Home ಕರಾವಳಿ Archive by category ಮಂಗಳೂರು (Page 295)

ಮಂಗಳೂರಿನ ಹಲವೆಡೆ ಬೆಲೆ ಏರಿಕೆ ವಿರುದ್ಧ ಸಿಪಿಐಂ ವತಿಯಿಂದ ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಖಂಡಿಸಿ CPIM ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ನಡೆಯುತ್ತಿರುವ ವಾರಾಚರಣೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು,ಇಂದು ನಗರದ ಜಪ್ಪಿನಮೊಗರು, ಜಲ್ಲಿಗುಡ್ಡ,ಕಾವೂರು,ಶಕ್ತಿನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳು ಜರುಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ

ಮಂಗಳೂರು ಉವ೯ ಮಾರುಕಟ್ಟೆ ಹಸ್ತಾಂತರ ಕುರಿತು ಸಭೆ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಉವ೯ ಮಾರುಕಟ್ಟೆಯನ್ನು ಮೂಡದಿಂದ ಪಾಲಿಕೆಗೆ ಹಸ್ತಾಂತರಗೊಳಿಸುವ ಕುರಿತು ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಮೂಡ ಕಛೇರಿಯಿಂದ ಈಗಾಗಲೇ ಉವ೯ ಮಾರುಕಟ್ಟೆಯಲ್ಲಿನ ಮೇಲಿನ ಮಹಡಿಗಳಲ್ಲಿರುವ ಕಛೇರಿ ಉಪಯೋಗಿತ ಕೆಲವೊಂದು ಅಂಗಡಿಗಳನ್ನು ಹರಾಜು ರೂಪದಲ್ಲಿ ನೀಡಲು ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಹಿಂದೆ ಹಳೇ ಮಾರುಕಟ್ಟೆಯಲ್ಲಿ ವ್ಯಾಪಾರ

ವಿನಾಯಕ ಬಾಳಿಗಾ ಕೊಲೆ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಲಿದೆ: ಡಿಕೆಶಿ ಭರವಸೆ

ಆರ್‌ಟಿಐ ಕಾರ್ಯಕರ್ತ ವಿನಾಯ ಬಾಳಿಗರವರ ಅಮಾನುಷ ಹತ್ಯೆ ನಡೆದು ಇಂದಿಗೆ 5 ವರುಷಗಳೇ ಸಂದರೂ ನೈಜ ಕೊಲೆ ಆರೋಪಿಗಳಿಗೆ ಇನ್ನೂ ಕೂಡ ಶಿಕ್ಷೆಯಾಗದಿರುವ ಹಿನ್ನೆಲೆಯಲ್ಲಿ ದುಃಖ ತೃಪ್ತ ಬಾಳಿಗಾ ಕುಟುಂಬ ಸದಸ್ಯರು ಮತ್ತು ಜಸ್ಟೀಸ್ ಫಾರ್ ವಿನಾಯಕ ಬಾಳಿಗ ಫೋರಂ, ಕಾನೂನು ಹೋರಾಟಗಾರರು ಸೇರಿಕೊಂಡು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಲ್ಲಿ ತಮ್ಮ ಸಂಕಟವನ್ನು ವ್ಯಕ್ತಪಡಿಸಿದರು. ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಸಹಾಯ ಹಸ್ತ ಕಾರ್ಯಕ್ರಮದಲ್ಲಿ

ವೆನ್ಲಾಕ್ ಆಸ್ಪತ್ರೆಯಲ್ಲಿ ಚಾರಿಟೇಬಲ್ ಕೋವಿಡ್ ವಾರ್ಡ್ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ರೌಂಡ್ ಟೇಬಲ್ ಇಂಡಿಯಾ ಟ್ರಸ್ಟ್ ಮತ್ತು ಅಸೋಸಿಯೇಶನ್ ಆಫ್ 41 ಕ್ಲಬ್ಸ್ ಆಫ್ ಇಂಡಿಯಾ ವತಿಯಿಂದ ವನ್ ಮೋರ್ ಬ್ರೆತ್ ನೂತನ ಚಾರಿಟೇಬಲ್ ಕೋವಿಡ್ ವಾರ್ಡ್ ಉದ್ಘಾಟನೆಗೊಂಡಿತು.  ರೌಂಡ್ ಟೇಬಲ್ ಇಂಡಿಯಾ ಟ್ರಸ್ಟ್ ಮತ್ತು ಅಸೋಸಿಯೇಶನ್ ಆಫ್ 41 ಕ್ಲಬ್ಸ್ ಆಫ್ ಇಂಡಿಯಾದ ವತಿಯಿಂದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ವನ್ ಮೋರ್ ಬ್ರೆತ್ ನೂತನ ಚಾರಿಟೇಬಲ್ ಕೋವಿಡ್ ವಾರ್ಡ್ ಉದ್ಘಾಟನೆಗೊಂಡಿತು. ಶುಕ್ರವಾರದಂದು

ಪಿಲಿಕುಳ ನಿಸರ್ಗಧಾಮದಲ್ಲಿ ಸಸಿನೆಟ್ಟ ಸಚಿವ ಅರವಿಂದ ಲಿಂಬಾವಳಿ

ಮಂಗಳೂರಿನ ಪಿಲಿಕುಳದ ನಿಸರ್ಗಧಾಮಕ್ಕೆ ರಾಜ್ಯ ಅರಣ್ಯ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಅರವಿಂದ ಲಿಂಬಾವಳಿಯವರು ಭೇಟಿ ನೀಡಿದರು. ಬಳಿಕ ಪಿಲಿಕುಳ ನಿಸರ್ಗಧಾಮವನ್ನು ವೀಕ್ಷಿಸಿದರು. ಇದೇ ವೇಳೆ ಗಿಡ ನೆಟ್ಟು ನೀರುಣಿಸಿ ವನಮಹೋತ್ಸವದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್, ಅರಣ್ಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

ಮಂಗಳೂರಿನ ಮಿನಿವಿಧಾನಸೌಧದ ಲಿಫ್ಟ್‌ ನೊಳಗೆ ಸಿಲುಕಿಕೊಂಡ ಮೂವರ ರಕ್ಷಣೆ

ಮಂಗಳೂರಿನ ಮಿನಿವಿಧಾನಸೌಧದ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಮಿನಿ ವಿಧಾನಸೌಧದಲ್ಲಿ ಕೆಲಸಕ್ಕೆಂದು ಬಂದಿದ್ದ ಮೂವರು ಲಿಫ್ಟ್ ಹತ್ತಿದ್ದರು. ಹಿರಿಯ ಮಹಿಳೆ ಮತ್ತು ಇಬ್ಬರು ಹಿರಿಯ ಪುರುಷರು ಲಿಫ್ಟ್‌ನಲ್ಲಿ ತೆರಳಿದ್ದರು. ಲಿಫ್ಟ್ ಮೇಲೇರಿದ ಸ್ವಲ್ಪ ಕ್ಷಣದಲ್ಲಿ ನಿಂತುಕೊಂಡಿತ್ತು. ಲಿಫ್ಟ್‌ನಲ್ಲಿ ಮೂವರು ಸಿಲುಕಿಕೊಂಡು ಗಾಬರಿಯಾಗಿದ್ದರು. ಈ ಹಿನ್ನೆಲೆ ಅಧಿಕಾರಿಗಳು ಪಾಂಡೇಶ್ವರ ಅಗ್ನಿಶಾಮಕ ದಳದ

ಕೋಸ್ಟಲ್ ಬರ್ತ್, ಸಾಗರ ಮಾಲಾ ಯೋಜನೆಯ ವಿರುದ್ದ ಬೆಂಗರೆಯಲ್ಲಿ ಮೀನುಗಾರರಿಂದ ’ದೋಣಿಯೊಂದಿಗೆ ಪ್ರತಿಭಟನೆ’

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸಾಗರ ಮಾಲಾ ಯೋಜನೆ ಕರ್ನಾಟಕ ಕರಾವಳಿ ಜಿಲ್ಲೆಗಳ ಮೀನುಗಾರ ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ಮಂಗಳೂರು ಬೆಂಗರೆಯ ಪಲ್ಗುಣಿ ನದಿ ದಂಡೆಯಲ್ಲಿ ಸಾಗರ ಮಾಲಾ ಯೋಜನೆಯಡಿ ದೇಶೀಯ ಹಡಗುಗಳ ನಿಲುಗಡೆಗಾಗಿ ಕೋಸ್ಟಲ್ ಬರ್ತ್ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದು ಸ್ಥಳೀಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಬಲವಾದ ಪೆಟ್ಟು ನೀಡುತ್ತದೆ, ದುಡಿಮೆಯ ಅವಕಾಶವನ್ನು ನಾಶಗೊಳಿಸುತ್ತದೆ. ಮೀನುಗಾರರ

ಕರಾವಳಿಯಲ್ಲಿ ಚುರುಕುಗೊಂಡ ಮಳೆ

ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಭಾಗದಲ್ಲಿ ಬೆಳಗ್ಗೆಯಿಂದಲೇ ದಟ್ಟ ಮೋಡ ಕವಿದು ಮಳೆ ಸುರಿಯುತ್ತಿದೆ. ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿತ್ತು.  ಹವಾಮಾನ ಇಲಾಖೆ ವರದಿ ಪ್ರಕಾರ ಈ ವಾತಾವರಣ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಮುಂದುವರೆಯಲಿದ್ದು, ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಈ ಬಾರಿ ಬೇಸಿಗೆಯಿಂದಲೇ ಅಂದರೆ ಮೇ ತಿಂಗಳ ಆರಂಭದಿಂದಲೇ ಆಗಾಗ ಮಳೆ ಸುರಿಯುತ್ತಿತ್ತಾದರೂ ಮುಂಗಾರು

ಬೆಲೆಯೇರಿಕೆಯ ವಿರುದ್ಧ ಬೀದಿಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ವಿರೋಧಿಸಿ ಮಂಗಳೂರು ನಗರದ ಬೀದಿಬದಿ ವ್ಯಾಪಾರಸ್ಥರೂ ಕೂಡ ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸ್ಟೇಟ್ ಬ್ಯಾಂಕ್ ಬಳಿ ಹಾಗೂ ಲೇಡಿಗೋಷನ್ ಬಳಿಯಲ್ಲಿ ಬೀದಿಬದಿ ವ್ಯಾಪಾರಸ್ಥರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಬಿತ್ತಿಚಿತ್ರ ಹಿಡಿದು ಪ್ರತಿಭಟಿಸಿದರು.ಬೆಲೆಯೇರಿಕೆಯ ವಿರುದ್ದ CPIM ಮಂಗಳೂರು

ಸಹಕಾರ ಸಚಿವಾಲಯ ಸ್ಥಾಪಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ: ಎಸ್.ಆರ್. ಸತೀಶ್ಚಂದ್ರ

ಸುಮಾರು 117 ವರ್ಷಗಳ ಇತಿಹಾಸವಿರುವ ಸಹಕಾರ ಕ್ಷೇತ್ರಕ್ಕೆ ಸಹಕಾರ ಸಚಿವಾಲಯ ಬೇಕು ಎನ್ನುವ ಬೇಡಿಕೆಯನ್ನು ಕೇಂದ್ರ ಸರ್ಕರ ಪರಿಗಣಿಸಿ ಸಹಕಾರದಿಂದ ಸಮೃದ್ಧಿ ಎನ್ನುವ ಘೋಷವಾಕ್ಯದೊಂದಿಗೆ ಸಹಕಾರ ಸಚಿವಾಲಯವನ್ನು ರಚಿಸಿರುವ ಕೇಂದ್ರ ಸರ್ಕಾರಕ್ಕೆ ಸಹಕಾರಿಗಳ ಪರವಾಗಿ ಧನ್ಯವಾದವನ್ನು ತಿಳಿಸುತ್ತೇನೆ ಎಂದು ಸಹಕಾರ ಭಾರತಿಯ ಕರ್ನಾಟಕದ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು. ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೊಷ್ಟಿ ನಡೆಸಿ ಮಾತನಾಡಿ ನಮ್ಮ