Home ಕರಾವಳಿ Archive by category ಮಂಗಳೂರು (Page 315)

ಕಾರ್ಮಿಕರ ಕೊರತೆಯ ನಡುವೆಯೂ ಕಾಮಗಾರಿಗೆ ವೇಗ – ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು ಮಹಾನಗರ ಪಾಲಿಕೆಯ ಕಂಬ್ಳ ವಾರ್ಡ್ ಹಾಗೂ ಡೊಂಗರಕೇರಿ ವಾರ್ಡಿಗೆ ಸಂಬಂಧಪಟ್ಟ ಶಾರದಾ ವಿದ್ಯಾಲಯ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಶಾಸಕ ಕಾಮತ್, ಕೋವಿಡ್ ಕಾರಣದಿಂದ ಕಾರ್ಮಿಕರು ಊರಿಗೆ ತೆರಳಿದರೂ ಕಾಮಗಾರಿ ಸ್ಥಗಿತಗೊಳಿಸದಂತೆ ಎಚ್ಚರವಹಿಸಲಾಗಿದೆ.

ಶೈಕ್ಷಣಿಕ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರದಿಂದ ಗೊಂದಲ: ಶಾಸಕ ಯು.ಟಿ.ಖಾದರ್

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೈಕ್ಷಣಿಕ ವಿಚಾರದಲ್ಲಿ ಗೊಂದಲ ನಿರ್ಮಾಣ ಮಾಡಿದೆ. ಈ ವಿಚಾರದಲ್ಲಿ ಶಿಕ್ಷಕರನ್ನು ರಾಜ್ಯ ಸರ್ಕಾರ ಭಿಕ್ಷುಕರನ್ನಾಗಿ ಮಾಡಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಕಿಡಿಕಾರಿದ್ದಾರೆ. ಈ ಕುರಿತು ಮಂಗಳೂರಿನ ಸರ್ಕ್ಯೂಟ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನ ಲಾಕ್‌ಡೌನ್ ಪ್ಯಾಕೇಜ್‌ನಲ್ಲಿ ಕೂಡ ಶಿಕ್ಷಕರನ್ನ ಕಡೆಗಣಿಸಲಾಗಿದೆ. ಅನುದಾನ ರಹಿತ ಶಿಕ್ಷಕರಿಗೆ ತಕ್ಷಣ ಅನುದಾನ ಬಿಡುಗಡೆ ಮಾಡಬೇಕು.

ವೈದ್ಯರ ನಡೆ ಹಳ್ಳಿ ಕಡೆ ಸರಕಾರದ ಯೋಜನೆ : ಕೊಂಪಪದವಿನಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಶೀತ, ಜ್ವರ ಇದ್ದವರು ಕೋವಿಡ್ 19 ಟೆಸ್ಟ್ ಗೆ ಹೋಗದೆ ಮನೆಯಲ್ಲಿ ಇರುತ್ತಾರೆ. ಅವರಲ್ಲಿ ಸೋಂಕಿತರು ಕೂಡ ಇರಬಹುದು. ಸೋಂಕಿತರು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಇದ್ದು ರೋಗ ಗಂಭೀರವಾದಾಗ ಕೊನೆಯ ಹಂತದಲ್ಲಿ ವೈದ್ಯರನ್ನು ಕಾಣುವುದರಿಂದ ಸಾವು, ನೋವು ಪ್ರಮಾಣ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಅವರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರಕಾರದ ಜಾರಿಗೆ ತಂದಿರುವ ವೈದ್ಯರ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಜನರಿಗೆ ತಲುಪುವಲ್ಲಿ ನಾವೆಲ್ಲ ಕೆಲಸ ಮಾಡಬೇಕು. ವೈದ್ಯರು,

ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಅಭಿಯಾನ:ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

ಬಂಗ್ರಕೂಳೂರು ವಾರ್ಡ್ 16 ರಲ್ಲಿ ರಿಕ್ಷಾ,ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೀಡುವ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಅಭಿಯಾನಕ್ಕೆ ಶಾಸಕರಾದ ಡಾ.ಭರತ್ ಶೆಟ್ಟಿ ಚಾಲನೆ. ಕೋವಿಡ್ 2ನೇ ಅಲೆಯ ಲಾಕ್ ಡೌನ್ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರಕಾರವು ರಿಕ್ಷಾ,ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೀಡುವ ರೂಪಾಯಿ 3000/-ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವ ಸೇವಾಕಾರ್ಯಕ್ಕೆ ಬಂಗ್ರಕೂಳೂರು ವಾರ್ಡಿನ ಮನಪಾ ಸದಸ್ಯರಾದ ಕಿರಣ್ ಕುಮಾರ್ ರವರ

ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್‍ನಿಂದ ಅಕ್ಕಿ ವಿತರಣೆ

ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಇದರ ಆಶ್ರಯದಲ್ಲಿ 3000 ಅರ್ಹ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯಕ್ರಮವು ದೇರಳಕಟ್ಟೆಯ ನೇತಾಜಿ ಸುಬಾಶ್ಚಂದ್ರಬೋಸ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಕೊಣಾಜೆ ಪೆÇೀಲಿಸ್ ಠಾಣೆಯ ಅಧಿಕ್ಷಕ ಮಲ್ಲಿಕಾರ್ಜುನ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬೋಳಾ ನರಿಂಗಾನ ಚರ್ಚ್ ನ ಧರ್ಮ ಗುರು ಫಾದರ್ ಮೈಕಲ್ ಮಾತನಾಡಿ ಕರೊನಾ

ಕಲಾವಿದರಿಗೆ ಸಹಾಯ ಧನ: ವಯೋಮಿತಿ ಇಳಿಕೆಗೆ ಸಂಸದರಿಗೆ ನಾಟಕ ಕಲಾವಿದರ ಒಕ್ಕೂಟದಿಂದ ಮನವಿ

ಮಂಗಳೂರು: ಸರಕಾರ ಕಲಾವಿದರಿಗೆ ಆರ್ಥಿಕ ಸಹಾಯ ನೀಡಲು 35 ವರ್ಷದ ವಯೋಮಿತಿಯಿಂದ ಕಡಿಮೆ ವಯಸ್ಸಿನ ಕಲಾವಿದರು ಅವಕಾಶ ವಂಚಿತರಾಗುತ್ತಿದ್ದಾರೆ. ಹೀಗಾಗಿ ವಯೋಮಿತಿಯನ್ನು ಕಡಿಮೆಗೊಳಿಸಬೇಕೆಂದು ತುಳು ನಾಟಕ ಕಲಾವಿದರ ಒಕ್ಕೂಟ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದೆ. ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ ಶೆಟ್ಟಿ ನೇತೃತ್ವದಲ್ಲಿ ಮನವಿ ನೀಡಲಾಯಿತು. ಲಾಕ್ಡೌನ್ ನಿಂದಾಗಿ ನಾಟಕ ಪ್ರದರ್ಶನಗಳಿಲ್ಲದೆ ತೊಂದರೆ

ರಾಜ್ಯ ಸರ್ಕಾರ ನೀಡುವ ಪರಿಹಾರ ನಿಧಿಗೆ ಉಚಿತ ಅರ್ಜಿ ಸಲ್ಲಿಕೆ

ಬಂಗ್ರಕೂಳೂರಿನ ಮಂಗಳೂರಿನ ಪಾಲಿಕೆ ಸದಸ್ಯರ ಜನಸೇವಾ ಕೇಂದ್ರದಲ್ಲಿ ಕೋವಿಡ್ 2ನೇ ಅಲೆಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಿಕ್ಷಾ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ನೀಡುವ 3000 ರೂ. ಪರಿಹಾರ ನಿಧಿಗೆ ಉಚಿತವಾಗಿ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.  

ಅವೈಜ್ಞಾನಿಕ ರಸ್ತೆ ಕಾಮಗಾರಿ : ಧ್ವನಿ ಎತ್ತಿದ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ

ಬೆಂಗಳೂರು -ಮಂಗಳೂರು ಹೆದ್ದಾರಿಯಿಂದ ಮಂಗಳೂರು – ಶಿವಮೊಗ್ಗ ಹೆದ್ದಾರಿಯನ್ನು ಜೋಡಿಸುವ ರಸ್ತೆಯನ್ನು ಜೋಡಿಸುವ ಕುಲಶೇಖರ ಕಣ್ಣಗುಡ್ಡೆ ರಸ್ತೆಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆಯಲ್ಲದೆ, ಈ ಸಂಬಂಧ ಧ್ವನಿ ಎತ್ತಿದ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮನಪಾ ವಿಪಕ್ಷ ನಾಯಕ ವಿನಯ ರಾಜ್ ಆರೋಪಿಸಿದ್ದಾರೆ.   ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಿರಿದಾದ ಆ ರಸ್ತೆಯನ್ನು ಅಗಲೀಕರಿಸುವ ಕುರಿತಂತೆ ಹಿಂದಿನ ಶಾಸಕ

ಮನೆಗೆ ನುಗ್ಗಿ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣ : ಏಳು ಮಂದಿ ಆರೋಪಿಗಳ ಬಂಧನ

ಶಕ್ತಿನಗರ ಸಮೀಪದ ಸರಿಪಲ್ಲದ ಮನೆಯೊಂದಕ್ಕೆ ಮಾರಕಾಸ್ತ್ರದೊಂದಿಗೆ ನುಗ್ಗಿ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ 7 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದರು. ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ  ಮನೆಯೊಂದಕ್ಕೆ ನುಗ್ಗಿ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ರಂಜಿತ್ ( 28) , ಅವಿನಾಶ್ (23), ಪ್ರಜ್ವಲ್ (24), ದಿಕ್ಷಿತ್ (21), ಹೇಮಂತ್ (19), ಧನುಷ್ (19) ಹಾಗೂ ಯತಿರಾಜ್ (23)