ಮೂಡುಬಿದಿರೆ : ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘ (ರಿ), ಶಿರ್ತಾಡಿ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಮಹಿಳಾ ಘಟಕ ಶಿರ್ತಾಡಿ ಇವುಗಳ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣಗುರುಗಳ 168ನೇ ಗುರುಜಯಂತಿ ಆಚರಣಿಯ ಪ್ರಯುಕ್ತ 25ನೇ ವರ್ಷದ ಗುರುಪೂಜೆ ಮತ್ತು ಬೃಹತ್ ಶೋಭಾಯಾತ್ರೆಯು ಭಾನುವಾರ ಶಿರ್ತಾಡಿಯಲ್ಲಿ ನಡೆಯಿತು. ಗುರುಪೂಜೆಯ ಪ್ರಯುಕ್ತ ಬ್ರಹ್ಮ
ವೃದ್ಧರೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿದ್ಧ ಅವರು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ಎಂಬಲ್ಲಿ ನಡೆದಿದೆ.ಉಚ್ಚಿಲ ನಿವಾಸಿ ನಾರಾಯಣ ಪೂಜಾರಿ(82) ಮೃತ ದುರ್ಧೈವಿ ಆಗಿದ್ದು, ಶುಕ್ರವಾರ ಸಂಜೆ ರಸ್ತೆ ದಾಟುತ್ತಿರುವಾಗ ಕೇರಳಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ನಾರಾಯಣ ಪೂಜಾರಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಲಕಾರಿಯಾಗಿದೆ
ವಿಶ್ವದ ಹಲವಾರು ದೇಶಗಳಲ್ಲಿ ಅಕ್ಟೋಬರ್ 25ರಂದು ಕಾಣಲಿರುವ ಸೂರ್ಯಗ್ರಹಣ, ಭಾರತದ ಭೂಭಾಗದಲ್ಲಿ ಪಾರ್ಶ್ವ ಸೂರ್ಯಗ್ರಹಣವಾಗಿ ಗೋಚರಿಸಲಿದೆ. ಮಂಗಳೂರಿನ ಆಸುಪಾಸಿನಲ್ಲಿ ಸುಮಾರು ಘಂಟೆ ಸಂಜೆ 5:09 ರಿಂದ 6:06ರ ವರೆಗೆ ಕಾಣಸಿಗುವ ಈ ಘಟನೆಯಲ್ಲಿ ಸುಮಾರು ಘಂಟೆ ಸಂಜೆ 5:50ರ ಹೊತ್ತಿಗೆ ಅತಿಹೆಚ್ಚು ಅಂದರೆ ಸೂರ್ಯನ ಬಿಂಬದ 10.9% ಶೇಕಡದಷ್ಟು ಭಾಗವನ್ನು ಮರೆಮಾಚಲಿದೆ. ಗ್ರಹಣವೀಕ್ಷಣೆ ಬರಿಗಣ್ಣಿನಿಂದ ನೋಡುವುದು ಹಾನಿಕಾರಕ. ಇದನ್ನು ದೂರದರ್ಶಕದಿಂದ (ಟೆಲೆಸ್ಕೋಪ್)
ಮಂಗಳೂರು;ಕರಾವಳಿಯ ಮಂಗಳೂರಿನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.ಅಪಘಾತದಲ್ಲಿ ಮೃತ ಪೊಲೀಸ್ ಅಧಿಕಾರಿಯ ಮಗಳನ್ನು ಕಮಿಷನರ್ ಶಶಿಕುಮಾರ್ ತನ್ನ ಕುರ್ಚಿಯಲ್ಲಿ ಕೂರಿಸಿ ಗೌರವಿಸುವ ಮೂಲಕ ಪ್ರಸಂಸೆಗೆ ಪಾತ್ರರಾಗಿದ್ದಾರೆ. 2016-17ರ ವೇಳೆಯಲ್ಲಿ ಮಂಗಳೂರಿನಲ್ಲಿ ರವಿಕುಮಾರ್ ಎಂಬವರು ಎಎಸ್ಪಿಯಾಗಿದ್ದರು.ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ 2017ರಲ್ಲಿ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು.ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ
ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಫಿ ವಿಭಾಗ ಮತ್ತು ಥೀಮ್ ಫಿಸಿಯೋಥೆರಫಿ ಯುನಿವರ್ಸಿಟಿ ನೆದರ್‌ಲ್ಯಾಂಡ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಮತ್ತು ಸಂಶೋಧನಾ ವಿನಿಮಯ ಕಾರ್ಯಕ್ರಮಗಳಲ್ಲಿ ಸಹಕರಿಸಲು ಒಪ್ಪಿಕೊಂಡಿವೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಅಲೊಶಿಯಸ್ ಕೊಯಿಲೊ ಅವರು, ಥೀಮ್ ವಿವಿಯ ನಿರ್ದೇಶಕರಾದ ಥೀಮ್‌ವಂಡರ್
ಮಂಗಳೂರು; ಸಾಮಾಜಿಕಕಾರ್ಯಕರ್ತೆ ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಾಕಾರಿ ಹಾಗೂ ಅಶ್ಲೀಲವಾಗಿ ಪೆÇೀಸ್ಟ್ ಹಾಕಿದ ಆರೋಪಿಗಳನ್ನು ಶೀಘ್ರವಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸತ್ತೇವೆ ಎಂದುಮಿಷನರ್ ಶಶಿಕುಮಾರ್ ತಿಳಿಸೊದ್ದಾರೆ. ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಹೋರಾಟ ಎರಡು ಮೂರಿ ದಿನದ ಹಿಂದೆ ನಡೆದಿತ್ತು, ಈ ವೇಳೆ ಮಹಿಳಾ ಹೋರಾಟಗಾರರ ಪೋಟೋಗೆ ಅಶ್ಲೀಲವಾಗಿ ಬರಹ, ಪೋಸ್ಟ್ ಬಗ್ಗೆ ದೂರುದಾಖಲಾಗಿದೆ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬರುವುದು,ಸಾಮಾಜಿಕ
ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಕಳೆದ ಎರಡು ವರ್ಷಗಳಿಂದ ಹಾಗೂ ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಉತ್ತಮ ನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಜತ್‌ಬೈಲ್ ದಕ್ಷಿಣ 15ನೇ ವಾರ್ಡ್ನ ಪಳನೀರು ರಸ್ತೆಯ ಅಗಲೀಕರಣದ ಬಗ್ಗೆ ಜಾಗದ ಮಾಲೀಕರ ತಕರಾರು ಇದ್ದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಶಾಸಕರಾದ ಡಾ. ಭರತ್ ಶೆಟ್ಟಿಯವರು ಶುಕ್ರವಾರ ಪಳನೀರಿಗೆ ಭೇಟಿ ನೀಡಿ ಪರಸ್ಪರ ಸೌಹಾರ್ದ ಮಾತುಕಥೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ತಡೆಗೋಡೆ ಸಹಿತ ರಸ್ತೆ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಮೂಲಕ ಅಗಲೀಕರಣದ ಕಾಮಗಾರಿಗಿದ್ದ ಎಲ್ಲಾ
ದೈವದ ಮಹತ್ವ ಸಾರಿದ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಚಿತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕುಟುಂಬಸ್ಥರೊಂದಿಗೆ ಶನಿವಾರ ರಾತ್ರಿ ವೀಕ್ಷಿಸಿದರು.ಮಂಗಳೂರಿನ ಭಾರತ್ ಮಾಲ್ ಬಿಗ್ ಸಿನಿಮಾಸ್‌ನಲ್ಲಿ ರಾತ್ರಿ ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಪತ್ನಿ ಮತ್ತು ಕುಟುಂಬ ಸದಸ್ಯರು ಅವರೊಂದಿಗೆ ಚಿತ್ರ ಮಂದಿರಕ್ಕೆ ಆಗಮಿಸಿದ್ದರು. ಚಿತ್ರ
ಸುರತ್ಕಲ್: “ನಾನೇ ಒರಿಜಿನಲ್ ನಾಗವಲ್ಲಿ, ಮೊನ್ನೆ ಸುರತ್ಕಲ್ ಟೋಲ್ ಗೇಟ್ ಬಳಿ ನೀವು ನೋಡಿದ್ದು ಕಾಂತಾರ ಚಿತ್ರದ ಎರಡನೇ ಭಾಗವಲ್ಲ ಮೂರನೇ ಭಾಗ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ಹೇಳಿದರು. ಸುರತ್ಕಲ್ ಟೋಲ್ ವಿರೋಧಿ ಪ್ರತಿಭಟನೆ ಸಂದರ್ಭದ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಮಾಗಳ ಟೈಟಲ್ ಕೊಟ್ಟು ಟ್ರೋಲ್ ಮಾಡಲಾಗುತ್ತಿದ್ದು ಈ ಕುರಿತು ಮಾತಾಡಿದ ಪ್ರತಿಭಾ ಅವರು, “ಟ್ರೋಲ್ ಒಳ್ಳೆಯದು,



























