Home ಕರಾವಳಿ Archive by category ಮಂಗಳೂರು (Page 233)

ಥಾಣೆ ಗುರುಭಕ್ತರಿಂದ ಒಡಿಯೂರು ಗುರುಗಳಿಗೆ ಗುರುವಂದನೆ

ಥಾಣೆ: ಮಾನವನಿಗೆ ಒಂದು ಧರ್ಮವಿದೆ, ಅದುವೇ ಮಾನವ ಧರ್ಮ. ಮಾನವ ಧರ್ಮ ವನ್ನು ಸಂಸ್ಕಾರದ ಮೂಲಕ ಅರಿಯಬೇಕು. ಅದರಿಂದ ಸಂಸ್ಕøತಿ ಉಳಿಯಲು ಸಾಧ್ಯವಿದೆ. ಸ್ವಾರ್ಥದ ಬದುಕು ಹೋಗಿ ನಿಸ್ವಾರ್ಥದ ಬದುಕು ನಮ್ಮದಾಗಬೇಕು. ಅಂತಹ ಗುಣ ನಮಗೆ ಬರಬೇಕು. ಕಡಲಿನಂತಹ ವಿಶಾಲವಾದ ಗುಣ ನಮ್ಮಲ್ಲಿರಲಿ. ನಮ್ಮನ್ನು ನಾವು ಅರಿಯಬೇಕು.ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥ ರಾದಾಗ ಮಾತ್ರ

ಬ್ಯಾಂಕಿನಿಂದ 27 ಲಕ್ಷ ರೂ. ಎಗರಿಸಿದ ಆರೋಪಿಗೆ ಜೈಲು ಶಿಕ್ಷೆ

2017ರ ಡಿಸೆಂಬರ್ ತಿಂಗಳ 29ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಇರುವ (ಆಗಿನ) ವಿಜಯ ಬ್ಯಾಂಕ್‍ನಲ್ಲಿ ಕ್ಯಾಶಿಯರ್ ಅಗಿದ್ದ ವಿಕಾಸ್ ಶೆಟ್ಟಿ ರೂ. 27,29,875/- ಎಗರಿಸಿದ್ದರು. ಆ ಶಾಖೆಯ ಮ್ಯಾನೇಜರ್ 2017ರ ಡಿಸೆಂಬರ್ 28ರಿಂದ 30ರ ವರೆಗೆ ರಜೆಯಲ್ಲಿದ್ದರು. ಪ್ರಭಾರ ಮ್ಯಾನೇಜರ್ ಅವರ ಟ್ಯಾಲಿ ಸಾಫ್ಟ್‍ವೇರ್‍ನಲ್ಲಿ ಅಂತಿಮ ನಗದು ಪರೀಕ್ಷಿಸುವಾಗ ಈ ಮೊತ್ತ ಕಡಿಮೆ ಇದ್ದದ್ದು ಗೊತ್ತಾಗಿತ್ತು.ಆರೋಪಿ ವಿಕಾಸ್ ಶೆಟ್ಟಿಯವರನ್ನು ವಿಚಾರಿಸಿದಾಗ

ಹಿರಿಯ ನಾಟಕಕಾರ, ಪತ್ರಕರ್ತ ರತ್ನಾಕರ ರಾವ್ ಕಾವೂರು ನಿಧನ.

ಹಿರಿಯ ನಾಟಕಕಾರ, ನಿರ್ದೇಶಕ, ವಜ್ರನೇತ್ರ ಪತ್ರಿಕೆ ಸಂಪಾದಕ, ರತ್ನಾಕರ ರಾವ್ ಕಾವೂರುರವರು (81) ಇಂದು ಬೆಳಿಗ್ಗೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಸಾಮಾಜಿಕ, ಪೌರಾಣಿಕ, ಆಧ್ಯಾತ್ಮಿಕ, ನವ್ಯ ಮತ್ತು ಐತಿಹಾಸಿಕ ಹೀಗೆ ಐದು ಬಗೆಯ ನಾಟಕ ರಚನೆಯಲ್ಲಿ ಅವರದ್ದು ಗಮನಾರ್ಹ ಸಾಧನೆಯಾಗಿತ್ತು. ವಜ್ರನೇತ್ರ ಎಂಬ ಕನ್ನಡ ಪತ್ರಿಕೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿ ಸರಕಾರದ ಗಮನ ಸೆಳೆಯುತ್ತಿದ್ದ ಅವರು ಸುಧೀರ್ಘ 60 ವರ್ಷಗಳ ಕಾಲ ಸರಸ್ವತಿಯ

ಸೋನಿಯಾ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ : ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ನಿಂದ ಪ್ರತಿಭಟನೆ

ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿ ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ವಿರುದ್ಧ ಧ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು. ನಗರದ ಕ್ಲಾಕ್ ಟವರ್‍ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಂಡದಿಂದ ಹಲ್ಲೆಗೊಳಗಾಗಿದ್ದ ಮಸೂದ್ ಚಿಕಿತ್ಸೆ ಫಲಿಸದೆ ಮೃತ್ಯು

ಕ್ಷುಲ್ಲಕ ಕಾರಣಕ್ಕೆ ನಡೆದ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡಿದ್ದ ಮಸೂದ್(19) ರಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.ಜು.19 ರಂದು ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ವಾಸಿ ಮಸೂದ್ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಎಂಟು ಮಂದಿಯ ತಂಡ ಹಲ್ಲೆ ನಡೆಸಿತ್ತು. ಈ ವೇಳೆ ಗಂಭೀರ ಗಾಯಗೊಂಡಿದ್ದ ಮಸೂದ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಇಂದು ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ

ಸುರತ್ಕಲ್ ರಸ್ತೆ ಅಪಘಾತ, ಕಟಪಾಡಿ ಮೂಡಬೆಟ್ಟು ದೇವಸ್ಥಾನದ ಅರ್ಚಕ ದುರ್ಮರಣ

ಕಟಪಾಡಿ : ಸುರತ್ಕಲ್ ನಲ್ಲಿ ಲಾರಿ ಮಟ್ಟು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಉಡುಪಿ ಕಟಪಾಡಿ ಬಳಿಯ ಮಟ್ಟು ನಿವಾಸಿ, ದೇಗುಲದ ಅರ್ಚಕ ಅಕ್ಷಯ್ ಕೆ. ಆರ್ (33) ದುರ್ಮರಣ ಹೊಂದಿದ್ದಾರೆ. ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಸುತ್ತಿದ್ದ ಅಕ್ಷಯ್ ಸುರತ್ಕಲ್ ನಲ್ಲಿ ಪೂಜೆ ಮುಗಿಸಿ ಕಟಪಾಡಿ ಗೆ ಹಿಂತಿರುಗಿ ಬರುವ ವೇಳೆಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಮೃತರು ತಾಯಿಯನ್ನು ಅಗಲಿದ್ದಾರೆ

ಮೃತ್ಯುಕೂಪದಂತಿರುವ ರಾಷ್ಟ್ರೀಯ ಹೆದ್ದಾರಿ, ಪ್ರತಿನಿತ್ಯ ಹೆದ್ದಾರಿಗಳಲ್ಲಿ ಅಪಘಾತಗಳ ಸರಮಾಲೆ

ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನಗಳಿಗೆ ನಿತ್ಯ ಆಸರೆಯಾಗುವ ಹೆದ್ದಾರಿಯು ಮರಣ ಗುಂಡಿಗಳಾಗಿ ಬದಲಾಗುತ್ತಿದೆ. ಹೆದ್ದಾರಿಯ ಬಹುತೇಕ ಭಾಗಗಳಲ್ಲಿ ಹೊಂಡಗಳೇ ತುಂಬಿಕೊಂಡಿದ್ದು, ಸಂಚಾರ ಕಷ್ಟಕರವಾಗಿದೆ.ಇಲ್ಲಿರುವ ಗುಂಡಿಗಳು ಸವಾರರ ಮತ್ತು ಪ್ರಯಾಣಿಕರ ಹೃದಯಬಡಿತ ಹೆಚ್ಚಿಸುವಂತಿದೆ.ಸ್ವಲ್ಪ ಎಚ್ಚರ ತಪ್ಪಿದ್ರೆ ಸಾಕು ವಾಹನ ಹೊಂಡಕ್ಕೆ ಬೀಳುವುದು ಖಚಿತ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೃಹತ್ತಾಕಾರದ ಹೊಂಡಗುಂಡಿಗಳಿಂದ ವಾಹನ ಸವಾರ ನರಕಯಾತನೆ ಅನುಭವಿಸುವಂತಾಗಿದೆ.

ಜಿ.ರಾಜಶೇಖರ ನಿಧನಕ್ಕೆ ಎಡ ಸಂಘಟನೆಗಳಿಂದ ತೀವ್ರ ಸಂತಾಪ

ಖ್ಯಾತ ವಿಮರ್ಶಕ, ಚಿಂತಕ, ಬರಹಗಾರ ಜಿ ರಾಜಶೇಖರ ನಿಧನಕ್ಕೆ ಮಂಗಳೂರಿನ ಎಡ ಹಾಗು ಜನಪರ ಪಕ್ಷ, ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಕೋಮುವಾದ, ಫ್ಯಾಸಿಸಂ ವಿರುದ್ದದ ದೃಢ ಧ್ವನಿಯಾಗಿದ್ದ ರಾಜಶೇಖರರವರು ಒಂದೆರಡು ತಲೆಮಾರನ್ನು ಪ್ರಭಾವಿಸಿದ ಮಹಾನ್ ಚಿಂತಕ ಎಂದು ಸಂತಾಪ ಸಂದೇಶದಲ್ಲಿ ಬಣ್ಣಿಸಿದೆ.ಜಿ ರಾಜಶೇಖರರವರು ದಣಿವಿಲ್ಲದೆ ದುಡಿದ ಕೋಮುವಾದ ವಿರೋಧಿ ದಾರಿಯಲ್ಲಿ ರಾಜಿಯಿಲ್ಲದೆ ಸಾಗುವುದು ಅವರಿಗೆ ಸಲ್ಲಿಸುವ ಶ್ರದ್ದಾಂಜಲಿ ಎಂದು ಸಿಪಿಐಎಂ ದ ಕ ಜಿಲ್ಲಾ

ಯಮಹಾ ರೆವ್‍ಸ್ಟಾರ್ ಎಲೆಕ್ಟ್ರಿಕ್ ಗಿಟಾರ್ ಮಂಗಳೂರಿನಲ್ಲಿ ಬಿಡುಗಡೆ

ಕದ್ರಿ ಕಂಬಳದ ವ್ಯಾಸ ರಾವ್ ರಸ್ತೆ ಸಮೀಪದಲ್ಲಿರುವ ಮ್ಯೂಸಿಕ್ ಸ್ಕ್ವೇರ್ ಮಂಗಳೂರಿನ ಕದ್ರಿ ಕಂಬಳದ ವ್ಯಾಸ ರಾವ್ ರಸ್ತೆ ಸಮೀಪದಲ್ಲಿರುವ ಯಮಹಾ ಮ್ಯೂಸಿಕ್ ಸ್ಕ್ವೇರ್‍ನಲ್ಲಿ ಹೊಚ್ಚ ಹೊಸ ಶ್ರೇಣಿಯ ಯಮಹಾ ರೆವ್‍ಸ್ಟಾರ್ ಎಲೆಕ್ಟ್ರಿಕ್ ಗಿಟಾರ್‍ನ್ನು ಮಂಗಳೂರು ಮಾರುಕಟ್ಟೆಗೆ ಬಿಡುಗಡೆಗೊಂಡಿತ್ತು. ಯಮಹಾ ಮ್ಯೂಸಿಕ್ ಸ್ಕ್ವೇರ್ ಇನ್ಸ್‍ಸ್ಟ್ರುಮೆಂಟ್ಸ್ ನ ಪ್ರಮುಖ ಕಚೇರಿಯಲ್ಲಿ ಮಂಗಳೂರಲ್ಲೂ ತನ್ನ ಶೋರೂಂಗಳನ್ನು ಹೊಂದಿದ್ದು, ಇದೀಗ