Home ಕರಾವಳಿ Archive by category ಉಡುಪಿ (Page 77)

ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ನೀರು ಪಾಲು

ಯುವಕನೊಬ್ಬ ಜಲಪಾತದ ನೀರಿಗೆ ಕಾಲುಜಾರಿ ಬಿದ್ದು ನೀರುಪಾಲಾದ ಘಟನೆ ,ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ. ಈ ಯುವಕ ಬೀಳುತ್ತಿರುವ ದೃಶ್ಯ ಮತ್ತೋರ್ವ ಯುವಕನ ಮೊಬೈಲ್ ನಲ್ಲಿ ಸೆರೆಯಾಗಿದೆ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆಂದು ತೆರಳಿದ್ದಾಗ ಈ ದುರ್ಘಟನೆ

ಉಡುಪಿ : ರಾಜ್ಯ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ

ಉಡುಪಿ: ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆ, ಸಂವಿಧಾನ ವಿರೋಧಿ ನೀತಿ, ಹದಗೆಟ್ಟ ಕಾನೂನು ಸುವ್ಯವಸ್ಥೆ, ರೈತರ ಆತ್ಮಹತ್ಯೆ, ಬೆಲೆ ಏರಿಕೆ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತು. ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕದ ಬಳಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾದರು. ಈ ವೇಳೆ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನಕಾರರು ಧಿಕ್ಕಾರ ಕೂಗಿದರು. ಬೆಂಗಳೂರಿನಲ್ಲಿ ಬಂಧಿತ ಶಂಕಿತ ಭಯೋತ್ಪಾದಕರ ಪ್ರಕರಣವನ್ನು

ಬೈಂದೂರು KSRTC ಬಸ್ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಬೈಂದೂರು ಭಾಗಕ್ಕೆ ಸರ್ಕಾರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಮನೆಗೆ ಸೇರಲಾಗುತ್ತಿಲ್ಲ. ಬಸ್ ಇಳಿದು ಕಾಡು ಪ್ರದೇಶದಲ್ಲಿ 2ರಿಂದ 3 ಕಿ.ಮೀ. ನಡೆದುಕೊಂಡು ಕಾಲುಸಂಕ ಹೊಳೆಗಳನ್ನೆಲ್ಲ ದಾಟಿ ಹೋಗುವಾಗ ರಾತ್ರಿ 8 ಗಂಟೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ವಿದ್ಯಾರ್ಥಿನಿ ಪ್ರತಿನಿಧಿಯಾಗಿ ಕವಿತಾ ಆಚಾರ್ಯ ಮಾತನಾಡಿ

ಬೈಂದೂರ್ :ಬಾರ್ ವೊಂದರ ಮುಂಭಾಗದಲ್ಲಿ ತಂಡದಿಂದ ಹಲ್ಲೆ

ಕುಂದಾಪುರ; ಬೈಂದೂರಿನ ಬಾರ್‍ವೂಂದರ ಮುಂಭಾಗದಲ್ಲಿ ಕಂಠಪೂರ್ತಿ ಕುಡಿದು ಪುಡಿ ರೌಡಿಗಳ ತಂಡ ಅಟ್ಟಹಾಸ ಮೆರೆದಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ. ವಾಹನ ಅಡ್ಡ ಬಂದ ಕಾರಣ ಆರಂಭವಾದ ವಾಗ್ವಾದ, ಪರಸ್ಪರ ಹಲ್ಲೆ ನಡೆಸಿದ್ದಾರೆ. ಟಾಟಾ ಏಸ್ ವಾಹನದಲ್ಲಿದ್ದ ರಮೇಶ್ ದೇವಾಡಿಗ ಹಾಗೂ ರವಿ ಪೂಜಾರಿ ಮೇಲೆ ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ ಪಾರ್ಕಿಂಗ್ ನಿಲ್ಲಿಸಿದ ವಾಹನದ ಗಾಜನ್ನು ಹೆಲ್ಮೆಟ್ ಮತ್ತು ಸೋಡಾ ಬಾಟಲಿಗಳಿಂದ ಜಖಂಗೊಳಿಸಿದ್ದಾರೆ. ಪ್ರಕರಣದ ದೃಶ್ಯಾವಳಿ

ಕರುನಾಡ ರತ್ನ ಪ್ರಶಸ್ತಿಗೆ v4 ಸುದ್ದಿ ವಾಹಿನಿಯ ವರದಿಗಾರ ಕೆ.ಎಂ.ಖಲೀಲ್ ಆಯ್ಕೆ

ಕರುನಾಡ ರತ್ನ ಪ್ರಶಸ್ತಿಗೆ ಕೆ.ಎಂ.ಖಲೀಲ್ ಆಯ್ಕೆ ಕಾರ್ಕಳ: ಸುಮಾರು 40 ವರ್ಷಗಳಿಂದ ಛಾಯಾಗ್ರಾಹಕ ಹಾಗೂ ವಿಡಿಯೋ ಗ್ರಾಫರ್ ಆಗಿ ದುಡಿಯುತ್ತಿರುವ ಅದರ ಜೊತೆಗೆ 17 ವರ್ಷಗಳಿಂದ ಮಂಗಳೂರಿನ ಪ್ರತಿಷ್ಠಿತ v4 ಸುದ್ದಿವಾಹಿನಿಯಕಾರ್ಕಳ ತಾಲೂಕಿನ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಎಂ.ಖಲೀಲ್ ಅವರ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಈ ವರ್ಷದ ಕರುನಾಡ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಘಟಕ ಡಾ.ಬಿ.ಎನ್.ಹೊರಪೇಟಿ ತಿಳಿಸಿದ್ದಾರೆ. ಬೆಂಗಳೂರಿನ ಸುಚಿತ್ರ

3ನೇ ಬಾರಿಗೆ ತನ್ನ ದಾಖಲೆಯನ್ನು ತಾನೇ ಮುರಿದ ಸತೀಶ್ ಖಾರ್ವಿ

ಪವರ್ ಲಿಫ್ಟಿಂಗ್‍ನಲ್ಲಿ 3ನೇ ಬಾರಿಗೆ ತನ್ನ ದಾಖಲೆಯನ್ನು ತಾನೇ ಮುರಿದ ಹೆಗ್ಗಳಿಕೆ ಪಾತ್ರವಾಗಿರುವ ಅಂತರಾಷ್ಟ್ರೀಯ ಕ್ರೀಡಾಪಟು ಕುಂದಾಪುರ ಸತೀಶ್ ಖಾರ್ವಿ ನೂತನ ದಾಖಲೆ ಮಾಡಿರುವುದನ್ನು ಗುರುತಿಸಿ ಅವರಿಗೆ ಅದ್ದೂರಿ ಸ್ವಾಗತದ ಮೂಲಕ ಬೆಂಗಳೂರಿನಲ್ಲಿ ಕರ್ನಾಟಕ ಗೃಹ ಸಚಿವ ಮಾನ್ಯ ಡಾ.ಜಿ.ಪರಮೇಶ್ವರ್ ಅವರು ಗೌರವದಿಂದ ಅಭಿನಂದಿಸಿದರು. ಸತೀಶ್ ಖಾರ್ವಿ ಅವರು ಮಂಗೋಲಿಯನಲ್ಲಿ ನಡೆಯುವ ಅಂತರಾಷ್ಟ್ರೀಯ ಓಲ್ಡ್ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದು,

ಗೃಹಲಕ್ಷ್ಮಿ ಯೋಜನೆಗೆ ಕಾರ್ಕಳದಲ್ಲಿ ಚಾಲನೆ

ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯದಲ್ಲಿ ಚಾಲನೆ ದೊರೆತಿರುವ ಹಿನ್ನೆಲೆಯಲ್ಲಿ ಕಾರ್ಕಳದ ಪುರಸಭೆಯ ಮುಖ್ಯ ಅಧಿಕಾರಿಯಾದ ರೂಪಶೆಟ್ಟಿಯವರು ಕಾರ್ಕಳದಲ್ಲಿ ಈ ಯೋಜನೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕಾರ್ಕಳ ಪುರಸಭಾ ವ್ಯಾಪ್ತಿಯ ಮೂರೂ ಕಡೆ ಅರ್ಜಿಯ ನೊಂದಣಿ ಮಾಡಲು ಅವಕಾಶ ಇದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು. ನಂತರ ಮಾತನಾಡಿದ ಪುರಸಭೆ ಸದಸ್ಯರಾದ ಶುಭದ ರಾವ್ ಅವರು ನಾವು ಯೋಜನೆಯ

ಸರ್ವರ್ ಗೆ ಕಾದು ಕುಳಿತ ಗೃಹಲಕ್ಷ್ಮೀಯರು

ರಾಜ್ಯ ಸರಕಾರದ ಮಹಾತ್ವಾಕಾಂಶಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಶಕ್ತಿತುಂಬುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು ರೂ 2000 ಸಾವಿರ ರೂ ನೀಡುವ ಯೋಜನೆಗೆ ರಾಜ್ಯದಾದ್ಯಂತ ಚಾಲನೆ ದೊರೆತಿದೆ . ಪ್ರತೀ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ ಮತ್ತು ಗ್ರಾಮ 1 ನಲ್ಲಿ ಒಂದು ದಿನಕ್ಕೆ 60ಮಂದಿ ಅರ್ಹ ಮಹಿಳೆಯರಿಗೆ ಸಮಯ ಮತ್ತು ದಿನಾಂಕ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ನಿಗದಿ ಪಡಿಸಿದ ಸ್ಥಳ ಮತ್ತು ಸಮಯದಲ್ಲಿ ನೊಂದಾಯಿಸಲು ಅವಕಾಶ ನೀಡಲಾಗಿದೆ . ಇಂದು

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮೊಹಮ್ಮದ್ ಶರೀಫ್, ಕಾರ್ಯದರ್ಶಿಯಾಗಿ ಬೈಲೂರು ಹರೀಶ್ ಅಚಾರ್ಯ

ಕಾರ್ಕಳ: ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ತಾಲೂಕು ಘಟಕ ಇದರ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಷರೀಫ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ  ಬೈಲೂರು ಹರೀಶ್ ಅಚಾರ್ಯ ಆಯ್ಕೆಯಾಗಿದ್ದಾಾರೆ. , ಕೋಶಾಧಿಕಾರಿ ಸ್ಥಾನಕ್ಕೆ ಕೆ.ಎಂ ಖಲೀಲ್ ಆಯ್ಕೆ ನಡೆಯಿತು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ  ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ  ಪದಾಧಿಕಾರಿಗಳ ಪುನರ್ ರಚನೆ ಪ್ರಕ್ರೀಯೆ ತಾಲೂಕು ಪ್ರವಾಸಿ

ಬೆಳ್ಮಣ್: ರಸ್ತೆಗೆ ಬಂದ ಕಾಡುಕೋಣ ವಾಹನ ಸವಾರರು ಆತಂಕ

ಬೆಳ್ಮಣ್: ಪಿಲಾರುಖಾನ ಕಾಡು ಪ್ರದೇಶದಲ್ಲಿ ಕಾಡುಕೋಣವೊಂದು ರಸ್ತೆಗೆ ಬಂದು ವಾಹನ ಸವಾರರು ಆತಂಕಗೊಳಿಸಿದ ಘಟನೆ ನಡೆದಿದೆ. ಪಿಲಾರುಖಾನ ಅರಣ್ಯ ಪ್ರದೇಶದ ಸುತ್ತ ತಂತಿ ಬೇಲಿಯನ್ನು ಅಳವಡಿಸಿದ್ದು ಇದರಿಂದ ಒಂದು ಬದಿಯ ತಂತಿ ಬೇಲಿಯನ್ನು ದಾಟಿಕೊಂಡ ಬಂದ ದೊಡ್ಡ ಕಾಡುಕೋಣವೊಂದು ಮತ್ತೊಂದು ಬದಿಯ ಕಾಡಿಗೆ ಹೋಗಲು ಪರದಾಡಿತು.