ಮೂಡುಬಿದಿರೆ: ಸಂಸ್ಕೃತಿ, ಪರಂಪರೆ, ಇತಿಹಾಸ ಇವೆಲ್ಲದಕ್ಕೂ ಮಾದರಿಯಾಗಿ ಭಾರತ ಮೆರೆಯುತ್ತಿದೆ. ಕಾಂಗ್ರೆಸ್‍ನದ್ದು ವಿದೇಶಿ ಸಿದ್ದಾಂತ. ರಾಷ್ಟ್ರೀಯತೆಯನ್ನು ಮರೆತು ವಿದೇಶಿ ಸಂಸ್ಕೃತಿಯೊಂದಿಗೆ ಕಾಂಗ್ರೆಸ್ ಸಾಗಿ ಬಂದಿರುವುದರಿಂದ ಇಂದು ನೆಲಕಚ್ಚಿದೆ. ಅಭಿವೃದ್ಧಿಯ ಜೊತೆಗೆ ರಾಷ್ಟ್ರೀಯತೆ ಮೌಲ್ಯಗಳ ಸಿದ್ಧಾಂತಕ್ಕೆ ಅನುಗುಣವಾಗಿ ಮುನ್ನಡೆಯುತ್ತಿರುವ ಬಿಜೆಪಿ
ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ನನ್ನನ್ನು ಟಾರ್ಗೆಟ್ ಮಾಡಿ ಏಕವಚನ ಉಪಯೋಗಿಸಿ ಮಾತನ್ನಾಡಿರುವುದು ಹಿರಿಯರಾದ ಅವರಿಗೆ ಶೋಭೆ ತರುವಂತದಲ್ಲ.ತಾನು 500 ಕೋ.ಭ್ರಷ್ಟಾಚಾರ ಮಾಡಿದ್ದೇನೆಂದು ಅವರು ಆರೋಪಿಸುತ್ತಿದ್ದಾರೆ ಆದರೆ ನಾನು 500 ಅಲ್ಲ ರೂ 5 ಕೋ.ಭ್ರಷ್ಟಾಚಾರ ಮಾಡಿದ್ದರೂ ಧರ್ಮಸ್ಥಳ ಅಥವಾ ಹನುಮಂತ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ ಜೈನ್ ಅವರು ಆ ಕ್ಷೇತ್ರಗಳಿಗೆ ಬಂದು ಪ್ರಮಾಣ ಮಾಡಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದ್ದಾರೆ. ಅವರು ಬಿಜೆಪಿ
ಮೂಡುಬಿದಿರೆ: ಬೆಳುವಾಯಿ ಗ್ರಾ.ಪಂ.ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸುಮಾರು ರೂ.7.5 ಕೋ.ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ರೂ13 ಕೋ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.ನಂತರ ಮಾತನಾಡಿದ ಕೋಟ್ಯಾನ್ ಮೂಲಭೂತ ಸೌಕರ್ಯ ಮತ್ತು ಕೃಷಿಗೆ ಆದ್ಯತೆಯನ್ನು ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷ – ಜಾತಿ ಬೇಧ ಮರೆತು ರೂ 2000 ಕೋ.ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಶಾಸಕನಾಗಿ
ಮೂಡುಬಿದಿರೆ: ಕ್ಷೇತ್ರದ ಜನತೆಯ ಮನದಲ್ಲಿರುವ ಆಶೆಯೇ ನನ್ನ ಆಶೆಯೂ ಆಗಿದೆ. ನಿಮ್ಮ ತಲೆಯಲ್ಲಿ ಏನೆಲ್ಲ ಯೋಚನೆಗಳಿವೆಯೋ ಅವೆಲ್ಲವೂ ನನ್ನ ಯೋಚನೆಯೂ ಆಗಿದೆ. ಸರ್ವಾಂಗೀಣ ರೀತಿಯಲ್ಲಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಷ್ಟೇ ನನ್ನ ಗುರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಮೂಡುಬಿದರೆ ಕನ್ನಡ ಭವನದಲ್ಲಿ ನಡೆದ ಮುಲ್ಕಿ ಮೂಡುಬಿದಿರೆ ಮಂಡಲದ ಪ್ರಣಾಳಿಕೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ
ಮೂಡುಬಿದಿರೆ ತಾಲೂಕಿನ ರಾಧಾಕೃಷ್ಣ ಭಜನಾ ಮಂದಿರ ನೀರ್ಕೆರೆ ಪೂಮಾವಾರದಲ್ಲಿ ರಾತ್ರಿ ಹೋಳಿ ಉತ್ಸವ ನಡೆಯಿತು.ಹೋಳಿ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಕರಾವಳಿಯಲ್ಲಿ ಕೃಷಿಯನ್ನೇ ತಮ್ಮ ಬದುಕನ್ನಾಗಿಸಿ, ಮೂಲತಃ ಗೋವಾ ವಲಸಿಗರಾಗಿರುವ ಕೊಂಕಣಿ ಭಾಷೆಕ ಕುಡುಬಿ ಸಮುದಾಯಕ್ಕೆ ಹೋಳಿ ಹಬ್ಬವು ಶಿವರಾತ್ರಿಯಿಂದ ಯುಗಾದಿಯವರೆಗೆ ತಮ್ಮ ತಮ್ಮ ಕೂಡುಕಟ್ಟುಗಳಲ್ಲಿ ಆಚರಿಸುವ ಒಂದು ವಿಶಿಷ್ಟ ಸಂಪ್ರದಾಯ ಸಂಸ್ಕೃತಿಯ
ಮೂಡುಬಿದಿರೆ-ವೇಣೂರು, ಮೂಡುಬಿದಿರೆ-ಬಿಸಿರೋಡನ್ನು ಸಂಧಿಸುವ ಮೆಸ್ಕಾಂ ಬಳಿ ರಾಜ್ಯ ಹೆದ್ದಾರಿಯಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಸರ್ಕಲ್ ತೆರವುಗೊಳಿಸುವಂತೆ ಆಗ್ರಹಿಸಿದೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಶಾಸಕರ ನಿಧಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ.
ಮೂಡುಬಿದಿರೆ :ಇಲ್ಲಿನ ಲಾವಂತಬೆಟ್ಟು ಪರಿಸರದಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಗಣೇಶ್ ಸೈಕಲ್ ವರ್ಕ್ಸ್ ಮೂಲಕ ಜನಾನುರಾಗಿಯಾಗಿದ್ದ ನಾಗೇಶ್ ರಾವ್ ( 85 ವ) ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ ,ಪುತ್ರಿಯನ್ನು ಅಗಲಿದ್ದಾರೆ. ಎಂಬತ್ತರ ದಶಕದಲ್ಲಿ ಮೂಡುಬಿದಿರೆಯಲ್ಲಿ ಬಾಡಿಗೆ ಸೈಕಲ್ ಗಳ ಮೊದಲ ವರ್ತಕರಾಗಿ ಬಹಳಷ್ಟು ಎಳೆಯ ಹುಡುಗರಿಗೆ ಅಂದಿನ ದಿನಗಳಲ್ಲಿ ಬಾಡಿಗೆ ಸೈಕಲ್ ಮೂಲಕ ಸೈಕಲ್ ಕಲಿಕೆಗೆ ಅವರು ಕಾರಣರಾಗಿದ್ದರು ಸೈಕಲ್ ರಿಪೇರಿಯ ಜೊತೆಗೆ
ಮೂಡುಬಿದಿರೆ: ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ (ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಸಂಸ್ಥೆಯ ಮೂಲಕ ಪ್ರವರ್ತಿಸಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸ್ವಸಹಾಯ ಸಂಘಗಳ 23ನೇ ವಾರ್ಷಿಕ ಹಾಗೂ ಸ್ವಾವಲಂಬನಾ ದಿನಾಚರಣೆಯು ವಿಜಯನಗರದ ಆದರ್ಶಧಾಮದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ಬೆಂಗಳೂರು ಇದರ ನಿರ್ದೇಶಕಿ ಭಾರತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೂ ಬದುಕಲು ಉತ್ತಮವಾದ ಆರೋಗ್ಯ
ಮೂಡುಬಿದಿರೆ : ಕಡಂದಲೆ ಗ್ರಾಮದ ಸರ್ವೆ ನಂಬ್ರ 308/ಪಿ1ರ 27 ಎಕ್ರೆ ಸರ್ಕಾರಿ ಭೂಮಿಯಲ್ಲಿ 400/220 ಕೆಪಿ ವಿದ್ಯುತ್ ಕೇಂದ್ರವನ್ನು ಸ್ಥಾಪಿಸಲುದ್ದೇಶಿಸಿದ್ದು ಈ ಸ್ಥಳದಲ್ಲಿರುವ 2229 ಮರಗಳನ್ನು ಕಡಿಯುವ ಹಿನ್ನಲೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯು ಮೂಡುಬಿದಿರೆ ಅರಣ್ಯ ಇಲಾಖೆಯ ಸಭಾಭವನದಲ್ಲಿ ಶನಿವಾರ ನಡೆಯಿತು.. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಉದ್ದೇಶಿತ ಯೋಜನೆಗಾಗಿ ಮರಗಳ ನ್ನು ತೆರವುಗೊಳಿಸಲಿದ್ದು
ಮೂಡುಬಿದಿರೆ : ಮೂಡುಬಿದಿರೆಯ ಜನರಿಗೆ ಚಿರಪರಿಚಿತರಾಗಿದ್ದ ಜಿ.ಕೆ. ಎಂಟರ್‌ಪ್ರೈಸಸ್ ಮಾಲಕ ಜಿ.ಕೆ. ಖ್ಯಾತಿಯ ಗಣೇಶ್ ಕಾಮತ್ ಅವರು ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದರು. ವಿದ್ಯುತ್ ಅವಘಡದಿಂದ ತನ್ನೆರಡು ಕೈಗಳನ್ನು ಕಳೆದುಕೊಂಡಿದ್ದರೂ ಛಲಬಿಡದೆ ಜಿ. ಕೆ ಉದ್ಯಮವನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿ ಎನಿಸಿಕೊಂಡು ಹಲವಾರು ಜನರಿಗೆ ಉದ್ಯೋಗದಾತರಾಗಿದ್ದ ಅವರು ಶುಕ್ರವಾರ ಬೆಳಗಿನ ವೇಳೆ ತನ್ನ ಉದ್ಯಮ ಮಳಿಗೆಗೆ ಬರುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಗೊಂಡಿದ್ದು