನಾನ ಮಾಡಲು ಬಚ್ಚಲು ಮನೆ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ ಎನ್ನಲಾಗಿದೆ. ನೆಲಕ್ಕೆ ಬಿದ್ದಿದ್ದ ಅವರನ್ನು ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ
ಪೋಕ್ಸೋ ಕಾಯಿದೆಯಡಿ ಮಾಧ್ಯಮದಲ್ಲಿ ವರದಿ ಮಾಡುವಾಗ ಸಾಕಷ್ಟು ಎಚ್ಚರ ವಹಿಸಬೇಕಾಗುತ್ತದೆ. ಪ್ರಕರಣದ ನೊಂದ ಬಾಲಕ ಅಥವಾ ಬಾಲಕಿಯರ ಹೆಸರು, ವಿಳಾಸ ಸಹಿತ ಗುರುತನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ. ಆ ರೀತಿಯ ತಪ್ಪು ಮಾಡಿದರೆ ಮಾಧ್ಯಮದವರ ಮೇಲೂ ಪ್ರಕರಣ ದಾಖಲಿಸಲು ಈ ಕಾಯ್ದೆ ಸೂಚಿಸುತ್ತದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ-1(ಪೊಕ್ಸೋ) ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಹೇಳಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಎವಿಯೇಷನ್ ವಿಭಾಗದ ವತಿಯಿಂದ ಅಗ್ನಿ ಸುರಕ್ಷತೆ ಮತ್ತು ಆರೋಗ್ಯ ಸುರಕ್ಷತೆ ವಿಪತ್ತು ನಿರ್ವಹಣೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರೊ ಸತ್ಯರಾಜ್ ಅಗ್ನಿ ಸುರಕ್ಷತೆ ಆರೋಗ್ಯ ಸುರಕ್ಷತೆ ವಿಪತ್ತು ನಿರ್ವಹಣೆ ವಿಭಾಗ ಮಂಗಳೂರು ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಅಗ್ನಿ ಸುರಕ್ಷತೆಯ ಬಗ್ಗೆ ಆರೋಗ್ಯ ಸುರಕ್ಷತೆಯ ಕುರಿತು ಮಾಹಿತಿ ಅಗ್ನಿ ಅವಘಡ ಸಂಭವಿಸಿದಾಗ ಹೇಗೆ
ಸುಮಾರು ನೂರು ವರ್ಷಗಳ ಕಾಲ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ಬರೆದಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕೊರತೆಯಿಂದ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಂಕಲಕರಿಯ ಪ್ರಾಥಮಿಕ ಶಾಲೆ ಮುಚ್ಚಿ ಹೋಗಿದೆ. ಆಂಗ್ಲ ಮಾಧ್ಯಮ ಶಾಲೆಗಳ ವೈಭವೀಕರಣ ಹಾಗೂ ಪೋಷಕರಿಂದ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಮೊಹಗಳ ಕಾರಣದಿಂದ ವಿದ್ಯಾರ್ಥಿಗಳ ಕೊರತೆಯಿಂದಾಗಿ ಅನುಪಾತದ ಪರಿಣಾಮವಾಗಿ ಶಿಕ್ಷಕರ ಕೊರತೆಯಿಂದ ಶತಮಾನ ಕಂಡ ಶಾಲೆ, ಮುಚ್ಚಿ ಹೋಗಿದ್ದು
ಉಡುಪಿ ಜಿಲ್ಲೆಯ ಕೆಲವು ಗ್ರಾಪಂ ಹಾಗೂ ಉಡುಪಿ ಮತ್ತು ಬೈಂದೂರು ಸ್ಥಳೀಯಾಡಳಿತ ವ್ಯಾಪ್ತಿಯ ಕೆಲವು ಕಡೆ ಈ ಬಾರಿ ನೀರಿನ ಸಮಸ್ಯೆ ತಲೆದೋರಿದ್ದು, ಅಲ್ಲಿಗೆ ನೀರು ಪೂರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲೆಯ ಕುಡಿಯುವ ನೀರಿನ
ಮೀನು ಪುರಾತನ ಕಾಲದಿಂದಲೂ ಮಾನವನ ಆಹಾರವಾಗಿದೆ. ತುಳು ಕರಾವಳಿಯ ಮುಖ್ಯವಾಗಿ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಲ್ಲಿ ಒಟ್ಟಾರೆ ಮೀನು ಸಿಗುವುದು ತೃಪ್ತಿಕರವಾಗಿಲ್ಲ ಎಂದು ವರದಿಯಾಗಿದೆ. ವಹಿವಾಟು ಕೂಡ ಬಿಸಿ ಕಳೆದುಕೊಂಡಿದ್ದು ಮೀನುಗಾರರು ಚಿಂತೆಗೆ ಬಿದ್ದಿದ್ದಾರೆ. ಮಲ್ಪೆ, ಮಂಗಳೂರುಗಳ ಇನ್ನೊಂದು ಸಮಸ್ಯೆಯೆಂದರೆ ಮೀನಿನ ಬೋಟುಗಳು ಇಲ್ಲಿಯವರದೇ ಆದರೂ ಅದರಲ್ಲಿ ಈಗೆಲ್ಲ ದುಡಿಯುವವರು ವಲಸೆ ಕಾರ್ಮಿಕರೇ ಆಗಿದ್ದಾರೆ. ಅವರನ್ನು ನಿಬಾಯಿಸುವ ಸಮಸ್ಯೆಯನ್ನು




























