Home ಕರಾವಳಿ Archive by category ಸುಳ್ಯ (Page 20)

ಸುಳ್ಯ: ಎನ್‌ಎಂಸಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲ್ ಮಾತನಾಡಿ, ಸಕಾರಾತ್ಮಕ ಮನೋಭಾವದೊಂದಿಗೆ ಜೀವನ ರೂಪಿಸಿಕೊಳ್ಳಿ. ಯಾವುದೇ ವೃತ್ತಿಯ ಬಗ್ಗೆ ಕೀಳರಿಮೆ ಬೇಡ. ಪಡೆದ ಪದವಿ

ಸುಳ್ಯ : ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ- ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಿದ ಸಂಸದರು

ಮಂಗಳೂರು : ಸುಳ್ಯ ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್ ವರ್ಕ್ ಸಮಸ್ಯೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಪರಿಹಾರದ ಕುರಿತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ಮಾಡಿ ಚರ್ಚಿಸಿದರು. ಸುಳ್ಯ ತಾಲೂಕಿನ ತೊಡಿಕಾನದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಕಡೆ ನೆಟ್‌ವರ್ಕ್

ಪಂಜ: ಮಾಯಿಲ ಕೋಟೆ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ರಚನೆ

ಪಂಜ: ಮಾಯಿಲ ಕೋಟೆ ಸೀಮೆ ದೈವಸ್ಥಾನ ಪಂಜ ಇದರ ಜೀರ್ಣೋದ್ಧಾರ ಸಮಿತಿ ರಚನೆ ಗೊಂಡಿತು.ಗೌರವಾಧ್ಯಕ್ಷರಾಗಿ ಶ್ರೀ ಧಾಮ‌ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ , ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಅಧ್ಯಕ್ಷರಾಗಿಸದಾಶಿವ ಪಳಂಗಾಯ, ಕಾರ್ಯಾಧ್ಯಕ್ಷರಾಗಿ ಬಿಶ್ವಜಿತ್ ಪಳಂಗಾಯ,ಉಪಾಧ್ಯಕ್ಷರಾಗಿ ಕುಮಾರ್ ಬಳ್ಳಕ್ಕ, ಸುದರ್ಶನ್ ಪಟ್ಟಾಜೆ, ತಮ್ಮಯ್ಯ ನಾಯ್ಕ ಪಟ್ಟಾಜೆ, ಸುರೇಶ ಅಡ್ಡತ್ತೋಡು, ಚನಿಯ

ಬೆಳ್ಳಾರೆ: ಮಹಿಳೆಯ ಶವ ಪತ್ತೆ- ಕೊಲೆ ಶಂಕೆ

ಸುಳ್ಯ: ಬೆಳ್ಳಾರೆ ಪೇಟೆಯಲ್ಲಿ ಮಹಿಳೆಯೋರ್ವರ ಶವ ಪತ್ತೆಯಾಗಿದ್ದು ಕೊಳೆ ಶಂಕೆ ವ್ಯಕ್ತವಾಗಿದೆ.ಬೆಳ್ಳಾರೆ ಪೇಟೆಯ ಎಪಿಎಂಸಿ ಮಾರುಕಟ್ಟೆ ಬಳಿ ಸೋಮವಾರ ಮಹಿಳೆಯ ಶವ ಪತ್ತೆಯಾಗಿದೆ. ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. ಮೃತ ಮಹಿಳೆಯನ್ನು ಪಾಟಾಜೆಯ ನಳಿನಿ ಎಂದು ಗುರುತಿಸಲಾಗಿದೆ. ಪೊಲೀಸ್ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಸುಳ್ಯ: ಎನ್‌ಎಂಸಿ ನೇಚರ್ ಕ್ಲಬ್ ವತಿಯಿಂದ ಸ. ಹಿ. ಪ್ರಾ. ಶಾಲೆ ಕನ್ನಡ ಪೆರಾಜೆಯಲ್ಲಿ ಹಸಿರು ಉಸಿರು ಕಾರ್ಯಕ್ರಮ

ನೆಹರೂ ಸ್ಮಾರಕ ಪದವಿ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ವತಿಯಿಂದ ಗ್ರಾಮ ಪಂಚಾಯತ್ ಪೆರಾಜೆ, ಸಾಮಾಜಿಕ ಅರಣ್ಯ ಇಲಾಖೆ ಸುಳ್ಯ ವಲಯ, ಹಿರಿಯ ವಿದ್ಯಾರ್ಥಿ ಸಂಘ ಕನ್ನಡ ಪೆರಾಜೆ ಶಾಲೆ, ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಪೆರಾಜೆಯಲ್ಲಿ ‘ಹಸಿರು ಉಸಿರು’ ಸಸ್ಯೋದ್ಯಾನ ನಿರ್ಮಾಣ ಮತ್ತು ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಪೆರಾಜೆ ಗ್ರಾಮ

ಸುಳ್ಯ : ಕಣ್ಣಿನ ಚಿಕಿತ್ಸೆಗಾಗಿ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್(ರಿ) ಸುಳ್ಯ ತಾಲೂಕು ಬೆಳ್ಳಾರೆ ವಲಯದ ಐವ೯ನಾಡು ಒಕ್ಕೂಟದ ಜ್ಞಾನಶ್ರೀ ಸ್ವಸಹಾಯ ಸಂಘದ ಸದಸ್ಯರಾದ ಶ್ರೀಮತಿ ಭವಾನಿ ರವರಿಗೆ ಕಣ್ಣಿನ ಚಿಕಿತ್ಸೆಗಾಗಿ ಸಂಪೂರ್ಣ ಸುರಕ್ಷಾ ಚೆಕ್ ಮಂಜುರಾಗಿದ್ದು ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಶ್ರೀಮತಿ ವೇದ ಎಚ್ ಶೆಟ್ಟಿ ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಉಪಾಧ್ಯಕ್ಷರಾದ ಶ್ರೀಮತಿ ರೋಹಿತಾಕ್ಷಿ ಕೃಷಿ ಮೇಲ್ವಿಚಾರಕರಾದ ರಮೇಶ್

ಸುಳ್ಯ : ಎಎನ್‌ಎಂಸಿ ನೂತನ ಆಡಳಿತ ಅಧಿಕಾರಿಯಾಗಿ ಚಂದ್ರಶೇಖರ್ ಪೇರಾಲು ನೇಮಕ

ನೆಹರೂ ಮೆಮೋರಿಯಲ್ ಪದವಿ ಮತ್ತು ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ನೂತನ ಆಡಳಿತ ಅಧಿಕಾರಿಯಾಗಿ ಚಂದ್ರಶೇಖರ್ ಪೇರಾಲು ನೇಮಕವಾಗಿದ್ದು, ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನ ಉಪಾಧ್ಯಕ್ಷೆ ಶೋಭಾ ಚಿದಾನಂದ ಮತ್ತು ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ ಯವರ ಉಪಸ್ಥಿತಿಯಲ್ಲಿ ಜವಾಬ್ದಾರಿ ವಹಿಸಿಕೊಂಡರು. ಇವರು ಈ ಹಿಂದೆ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪದವಿ

ಪೆರುವಾಜೆ: ಮಲಗಿದ್ದ ಸ್ಥಿತಿಯಲ್ಲಿ ಶ್ರೀನಿವಾಸ್- ಧರ್ಮಸ್ಥಳ ಸಂಘದಿಂದ ವಾಟರ್ ಬೆಡ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಸುಳ್ಯ ಪೆರುವಾಜೆ ಗ್ರಾಮದ ಸದಸ್ಯರಾದ ಶ್ರೀನಿವಾಸ ನಾಯ್ಕ ಇವರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೇಲ್ಚಾವಣಿಯಿಂದ ಕೆಳಗಡೆ ಬಿದ್ದು ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದು ಮಲಗಿದ ಸ್ಥಿತಿಯಲ್ಲಿರುತ್ತಾರೆ ಇವರಿಗೆ ಯೋಜನೆಯ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ಸಿಗುವಂತಹ ವಾಟರ್ ಬೆಡ್ ನ್ನು ವಿತರಿಸಲಾಗಿದೆ ಈ ಸಂದರ್ಭದಲ್ಲಿ ಶ್ರೀ ಜಲದುರ್ಗ ದೇವಿ ದೇವಸ್ಥಾನ ಪೆರುವಾಜೆ ಮಾಜಿ

ಸುಳ್ಯ : ಸಹಾಯದ ನಿರೀಕ್ಷೆಯಲ್ಲಿ ‘ಪ್ರದೀಪ್ ಅಡ್ಕ’

ನಮ್ಮ ಯುವ ತೇಜಸ್ಸಿನ ಆಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ‘ಪ್ರದೀಪ್ ಅಡ್ಕ’ ಎಂಬುವವರು ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ತಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು, ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವ ತೇಜಸ್ಸು ಆಂಬುಲೆನ್ಸ್‌ನಲ್ಲಿ ಬಹಳಷ್ಟು ಬಾರಿ ಬಡವರಿಗೆ (ಕಷ್ಟದಲ್ಲಿರುವವರಿಗೆ) ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪರು ಯುವ ತೇಜಸ್ಸಿನ ನಲ್ಮೆಯ

ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪ್ರಸಾದ ಚೀಲ ಕೊಡುಗೆ

 ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪ್ರಸಾದ ಚೀಲಗಳನ್ನು ಸೌಧಾಮಿನಿ  ಮಾಲಕರಾದ  ಮೋನಪ್ಪ ನಾಯ್ಕ್ ಎಂಬವರು ಸೇವಾರೂಪದಲ್ಲಿ ನೀಡಿದರು. ಇವರಿಗೆ ದೇಗುಲದ ವತಿಯಿಂದ ಶ್ರೀ ದೇವರ ಪ್ರಸಾದ ನೀಡಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ಹಾಗೂ ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಉಪಸ್ಥಿತಿದ್ದರು.