Home ಕರಾವಳಿ Archive by category ಮೂಡಬಿದರೆ (Page 64)

ಮಾರ್ಚ್ ಒಳಗಡೆ ಕಂಬಳಕೂಟ ಮುಕ್ತಾಯಕ್ಕೆ ನಿರ್ಧಾರ

ಮೂಡುಬಿದಿರೆ: 24 ಗಂಟೆಯೊಳಗಡೆ ಕಂಬಳ ಮುಗಿಸುವುದು, ರೆಫ್ರಿಗಳಿಗೆ ಭದ್ರತೆ, ವ್ಯವಸ್ಥಾಪಕರಿಂದ ಸೂಕ್ತ ವ್ಯವಸ್ಥೆ, ಕೋಣಗಳನ್ನು ಕಟ್ಟುವ ವ್ಯವಸ್ಥೆ, ವ್ಯವಸ್ಥಿತ ಕಂಬಳವನ್ನು ಆಯೋಜಿಸುವ ಬಗ್ಗೆ ಹಾಗೂ ನವೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಳ್ಳುವ ಕಂಬಳಕೂಟಗಳನ್ನು ಕೋಣಗಳ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಮುಂದಿನ ವರ್ಷದ

ಮರ ಬಿದ್ದು ಸಂಚಾರಕ್ಕೆ ಅಡ್ಡಿ : ಬಂಟ್ವಾಳ-ಮೂಡುಬಿದಿರೆ ಸಂಚಾರಕ್ಕೆ ತೊಡಕು

ಮೂಡುಬಿದಿರೆ: ಇಲ್ಲಿನ ಪುರಸಭೆ ವ್ಯಾಪ್ತಿಯ ಬಿರಾವು ಎಂಬಲ್ಲಿ ಭಾನುವಾರ ಸುರಿದ ಗಾಳಿ ಮಳೆಗೆ ಬೃಹತ್ ಆಲದ ಮರ ಬಿದ್ದು, ಕೆಲ ಸಮಯ ಬಂಟ್ವಾಳ-ಮೂಡುಬಿದಿರೆ ಸಂಚಾರಕ್ಕೆ ತೊಂದರೆಯಾಯಿತು.ಮರ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು, ಇಂಟರ್ನೆಟ್ ಸಂಪರ್ಕ ತಂತಿಗಳು ಕಡಿದು ಬಿದ್ದಿದ್ದು, ಭಾನುವಾರ ಮಧ್ಯಾಹ್ನದಿಂದ ಬಿರಾವು, ತಾಕೋಡೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅವರ ಮುತುವರ್ಜಿಯಲ್ಲಿ ಮರವನ್ನು ಒಂದು

ಧರೆಗುರುಳಿದ ಆಲದ ಮರ ಹಣ್ಣಿನ ಅಂಗಡಿ ಜಖಂ

ತೋಡಾರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಡಸಮೇತ ಆಲದ ಧರೆಗುರುಳಿದ್ದು ಅಡಿಯಲ್ಲಿದ್ದ ಹಣ್ಣಿನ ಅಂಗಡಿ ಜಖಂಗೊಂಡಿದೆ.ಆಲದ ಮರದ ಬುಡದಲ್ಲಿಯೇ ತೋಡಾರಿನ ಅಬೂಬಕ್ಕರ್ ಎಂಬವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರು. ಇಂದು ಬೆಳಿಗ್ಗೆ ಬೀಸಿದ ಗಾಳಿಯ ರಭಸಕ್ಕೆ ಬುಡ ಸಮೇತ ಆಲದ ಮರದ ಬಿದ್ದಿದೆ .ಸ್ಥಳೀಯರಿಂದ ಮಿಂಚಿನ ಕಾರ್ಯಾಚರಣೆ ಮರದ ಗೆಲ್ಲುಗಳ ತೆರವಿಗೆ ಕಾರ್ಯಾರಂಭ,ಸಹಕಾರಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ತಾತ್ಕಾಲಿಕ ವ್ಯವಸ್ಥೆ ಸುಗಮ ವಾಹನ ಸಂಚಾರಕ್ಕಾಗಿ

ಜೈನ ಮನೆತನದ ವಾರಸುದಾರ ರಾಹುಲ್ ಬಲ್ಲಾಳ್ ನಿಧನ

ತುಳುನಾಡಿನ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಜೈನ ಮನೆತನದ ವಾರಸುದಾರ, ಮೂಡುಬಿದಿರೆಯ ಬಲ್ಲಾಳ್ ಕುಟುಂಬದ ರಾಹುಲ್ ಬಲ್ಲಾಳ್ (51) ಅವರು ಇಂದು ನಿಧನರಾಗಿದ್ದಾರೆ. ತುಳುನಾಡಿನ ಭವ್ಯ ಪರಂಪರೆ, ಪರೋಪಕಾರಿಗಳು ಆಗಿರುವಂತಹ ಶ್ರೀಮಂತ ಜೈನ ಮನೆತನದ ವಾರಸುದಾರರಾದ ಕೃಷಿಕರೂ, ಉದ್ಯಮಿ ಜಯವರ್ಮರಾಜ್ ಬಲ್ಲಾಳ್ ಅವರ ಸುಪುತ್ರರಾಗಿದ್ದ ರಾಹುಲ್ ಬಲ್ಲಾಳ್ ಕಾನೂನು ಪಧವೀಧರರು. ತನ್ನ ಕುಟುಂಬದ ಕೃಷಿ ಹಾಗೂ ಹೋಟೇಲ್ ಉದ್ಯಮವನ್ನು ಮುನ್ನಡೆಸಲು ರಾಹುಲ್ ಅವರು

ಮೈಟ್ ಎಂಜಿನಿಯರಿಂಗ್ ಕಾಲೇಜಿನ ಆವರಣಗೋಡೆ ಕುಸಿದು ಬಿದ್ದು ಮೂರು ವಾಹನಗಳಿಗೆ ಹಾನಿ

ಮೂಡುಬಿದಿರೆ:ತಾಲ್ಲೂಕಿನ ವಿವಿದೆಡೆ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೈಟ್ ಎಂಜಿನಿಯರಿಂಗ್ ಕಾಲೇಜಿನ ಆವರಣಗೋಡೆ ಕುಸಿದು ಬಿದ್ದು ಮೂರು ವಾಹನಗಳಿಗೆ ಹಾನಿಯಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ನಡೆಯುತ್ತಿದ್ದು ಆವರಣಗೋಡೆಯ ಬದಿಯಲ್ಲಿ ಪೋಷಕರ ವಾಹನಗಳನ್ನು ನಿಲ್ಲಿಸಲಾಗಿತ್ತು. ನಿರಂತರ ಮಳೆಯಿಂದಾಗಿ ಸುಮಾರು 20 ಅಡಿ ಎತ್ತರದಲ್ಲಿದ್ದ ಆವರಣಗೋಡೆ ಕುಸಿದು ಹತ್ತಿರದಲ್ಲಿದ್ದ ಮೂರು

ಕನ್ನಯ್ಯನನ್ನು ಹತ್ಯೆ ಮಾಡಿದವರಿಗೆ ಶರೀಯತ್ ಪ್ರಕಾರ ಶಿಕ್ಷೆ ನೀಡಿ : ಹಿಂಜಾವೇ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಆಗ್ರಹ

ಮೂಡುಬಿದಿರೆ: ಶರೀಯಾ ಬೇಕೆಂದು ಕೇಳುವ ನಿಮಗೆ ಸಿವಿಲ್ ಕೋಡ್, ಹಿಂದೂಗಳಿಗೆ ಕ್ರಿಮಿನಲ್ ಕೋಡ್ ಎಂದು ಹೇಳುವ ನೀವು ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್, ಅಮರಾವತಿಯಲ್ಲಿ ಮುಕೇಶ್‍ರನ್ನು ಹತ್ಯೆ ಮಾಡಿರುವ ಪಾತಕಿಗಳನ್ನು ಗಲ್ಲಿಗೇರಿಸಬೇಡಿ. ಅವರ ಕೈ-ಕಾಲುಗಳನ್ನು ಕತ್ತರಿಸಿ ಹಾಕಿ ಶರೀಯತ್ ಪ್ರಕಾರ ಶಿಕ್ಷೆ ನೀಡಿ ಇದು ಹಿಂದೂ ಸಮಾಜದ ಆಗ್ರಹ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಇತ್ತೀಚೆಗೆ ರಾಜಸ್ತಾನ,

ಕರಾವಳಿಯಲ್ಲಿ ಮತ್ತೆ ವರುಣನ ಆರ್ಭಟ : ತಾತ್ಕಲಿಕ ನೆರೆಯಿಂದ ಜನರ ಪರದಾಟ

ಕರಾವಳಿಯಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದ್ದು ನದಿ, ತೊರೆಗಳು ತುಂಬಿ ಹರಿಯತೊಡಗಿದೆ. ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ‌ ಸ್ಥಿತಿ ಎದುರಾಗಿದೆ. ಮುಂಜಾಗ್ರತೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಶಾಲೆ, ಕಾಲೇಜಿಗೆ ರಜೆ ಸಾರಲಾಗಿದೆ. ಮಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ನಿರಂತರ ಮಳೆಯಾಗಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಪ್ರವಾಹ ಸ್ಥಿತಿ

ಮೂಡುಬಿದರೆ: ಬಸ್ ಚಾಲಕನ ನಿರ್ಲಕ್ಷ್ಯ: ಬಸ್‍ನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ: ಅಪಾಯದಿಂದ ಪಾರು

ಮೂಡುಬಿದಿರೆ: ಬಸ್ ಚಾಲಕ ಮತ್ತು ನಿರ್ವಾಹಕ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿನಿಯೋರ್ವಳು ಬಸ್ ನಿಂದ ಕೆಳಗೆ ಜಾರಿ ಬಿದ್ದ ಘಟನೆ ನಿನ್ನೆ ಸಂಜೆ ಮೂಡುಬಿದಿರೆಯ ವಿದ್ಯಾಗಿರಿ ಬಳಿ ನಡೆದಿದೆ. ವಿದ್ಯಾರ್ಥಿನಿ ಸಂಜೆ ಕಾಲೇಜು ಬಿಟ್ಟು ಮನೆಗೆ ತೆರಳುವ ಸಂದರ್ಭ ವಿದ್ಯಾಗಿರಿಯಲ್ಲಿ ಜೀವನ್ ಟ್ರಾವೆಲ್ಸ್ ಎಂಬ ಹೆಸರಿನ ಖಾಸಗಿ ಬಸ್ಸ್ ಗೆ ಹತ್ತಿದ್ದಾಳೆ. ಈಕೆಯಲ್ಲದೆ ಇನ್ನೂ ಕೆಲವು ವಿದ್ಯಾರ್ಥಿಗಳೂ ಹತ್ತಿದ್ದಾರೆ. ಈ ಸಂದರ್ಭ ಬಸ್ ನಿವಾರ್ಹಕ ಕೂಡಾ ಅಲ್ಲೆ ಇದ್ದ ಎಂದು

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಜೈನಮಿಲನ್ ’ಸಂಮಿಲನ್ 2021

ಮೂಡುಬಿದಿರೆ: ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಜಂಟಿ ಆಶ್ರಯದಲ್ಲಿ ’ಸಂಮಿಲನ್ ‘2021’ಕ್ರೀಡಾಕೂಟವು ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕ್ಯಾಂಪಸ್‌ನಲ್ಲಿ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ವೀರಸಾಗರ ಸಭಾಂಗಣದಲ್ಲಿ ಸಂಮಿಲನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೈನ ಸಮುದಾಯದವರು ಇಂದು ಸುಶಿಕ್ಷಿತರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಶಿಕ್ಷಣ,

ಮೂಡುಬಿದಿರೆ : ಅಕ್ರಮ ಗ್ರಾನೈಟ್ ಕಲ್ಲು ಕೋರೆಗೆ ದಾಳಿ

ತಾಲೂಕಿನ ಪಡುಮಾರ್ನಾಡು ಗ್ರಾ.ಪಂಚಾಯತ್ ವ್ಯಾಪ್ತಿಯ ತಂಡ್ರಕೆರೆ ಗಂಪದಡ್ಕ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗ್ರಾನೈಟ್ ಕಲ್ಲಿನ ಕೋರೆಗೆ ಮೂಡುಬಿದಿರೆ ತಹಶೀಲ್ದಾರ್ ಅವರು ಸಾರ್ವಜನಿಕರ ಸಹಕಾರದೊಂದಿಗೆ ದಾಳಿ ನಡೆಸಿ ಗ್ರಾನೈಟ್ ತುಂಬಿದ ಲಾರಿ, ಹಿಟಾಚಿ ಮತ್ತು ಕಲ್ಲು ಕೊರೆಯುವ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ 20 ದಿನಗಳಿಂದ ಇಲ್ಲಿ ಅಕ್ರಮವಾಗಿ ಬೆಲೆಬಾಳುವ ಬೃಹತ್ ಗ್ರಾನೈಟ್ ಕಲ್ಲಿನ ಕೋರೆ ನಡೆಯುತ್ತಿತ್ತು ಈ ಬಗ್ಗೆ ಸಾರ್ವಜನಿಕರು