Home ಕರಾವಳಿ Archive by category ಮಂಗಳೂರು (Page 156)

ಕಂಬಳ ಕ್ರೀಡೆಯನ್ನು ರಾಜ್ಯದ ಪ್ರಮುಖ ಕ್ರೀಡೆಯಾನ್ನಾಗಿಸಲು ಜಿಲ್ಲಾಡಳಿತ ಸಿದ್ಧ : ಜಿಲ್ಲಾಧಿಕಾರಿ ರವಿಕುಮಾರ್ ಎಂ

ಜಿಲ್ಲೆಯ ರೈತಾಪಿ ಜನರ ಜನಪದ ಕಂಬಳ ಕ್ರೀಡೆಗೆ ಸರಕಾರದ ಸಂಪೂರ್ಣ ಸಹಕಾರವಿದ್ದು, ಕ್ರೀಡೆಯನ್ನು ಸರಕಾರದ ವತಿಯಿಂದ ನಡೆಸಲಾಗುತ್ತಿದ್ದು, ಕಂಬಳ ಕ್ರೀಡೆಯನ್ನು ರಾಜ್ಯದ ಪ್ರಮುಖ ಕ್ರೀಡೆಯನ್ನಾಗಿಸಲು ಜಿಲ್ಲಾಡಳಿತ ಸದಾ ಸಿದ್ಧ. ಶ್ರೀಘದಲ್ಲಿಯೇ ಕಂಬಳೋತ್ಸವಕ್ಕೆ ಸರಕಾರದಿಂದ 2ಕೋಟಿ ಅನುದಾನ ನಿಗಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್

ಆದ್ಯಪಾಡಿ: ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ
ಮಹಾ ಚಂಡಿಕಾಯಾಗ, ಧಾರ್ಮಿಕ ಸಭೆ

ದೇವರು ನಮಗೆ ನೀಡಿರುವ ಮನುಷ್ಯ ಜೀವನ ಪಾವನಗೊಳಿಸಲು ದೇವರ ಆರಾಧನೆ ಜೊತೆಗೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಮತ್ತಿತರ ಉತ್ಸವಗಳಲ್ಲಿ ಕಾಯಾ ವಾಚಾ ಮನಸಾ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಉಳ್ಳಾಲ ಉಳಿಯ ಧರ್ಮರಸು ಉಳ್ಳಾಲ್ತಿ ಕ್ಷೇತ್ರ ಧರ್ಮದರ್ಶಿ ದೇವು ಮೂಲ್ಯಣ್ಣ ಹೇಳಿದ್ದಾರೆ.ಇಲ್ಲಿನ ಪ್ರಸಿದ್ದ ಆದ್ಯಪಾಡಿ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಬ್ರಹ್ಮ

ಫೈವ್ ಸ್ಟಾರ್ಸ್ ಯಂಗ್ ಬಾಯ್ಸ್ (ರಿ )ಅಡ್ಡೂರು ಮತ್ತು ಎಂ. ಜಿ. ಎಂ. ತಾಲೀಮ್ ಸ್ಪೋರ್ಟ್ಸ್ (ರಿ )ಗುರುಪುರ : ತಾಲಿಮ್ ಪ್ರದರ್ಶನ ಸಭೆ ಉದ್ಘಾಟನೆ

ಫೈವ್ ಸ್ಟಾರ್ಸ್ ಯಂಗ್ ಬಾಯ್ಸ್ (ರಿ )ಅಡ್ಡೂರು ಮತ್ತು ಎಂ. ಜಿ. ಎಂ. ತಾಲೀಮ್ ಸ್ಪೋರ್ಟ್ಸ್ (ರಿ )ಗುರುಪುರ ಇವರುಗಳ ಜಂಟಿ ಆಶ್ರಯದಲ್ಲಿ ನಡೆದ ಸಭೆ ಮತ್ತು ತಾಳಿಮು ಪ್ರದರ್ಶನ ಸಭೆಯನ್ನು ಉದ್ಘಾಟಿಸಿದ ಮುಹಮ್ಮದ್ ಬಡೂರ್ ರವರನ್ನು ಎರಡೂ ಸಂಘಟನೆಗಳು ಸನ್ಮಾನಿದ ಸಂದರ್ಭದಲ್ಲಿ. ಕೆ ಪಿ ಸಿ ಸಿ ಜನರಲ್ ಸೆಕ್ರೆಟರಿ ಇನಾಯತ್ ಅಲಿ, ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ, ದ ಕ ಜಿಲ್ಲಾ ಮದ್ರಸ ಮೆನೇಜ್ಮೆಂಟ್ ಕಮಿಟಿ ಅಧ್ಯಕ್ಷರು ಎಂ […]

ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯಲ್ಲಿ ಸ್ವರ್ಣ ಬಿಂದು ಪ್ರಶಾನ

ಮಂಗಳೂರಿನ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ವತಿಯಿಂದ ಫೆ.5ರಂದು ಬೆಳಿಗ್ಗೆ 7 ಗಂಟೆಯಿAದ ಸಂಜೆ 6 ಗಂಟೆಯವರೆಗೆ ಸ್ವರ್ಣ ಬಿಂದು ಪ್ರಾಶನವನ್ನು ನೀಡಲಾಗುತ್ತಿದೆ. ನಗರದ ವೆಲೇನ್ಸಿಯಾ ಮತ್ತು ಕದ್ರಿ ಶಾಖೆಯಲ್ಲಿ ಸ್ವರ್ಣ ಬಿಂದು ಪ್ರಾಶನ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಕ್ಕಳಿಗಾಗಿ ಈ ಲಸಿಕೆಯನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 0824 2434 666, 9632008444, 9632007444 ಗೆ ಸಂಪರ್ಕಿಸಬಹುದು.

ರಾಷ್ಟ್ರೀಯ ಶಿಕ್ಷಣ ನೀತಿ – 2020 : ವಿಚಾರ ಸಂಕಿರಣ ಉಪನ್ಯಾಸ ಮತ್ತು ಮುಕ್ತ ಸಂವಾದ

ಶಿಕ್ಷಣದ ಸುಧಾರಣೆಗಾಗಿ ಭಾರತ ಸರಕಾರವು 2020ರಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಒಳಿತನ್ನುಂಟು ಮಾಡಿದೆಯೇ? ಇದುವರೆಗಿನ ಸಾಧನೆಗಳೇನು? ಬಾಧಕಗಳೇನು? – ಇತ್ಯಾದಿ ಜಿಜ್ಞಾಸೆಗಳು ಶೈಕ್ಷಣಿ ವಲಯದಲ್ಲಿ ಮೂಡಿದ್ದು, ಇದರ ಸಲುವಾಗಿ ಚರ್ಚಿಸಲು ಉಪನ್ಯಾಸ ಮತ್ತು ಮುಕ್ತ ಸಂವಾದವನ್ನು ಮೇಲಿನ ಮೂರು ಸಂಘಟನೆಗಳ ಆಶಯದಲ್ಲಿ ಹಮ್ಮಿಕೊಳ್ಳಲಾಗಿದೆ. 5-2-2023 ಬೆಳಿಗ್ಗೆ 9-30ರಿಂದ ದಿನಪೂರ್ತಿ ಜರಗುವ ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಣ

ಇಂದು ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳ

ಕಿನ್ನಿಗೋಳಿ: ಕಂಬಳವು ಕರಾವಳಿ ಭಾಗದ ಒಂದು ಅಚ್ಚುಮೆಚ್ಚಿನ ಜಾನಪದ ಕ್ರೀಡೆಯಾಗಿದ್ದು ಇದು ಜನರ ಜೀವನದ ಅಂಗವಾಗಿದೆ. ನಮ್ಮ ತುಳುನಾಡಿನ ಕೃಷಿ ಮತ್ತು ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಭಾಗವಾಗಿದ್ದು ಕಂಬಳದಿಂದ ನಮ್ಮ ಸಂಸ್ಕೃತಿ ಉಳಿಯುವುದರ ಜತೆಗೆ ಪ್ರಾಣಿ ಪ್ರೀತಿಯೂ ಹೆಚ್ಚಾಗುತ್ತದೆ. ಎಂದು ಆಧ್ಯಾತ್ಮ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಹೇಳಿದರು. ಅವರು ಕಿನ್ನಿಗೋಳಿ ಸಮೀಪದ ಐಕಳದಲ್ಲಿ ನಡೆಯುವ

ಫೆ.5 : ಕುದ್ರೋಳಿಯಲ್ಲಿ “ಶೂದ್ರ ಶಿವ” ನಾಟಕ

ಮಂಗಳೂರಿನ ರುದ್ರ ಥೇಟರ್ ಅರ್ಪಿಸುವ “ಶೂದ್ರಶಿವ” ಕನ್ನಡ ನಾಟಕ ಫೆ.5ರ ಭಾನುವಾರ ಸಂಜೆ 5.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಈ ನಾಟಕ ಸಿದ್ದಗೊಂಡಿದೆ. ಲೇಖಕ ಬಾಬು ಶಿವ ಪೂಜಾರಿ ಅವರ ‘ಶ್ರೀ ನಾರಾಯಣ ಗುರು ವಿಜಯ ದರ್ಶನ” ಪುಸ್ತಕವನ್ನು ಪ್ರೇರಣಾ ಪಠ್ಯವಾಗಿಟ್ಟುಕೊಂಡು ಜೊತೆಗೆ ನಾರಾಯಣ ಗುರುಗಳ

ಇಂದ್ರಾಳಿಯ ಹಯಗ್ರೀವ ನಗರದಲ್ಲಿ ಕಂಪನಿ ಸೆಕ್ರೆಟ್ರಿ ಸಹವರ್ತಿ ಕಛೇರಿ ಉದ್ಘಾಟನೆ

ಉಡುಪಿಯ ಪರಿಸರದಲ್ಲೇ ಕಂಪನಿ ಸೆಕ್ರೆಟರಿ ತರಬೇತಿ ಪಡೆಯಲು ಇಚ್ಛಿಸುವವರಿಗೆ ಮತ್ತು ಉಡುಪಿಯ ಎಲ್ಲಾ ತರಹದ ಉದ್ಯಮಿಗಳಿಗೆ ಸಲಹೆ ಹಾಗೂ ಅತ್ಯುತ್ತಮ ಸೇವೆಯನ್ನು ನೀಡಲು ಚೇತನ್ ನಾಯಕ್ & ಅಸೋಸಿಯೇಟ್ಸ್ ಮತ್ತು ಸಿ ಎಸ್ ಅಪರ್ಣ ಭಟ್ ರವರ ಸಹಭಾಗಿತ್ವದಲ್ಲಿ ಉಡುಪಿಯ ಇಂದ್ರಾಳಿಯಲ್ಲಿರುವ ಹಯಗ್ರೀವ ನಗರದಲ್ಲಿ ನೂತನ ಕಂಪನಿ ಸೆಕ್ರೆಟ್ರಿ ಸಹವರ್ತಿ ಕಛೇರಿಯನ್ನು ಉದ್ಘಾಟಿಸಲಾಯಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರವರು ನೂತನ

ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಆಂಟನಿ ಫೆರ್ನಾಂಡಿಸ್ ನಿಧನ

ಮಂಗಳೂರು: ಉತ್ತರ ಪ್ರದೇಶದ ಬರೇಲಿ ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಉಡುಪಿ ಮೂಲದ ಆಂಟನಿ ಫೆರ್ನಾಂಡಿಸ್ ಅವರು ಅನಾರೋಗ್ಯದಿಂದ ಫೆಬ್ರುವರಿ 3 ರಂದು ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.1936 ರಲ್ಲಿ ಉಡುಪಿ ಜಿಲ್ಲೆಯ ಕಳತ್ತೂರಿನಲ್ಲಿ ಜನಿಸಿದ ಅವರು ಶಿರ್ವ ಡಾನ್ ಬಾಸ್ಕೋ ಶಾಲೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ ವಾರಣಾಸಿ ಧರ್ಮ ಪ್ರಾಂತ್ಯಕ್ಕೆ ಸೇರ್ಪಡೆ ಹೊಂದಿದ್ದರು. ಲಕ್ನೋ ದಲ್ಲಿರುವ ಸೈಂಟ್ ಪಾವ್ಲ್ ಸೆಮಿನರಿ ಮತ್ತು

ಫಾಝಿಲ್ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹ – ಡಿವೈಎಫ್‌ಐ

ಫಾಝಿಲ್ ಕೊಲೆಯನ್ನು ಪ್ರತಿಕಾರದ ಕೊಲೆ ಎಂದು ಹೇಳಿಕೆ ಕೊಟ್ಟ ಶರಣ್ ಪಂಪ್ ವೆಲ್ ಬಂಧನಕ್ಕೆ ಒತ್ತಾಯಿಸಿ, ಫಾಝಿಲ್ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಡಿವೈಎಫ್ಐ ಸಂಘಟನೆಯು (ಇಂದು 3-2-23)ನಗರದ ಮಿನಿವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿ ಶರಣ್ ಪಂಪ್ ವೆಲ್ ಹೇಳಿಕೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಬಜರಂಗದಳದ ಮುಖಂಡ ಶರಣ್ ಪಂಪ್ ವೆಲ್ ಹೇಳಿಕೆ ನಾಗರೀಕ