Home ಕರಾವಳಿ Archive by category ಮಂಗಳೂರು (Page 11)

ಡಿ. ಸಿ ಮನ್ನಾ ಭೂಮಿ ಸಮಸ್ಯೆ ಜಿಲ್ಲಾಧಿಕಾರಿಗಳ ಜೊತೆ ಎಂ.ಎಲ್.ಸಿ. ಐವನ್ ಡಿಸೋಜಾ ಸಮಾಲೋಚನೆ: ಸರಕಾರ ಮಟ್ಟದಲ್ಲಿ ಪರಿಹರಿಸಲು ಸೂಕ್ತ ನಿರ್ಧಾರ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪರಿಶಿಷ್ಟರ ಮೀಸಲು ಭೂಮಿಯಾಗಿರುವ ಡಿ. ಸಿ ಮನ್ನಾ ಭೂಮಿಯ ಮಂಜೂರಾತಿಗೆ ಸಂಬಂಧಿಸಿದ ನ್ಯೂನತೆಗಳನ್ನು ಸರಿಪಡಿಸುವ ಬಗ್ಗೆ ದಿನಾಂಕ: 10-6-2025 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾರವರು ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ನಾಯಕರು ಮತ್ತು ದಲಿತ

ಯಕ್ಷ ಧ್ರುವ ಪಟ್ಲ ಫೌಂಡೇಷನ್ ದಶಮಾನೋತ್ಸವ ಸಂಭ್ರಮ – ಒಂದೇ ದಿನದಲ್ಲಿ 2158 ಕಲಾವಿದರಿಗೆ ಅಂಚೆ ಅಪಘಾತ ವಿಮಾ ಸುರಕ್ಷೆ : ಪಟ್ಲ ಫೌಂಡೇಷನ್ ವತಿಯಿಂದ ಪ್ರಾಯೋಜಕತ್ವ

ಕಳೆದ ಜೂನ್ 1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಯಕ್ಷ ಧ್ರುವ ಪಟ್ಲ ಫೌಂಡೇಷನ್ ನ ದಶಮಾನೋತ್ಸವದ ಅಂಗವಾಗಿ 2158 ಯಕ್ಷಗಾನ, ರಂಗಭೂಮಿ, ದೈವಾರಾಧನೆ ಮತ್ತು ಕಂಬಳ ಕಲಾವಿದರಿಗೆ ಅಂಚೆ ಅಪಘಾತ ವಿಮೆಯನ್ನು ಮಾಡಿಸುವ ಮೂಲಕ ಅವರ ಕುಟುಂಬಕ್ಕೆ ತಲಾ 10 ಲಕ್ಷದ ಸುರಕ್ಷತೆಯನ್ನು ಒದಗಿಸಲಾಯಿತು. ವಿಮಾ ಪ್ರೀಮಿಯಂ ನ್ನು ಪಟ್ಲ ಫೌಂಡೇಷನ್ ಪ್ರಾಯೋಜಿಸಿದ್ದು ಮಂಗಳೂರು ಅಂಚೆ ವಿಭಾಗದ ಸುಮಾರು 150 ಸಿಬ್ಬಂದಿಗಳು ಈ ಕಾರ್ಯಕ್ರಮವನ್ನು ಅತ್ಯಂತ ಶಿಸ್ತು ಮತ್ತು ಸಂಯಮದಿಂದ

ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ: ಸ್ಥಳೀಯ ಮೀನುಗಾರರಿಗೆ ವಿಶೇಷ ಒತ್ತು: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಕರಾವಳಿ ತೀರದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಲ್ಲಿ ಸ್ಥಳೀಯ ಮೀನುಗಾರರಿಗೆ ಆದ್ಯತೆ ನೀಡುವ ಬಗ್ಗೆ ವಿಶೇಷ ಕ್ರಮ ವಹಿಸಲಾಗುವುದು ಎಂದು  ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು  ಹೇಳಿದರು. ಬೆಂಗಳೂರಿನ ವಿಕಾಸಸೌಧದ ಸಚಿವರ  ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗದ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇನ್ನಷ್ಟು ವಿಸ್ತೃತ

ಬಿಜೆಪಿ ನಾಯಕರಿಂದ ಅರಾಜಕತೆ‌ ಸೃಷ್ಟಿಗೆ ಹುನ್ನಾರ: ಮಂಜುನಾಥ್ ಭಂಡಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಸಲು ಬಿಜೆಪಿ ರಾಜ್ಯ ನಾಯಕರು ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಅಧಿಕಾರಿಗಳ ಸಭೆಯಲ್ಲಿ ಬಿಜೆಪಿಯವರು ನಡೆದುಕೊಂಡ ರೀತಿಯೇ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧಪಕ್ಷದ ನಾಯಕ ಅಶೋಕ್ ನೇತೃತ್ವದ ನಿಯೋಗ ದ.ಕ. ಜಿಲ್ಲೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಜತೆ ಸಭೆ

ಮಂಗಳೂರು: ಮೂಡಾದಲ್ಲಿ ಬ್ರೋಕರ್ ಹಾವಳಿ ನಿಯಂತ್ರಿಸಲು ಮುಂದಾದ ಕಮಿಷನರ್ ಅವರನ್ನೇ ವರ್ಗಾವಣೆ ಮಾಡಿಸಲು ಕಸರತ್ತು

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಬ್ರೋಕರ್ ಹಾವಳಿಯನ್ನು ನಿಯಂತ್ರಿಸಲು ಮುಂದಾದ ಕಮಿಷನರ್ ನೂರ್ ಝಹರಾ ಖಾನಂ ಅವರನ್ನು ವರ್ಗಾವಣೆ ಮಾಡಿಸಲು ಬೋಕರುಗಳೇ ತೆರೆಮರೆಯ ಕಸರತ್ತು ನಡೆಸಿದ್ದಾರೆ. ಆ ಜಾಗಕ್ಕೆ ಈ ಹಿಂದೆ ಮುಡಾದಲ್ಲಿ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಅಂಚಿನಲ್ಲಿರುವ ಮಹಮ್ಮದ್ ನಜೀರ್ ಅವರನ್ನು ಕರೆತರಲು ಪ್ರಬಲ ಲಾಬಿ ನಡೆದಿದೆ. 2024ರ ಮಾರ್ಚ್ 22ರಂದು ಆಗಿನ ಮುಡಾ ಕಮಿಷನರ್ ಆಗಿದ್ದ ಮನ್ಸೂರ್ ಆಲಿ, ಕನ್ವರ್ಷನ್ ವಿಚಾರದಲ್ಲಿ

ತಮಂದತೆಯನ್ನು ಹೊಡೆದೋಡಿಸುವ ದೀಪದಂತೆ ವಿದ್ಯೆ: ಕಮಲಾದೇವಿ ಪ್ರಸಾದ ಅಸ್ರಣ್ಣ

ವಿದ್ಯೆ ಎನ್ನುವುದು ಅಭಿನಾಷಿಯಾದದ್ದು ವಿದ್ಯೆ ನಮ್ಮ ಬದುಕಿಗೆ ಕವಿದಿರುವ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡುತ್ತದೆ ಇಂತಹ ಉತ್ತಮ ಕೆಲಸವನ್ನು ಆಕಾಂಕ್ಷಿಗಳ ತಂಡ ಮಾಡುತ್ತಿದೆ.ಅಂಚೆ ಇಲಾಖೆಯ ಪದೋನ್ನತಿ ಪರೀಕ್ಷೆಗಳಿಗಾಗಿ ಆಯೋಜಿಸಿದ ಉಚಿತ ತರಬೇತಿ ಶಿಬಿರ ಶ್ಲಾಘನೀಯ. ವಿದ್ಯೆ ಕಲಿತಷ್ಟು ಮುಗಿಯದೇ ಇರುವಂಥದ್ದು. ಇಲಾಖೆಯೊಳಗೆ ಪದೋನ್ನತಿಯನ್ನು ಹೊಂದಿ ಉತ್ತಮ ಪದವಿಯನ್ನು ಏರುವುದಕ್ಕೆ ಈ ಒಂದು ಉಚಿತ ತರಬೇತಿ ಶಿಬಿರ ಕಾರಣವಾಗುತ್ತದೆ.ತಾಯಿ ದುರ್ಗಾದೇವಿ

ಕೋಸ್ಟಲ್‌ವುಡ್‌ನಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿರುವ ಲಂಚುಲಾಲ್ ಕೆ.ಎಸ್.

ತುಳು ಸಿನಿಮಾ ರಂಗದಲ್ಲಿ ಹೊಸತನ ತರಲು ಅಸ್ತ್ರಗ್ರೂಪ್‌ನ ಲಂಚುಲಾಲ್ ಕೆ.ಎಸ್. ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ.ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ಮೀರಾ ಸೇರಿದಂತೆ ಹಲವಾರು ಸಿನಿಮಾಗಳಿಗೆ ಬಂಡವಾಳ ಹೂಡಿ ವಿಶೇಷ ಮತ್ತು ವಿಭಿನ್ನ ಶೈಲಿಯ ಸಿನಿಮಾಗಳನ್ನು ತೆರೆಗೆ ತರಲು ಅಸ್ತ್ರಗ್ರೂಪ್‌ನ ಸಿಇಒ ಲಂಚುಲಾಲ್ ಅವರು ಸಜ್ಜಾಗುತ್ತಿದ್ದಾರೆ.. ಮೀರಾ ಸಿನಿಮಾ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿದೆ.. ಇದೀಗ ಕೋಸ್ಟಲ್‌ವುಡ್‌ನಲ್ಲಿ ಸಿನಿಮಾಗಳಿಗೆ ಹೊಸ ರೂಪ

ಮಂಗಳೂರು: ಎಂಆರ್‌ಪಿಎಲ್ ಸಿಎಸ್‌ಆರ್ ಉಪಕ್ರಮದಡಿ ಸ್ನೇಹಾಲಯ ಸಂಸ್ಥೆಯ ನೂತನ ಸೌಲಭ್ಯ ಉದ್ಘಾಟನೆ

ಮಾನಸಿಕ ರೋಗಿಗಳ ಸಾಮಾಜಿಕ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟು ಅಮೋಘ ಸೇವೆಯಲ್ಲಿ ನಿರತವಾಗಿರುವ  ಸ್ನೇಹಾಲಯ ಸಂಸ್ಥೆಯು ತಮ್ಮ ವ್ಯಸನ ನಿವಾರಣಾ ಕೇಂದ್ರದಲ್ಲಿ ಹೊಸದಾಗಿ ನಿರ್ಮಿಸಲಾದ ಟೆರೇಸ್ ರೂಫಿಂಗ್ ಮತ್ತು ನೆಲಹಾಸಿನ ಉದ್ಘಾಟನೆಯನ್ನು ನೆರವೇರಿಸಿದರು.  ಈ ಸೌಲಭ್ಯವನ್ನು ಮಂಗಳೂರಿನ  ಎಂಆರ್‌ಪಿಎಲ್ ಸಂಸ್ಥೆಯ ಸಾಂಸ್ಥಿಕ ಸಮಾಜಿಕ ಯೋಜನೆಯಡಿ ಪ್ರೋತ್ಸಾಹಿಸಲ್ಪಟ್ಟು ಸದರಿ ಸೌಲಭ್ಯವನ್ನು ವ್ಯಸನ ಮುಕ್ತ ಸಮಾಜಕಾಗಿ ರೊಗಿಗಳ ಚೇತರಿಕೆಯ ಹಾದಿಯಲ್ಲಿ

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ನೆರವು, ಜೊತೆಗೆ ಯೋಗಕ್ಷೇಮ ವಿಚಾರಿಸಿದ ಲಂಚುಲಾಲ್ ಕೆ.ಎಸ್

ನಮ್ಮ ಸಮಾಜದಲ್ಲಿ ಮಾನವೀಯತೆಯೇ ಮರೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಇರುವವರೇ ಕಡಿಮೆ. ಅಂತದ್ರಲ್ಲಿ.. ಇಲ್ಲೊಬ್ಬರು ಸಾಮಾಜಿಕವಾಗಿ ಆರ್ಥಿಕವಾಗಿ ನೊಂದ ಕುಟುಂಬಗಳಿಗೆ ಸ್ಪಂದಿಸುವವರು ನಮ್ಮ ಜೊತೆ ಇದ್ದಾರೆ.. ಅವರೇ ಅಸ್ತ್ರ ಗ್ರೂಪ್‌ನ ಸಿಇಒ ಲಂಚುಲಾಲ್ ಕೆ.ಎಸ್. ಅವರು.. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಕೇವಲ ಚಿಕಿತ್ಸೆ ವೆಚ್ಚ ಮಾತ್ರವಲ್ಲದೆ ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಇದು

ರಾಷ್ಟ್ರೀಯ ಮಟ್ಟದ ವುಶು ಸ್ಪರ್ಧೆ: ಸಾನ್ವಿ ಶರಣ್ ಶೆಟ್ಟಿಗೆ ರಜತ ಪದಕ

ಮಂಗಳೂರು: ತಮಿಳುನಾಡಿನ ಕೆಎಸ್‌ಆರ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವುಶು ಸ್ಪರ್ಧೆಯಲ್ಲಿ ಸಾನ್ವಿ ಶರಣ್ ಶೆಟ್ಟಿ ೪ ಅವರು ಅತ್ಯುತ್ತಮ ಪ್ರದರ್ಶನದೊಂ ದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ. ಸಾನ್ವಿ ಅವರು ಕರ್ನಾಟಕವನ್ನು ಪ್ರತಿನಿಧಿಸಿ ಜಾರ್ಖಂಡ್, ಉತ್ತರ ಪ್ರದೇಶ, ಪಂಜಾಬ್, ಮಣಿಪುರ ಮತ್ತು ಚಂಡೀಗಢದ ಪ್ರಬಲ ಸ್ಪರ್ಧಿಗಳ ವಿರುದ್ದ ಪ್ರಬಲ ಸ್ಪರ್ಧೆಯೊಡ್ಡಿ ಉತ್ತಮ ಸಾಧನೆ ಮೆರೆದಿದ್ದಾರೆ.