ಮೂಡುಬಿದಿರೆ: ಮೂಡುಬಿದಿರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಹೊಸಂಗಡಿ ಸಮೀಪದ ಪಡಂದಡ್ಕದಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ನಡೆದಿದೆ. ಬಸ್‍ನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಉಳಿದಂತೆ ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗಾಗಿ
ಮೂಡುಬಿದಿರೆ: 2023-24ನೇ ಸಾಲಿನ ಕಂಬಳ ಸೀಸನ್ ನ ಪೂರ್ವಭಾವಿಯಾಗಿ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆಯಲ್ಲಿ ಕುದಿ ಕಂಬಳ ಆರಂಭಗೊಂಡಿತು. ಉದ್ಯಮಿ, ಕೋಣಗಳ ಯಜಮಾನ ರಂಜಿತ್ ಪೂಜಾರಿ ಕರೆಯಲ್ಲಿ ದೀಪ ಬೆಳಗಿಸುವ ಮೂಲಕ ಕುದಿ ಕಂಬಳಕ್ಕೆ ಚಾಲನೆಯನ್ನು ನೀಡಿದರು. ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ಸುರೇಶ್ ಕೆ.ಪೂಜಾರಿ ರೆಂಜಾಳ ಕಾರ್ಯ, ಪುರಸಭಾ ನಿರ್ಗಮನ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಬೆಳುವಾಯಿ ಗ್ರಾ.ಪಂ.ಸದಸ್ಯ ರಘು, ಕಂಬಳದ ಕೋಣಗಳ ಯಜಮಾನರುಗಳಾದ
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕರಿಂಜೆ ಮಾರಿಂಜಗುಡ್ಡೆಯಲ್ಲಿರುವ ಘನತ್ಯಾಜ್ಯ ಘಟಕವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಮರ್ಪಕವಾಗಿ ನಿರ್ವಹಣೆಯಾಗುತ್ತಿದ್ದು ಇದರಿಂದಾಗಿ ಪರಿಸರದ ನಿವಾಸಿಗಳು ತೊಂದರೆಯನ್ನು ಅನುಭವಿಸುತ್ತಿದ್ದಾರೆಂದು ಪುರಸಭೆ ಸದಸ್ಯರು ಮತ್ತು ಸಾರ್ವಜನಿಕರು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ದೂರು ನೀಡಿದ್ದಾರೆ. ತಾಲೂಕು ಆಡಳಿತ ಸೌಧದಲ್ಲಿ ಡಿಸಿಯವರಿಂದ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ದೂರು ನೀಡಿ ಈ ಬಗ್ಗೆ ಚರ್ಚೆ
ಮಳಲಿ ಪ್ರೌಢಶಾಲೆಯಲ್ಲಿ ಜರುಗಿದ ಗುರುಪುರ ಹೋಬಳಿ ಮಟ್ಟದ ಪ್ರೌಢಶಾಲಾ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಎಡಪದವು ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ, ಎಡಪದವು ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ
ಮೂಡುಬಿದಿರೆ: ಪುತ್ತಿಗೆ ಗ್ರಾ.ಪಂಚಾಯತ್ ನಲ್ಲಿ ಗುರುವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಬಿಜೆಪಿ ಸದಸ್ಯನೋರ್ವ ಅಡ್ಡ ಮತದಾನದ ಮಾಡಿದ ಪರಿಣಾಮವಾಗಿ ಸಿಪಿಐಎಂ ಬೆಂಬಲಿತ ಸದಸ್ಯೆ ರಾಧಾ ಅವರು ಅಧ್ಯಕ್ಷೆಯಾಗಿ ಹಾಗೂ 11 ಜನ ಸದಸ್ಯರ ಬೆಂಬಲವಿರುವ ಬಿಜೆಪಿಯ ದಯಾನಂದ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸಿಪಿಐಎಂ ಬೆಂಬಲಿತೆ ರಾಧಾ ಅವರು ಪುತ್ತಿಗೆ ಪಂಚಾಯತ್ ನಲ್ಲಿ ಸಿಪಿಐಎಂನ ಓರ್ವರೇ ಸದಸ್ಯರಾಗಿದ್ದು, 11
ಮೂಡುಬಿದಿರೆ: ಪಾಲಡ್ಕ ಗ್ರಾ.ಪಂಚಾಯತ್ ಅಧ್ಯಕ್ಷರಾಗಿ ಅಮಿತ, ಉಪಾಧ್ಯಕ್ಷರಾಗಿ ಪ್ರವೀಣ್ ಸಿಕ್ವೇರಾ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಗಾದಿಗೆ ಅನುಸೂಚಿತ ಪಂಗಡ ಮಹಿಳೆಗೆ ಮೀಸಲಾಗಿದ್ದು, ಪಂಚಾಯತ್‌ದಲ್ಲಿದ್ದ ಏಕೈಕ ಮಹಿಳೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪಾಲಾಗಿದೆ. ಬಿಜೆಪಿ ಪಕ್ಷದ ನಾಯಕರೊಂದಿಗೆ ಗುರುತಿಸಿಕೊಂಡಿದ್ದ ಪ್ರವೀಣ್ ಸಿಕ್ವೇರಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನವು ಬಿಜೆಪಿ ಮತ್ತು ಬಿಜೆಪಿ ಬೆಂಬಲಿತರ ಮತಗಳನ್ನು ಪಡೆದುಕೊಂಡು ಉಪಾಧ್ಯಕ್ಷ ಸ್ಥಾನವನ್ನು
ಮೂಡುಬಿದಿರೆಯ ಹಂಡೇಲು ಬಳಿಯಲ್ಲಿ ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಹೊರಗೋಡಿ ಅಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕದಳದ ಸಿಬಂದಿಗಳು ತಕ್ಷಣ ಧಾವಿಸಿ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಿನಲ್ಲಿದ್ದ ಗ್ಯಾಸ್ ಸ್ಪೋಟಗೊಂಡು ಬೆಂಕಿ ಹಿಡಿದಿರಬೇಕೆಂದು ಶಂಕಿಸಲಾಗಿದೆ.
ಮೂಡುಬಿದಿರೆ : ಕಳೆದ ಹಲವು ವರ್ಷಗಳಿಂದ ಟಯರ್ ಉದ್ಯಮವನ್ನು ನಡೆಸುತ್ತಾ ಬಂದಿರುವ ಹನುಮಾನ್ ಟಯರ‍್ಸ್ ನ ಮಾಲಕ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಪೂವಪ್ಪ ಕುಂದರ್ ಅವರು ಮಂಗಳವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತ: ಪರಂಗಿಪೇಟೆಯ ನಿವಾಸಿಯಾಗಿದ್ದ ಪೂವಪ್ಪ ಕುಂದರ್ ಮೂಡುಬಿದಿರೆಗೆ ಉದ್ಯೋಗವನ್ನು ಅರಸಿಕೊಂಡು ಬಂದು ಮೂಡುಬಿದಿರೆಯಲ್ಲಿ ಮಂಜುನಾಥ ಟೈರ್ ರಿಸೋಲಿಂಗ್ ಘಟಕದ ಮೂಲಕ ಅನುಭವ ಗಳಿಸಿ ಬಳಿಕ ಸ್ವರಾಜ್ಯ ಹನುಮಾನ್
ಮೂಡುಬಿದಿರೆ: ಮೆಕ್ಕಾ ಮದೀನಕ್ಕೆ ಯಾತ್ರೆಗೆ ತೆರಳಿದ್ದ ಇಲ್ಲಿನ ಕೊಡಂಗಲ್ಲು ನಿವಾಸಿ ಶನಿವಾರ ಹ್ರದಯಾಘಾತಕ್ಕೊಳಗಾಗಿ ಸಾವನಪ್ಪಿದ ಘಟನೆ ನಡೆದಿದೆ.ಮೃತ ವ್ಯಕ್ತಿ ಕೊಡಂಗಲ್ಲು ನಿವಾಸಿ ಹಾಮ್ಮದ್(73)ಎಂದು ತಿಳಿದು ಬಂದಿದೆ. ಇವರು ಎರಡು ವಾರಗಳ ಹಿಂದೆ ತನ್ನ ಕುಟುಂಬಿಕರ ಜತೆ ಮೆಕ್ಕಾ ಮತ್ತು ಮದೀನ ಕ್ಷೇತ್ರಕ್ಕೆ ಯಾತ್ರೆ ಹೊರಟಿದ್ದರು. ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಶನಿವಾರ ಮಧ್ಯಾಹ್ನ ವಿಮಾನ ಮೂಲಕ ಮದೀನ ಸಮೀಪದ ಜಿದ್ದಾ ಏರ್ ಪೋರ್ಟ್ ಗೆ ಹೊರಡಲು
ಶಿಕ್ಷಕರಿಗೆ ಕನ್ನಡ ಸಾಹಿತ್ಯ ಚರಿತ್ರೆ, ಭಾರತದ ಎಲ್ಲ ಮತಧರ್ಮಗಳು, ಸಾಹಿತ್ಯ, ಸಂಗೀತಾದಿ ಸಾಂಸ್ಕೃತಿಕ ಪರಿಚಯ ಒಂದಿಷ್ಟು ಇರಬೇಕಾಗಿದೆ; ಶರೀರ ಭಾಷೆಯನ್ನೂ ಬೋಧನೆಯ ಮಾಧ್ಯಮವಾಗಿ ಬಳಸುವ, ನೋಟ್ಸ್ ಕೊಡದೆ ಸ್ವಂತಿಕೆ ಬೆಳೆಸುವ, ಪಾಠ ಬಿಟ್ಟು ಅನ್ಯ ಲೇಖನಗಳ ಕಾಪಿ ಬರೆಸುವ, ಉಚ್ಚಾರ ಹೇಳಿಕೊಡುವ, ಪಾಠವನ್ನು ವಿಷಯದ ದೃಷ್ಟಿಗಿಂತಲೂ ಭಾಷೆಯ ದೃಷ್ಟಿಯಿಂದ ನೋಡುವ , ಕಲಿಸುವ ಸಾಮರ್ಥ್ಯವನ್ನು ಹೊಂದಿರಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ



























