Home ಕರಾವಳಿ Archive by category ಉಳ್ಳಾಳ (Page 20)

ಕುತ್ತಾರು: ಅಕ್ರಮವಾಗಿ ಜಾನುವಾರು ಸಾಗಾಟ – ಬಜರಂಗದಳದಿಂದ ರಕ್ಷಣೆ

ಉಳ್ಳಾಲ: ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ವಾಹನ ತಡೆದ ಬಜರಂಗದಳ ಕಾರ್ಯಕರ್ತರು, ಅಮಾನವೀಯವಾಗಿ ಸಾಗಾಟ ನಡೆಸುತ್ತಿದ್ದ ಐದು ಜಾನುವಾರುಗಳನ್ನು ರಕ್ಷಿಸಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಕುತ್ತಾರು ಸಮೀಪದ ಭಂಡಾರಬೈಲು ಎಂಬಲ್ಲಿ ಸಂಭವಿಸಿದೆ. ಕೇರಳ ನೋಂದಣಿಯ ಏಸ್ ವಾಹನವು ಮುಡಿಪು, ಕೊಣಾಜೆ, ಮದಕ ಮಾರ್ಗವಾಗಿ 5 ಜಾನುವಾರುಗಳನ್ನ ಅಕ್ರಮವಾಗಿ

ಉಳ್ಳಾಲ : ಹಿಟ್ ಆಂಡ್ ರನ್ ಪ್ರಕರಣ – ಬೈಕ್ ಸವಾರನಿಗೆ ಗಂಭೀರ ಗಾಯ

ಉಳ್ಳಾಲ: ಬೈಕ್‍ಗೆ ಕಾರು ಢಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ರಾ.ಹೆ 66ರ ಸಂಕೊಳಿಗೆ ಸಮೀಪ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಘಟನೆಯಿಂದ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಘಟನೆಗೆ ಕಾರಣವಾದ ಕೇರಳ ನೋಂದಾಯಿತ ಇನೋವಾ ಕಾರಿನ ದಾಖಲೆಯನ್ನು ಸಿಸಿಟಿವಿ ಮೂಲಕ ಪತ್ತೆಹಚ್ಚಲಾಗಿದೆ.ಕೋಟೆಕಾರು ವೈದ್ಯನಾಥ ದೇವಸ್ಥಾನ ರಸ್ತೆ ನಿವಾಸಿ ತೇಜಸ್ ರಾಮ ಕುಲಾಲ್ (28) ಗಾಯಾಳು. ಕೋಟೆಕಾರಿನ ಮನೆ ಕಡೆಗೆ ಬರುವ ಸಂದರ್ಭ ಕೇರಳ ಕಡೆಗೆ ತೆರಳುತ್ತಿದ್ದ ಅಪರಿಚಿತ ವಾಹನ

ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಖಾದರ್

ಉಳ್ಳಾಲ: ಅಕಾಲಿಕವಾಗಿ ಸಾವನ್ನಪ್ಪಿದ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ(55) ಅವರ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಶವಕ್ಕೆ ಹೆಗಲುಕೊಟ್ಟು ಮಾನವೀಯತೆ ಮೆರೆದರು. ಮುಡಿಪು ಮಿತ್ತಕೋಡಿ ನಿವಾಸಿ ಶರತ್ ಕಾಜವ ಇಂದು ನಸುಕಿನ ಜಾವ ಹೃದಯಾಘಾತಕ್ಕೊಳಗಾಗಿ ಅಕಾಲಿಕವಾಗಿ ಸಾವನ್ನಪ್ಪಿದ್ದರು. ವಿಚಾರ ಬೆಳಕಿಗೆ ಬರುತ್ತಿದ್ದಂತೆ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಪೂರ್ವನಿಗದಿ ಪಡಿಸಿದ

ಟೋಯಿಂಗ್ ವಾಹನ ಅಪಘಾತ : ಪಾದಚಾರಿ ಮೃತ್ಯು

ಉಳ್ಳಾಲ: ಟೊಯಿಂಗ್ ವಾಹನ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ವೃದ್ದರೋರ್ವರು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಕಲ್ಲಾಪು ರಾ.ಹೆ.66 ರಲ್ಲಿ ಶುಕ್ರವಾರ ಸಂಭವಿಸಿದೆ.ಉಳ್ಳಾಲ ಕಡೆಗೆ ತೆರಳುತ್ತಿದ್ದ ಟೋಯಿಂಗ್ ವಾಹನ ಅಪಘಾತ ಸಂಭವಿಸಿದೆ. ಮೃತ ವ್ಯಕ್ತಿ ಅಂದಾಜು 70 ರ ಹರೆಯದವರಾಗಿದ್ದು, ಯಾವುದೇ ಗುರುತಿನ ಚೀಟಿಗಳು ಲಭ್ಯವಾಗಿಲ್ಲ. ವಾರೀಸುದಾರರಿದ್ದಲ್ಲಿ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಸೋಮೇಶ್ವರದಲ್ಲಿ ನೈತಿಕ ಪೊಲೀಸ್ ಗಿರಿ : ನಾಲ್ವರ ವಶ

ಸೋಮೇಶ್ವರ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದವರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೋಮೇಶ್ವರ ಸಮುದ್ರ ತೀರಕ್ಕೆ ನಿನ್ನೆ ಸಂಜೆ ಆಗಮಿಸಿದ್ದರು. ಅನ್ಯಧರ್ಮಕ್ಕೆ ಸೇರಿದ ಯುವಕರು ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದಾರೆಂಬ ಕಾರಣಕ್ಕೆ ತಂಡವೊಂದು ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಕೇರಳ ಚೆರ್ಕಳದ ಜಾಫರ್ ಶರೀಫ್

ಉಳ್ಳಾಲ : ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ವಿವಾಹಿತ ಬಳ್ಳಾರಿಯಲ್ಲಿ ಪತ್ತೆ

ಉಳ್ಳಾಲ : ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಹರೇಕಳ ಪಂಜಿಲಗುಳಿ ನಿವಾಸಿ ಜಯರಾಜ್ (35) ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾರೆಂದು ತಿಳಿದುಬಂದಿದ್ದು, ಸಂಬಂಧಿಕರು ಬಳ್ಳಾರಿಗೆ ತೆರಳಿದ್ದಾರೆ. ಮೇ 30 ರಂದು ಗರ್ಭಿಣಿ ಪತ್ನಿ ಯನ್ನು ತವರು ಮನೆಯಲ್ಲಿ ಬಿಟ್ಟು ಬಲ್ಮಠದಲ್ಲಿನ ಸ್ಕ್ಯಾನಿಂಗ್ ಸೆಂಟರ್ ನ ಕೆಲಸಕ್ಕೆ ತೆರಳಿದ್ದ ಜಯರಾಜ್, ಅಲ್ಲಿ ಹಾಜರು ದಾಖಲುಪಡಿಸಿದ್ದಾರೆ. ನಂತರ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು, ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದರು. ಈ ಕುರಿತು

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ| ಎಂ. ಎಸ್.ಮೂಡಿತ್ತಾಯ ಅಧಿಕಾರ ಸ್ವೀಕಾರ

ಉಳ್ಳಾಲ: ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಎಂ.ಎಸ್.ಮೂಡಿತ್ತಾಯ ಇಂದು ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಪತಿಗಳಾಗಿ, ಕುಲಸಚಿವರಾಗಿ ಮತ್ತು ಗ್ಲೋಬಲ್ ಇನಿಶಿಯೇಟಿವ್ ನ ನಿರ್ದೆಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅದಲ್ಲದೆ ಅವರು ನಿಟ್ಟೆಯಲ್ಲಿರುವ ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೆಶಕರಾಗಿ, ಡಾ| ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ

ಜೂ.1 – ಇಂದು ವಿವಾಹವಾಗಬೇಕಿದ್ದ ವರ ನಾಪತ್ತೆ

ಉಳ್ಳಾಲ: ಇಂದು (ಜೂ.1) ರಂದು ವಿವಾಹವಾಗಬೇಕಾಗಿರುವ ವರ ನಾಪತ್ತೆಯಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತೌಡುಗೋಳಿ ವರ್ಕಾಡಿ ಎಂಬಲ್ಲಿ ಮನೆಯಲ್ಲಿ ಸಂಜೆ ನಡೆಯಬೇಕಾಗಿದ್ದ ಮೆಹಂದಿ ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪೋಷಕರು,ಕುಟುಂಬಸ್ಥರು ಸಂಭ್ರಮದಲ್ಲಿ ತೊಡಗಿದ್ದರೆ ಇತ್ತ ಹಣ್ಣು ಖರೀದಿಗೆಂದು ತೆರಳಿದ್ದ ವರನೇ ನಾಪತ್ತೆಯಾಗಿದ್ದು ವಧೂ ವರರ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ತೌಡುಗೋಳಿ- ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ‌ ಐತಪ್ಪ ಶೆಟ್ಟಿ ಅವರ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತರಾಮ್ ಭೇಟಿ

ಉಳ್ಳಾಲ: ಸ್ಯಾಂಡಲ್‍ವುಡ್‍ನ ಡಿಂಪಲ್ ಬೆಡಗಿ ರಚಿತಾರಾಮ್ ಅವರಿಂದು ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿತಳಕ್ಕೆ ಭೇಟಿ ನೀಡಿ ತಮ್ಮ ನಟನೆಯ ಹೊಸ ಚಿತ್ರಗಳಾದ ಮ್ಯಾಟ್ನಿ,ಬ್ಯಾಡ್ ಮ್ಯಾನರ್ಸ್ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು. ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದ್ರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು. ಕೊರಗಜ್ಜನ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು, ತುಂಬಾ

ಉಳ್ಳಾಲ: ವಿವಾಹಿತ ನಿಗೂಢ ನಾಪತ್ತೆ

ಉಳ್ಳಾಲ: ವಿವಾಹಿತರೋರ್ವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕೊಣಾಜೆ ಹರೇಕಳ ಪಂಜಿಲಗುಳಿ ನಿವಾಸಿ ಜಯರಾಜ್ (35) ನಾಪತ್ತೆಯಾದವರು. ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದು, ಅವರ ಆರೋಗ್ಯ ತಪಾಸಣೆ ನಡೆಸಿದ ನಂತರ ಜೆಪ್ಪು ಕಂರ್ಭಿಸ್ಥಾನ ಸಮೀಪ ತಾಯಿ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳುವುದಾಗಿ ತಿಳಿಸಿ ಹೋದವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ