ಉಳ್ಳಾಲ: ಅಪ್ರಾಪ್ತ ವಿದ್ಯಾರ್ಥಿನಿ ವಿರುದ್ಧ ಕಿರುಕುಳ ನೀಡಿದ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.ಅಂಬ್ಲಮೊಗರು ನಿವಾಸಿ ಇಕ್ಬಾಲ್ ಎಂಬಾತ ನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಸ್ಸಿಗಾಗಿ ಕಾಯುವ ಸಂದರ್ಭ ಮಾತನಾಡಿಸಲು ಯತ್ನಿಸಿದ್ದ ರಿಕ್ಷಾ ಚಾಲಕ ವಿದ್ಯಾರ್ಥಿನಿ
ಉಳ್ಳಾಲ: ಓವರ್ ಲೋಡ್ ಇದ್ದ ಲಾರಿ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ನಾಟೆಕಲ್ – ಮಂಜನಾಡಿ ಮಾರ್ಗ ಮಧ್ಯೆ ಸಂಭವಿಸಿದ್ದು, ಘಟನೆಯಲ್ಲಿ ಚಾಲಕ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇರಳಕಟ್ಟೆ ಕಡೆಯಿಂದ ತೌಡುಗೋಳಿ ಕಡೆಗೆ ಪ್ಲೈವುಡ್ ಇದ್ದ ಲಾರಿ ತೆರಳುತ್ತಿದ್ದು, ಈ ನಡುವೆ ತಿರುವಿನಲ್ಲಿ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಎದುರಿನಿಂದ ಬಂದಿದೆ. ಲಾರಿಯಲ್ಲಿ ಓವರ್ ಲೋಡ್ ಇದ್ದ
ಉಳ್ಳಾಲ: ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಡಿಪು ಜಂಕ್ಷನ್ನಿನಲ್ಲಿ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಮಂಗಳೂರಿನಿಂದ ಬಿ.ಸಿ ರೋಡಿನತ್ತ ತೆರಳುತ್ತಿದ್ದ ಎನ್.ಎಸ್ ಟ್ರಾವೆಲ್ಸ್ ಬಸ್ಸು ಮುಡಿಪು ಜಂಕ್ಷನ್ನಿನಲ್ಲಿ ತಿರುಗುವ ಸಂದರ್ಭ , ಭಾರತಿ ಶಾಲೆ ಕಡೆಯಿಂದ ಬರುತ್ತಿದ್ದ ಝೆನ್ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಬಸ್ಸು ಮುಂಭಾಗಕ್ಕೆ ಕಾರು ಒಳನುಗ್ಗಿದ್ದು, ಕಾರು ಚಾಲಕ ಪವಾಡಸದೃಶ
ಉಳ್ಳಾಲ : ಸ್ಟೇಟ್ ಬ್ಯಾಂಕ್ ತಲಪಾಡಿ ನಡುವೆ ಚಲಿಸುವ ಸಿಟಿ ಬಸ್ ಚಾಲಕ ಚಾಲನೆ ವೇಳೆ ಮೊಬೈಲ್ ಉಪಯೋಗಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿರುವುದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ಚಾಲಕನ ವಿರುದ್ಧ ಕ್ರಮಕ್ಕಾಗಿ ಆಗ್ರಹ ವ್ಯಕ್ತವಾಗಿದೆ. ಖಾಸಗಿ ಬಸ್ ಚಾಲಕ ನಿರ್ಲಕ್ಷ್ಯರೀತಿಯಲ್ಲಿ ಬಸ್ ಚಲಾಯಿಸಿದ್ದಾನೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ
ಉಳ್ಳಾಲ: ಕೊಣಾಜೆ ಗ್ರಾಮ ಪಂಚಾಯತ್‍ನ ಮಾಜಿ ಅಧ್ಯಕ್ಷ ಬೆಳ್ಮ ಕಟ್ಟಪುಣಿ ನಿವಾಸಿ ದೇವಪ್ಪ ಗಟ್ಟಿ (90) ಅಲ್ಪಕಾಲದ ಅಸೌಖ್ಯದಿಂದ ಜು.22ರಂದು ಶನಿವಾರ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ. ಸೋಮೇಶ್ವರ ಸೋಮನಾಥ ದೇವಸ್ಥಾನದ ಬೃಹ್ಮಕಲಶೋತ್ಸವ, ಸಮಿತಿ ಉಪಾಧ್ಯಕ್ಷರಾಗಿ, ಗಟ್ಟಿ ಸಮಾಜ ಶ್ರೀ ಸೋಮನಾಥ ಸೇವಾ ಸಮಿತಿ ಅಧ್ಯಕ್ಷರಾಗಿ, ಮುಲಾರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ,
ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಓಳಪೇಟೆ ಬಳಿ ಖಾಸಗಿ ಜಾಗದಲ್ಲಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಠಾಣಾ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಲ್ಯಾನ್ಸಿ ವೇಗಸ್, ನವಾಝ್ , ಸತೀಶ್ ಗಟ್ಟಿ, ನಾಸೀರ್ ಮತ್ತು ಮಧು ಯಾನೆ ಮನು ಎಂದು ಗುರುತಿಸಲಾಗಿದೆ. ಬಂಧಿತರಿಂದ 7040ರೂ .ನಗದು, ಐದು ಮೊಬೈಲ್ ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲದಲ್ಲಿ ಮಟ್ಕಾ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಆಯುಕ್ತ
ಉಳ್ಳಾಲ: ಸಿಪಿಎಂ ನೇತಾರ, ಮುನ್ನೂರು ಗ್ರಾ.ಪಂ. ಸದಸ್ಯ ಕುತ್ತಾರು ಮದಕ ನಿವಾಸಿ ಭುಜಂಗ ರೈ (74) ಇವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೂಲತ: ಕಾಸರಗೋಡು ನಿವಾಸಿಯಾಗಿರುವ ಇವರು ಕುತ್ತಾರು ಮದಕಕ್ಕೆ 30 ವರ್ಷಗಳ ಹಿಂದೆ ಬಂದಿದ್ದರು. ರಿಕ್ಷಾ ಚಾಲಕರಾಗಿ ವೃತ್ತಿ ನಿರ್ವಹಿಸುತ್ತಿದ್ದವರು. ಸಿಪಿಎಂ ಪಕ್ಷದ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಯಕ್ಷಗಾನ ಕಲಾವಿದರೂ ಆಗಿದ್ದ ಇವರು ಆಂಗ್ಲ ಭಾಷೆಯಲ್ಲಿ
ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ನವ ವಧು ವರರ ರಂಗ ರುಕ್ಮಿಣಿ ಸಮಾಗಮ ಕಾರ್ಯಕ್ರಮ ನಡೆಯಿತು. ಉದ್ಯಮಿ ಕಂಪಾರ್ಟ್ ಇನ್ ಮಾಲಕ ಚಂದ್ರಹಾಸ ಶೆಟ್ಟಿ ಕಾರ್ಯಕ್ರಮಕ್ಕೆ ದೀಪಬೆಳಗಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಜೀವನವನ್ನು ರೂಪಿಸಲು ನಮಗೆ ಸಂಸ್ಕಾರ ಬಹಳ ಮುಖ್ಯ, ಇದನ್ನು ಅರಿತಾಗ ಮಾತ್ರ ನಮ್ಮ ಜೀವನ ಸುಂದರವಾಗುತ್ತದೆ, ಈ ನಿಟ್ಟಿನಲ್ಲಿ ರಂಗ ರುಕ್ಮಿಣಿ ಕಾರ್ಯಕ್ರಮ ಶ್ಲಾಘನೀಯ. ಹೊಸ ಬಾಳಿನಲ್ಲಿ ಸದಾ ಕಾಲ ನಗುವಿನೊಂದಿಗೆ ಬದುಕಿ ಎಂದು ಹಾರೈಸಿದರು.
ಉಳ್ಳಾಲದ ಕೈರಂಗಳ ಪುಣ್ಯಕೋಟಿನಗರದಲ್ಲಿ ನೂತನವಾಗಿ ಆರಂಭವಾದ ಬಾರ್ ಎಂಡ್ ರೆಸ್ಟೋರೆಂಟ್ ತೆರವು ಆಗುವವರೆಗೂ ಪ್ರಜಾಪ್ರಭುತ್ವ ರೀತಿಯಲ್ಲಿ ಅಮರಣಾಂತ ಸತ್ಯಾಗ್ರಹದಂತಹ ಹೋರಾಟ ನಡೆಸಲು ಶಾಲಾಡಳಿತ ಮಂಡಳಿ ಸಿದ್ಧವಿದೆ ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜಾರಾಮ ಭಟ್ ಹೇಳಿದ್ದಾರೆ. ಬಾಳೆಪುಣಿ ಗ್ರಾ.ಪಂ ವ್ಯಾಪ್ತಿಯ ಪುಣ್ಯಕೋಟಿನಗರ ಸಮೀಪದಲ್ಲಿ ನೂತನವಾಗಿ ಆರಂಭವಾದ ಬಾರ್ ಎಂಡ್ ರೆಸ್ಟೋರೆಂಟ್ ವಿರೋಧಿಸಿ ಪುಣ್ಯಕೋಟಿ ನಗರ ಶಾರದಾ ವಿದ್ಯಾಗಣಪತಿ ವಿದ್ಯಾಕೇಂದ್ರದ
ಉಳ್ಳಾಲ: ಭಾರೀ ಸಿಡಿಲು ಮಳೆಗೆ ಅಂಗಡಿ ಸಂಪೂರ್ಣವಾಗಿ ಸುಟ್ಟುಹೋಗಿ ಲಕ್ಷಾಂತರ ನಷ್ಟ ಸಂಭವಿಸಿರುವ ಘಟನರ ರಾಣಿಪುರದಲ್ಲಿ ಸಂಭವಿಸಿದೆ.ಕಟ್ಟಡದಲ್ಲೇ ಇದ್ದ ಮನೆಗೂ ಬೆಂಕಿ ವ್ಯಾಪಿಸಿದ್ದು ಸ್ಥಳಕ್ಕೆ ತಕ್ಷಣ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುನ್ನೂರು ಗ್ರಾಮದ ರಾಣಿಪುರ ಚರ್ಚ್ ಎದುರಿನ ಪೀಟರ್ ಆಫ್ರೋಸ್ ಎಂಬವರ ದಿನಸಿ ಅಂಗಡಿಗೆ ಸಿಡಿಲು ಬಡಿದು ಭಸ್ಮವಾಗಿದೆ. ಇಂದು ಮುಂಜಾನೆ ನಸುಕಿನ ವೇಳೆ ಸಿಡಿಲು ಬಡಿದು ಘಟನೆ ಸಂಭವಿಸಿದೆ. ಘಟನೆ ವೇಳೆ ಪೀಟರ್




























