Home ಕರಾವಳಿ Archive by category ಉಳ್ಳಾಳ (Page 42)

ತೊಕ್ಕೊಟ್ಟುವಿನಲ್ಲಿ ಪೊಲೀಸರಿಂದ ಬಿಗಿ ತಪಾಸಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಈಗಾಗಲೇ ಜಿಲ್ಲಾಧಿಕಾರಿಗಳು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ತೊಕ್ಕೊಟ್ಟುವಿನಲ್ಲಿ ಉಳ್ಳಾಲ ಪೊಲೀಸರಿಂದ ಬಿಗು ತಪಾಸಣೆ ಕೈಗೊಂಡಿದ್ದಾರೆ. ಉಳ್ಳಾಲ ಪಿಎಸ್‌ಐ ರೇವಣ್ಣ ಸಿದ್ದಯ್ಯ ಅವರ ನೇತೃತ್ವದಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಹಲವು ವಾಹನಗಳನ್ನು ಪೊಲೀಸರು ಸೀಝ್ ಮಾಡಿದ್ದಾರೆ.  

ತಂಡದಿಂದ ಯುವಕನಿಗೆ ಹಲ್ಲೆ

ಉಳ್ಳಾಲ: ತಂಡವೊಂದು ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ನಡೆದಿದೆ. ತೊಕ್ಕೊಟ್ಟು ಬಳಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಧರ್ಮನಗರ ನಿವಾಸಿ ದಿವಾಕರ ಆಚಾರ್ಯ ಹಲ್ಲೆಗೊಳಗಾದವರು. ರಸ್ತೆ ಬದಿಯಲ್ಲಿ ನಿಂತಿದ್ದ ದಿವಾಕರ್ ಅವರ ಮೇಲೆ ಬೈಕಿನಲ್ಲಿ ಬಂದ ತಂಡ ಯದ್ವಾತದ್ವ ಹಲ್ಲೆ ನಡೆಸಿ ಪರಾರಿಯಾಗಿದೆ. ಗಾಯಾಳು ದಿವಾಕರ್ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ