ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ. ಎ ನಾರಾಯಣ ಗೌಡರ ಆದೇಶದಂತೆ ಕರವೇ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರ ನೇತೃತ್ವದಲ್ಲಿ ಉಡುಪಿ ತಾಲೂಕು ಅಧ್ಯಕ್ಷ ಅ,ರಾ ಪ್ರಭಾಕರ್ ಪೂಜಾರಿ ಮುಂದಾಳತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಕೊಲ್ಲೂರಿಗೆ ಭೇಟಿ ನೀಡಿ ಅಂಗಡಿ ಮುಂಗಟ್ಟುಗಳ ನಾಮ ಫಲಕದಲ್ಲಿ 70% ಕನ್ನಡ ಹಾಗೂ ಉಳಿದ ಭಾಷೆಗಳಿಗೆ ಶೇಕಡಾ 30/
ಕುಂದಾಪುರದ ಸೇನಾಪುರ ಸತತ 5 ಬಾರಿ ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಒತ್ತಾಯಿಸಿ ಸೇನಾಪುರ ಭಾಗದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ನಡೆಯಿತು. ಶಾಸಕ ಗುರುರಾಜ್ ಗಂಟಿಹೊಳೆ ಅವರು, ಕೊಂಕಣ ರೈಲ್ವೆ ಹೋರಾಟ ಸಮಿತಿ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಕರಾವಳಿ ಭಾಗದ ಜನರ ಜೀವನದ ಕೊಂಡಿ ಆಗಿರುವ ಕೊಂಕಣ ರೈಲು ಸೇವೆ ಎನ್ನುವುದು ಸ್ಥಳೀಯ ಜನರಿಗೆ ಮರೀಚಿಕೆಯಾಗಿದ್ದು ಸೇನಾಪುರ ರೈಲು ನಿಲ್ದಾಣದಲ್ಲಿ ಮುಂಬಯಿ ಮತ್ತು
ಅಡಿಕೆ ತೆಗೆಯುವ ವೇಳೆ ಕರೆಂಟ್ ಶಾಕ್ ಹೊಡೆದು ಯುವಕ ಸಾವನ್ನಪ್ಪಿದ ಘಟನೆ ಉಡುಪಿಯ ಕಾಪು ತಾಲೂಕಿನ ಕುರ್ಕಾಲು ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಪವನ್ ಶ್ರವಣ್ ಸೇವಂತ್ ಮೃತ ದುರ್ದೈವಿ. ಈತ ಕಬ್ಬಿಣದ ರಾಡ್ ಗೆ ಕತ್ತಿ ಕಟ್ಟಿ ಅಡಿಕೆ ತೆಗೆಯಲು ಮುಂದಾಗಿದ್ದ ವೇಳೆ ವಿದ್ಯುತ್ ತಂತಿಗೆ ರಾಡ್ ತಗಲಿ ಯುವಕ ಮೃತಪಟ್ಟಿದ್ದಾನೆ. ಶಿರ್ವಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕುಂದಾಪುರ ಸಮೀಪದ ಹೇರಿಕುದ್ರು ಎಂಬಲ್ಲಿ ಮಹಾಗಣಪತಿ ಮಾನಸ ಮಂದಿರದಲ್ಲಿ ರಾತ್ರಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಅನುಮತಿಸಿದ ಸಮಯ ಮೀರಿ ಮೈಕ್ ಬಳಕೆ ಮಾಡಲಾಗುತ್ತಿದೆ ಎಂಬ ದೂರಿನ ಮೇಲೆ ಆಗಮಿಸಿದ ಪೆÇಲೀಸರು ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ. ಈ ಘಟನೆ ವ್ಯಾಪಕ ಟೀಕೆಗೆ, ಯಕ್ಷಗಾನ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಕ್ಷಗಾನ ನಿಲ್ಲಿಸಬಾರದಿತ್ತು, ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆಗೆ ನಿಯಂತ್ರಣ
ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತಿದ್ದು ವಿದ್ಯಾವಂತ ನಿರುದ್ಯೋಗಿಗಳೆ ಇದರ ಟಾರ್ಗೆಟ್ ಆಗುತಿದ್ದಾರೆ ಎಂದು ಉಡುಪಿ ಜಿಲ್ಲಾ ಎ ಎಸ್ಪಿ ಸಿದ್ದಲಿಂಗಪ್ಪ ಹೇಳಿದರು. ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ರಜತ ಮಹೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ನೀರೆ ಬೈಲೂರು ಮತ್ತು ಧ್ವನಿ ಬೆಳಕು ಸಂಯೋಜಕರ ಸಂಘಟನೆ ಕಾರ್ಕಳ ಇವರ ಸಹಯೋಗದೊಂದಿಗೆ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ
ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನ ನಿಲುಗಡೆ ಪರಿಪಾಠ ಹೊಂದಿರುವ ಪಡುಬಿದ್ರಿ ಪೇಟೆ ಪ್ರದೇಶದಲ್ಲಿ ಟ್ಯಾಂಕರ್ ನಡಿಗೆ ಬಿದ್ದ ಯುವಕನೊರ್ವ ದಾರುಣವಾಗಿ ಮೃತಪಟ್ಟ ಘಟನೆ ಘಟಿಸಿದೆ. ಮೃತ ಯುವಕ ಪಡುಬಿದ್ರಿ ಕಂಚಿನಡ್ಕ ನಿವಾಸಿ ರಮೇಶ್ ಪೂಜಾರಿ ಎಂಬವರ ಪುತ್ರ ಪ್ರಜ್ವಲ್ ಪೂಜಾರಿ (19) ಈತ ಎಲ್ಲೂರಿನಲ್ಲಿ ಐಟಿಐ ಕೋರ್ಸ್ ನಡೆಸುತ್ತಿದ್ದು, ಇವರ ಸಂಬಂಧಿಗಳು ಮೃತಪಟ್ಟ ಹಿನ್ನಲೆಯಲ್ಲಿ ಈತನ ಮನೆಮಂದಿ ಕಿನ್ನಿಗೋಳಿಯ ಅಂಗರಗುಡ್ಡೆಗೆ ಹೋದ ಕಾರಣ ಈತನೂ ಅಲ್ಲಿಗೆ ಹೊರಟು
ಜನರಿಗೆ ಸಮಸ್ಯೆಯೊಡ್ಡುತ್ತಿರುವ ಸುಜ್ಲಾನ್ ಕಂಪನಿಯ ಸಮೀಪದ ಜೈಹಿಂದ್ ಟ್ಯೂಬ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿರುದ್ಧ ಸಿಡಿದ್ದೇದ್ದ ಜನರು ಕಂಪನಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ಇಪ್ಪತ್ತು ದಿನದೊಳಗೆ ಸಮಸ್ಯೆ ಇತ್ಯರ್ಥ ಮಾಡದೇ ಇದ್ದಲ್ಲಿ ಕಂಪನಿಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಪಡುಬಿದ್ರಿ-ಹೆಜಮಾಡಿ ಗಡಿಭಾಗದಲ್ಲಿ ಇರುವ ಈ ಕಂಪನಿಗೆ ಪರವಾನಿಗೆ ಯಾರು ನೀಡ ಬೇಕೆಂಬ ಸ್ಪಷ್ಟತೆ ಇಲ್ಲ, ಸ್ಥಳೀಯರು ಅವಳಿ ಗ್ರಾಮ
ಕುಂದಾಪುರ: ಕಂಡ್ಲೂರಿನ ಝಿಯಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‍ನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿ ಕಾರ್ಯವೈಖರಿಗಳನ್ನು ವೀಕ್ಷಿಸಿದರು. ಈ ಸಂದರ್ಭ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕರಾದ ಡಾ. ರೊಬರ್ಟ್ ರೆಬೆಲ್ಲೋ ವಿದ್ಯಾರ್ಥಿಗಳ ಜೊತೆ ಮಾತನಾಡಿ, ಸರಕಾರಿ ಸೇವೆ ಮಾಡುವುದು ಉತ್ತಮ ಅವಕಾಶ. ಅದರಲ್ಲೂ ಸರಕಾರಿ ವೈದ್ಯ ವೃತ್ತಿ ದೇವರು ಮೆಚ್ಚುವ ಕೆಲಸ.
ಇಂದು ಬಹಳ ಸಂತೋಷದ ದಿನ. ಈ ದಿನ ಬೇರೆ ವಿಚಾರವನ್ನು ನಾನು ಮಾತನಾಡಲ್ಲ. ಎಂಇಎಸ್ ಗಲಾಟೆ ಮತ್ತು ಮಹಾರಾಷ್ಟ್ರ ಮೀಸಲಾತಿ ಹೋರಾಟದ ಬಗ್ಗೆ ಸರ್ಕಾರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಅವರು ಉಡುಪಿಯಲ್ಲಿ ಮಾಧ್ಯಮದರವ ಪ್ರಶ್ನೆಗೆ ಉತ್ತರಿಸಿದರು. ಸರ್ಕಾರ ಅಗತ್ಯ ಕಾನೂನು ಕ್ರಮಗಳಿಗೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದೆ. ಗಡಿ ಭಾಗದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದರು.
ಕುಂಜಿಬೆಟ್ಟುವಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೆÇಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಉತ್ತರಹಳ್ಳಿಯ ಮಂಜುನಾಥ್ ಯಾನೆ ಕಲ್ಕೆರೆ ಮಂಜ (43) ಬಂಧಿತ ಆರೋಪಿ. ಈತ ಅ.8ರಂದು ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲ್ದಾಸ್ ನಾಯಕ್ ಅವರ ಮನೆಯ ಬಾಗಿಲು ಮುರಿದು, ಬೆಡ್ ರೂಮ್ ನ ಅಲ್ಮೇರಾದಲ್ಲಿದ್ದ ಸುಮಾರು 66,36,300 ರೂ. ಮೌಲ್ಯದ ಅಂದಾಜು 1882 ಗ್ರಾಂ ತೂಕದ ಚಿನ್ನಾಭರಣ ಹಾಗೂ




























