Home ಕರಾವಳಿ Archive by category ಉಡುಪಿ (Page 71)

ಕಾರ್ಕಳ : ಕೊಳಚೆ ನೀರಿನ ದುರ್ವಾಸನೆಯಿಂದ ಸ್ಥಳೀಯ ಜನತೆಗೆ ಸಂಕಷ್ಟ

ಕಾರ್ಕಳ ಪುರಸಭೆ ವ್ಯಾಪ್ತಿಯ ಗಾಂಧಿ ಮೈದಾನದ ಮುಖ್ಯ ರಸ್ತೆಯಲ್ಲಿ ಸುಮಾರು 20 ದಿನಗಳಿಂದ ಒಳ ಚರಂಡಿಯ ನೀರು ಹರಿಯುತ್ತದೆ. ಈ ನೀರು ದುರ್ವಾಸನಿಂದ ಕೂಡಿದ ಪರಿಣಾಮ ಸ್ಥಳೀಯ ವಸತಿ ಸಂಕೀರ್ಣದಲ್ಲಿ ವಾಸಿಸುವ ಜನತೆ ನರಕ ಯಾತನೆ ಅನುಭವಿಸುತ್ತಿದ್ದಾರೆ. ಅದಲ್ಲದೆ ಪಕ್ಕದಲ್ಲಿ ಕ್ರೈಸ್ ಕಿಂಗ್ ಚರ್ಚ್ ಹಾಗೂ ಕಾನ್ವೆಂಟ್ ಮತ್ತು ಸಾವಿರಾರು ಮಕ್ಕಳು ಓದುತ್ತಿರುವ ಶಾಲೆಯೂ

ಕಟಪಾಡಿ: ಕಾರು ಡಿಕ್ಕಿ ದಂಪತಿಗೆ ಗಾಯ

ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಗಾಯಗೊಂಡ ಘಟನೆ ಕಟಪಾಡಿ ಬಳಿ ನಡೆದಿದೆ. ತೆಂಕ ಎರ್ಮಾಳು ನಿವಾಸಿಗಳಾದ ದೀರಜ್ ಹಾಗೂ ಅವರ ಪತ್ನಿ ಪವಿತ್ರ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಪರಿಣಾಮ ಕಟಪಾಡಿ ಪೇಟೆ ಬಳಿ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕವನ್ನು ಏರಿ ನಂತರ ದ್ವಿಚಕ್ರ ವಾಹನಕ್ಕೆ

ಆ.12 ಮತ್ತು 13ರಂದು ಬ್ರಹ್ಮಾವರದಲ್ಲಿ ಸಸ್ಯ ಮೇಳ ಮತ್ತು ಆಹಾರೋತ್ಸವ

ಬ್ರಹ್ಮಾವರ ರೋಟರಿ ರೋಯಲ್, ಕೃಷಿ ಕೇಂದ್ರ ಬ್ರಹ್ಮಾವರ, ತೋಟಗಾರಿಕಾ ಇಲಾಖೆ, ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ನಿರ್ಮಲ ಪ್ರೌಢಶಾಲಾ ಆವರಣದಲ್ಲಿ ಅಗಸ್ಟ್ 12 ಮತ್ತು 13ರಂದು ಸಸ್ಯ ಮೇಳ ಮತ್ತು ಆಹಾರೋತ್ಸವ ಜರುಗಲಿದೆ ಎಂದು ರೋಟರಿ ರೋಯಲ್ ಅಧ್ಯಕ್ಷ ಅಭಿರಾಮ್ ನಾಯಕ್ ಕಾರ್ಯಕ್ರಮದ ಆವರಣದಲ್ಲಿ ಹೇಳಿದರು. ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು ರೋಟರಿ , ಕೃಷಿ ವಿಜ್ಞಾನಿಗಳು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸಸ್ಯ ಮತ್ತು

ಶ್ರೀ ನಿಧಿ ಮಹಿಳಾ ಮಂಡಳಿಯಿಂದ ಆಟಿ ಡೊಂಜಿ ದಿನ

ನಮ್ಮ ಹಿರಿಯರಿಗೆ ಹೊಟ್ಟೆಗೆ ತಿನ್ನಲೂ ಆಹಾರದ ಕೊರತೆ ಇದ್ದರೂ ದಾರಾಳ ಮನಸ್ಸಿಗೆ ನೆಮ್ಮದಿ ಇತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲಾವೂ ಇದ್ದರೂ ಮನಸ್ಸಿಗೆ ನೆಮ್ಮದಿಯೇ ಇಲ್ಲ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ. ಅವರು ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಳಿ ಆಯೋಜಿಸಿದ ಆಟಿ ಡೊಂಜಿ ದಿನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಹಿರಿಯರಲ್ಲಿ ಆಸ್ತಿ ಅಂತಸ್ತಿನ ಕೊರತೆ ಇದ್ದರೂ ಮನಸ್ಸಿಗೆ ಮಾನಸಿಕ ನೆಮ್ಮದಿ

ಸ್ಕೂಲ್ ಬಸ್ ಮತ್ತು ಆಟೋ ರಿಕ್ಷಾ ಮಧ್ಯೆ ಅಪಘಾತ
ಐದು ಮಂದಿ ವಿದ್ಯಾರ್ಥಿಗಳಿಗೆ ಗಾಯ

ಸ್ಕೂಲ್ ಬಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ಇನ್ನಂಜೆ ಕಲ್ಲುಗುಡ್ಡೆ ಗರೋಡಿ ಬಳಿ ನಡೆದಿದೆ. ಅಪಘಾತದಲ್ಲಿ ಅಟೋ ರಿಕ್ಷಾದಲ್ಲಿದ್ದ ಐವರು ವಿದ್ಯಾರ್ಥಿಗಳು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಾಯಗೊಂಡವರು ಇನ್ನಂಜೆ ಎಸ್ ವಿ ಎಚ್ ಶಾಲಾ ವಿದ್ಯಾರ್ಥಿಗಳು ಎನ್ನಲಾಗಿದೆ. ಕಲ್ಲುಗುಡ್ಡೆಯ ಇಕ್ಕಾಟದ ರಸ್ತೆಯಲ್ಲಿ ಪಡುಬೆಳ್ಳೆ ನಾರಾಯಣ ಗುರು ವಿದ್ಯಾಸಂಸ್ಥೆಯ ಬಸ್ ಹಾಗೂ ಇನ್ನಂಜೆ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುವ ಅಟೋ

ಹೆಜಮಾಡಿ ಟೋಲ್ ಬಳಿ ಕುಡುಕ ಲಾರಿ ಚಾಲಕನ ಅವಾಂತರ

ವಿಪರೀತ ಮದ್ಯಪಾನ ಮಾಡಿ ಕಂಟೇನರ್ ಚಲಾಯಿಸಿಕೊಂಡು ಬಂದು ಹೆಜಮಾಡಿ ಟೋಲ್ ಬಳಿಯ ಬೃಹತ್ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದ ಘಟನೆ ನಡೆದಿದೆ.ಯು.ಪಿ. ಮೂಲದ ವ್ಯಕ್ತಿ ಮಹಾರಾಷ್ಟ್ರ ನೋಂದಾಯಿತ ಕಂಟೇನರ್ ಚಲಾಯಿಸಿಕೊಂಡು ಬಂದಿದ್ದು, ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಬಳಿಕ ಸ್ಥಗಿತಗೊಂಡ ಕಂಟೇನರ್ ನಲ್ಲಿದ್ದ ಚಾಲಕನನ್ನು ಸ್ಥಳೀಯರು ವಿಚಾರಿಸಲು ಮುಂದಾದಾಗ ಮದ್ಯ ಸೇವಿಸಿದ್ದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸ್ರು ಚಾಲಕನನ್ನು ವಾಹನದಿಂದ

ಉಡುಪಿ ಪ್ರಕರಣದ ತನಿಖೆ ಆದ ನಂತರ ಕೋರ್ಟಿಗೆ ವರದಿ ಕೊಡುತ್ತೇವೆ || ಮನೀಶ್ ಕರ್ಬೀಕರ್

ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ಉಡುಪಿಗೆ ಆಗಮಿಸಿ ಉಡುಪಿ ಬನ್ನಂಜೆ ಸರಕಾರಿ ಅತಿಥಿ ಗೃಹದಲ್ಲಿ ಉನ್ನತ ಮಟ್ಟದ ಪೆÇಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ, ಉಡುಪಿ ಎಸ್ ಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಸಿಐಡಿ ಅಧಿಕಾರಿಗಳು, ಜಿಲ್ಲಾ ಪೆÇಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.ಎಡಿಜಿಪಿ ಅವರು ಅಧಿಕಾರಿಗಳಿಂದ ತನಿಖೆಯ ವಿವರಗಳನ್ನು

ಉಡುಪಿ ಜಿಲ್ಲಾ ಬಿಜೆಪಿ ಎಸ್ಸಿ, ಎಸ್ಟಿ ಮೋರ್ಚಾದಿಂದ ದಲಿತ ವಿರೋಧ ನೀತಿ ಖಂಡಿಸಿ ಪ್ರತಿಭಟನೆ

ಉಡುಪಿ ಜಿಲ್ಲೆಯ ಬಿಜೆಪಿ ಎಸ್‍ಸಿ ಮತ್ತು ಎಸ್.ಟಿ. ಮೋರ್ಚಾದ ವತಿಯಿಂದ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂಪಾಯಿ ಹಣವನ್ನು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಉಡುಪಿಯ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪ್ರತಿಭಟನೆಯಲ್ಲಿ ಬಿಜೆಪಿಯ ಪ್ರಮುಖರು

ಜನಸ್ನೇಹಿ ತಹಶೀಲ್ದಾರರಿಗೆ ಕೊರಗ ಸಂಘಟನೆಯಿಂದ ಬೀಳ್ಕೊಡುಗೆ

ಕಳೆದ 2 ವರ್ಷದಿಂದ ಬ್ರಹ್ಮಾವರ ತಹಶೀಲ್ದಾರರಾಗಿ ಇದೀಗ ಪದೊನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡ ರಾಜಶೇಖರ ಮೂರ್ತಿಯವರನ್ನು ಕೊರಗ ಅಭಿವೃದ್ಧಿ ಸಂಘ ಮಟಪಾಡಿ ಬಲ್ಜಿ ಮತ್ತು ಹುಭಾಶಿಕ ಕೊರಗರ ಯುವ ಕಲಾ ವೇದಿಕೆ ಬಾರಕೂರು ವತಿಯಿಂದ ಕೊರಗ ಭವನದಲ್ಲಿ ಸನ್ಮಾನಿಸಿ ಬಿಳ್ಕೋಡುಗೆ ಮಾಡಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ ಶೇಖರ ಮೂರ್ತಿಯವರು ಕರಾವಳಿಯ ಮೂಲ ನಿವಾಸಿಗಳಾದ ಕೊರಗರು ದೇಹ ಶಕ್ತಿಯ ಜೊತೆಗೆ ಬುದ್ಧಿ ಶಕ್ತಿಗೆ ನೆರವಾಗುವ ಶಿಕ್ಷಣಕ್ಕೆ

ನೀರಿಗೆ ಬಿದ್ದ ಐಫೋನ್ ಹುಡುಕಿಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ!

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‍ನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ಅಂತಹ ಅಪಾಯಕಾರಿ ಬೇಸಿನ್‍ಗೆ ಧುಮುಕಿ 1.5 ಲಕ್ಷ ರೂ. ಮೌಲ್ಯದ ಐ-ಫೆÇೀನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ. ಬೆಳಗ್ಗೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ 1.5 ಲಕ್ಷ ರೂ. ಮೌಲ್ಯದ ಐ-ಫೆÇೀನ್ ಮೊಬೈಲ್ ಜೆಟ್ಟಿ ಬಳಿ ಬೇಸಿನ್ನ ನೀರಿಗೆ