ಮೂಡುಬಿದಿರೆ: ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಮರಳು ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ರಸ್ತೆಯಲ್ಲಿ ಪಲ್ಟಿ ಹೊಡೆದು ಮರಕ್ಕೆ ಢಿಕ್ಕಿಯಾದ ಘಟನೆ ಮೂಡುಬಿದಿರೆ ತಾಲೂಕಿನ ಗಾಂಧಿನಗರದ ಬಳಿ ನಡೆದಿದೆ. ಮರಳು ತುಂಬಿಸಿಕೊಂಡು ವೇಗದಿಂದ ಬರುತ್ತಿದ್ದ ಲಾರಿ ಗಾಂಧಿನಗರದ ಬಳಿ ಚಾಲಕ ನಿಯಂತ್ರಣ ತಪ್ಪಿ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದಿದ್ದು, ಈ ಸಂದರ್ಭ ಮರಳು
ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಮುದ್ದಣ ಸಾಹಿತ್ಯೋತ್ಸವ – ೪೩ನೇ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವು ಭಾನುವಾರ ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡಭವನದಲ್ಲಿ ನಡೆಯಿತು.ಧರ್ಮದರ್ಶಿ ಹರಿಕೃಷ್ಣ ಪುನರೂರು ಆಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಪ್ರಾಂಶುಪಾಲ, ಕಲಾವಿದ ಪ್ರೊ| ಎಂ.ಎಲ್. ಸಾಮಗ ಉದ್ಘಾಟಿಸಿ ಮಾತನಾಡಿ ನಾನೇ ಶ್ರೇಷ್ಠ ಎಂಬ ಭಾವನೆಯಿಂದಾಗಿ ಬೇರೆ ಬೇರೆ ಮಾರ್ಗಗಳನ್ನು
ಮೂಡುಬಿದಿರೆ: ಪುತ್ತಿಗೆಯ ನವೀಕೃತ ನೂರಾನಿ ಮಸೀದಿಗೆ ಸರ್ವಧರ್ಮೀಯರು ಸಂದರ್ಶಿಸುವ `ನಮ್ಮೂರ ಮಸೀದಿ ನೋಡಬನ್ನಿ’ ಕಾರ್ಯಕ್ರಮ ನಡೆಯಿತು. ಅನಾರೋಗ್ಯಪೀಡಿತರಿಗೆ ಸಹಾಯಧನ ವಿತರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಮಾತನಾಡಿ ವ್ಯಕ್ತಿಯನ್ನು ಆತನ ಜಾತಿ, ಧರ್ಮದ ಆಧಾರದಲ್ಲಿ ಗುರುತಿಸುವ ಬದಲು ಆತನ ಪ್ರಾಮಾಣಿಕತೆಯ ಅಧಾರದಲ್ಲಿ ಗುರುತಿಸಬೇಕು. ದೇವರ ಕಾರ್ಯಗಳಿಗೆ ಪ್ರಾಮಾಣಿಕತೆ
ಮುಂಡ್ಕೂರು ಗ್ರಾಮ ಪಂಚಾಯತ್ 2022- 23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲಾ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ ಇಲಾಖೆಯ ಸತೀಶ್ ನೋಡಲ್ ಅಧಿಕಾರಿಯಾಗಿದ್ದರು. ಸಂಕಲಕರಿಯದ ಉಗ್ಗೆದಬೆಟ್ಟು ಹಾಗೂ ಕೃಷ್ಣ ಬೆಟ್ಟು ನಿವಾಸಿಗಳ ನಡುವೆ ಮರಳುಗಾರಿಕೆ ಹಾಗೂ ರಸ್ತೆ ಅಗೆತದ ಬಗ್ಗೆ ಭಾರಿ ಮಾತಿನ ಚಕಮಕಿ ನಡೆಯಿತು. ಪಂಚಾಯತ್ ಮಾಜಿ ಸದಸ್ಯ ಸೋಮನಾಥ್ ಪೂಜಾರಿ ಉಗ್ಗೆದಬೆಟ್ಟು ನಿವಾಸಿಗಳ ಪರವಾಗಿ ಮಾತನಾಡಿ,
ಡಿಸಿ ಮನ್ನಾ ಜಾಗಗಳು ಇತರರ ಪಾಲಾಗುತ್ತಿದೆ. ಆದರೆ ಎಸ್. ಸಿ, ಎಸ್. ಟಿ ಸಮುದಾಯದ ಜನರು ಡಿಸಿ ಮನ್ನಾ ಜಾಗದಲ್ಲಿ ಬಿಡಾರ ಹೂಡಿದರೆ ಕೂಡಲೇ ಅಲ್ಲಿಂದ ಎತ್ತಂಗಡಿ ಮಾಡಲು ಇಲಾಖೆಯಿಂದ ಅಧಿಕಾರಿಗಳು ಬರುತ್ತಾರೆ. ಇನ್ನು ಮುಂದೆ ಡಿಸಿ ಮನ್ನಾ ಜಮೀನಿನಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನರು ಸಣ್ಣ ಗುಡಿಸಲು ಮಾಡಿ ಮನೆ ಮಾಡಿಕೊಂಡಿದ್ದಾರೆ. ಅವರನ್ನು ಅಲ್ಲಿಂದ ಓಡಿಸದೇ ಅಸಹಾಯಕ ಜನರಿಗೆ ವಾಸ ಮಾಡಲು ಅವಕಾಶ ಮಾಡಿಕೊಡಬೇಕೆಂದು ರಾಮಚಂದ್ರ ಕೆಂಬಾರೆ ಆಗ್ರಹಿಸಿದರು ಅವರು ಎಸ್
ಮಿಜಾರು: ಪರಿಶ್ರಮ ಇಲ್ಲದೆ ಸಾಧನೆ ಅಸಾಧ್ಯ. ಶ್ರಮದಿಂದ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಯಂಗ್ ಇಂಡಿಯಾದ ‘ಯುವ’ ಕಾರ್ಯ ನಿರ್ವಹಣಾ ಮಂಡಳಿಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು. ಸಮಯಕ್ಕೆ ತಕ್ಕಂತೆ ನಾವು ಬದಲಾಗಬೇಕು. ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ಜೀವನದಲ್ಲಿ ನೀತಿ-ನಿಯಮ
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟುವಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮದ್ಯದಂಗಡಿ ವಿರುದ್ಧ ಸ್ಥಳೀಯ ದಲಿತ ಸಂಘರ್ಷ ಸಮಿತಿ ಮತ್ತು ಸಾರ್ವಜನಿಕರ ದೂರಿನ ಮೇರೆಗೆ ಬುಧವಾರ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಮತ್ತು ಯೋಜನೆಯ ಪದಾಧಿಕಾರಿಗಳ ಸಭೆಯನ್ನು ವಲಯ ಕಚೇರಿಯಲ್ಲಿ ನಡೆಸಿದರು. ಕಲ್ಲಬೆಟ್ಟುವಿನಲ್ಲಿ ಈಗಾಗಲೇ ಅನಧಿಕೃತ ಮದ್ಯ ಮಾರಾಟ ವ್ಯಾಪಕವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಗೆ ಸೂಚಿಸುವುದು ಮತ್ತು ಅನಧಿಕೃತ ಮದ್ಯ
ಮೂಡುಬಿದಿರೆ: ಬಂಟ ಸಮುದಾಯವು ಪರೋಪಕಾರ ದಂತಹ ದೊಡ್ಡ ಗುಣವನ್ನು ಹೊಂದಿದೆ. ಗುರುಪೀಠವಿಲ್ಲದೇ ಬಂಟ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಇಂದು ಪ್ರಗತಿ ಸಾಧಿಸಿದೆ, ಸಮುದಾಯದ ಹಿರಿಯರು ಗುರುಪೀಠಕ್ಕೆ ಹೋರಾಡದೆ ಬಂಟರ ಸಂಘ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದರೆ ಸಮುದಾಯದ ಅಭಿವೃದ್ಧಿ ಸಾಧ್ಯ. ಈ ಸಮುದಾಯವು ಗುರುಪೀಠಕ್ಕೆ ಹೆಚ್ಚಿನ ಆದ್ಯತೆ ನೀಡದೆ ಹಿರಿಯರು ತೋರಿದ ಹಾದಿಯಲ್ಲೇ ಮುಂದೆ ಸಾಗಬೇಕು,ದೇವರನ್ನೇ ಗುರುವನ್ನಾಗಿ ಕಾಣಬೇಕು ಎಂದು ಕೇಮಾರು
ಮೂಡುಬಿದಿರೆ: ಉನ್ನತ ಶಿಕ್ಷಣ ಸಚಿವ ಡಾ.ಸಿ ಅಶ್ವತ್ಥನಾರಾಯಣ ಅವರು ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಟಿಪ್ಪುಸುಲ್ತಾನನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕು ಎಂದಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮತ್ತು ರಾಷ್ಟ್ರಪತಿಯವರು ಮುಖ್ಯಮಂತ್ರಿಗೆ ಸೂಚನೆ ನೀಡಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ. ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ
ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ಇಂಜೆಕ್ಷನ್ ತೆಗೆದುಕೊಳ್ಳಲು ಕುರ್ಚಿಯಲ್ಲಿ ಕುಳಿತಿದ್ದ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ.ಮಗುವಿನ ಕೆನ್ನೆ ಹಾಗೂ ಮುಖದ ಇತರ ಕಡೆ ನಾಯಿ ಕಚ್ಚಿ ಗಾಯಗೊಳಿಸಿದೆ. ಇಂಜೆಕ್ಷನ್ ಗಾಗಿ ಮಗುವನ್ನು ಕುರ್ಚಿಯಲ್ಲಿ ಕುಳ್ಳಿ ರಿಸಿ ಪಕ್ಕದಲ್ಲಿ ಮಗುವಿನ ತಂದೆ ಮಹಮ್ಮದ್ ಅಕ್ಬರ್ ಹಾಗೂ ತಾಯಿ ಇದ್ದರು. ಆಸ್ಪತ್ರೆಯ ಬಳಿ ಓಡಾಡುತ್ತಿದ್ದ