Home ಕರಾವಳಿ Archive by category ಉಳ್ಳಾಳ (Page 2)

ಬ್ರಹ್ಮಾವರ : ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ ಲಕ್ಷಾಂತರ ಮೌಲ್ಯದ ಮಿಲಿಟರಿ ಮದ್ಯ ವಶಕ್ಕೆ – ಓರ್ವ ಅರೆಸ್ಟ್

ಬ್ರಹ್ಮಾವರ : ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಬ್ರಹ್ಮಾವರದಲ್ಲಿ ನಡೆಸಿದ ದಾಳಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮಿಲಿಟರಿ ಮದ್ಯವನ್ನು ವಶಕ್ಕೆ ಪಡೆದು ಓರ್ವನ್ನು ಅರೆಸ್ಟ್ ಮಾಡಿದ್ದಾರೆ. ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ

ಉಳ್ಳಾಲ: ಕಿಂಗ್ಸ್ ಕಲ್ಲಾಪು ವತಿಯಿಂದ ಭಂದುತ್ವ ಸೌಹಾರ್ದ ಇಫ್ತಾರ್ ಕೂಟ

ಉಳ್ಳಾಲ: ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ ಕಿಂಗ್ಸ್ ಕಲ್ಲಾಪು ಅಯೋಜಿಸಿದ ಬಂಧುತ್ವ ಸೌಹಾರ್ದ ಇಫ್ತಾರ್ ಕೂಟ ತೊಕ್ಕೋಟ್ಟು ಯುನಿಟಿ‌ ಹಾಲ್‌ ಮೈದಾನದಲ್ಲಿ ನಡೆಯಿತು. ಸಭಾಧ್ಯಕ್ಷ ಯು.ಟಿ ಖಾದರ್ ಫರೀದ್ ಮುಖ್ಯ ಅತಿಥಿಯಾಗಿ ‌ಭಾಗವಹಿಸಿ‌ ಮಾತನಾಡಿ, ಪವಿತ್ರವಾದ ತಿಂಗಳ ಪವಿತ್ರವಾದ ದಿನದಲ್ಲಿ ಶ್ರದ್ಧಾಪೂರ್ವಕ ಉಪವಾಸ ವೃತ ‌ಮಾಡಿಕೊಂಡು ಇಫ್ತಾರ್ ಸಂದರ್ಭದಲ್ಲಿ ಎಲ್ಲಾ ಜಾತಿ ಎಲ್ಲಾ ಧರ್ಮದ ಸಮಾಜಿಕ ಧಾರ್ಮಿಕ ಮುಖಂಡರನ್ನು ಸೇರಿಸಿಕೊಂಡು ಭಂದುತ್ವ

ಉಳ್ಳಾಲ: ನಾಟೆಕಲ್ ಬೈಕ್ ಅಪಘಾತ – ಬೈಕ್‌ನಲ್ಲಿದ್ದ ಇಬ್ಬರು ಮೃತ್ಯು

ಉಳ್ಳಾಲ: ಮಂಜನಾಡಿ ನಾಟೆಕಲ್ ಸಮೀಪ ನಿನ್ನೆ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಿಂಬದಿ ಸವಾರಳಾಗಿದ್ದ ಹಳೆಯಂಗಡಿ ತೋಕೂರು ಬಳಿಯ ನಿವಾಸಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಚಲಾಯಿಸುತ್ತಿದ್ದ ಯುವಕ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಬೋಂದೇಲ್ ನಿವಾಸಿ ದೀಕ್ಷಿತ್ ಎಂಬವರ ಪತ್ನಿ ಹಳೆಯಂಗಡಿ ತೋಕೂರು ಬಸ್ ನಿಲ್ದಾಣ ಬಳಿಯ ನಿವಾಸಿ ಶ್ರೀ ನಿಧಿ (29) ನಿನ್ನೆ ಸಾವನ್ನಪ್ಪಿದ್ದು

ಉಳ್ಳಾಲ : ಲಾರಿ ನಂಬರ್ ಪ್ಲೇಟ್ ಗ್ರೀಸ್ ಹಚ್ಚಿ ಮರಳು ಸಾಗಾಟ

ಮಂಗಳೂರು : ಲಾರಿಗಳ ನಂಬರ್ ಪ್ಲೇಟ್‌ಗೆ ಗ್ರೀಸ್ ಹಚ್ಚಿ ಹಾಗೂ ಸ್ಟಿಕ್ಕರ್ ಬಳಸಿ ಮರೆಮಾಚಿಸಿ ರಾತ್ರಿಯಿಡೀ ವ್ಯಾಪಕವಾಗಿ ಮರಳು ಸಾಗಾಟವನ್ನು ಕೊಣಾಜೆ, ಮಂಗಳೂರು ಗ್ರಾಮಾಂತರ, ಉಳ್ಳಾಲ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಪೊಲೀಸರ ಸಮ್ಮುಖದಲ್ಲೇ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ನಿನ್ನೆ ತಡರಾತ್ರಿ ಅಡ್ಯಾರ್ ಕಣ್ಣೂರು ಸಮೀಪ ನಂಬರ್ ಪ್ಲೇಟ್ ಮಾಸಿದ ಮರಳು ಸಾಗಾಟದ ಲಾರಿ ಡಿವೈಡರಿಗೆ ಢಿಕ್ಕಿ ಹೊಡೆದ ಪರಿಣಾಮ ಸಾರ್ವಜನಿಕರು ಲಾರಿಗಳನ್ನು ತಡೆಹಿಡಿದು ನಡೆಸಿದ

ಮಂಗಳೂರು : ಕರಾವಳಿಯಲ್ಲಿ ಮೂರು ದಿನಗಳ ಕಾಲ ಮಳೆ

ಕರ್ನಾಟಕದ ಕರಾವಳಿ ಮತ್ತು ಮಲೆನಾಡು, ತೆಂಕಣ ಒಳನಾಡಿನಲ್ಲಿ ಮಾರ್ಚ್ 21ರಿಂದ ಮೂರು ದಿನಗಳ ಕಾಲ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕರಾವಳಿಯಲ್ಲಿ ಮೋಡ ಮುಚ್ಚಿದ ವಾತಾವರಣ ಮುಂದುವರಿಯಲಿದೆ. ಗಾಳಿ ಕೂಡ ಬಲವಾಗಿ ಬೀಸಲಿದೆ ಎನ್ನಲಾಗಿದೆ. ಕರ್ನಾಟಕದ ಬಡಗಣ ಭಾಗದಲ್ಲಿ ಒಣ ಹವೆ ಮುಂದುವರಿಯಲಿದೆ. ಕೊಪ್ಪಳದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅದು ಆ ಸುತ್ತ ಕೆಲ ದಿನಗಳ ಕಾಲ ‌ಮುಂದುವರಿಯುತ್ತದೆ ಎಂದೂ ತಿಳಿಸಲಾಗಿದೆ.

ಉಳ್ಳಾಲ: ಮಾದಕ ವಸ್ತು ಕೋಕೆನ್ ಪತ್ತೆ ಇಬ್ಬರು ಆರೋಪಿಗಳ ಸೆರೆ

ಉಳ್ಳಾಲ: ಗೋವಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ನಿಷೇದಿತ ಮಾದಕ ವಸ್ತುವಾದ ಕೋಕೇನ್ ನ್ನು ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ತಂಡ 35 ಗ್ರಾಂ ಕೋಕೆನ್ ನ್ನು ವಶಪಡಿಸಿಕೊಂಡಿದ್ದಾರೆ‌. ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹೆಚ್ ಎಂ ನೇತೃತ್ವದ ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿಯಲ್ಲಿ ದ್ವಿಚಕ್ರ ವಾಹನದಲ್ಲಿ

ಹರೇಕಳ ಕೊಲೆಯತ್ನ ಪ್ರಕರಣ – 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಉಳ್ಳಾಲ: ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹರೇಕಳ ಕಡವಿನಬಳಿಯ ಅಂಗಡಿ ಮಾಲೀಕನ ದರೋಡೆ ಮತ್ತು ಕೊಲೆಯತ್ನ ಪ್ರಕರಣಕ್ಕೆ ಸಂ ಬAಧಿಸಿದ ಉಳ್ಳಾಲ ಉಳಿಯ ಮರಿಯಕ್ಲಬ್ ನಿವಾಸಿ ರಾಜೇಶ್ ಸುವರ್ಣ (24) ಎಂಬಾತನನ್ನು ಎಸಿಪಿ ಧನ್ಯಾ ನಾಯಕ್ ನೇತೃತ್ವದ ಮಾದಕದ್ರವ್ಯ ವಿರೋಧಿ ಪೊಲೀಸ್ ತಂಡ ಬಂಧಿಸಿದೆ.ಹರೇಕಳ ಕಡವಿನ ಬಳಿ ಬಳಿಯಿರುವ ಎನ್ .ಎಫ್ ಜನರಲ್ ಸ್ಟೋರ್ ಮಾಲೀಕ ಅಬ್ದುಲ್ ರಹಿಮಾನ್ ಎಂಬವರ ಮೇಲೆ 2017ರ ಮೇ.24 ರಂದು ರಿಕ್ಷಾದಲ್ಲಿ

ಉಳ್ಳಾಲ: ಬೈಕ್ ಢಿಕ್ಕಿ- ಪಾದಚಾರಿ ಬೇಕರಿ ಮಾಲೀಕ ಸಾವು

ಉಳ್ಳಾಲ: ಪಾದಚಾರಿಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ. ತಲಪಾಡಿ ಹಳೆಯ ಬಸ್ಸು ತಂಗುದಾಣ ಬಳಿಯ ನಿವಾಸಿ ರಾಜೇಶ್ ಶೆಟ್ಟಿ(49)ಮೃತರು. ರಾಜೇಶ್ ಅವರಿಗೆ ತಲಪಾಡಿ ಹಳೆ ಬಸ್ಸು ತಂಗುದಾಣದ ಬಳಿ ಬೇಕರಿ ಇದ್ದು, ಎದುರಿನ ಹೆದ್ದಾರಿ ಬದಿಯಲ್ಲೇ ಮನೆಯಿದೆ. ಭಾನುವಾರದಂದು ತಲಪಾಡಿ ದೇವಿಪುರದ ರಥೋತ್ಸವ ಇದ್ದ ಹಿನ್ನಲೆ ರಾಜೇಶ್ ಅವರು ಮನೆಗೆ ಬಂದಿದ್ದ ನೆಂಟರನ್ನು ಉಪಚರಿಸಿ

ಉಳ್ಳಾಲ: ಮೂಲಭೂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ : ಯು.ಟಿ ಖಾದರ್

ಉಳ್ಳಾಲ: ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿ ಗೆ ಸಂಬಂಧಿಸಿದಂತೆ ಯಾವುದೆಲ್ಲ ಭರವಸೆ ನೀಡಿದ್ದೇನೆ ಯೊ ಅದನ್ನು ಮುಂದಿನ ವರ್ಷದಲ್ಲಿ ಕಾರ್ಯಗತ ಗೊಳಿಸಲಾಗುವುದು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.ಅವರು ಕೋಟೆಕಾರ್ ಪ.ಪಂ‌ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆಗಳ ಅಭಿವೃದ್ಧಿ ಆಗಿದೆ.ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಗೆ 70 ಕೋಟಿ ರೂ. ಮಂಜೂರು ಮಾಡಲಾಗಿದೆ.ಈ ಪೈಕಿ 25 ಕೋಟಿ ರೂ

ನರಿಂಗಾನದ ಕಲ್ಲರಕೋಡಿಯಲ್ಲಿ ಅಂಗನವಾಡಿ ಕೇಂದ್ರದ ಡಿಜಿಟಲ್ ವ್ಯವಸ್ಥೆ ಉದ್ಘಾಟನೆ

ಸ್ವಂತ ಕಟ್ಟಡಗಳು ಇರುವ ಅಂಗನವಾಡಿಗಳಿಗೆ ಡಿಜಿಟಲ್ ವ್ಯವಸ್ಥೆ ಆಗಿದೆ. ಉಳಿದ ಕೇಂದ್ರಗಳಿಗೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಬೇಕಿದೆ. ನರಿಂಗಾನದಲ್ಲಿ ಗ್ರಾಮ ಪಂಚಾಯಿತಿ ಮುತುವರ್ಜಿ ವಹಿಸಿರುವುದು ಉತ್ತಮ ಬೆಳವಣಿಗೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.ನರಿಂಗಾನದ ಕಲ್ಲರಕೋಡಿಯಲ್ಲಿ ಅಂಗನವಾಡಿ ಕೇಂದ್ರದ ಡಿಜಿಟಲ್ ವ್ಯವಸ್ಥೆ ಶನಿವಾರ ಉದ್ಘಾಟಿಸಿ ಮಾತನಾಡಿದರು.ಸ್ಥಳದಾನಿಗಳಾದ ಮಹಮ್ಮದ್ ಪಾರೆ, ರಝಾಕ್ ಪಾರೆ, ಮಜೀದ್ ಪಾರೆ, ಜನಶಿಕ್ಷಣ