Home ಕರಾವಳಿ Archive by category ಮಂಗಳೂರು (Page 202)

ಮಂಗಳೂರು : ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ

ನಗರದ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕ, ಕಾಶ್ಯ ವಾರ್ಡ್ ಇವರ ಸಹಯೋಗದೊಂದಿಗೆ ಕಾಶ್ಯ ಪೇಟೆಯಲ್ಲಿ ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ಪ್ಲಾಸ್ಟಿಕ್ ಹೆಕ್ಕಿಕೋ ಜನಜಾಗೃತಿ ಕಾರ್ಯಕ್ರಮ ನಡೆಯಿತು. ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭವು ಸಂತ ರೀಟಾ ವಿದ್ಯಾಸಂಸ್ಥೆ ಕಾಸ್ಸಿಯಾ ಶಾಲಾ ಸಭಾಭವನದಲ್ಲಿ ಜರಗಿತು.ಎನ್.ಎಸ್.ಎಸ್ ಶಿಬಿರ

ಮಂಗಳೂರು : ಅಲೋಶಿಯಸ್ ಕಾಲೇಜಿನಲ್ಲಿ `ಮ್ಯಾಥ್ ಫಿಯೆಸ್ಟಾ 2ಕೆ22

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಅಂತರಕಾಲೇಜು ಫೆಸ್ಟ್ -`ಮ್ಯಾಥ್ ಫಿಯೆಸ್ಟಾ 2ಕೆ22 ಅನ್ನು ಹಮ್ಮಿಕೊಳ್ಳಲಾಗಿತ್ತು. ಪ್ರೊ ಕೆ.ಎ.ಕೃಷ್ಣಮೂರ್ತಿ ಅವರ 109ನೇ ಜನ್ಮ ದಿನಾಚರಣೆಯ ನೆನಪಿಗಾಗಿ ವಿವಿಧ ಕಾಲೇಜುಗಳ ಯುಜಿ ವಿದ್ಯಾರ್ಥಿಗಳಿಗೆ ಒಂದು ದಿನದ ಅಂತರ ಕಾಲೇಜು ಫೆಸ್ಟ್ ಅನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್‌ಎಫ್ ರಸ್ಕಿನ್ಹಾ ಹಾಲ್‌ನಲ್ಲಿ ಅಂತರಕಾಲೇಜು ಫೆಸ್ಟ್

ಮಂಗಳೂರು : ಅ.27ರಂದು ರಿವೋಲ್ಟ್ ಶೋರೂಂ ಶುಭಾರಂಭ

ಭಾರತದ ಮೊದಲನೆಯ A-L enabled ಮೋಟರ್ ಸೈಕಲ್ ಆದ ರಿವೋಲ್ಟ್ ಕಂಪನಿಯು ಗ್ರಾಹಕರಿಗಾಗಿ ಹೊಸ ವಿನ್ಯಾಸದ ಆವಿಷ್ಕಾರದೊಂದಿಗೆ ಎಲೆಕ್ಟಿçಕಲ್ ಬೈಕ್‌ನ್ನು ವೆಸ್ಟ್ ಕೋಸ್ಟ್ ನಾ ಸಹಬಾಗಿತ್ವದಲ್ಲಿ ಮಾರುಕಟ್ಟೆಗೆ ಇದೆ ಅಕ್ಟೋಬರ್ ತಿಂಗಳ 27ರ ಗುರುವಾರದಂದು ಮಂಗಳೂರಿನ ಬೇಂದೂರಿವೆಲ್‌ನಲ್ಲಿ ಪರಿಚಯಾ ಮಾಡಲಿದ್ದಾರೆ .  ಈಗಾಗಲೇ ಗ್ರಾಹಕರಿಗೆ ಬೇಡಿಕೆಗಾಗಿ ಮೊದಲೇ ಬುಕಿಂಗ್ ತೆರೆದಿದ್ದು ಉತ್ತಮ ಬೇಡಿಕೆ ಬರುತ್ತಿದೆ, ಹೆಚ್ಚಿನ ಮಾಹಿತಿಗಾಗಿ : 8904282323, 8904242323

ಹೆಜಮಾಡಿ ಗ್ರಾ.ಪಂ.ನಿಂದ ಟೋಲ್ ಹೋರಾಟ ಹತ್ತಿಕ್ಕುವ ತಂತ್ರ : ದಲಿತ ಮುಖಂಡ ಶೇಖರ್ ಹೆಜಮಾಡಿ ಆರೋಪ

ಟೋಲ್ ವಿರುದ್ಧ ಹೋರಾಟಕ್ಕೆ ದಿನ ನಿಗದಿಯಾಗಿದ್ದರೂ ಅದೇ ದಿನ ಹೆಜಮಾಡಿ ಗ್ರಾ.ಪಂ. ಆಢಳಿತ ಮಂಡಳಿ ಗ್ರಾಮಸಭೆಗೆ ದಿನ ನಿಗದಿ ಪಡಿಸುವ ಮೂಲಕ ಟೋಲ್ ವಿರುದ್ಧ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದೆ ಎಂಬುದಾಗಿ ದಲಿತ ಮುಖಂಡ ಶೇಖರ್ ಹೆಜಮಾಡಿ ಆರೋಪಿಸಿದ್ದಾರೆ.ಟೋಲ್‍ನಿಂದಾಗಿ ಹೆಜಮಾಡಿಯ ಜನತೆ ಕೂಡಾ ಸಮಸ್ಯೆ ಅನುಭವಿಸುತ್ತಿದ್ದು, ಗ್ರಾ.ಪಂ. ಜನಪರ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದ್ದರೂ ಪರೋಕ್ಷವಾಗಿ ತಮ್ಮ ಬಿಜೆಪಿ ಪಕ್ಷದ ನಿಲುವನ್ನು ಬೆಂಬಲಿಸುವ ಮೂಲಕ ಜನರ

ಬಾಲಕಿ ನಾಪತ್ತೆ ಪ್ರಕರಣ : ಪತ್ತೆಗೆ ಮನವಿ

ಮಂಗಳೂರಿಗೆ ಬಂದಿದ್ದ ಬೆಂಗಳೂರು ಮಹಾಲಕ್ಷ್ಮೀ ಲೇಔಟ್ ಭಾರ್ಗವಿ (14) ನಾಪತ್ತೆಯಾಗಿದ್ದಾಳೆ. ಕಳೆದ ಸೋಮವಾರ ಈಕೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದು ಬಸ್ ಮೂಲಕ ಮುಂಜಾವ 3 ಗಂಟೆಗೆ ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಳು.ಅಲ್ಲಿಂದ ರಿಕ್ಷಾದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನಲ್ಲಿ ಹೇಳಿರುವ ಮಾಹಿತಿ ಇದೆ. ಆದರೆ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಟೋಲ್‍ಗೇಟ್ ಸ್ಥಗಿತವಾಗುವವರೆಗೆ ವಿರಮಿಸುವುದಿಲ್ಲ: ಮುನೀರ್ ಕಾಟಿಪಳ್ಳ

ಸುರತ್ಕಲ್ ಅಕ್ರಮ ಟೋಲ್‍ಗೇಟ್ ತೆರವಿಗೆ ಆಗ್ರಹಿಸಿ ಹೋರಾಟವನ್ನು ಮತ್ತಷ್ಟು ತೀವೃತೆಯಿಂದ ಮುಂದುವರೆಸುತ್ತೇವೆ. ನಾಳೆಯೇ ಹೋರಾಟ ಸಮಿತಿಯ ಸಭೆ ಸೇರಿ ಮುಂದಿನ ಹೋರಾಟವನ್ನು ನಿರ್ಧರಿಸುತ್ತೇವೆ. ಟೋಲ್ ಸ್ಥಗಿತವಾಗುವವರೆಗೆ ವಿರಮಿಸುವುದಿಲ್ಲ ಎಂದು ಟೋಲ್‍ಗೇಟ್ ಹೋರಾಟ ಸಮಿತಿಯ ಸಂಚಾಲಕರಾದ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಅವರು ಈ ಪ್ರತಿಕ್ರಿಯೆ ನೀಡಿ ಟೋಲ್‍ಗೇಟ್‍ಗೆ ಮುತ್ತಿಗೆ ಹಾಕುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಬಳಿಕ

ನವರಾತ್ರಿ ಹುಲಿವೇಷ ಸ್ತಬ್ಧಚಿತ್ರದಿಂದ ಬಂದ ಹಣ ಅಶಕ್ತ ಕುಟುಂಬಗಳಿಗೆ ವಿತರಣೆ

ಬಿರುವೆರ್ ಫ್ರೆಂಡ್ಸ್ ಮಂಡಾಡಿ ಮತ್ತು ಮಹಾಮ್ಮಾಯಿ ಫ್ರೆಂಡ್ಸ್ ಮಂಡಾಡಿ ಇವರ ಸಹ ಭಾಗಿತ್ವದಲ್ಲಿ ನವರಾತ್ರಿಯ ಶಾರದಾ ಶೋಭಾಯಾತ್ರೆಗೆ ಹುಲಿವೇಶದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು. ಬಂದ ಹಣವನ್ನು ಅಶಕ್ತ ಕುಟುಂಬಗಳಿಗೆ ಧನದ ರೂಪದಲ್ಲಿ, ಮತ್ತು ಮಕ್ಕಳಿಗೆ ಪುಸ್ತಕದ ರೂಪದಲ್ಲಿ ವಿತರಿಸಲಾಯಿತು. ಅರ್ಬಿಗುಡ್ಡೆ ನಿವಾಸಿಗಳಾದ ಲೋಕೇಶ ಮತ್ತು ಶ್ರೀಮತಿ ಭವಾನಿ ಅವರ ಪುತ್ರ ಆಯುಷ್ ಎಂಬ ಬಾಲಕನ ವೈದ್ಯಕೀಯ ಚಿಕಿತ್ಸೆಗಾಗಿ ನೆರವನ್ನು ಸಂಸ್ಥೆಯ ಪದಾಧಿಕಾರಿಗಳ

ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಬಂಧನ ಖಂಡನೀಯ : ಎಸ್‌ ಡಿಪಿಐ

ಮಂಗಳೂರು: ಅನಧಿಕೃತ ಸುರತ್ಕಲ್ ಟೋಲ್ ಅನ್ನು ತೆರವುಗೊಳಿಸಲು ಆಗ್ರಹಿಸಿ ಟೋಲ್ ವಿರೋಧಿ ಹೋರಾಟ ಸಮಿತಿ ಇಂದು ಸುರತ್ಕಲ್ ಟೋಲ್ ಬಳಿ ಪ್ರತಿಭಟನೆ ನಡೆಸುತ್ತುದ್ದಾಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ ಘಟನೆಯನ್ನು ಎಸ್ ಡಿಪಿಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ತೀವ್ರವಾಗಿ ಖಂಡಿಸಿದ್ದಾರೆ. ಈ ದೇಶದ ಸಂವಿಧಾನವು ಅನ್ಯಾಯ, ಅನೀತಿ, ಅಕ್ರಮದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನೀಡಿದೆ ಆದರೆ ಬಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೀಬಿಲಚ್ಚಿಲ್ : 108 ದಿನದ ಸಂಧ್ಯಾ ಭಜನಾ ಸಂಕೀರ್ತನೆ

ಮಂಗಳೂರು ತಾಲೂಕಿನ ಅದ್ಯಪಾಡಿ ಬೈಲು ಮಾಗಣೆಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೀಬಿಲಚ್ಚಿಲ್ ಇಲ್ಲಿ ನಡೆಯಲಿರುವ ಬ್ರಹ್ಮಲಕಶೋತ್ಸವ ಹಾಗೂ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ಅಕ್ಟೋಬರ್ 17ರಿಂದ 2023 ಜನವರಿ 31ರ ವರೆಗೆ 108 ದಿನದ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಲಿದೆ. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 2023ರ ಫೆಬ್ರವರಿ 1ರಿಂದ ಸೂರ್ಯೋದಯದಿಂದ ಫೆಬ್ರವರಿ 2, 2023ರ ಸೂರ್ಯೋದಯದವರೆಗೆ ಏಕಹಾ ಭಜನಾ ಮಂಗಳೋತ್ಸವ ನಡೆಯಲಿದೆ. ನಿನ್ನೆಯಿಂದ

ಹೆಜಮಾಡಿ : ಗುದ್ದಲಿ ಪೂಜೆ ನಡೆದು ಏಳು ತಿಂಗಳಾದರೂ ದುರಸ್ಥಿಯಾಗದ ರಸ್ತೆ

ಹೆಜಮಾಡಿ ಗುಂಡಿ ರಸ್ತೆ ದುರಸ್ತಿಗಾಗಿ ಕಳೆದ ಏಳು ತಿಂಗಳ ಹಿಂದೆ ಶಾಸಕರು ಗುದ್ದಲಿ ಪೂಜೆ ನಡೆಸಿದ್ದರಾದರೂ, ಈ ವರೆಗೂ ದುರಸ್ತಿ ಕಾಣದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಎಚ್ಚರಿಕೆ ನೀಡಿದ್ದಾರೆ. ಗ್ರಾಮಸ್ಥ ಯೋಗೀಶ್ ಶೆಣೈ ಮಾತನಾಡಿ, ನಮ್ಮ ಬಲು ಬೇಡಿಕೆಯ ಗುಂಡಿ ರಸ್ತೆ ದುರಸ್ತಿಗಾಗಿ ಅದೆಷ್ಟೋ ಮನವಿಗಳ ಬಳಿಕ ಕಳೆದ ಏಳು ತಿಂಗಳ ಹಿಂದೆ ಗುದ್ದಲಿ ಪೂಜೆ ನಡೆಸಲಾಗಿದ್ದು, ಗುದ್ದಲಿ ಪೂಜೆ ನಡೆದು ಎರಡು ತಿಂಗಳ ಬಳಿಕ