ಪಜ್ಜೆ ಫೂಟ್ ವರ‍್ಸ್ ಸುಸಜ್ಜಿತ ಪಾದರಕ್ಷೆ ಮಳಿಗೆಯನ್ನು ಬೆಳ್ಳಾರೆ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷರಾದ ರಾಜೇಶ್ ಶಾನುಭೋಗ್ ದೀಪ ಬೆಳಗಿಸುವ ಉದ್ಘಾಟಿಸಿದರು. ನಂತರ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಮಾಧವ ಗೌಡ ಬೆಳ್ಳಾರೆ ಅಧ್ಯಕ್ಷರು ವಾಣಿಜ್ಯ ವರ್ತಕರ ಸಂಘ ಬೆಳ್ಳಾರೆ ಹಾಗೂ ಶಾಹಿನ್ ಮಹಾಲಿನ ಮಾಲಕರದ
ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯು ಇಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ನಂದ ಕುಮಾರ್, ಸುಳ್ಯ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕರುಣಾಕರ, ಆರೋಗ್ಯ ಇಲಾಖೆಯ ಸಹಾಯಕ ಇಂಜಿನಿಯರ್ ರಾಜೇಶ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸುನಿಲ್
ಸುಳ್ಯ: ಸುಳ್ಯದಲ್ಲಿ ಕಳೆದ 6 ಬಾರಿ ಶಾಸಕರಾಗಿ ಸಚಿವರಾಗಿರುವ ಅಂಗಾರರ ವಿರುದ್ಧ ಸುಳ್ಯದ ಕಾಂಗ್ರೆಸಿಗರಿಗೆ ಕಳೆದ 30 ವರ್ಷಗಳಿಂದ ಯಾವುದೇ ಸರ್ಕಸ್ ಮಾಡಿದರೂ ಗೆಲ್ಲಲು ಸಾಧ್ಯವಾಗಿಲ್ಲ. ಮುಂದೆಯೂ ಗೆಲ್ಲಲು ಸಾಧ್ಯವಿಲ್ಲ ಎಂದು ಸುಳ್ಯ ಬಿಜೆಪಿ ನಗರ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ ಮತ್ತು ಸಿಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಹೇಳಿದರು. ಅವರು ಸುಳ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, “ಸುಳ್ಯದ ಜನತೆ ಅಂಗಾರರನ್ನು
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಯಶಸ್ವಿನಿ ಆನೆಗೆ ಅರಣ್ಯ ಇಲಾಖೆಯಿಂದ ಮಾಲಿಕತ್ವ ಪ್ರಮಾಣ ಪತ್ರ ದೊರೆತಿದೆ. ಕಳೆದ 18 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಆನೆಗೆ ಇದ್ದರೂ ಮಾಲಿಕತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಇದೀಗ ಮುಂದಿನ 5 ವರ್ಷಗಳ ವರೆಗೆ ಮಾಲಿಕತ್ವ ದೊರೆತಿರುವುದಾಗಿ ಅರಣ್ಯ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಕೆಲ ವರ್ಷಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಾಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿರುವ
ಶತಮಾನ ಸಂವತ್ಸರಗಳನ್ನು ದಾಟಿ ಮುನ್ನಡೆಯುತ್ತಿರುವ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ಅಡ್ಕಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗೋದಾಮು ಕಟ್ಟಡದ ಉದ್ಘಾಟನೆಯು ಅ.16ರಂದು ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಜರುಗಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಅವರು ತಿಳಿಸಿದರು. ಅವರು ಸುಳ್ಯದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕನಕಮಜಲು ಪ್ರಾ.ಕೃ. ಪ.ಸ.ಸಂಘವು
ಬೆಳ್ಳಾರೆ :ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ.ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪರಿಶಿಷ್ಟ ಜಾತಿಯ ಯುವತಿಯೊಬ್ಬಳಿಗೆ ನೆರಮನೆಯ ಯುವಕ ಗೋಪಾಲಕೃಷ್ಣ ಎಂಬವನು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು . ಅದರಂತೆ ಬೆಳ್ಳಾರೆ ಠಾಣೆ ಯಲ್ಲಿ ಯುವತಿಯ ಮನೆಯವರು ನೀಡಿರುವ ದೂರಿನ ಅನ್ವಯ ಲೈಂಗಿಕ ದೌರ್ಜನ್ಯ ಅಟ್ರಾಸಿಟಿ ಕೇಸು ನೀಡಿದ್ದು ಪ್ರಕರಣ ದಾಖಲಾಗಿದ್ದು, ಬೆಳ್ಳಾರೆ
ಆರಂತೋಡು ಅಡ್ಡಕ್ಕ ಎಂಬಲ್ಲಿ ಮಹಿಳೆ ಯೊಬ್ಬರು ಸುಮಾರು 10 ದಿನದ ಹಿಂದೆ ಮೃತಾರಾಗಿದ್ದು ಕೊಳೆತ ಸ್ಥಿತಿ ಯಲ್ಲಿ ಪತ್ತೆ ಯಾಗಿದ್ದು ವ್ಯಕ್ತಿ ಯೊಬ್ಬರು ನೋಡಿ ವಿಪತ್ತು ನಿರ್ವಹಣ ಘಟಕ ಸದಸ್ಯರ ಗಮನಕೆ ತಂದಾಗ ತಕ್ಷಣ ಸ್ಪಂದಿಸಿ ವಿಪತ್ತು ನಿರ್ವಹಣ ಸದಸ್ಯ ಅಬ್ದುಲ್ ರಜಾಕ್ ಮತ್ತು ಸದಸ್ಯರು ಸೇರಿ ತಮ್ಮ ಆಂಬುಲೆನ್ಸ್ ನಲ್ಲಿ ಹೋಗಿ ಶವ ತೆಗಿದು ಕೊಂಡು ಸುಳ್ಯ ವಿಮುಕ್ತಿ ಧಾಮಕ್ಕೆ ತಂದು ಸದಸ್ಯರಾದ ಪ್ರಸನ್ನ ರವರ ಪಿಕಪ್ ವಾಹನದಲ್ಲಿ ಸುಮಾರು 200 ಕೆಜಿ ಚಿಪ್ಪಿ ತಂದು
ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಪೆರಾಜೆಯ ಪೆರಂಗಜೆ ಗೌರೀಶ ಎಂಬ ಯುವಕನದೆಂದು ಗೊತ್ತಾಗಿದೆ.4 ದಿನಗಳ ಹಿಂದೆ ಗುರುವಾರ ದಿನ ಸಂಜೆ ಗೌರೀಶ ಕಾರಲ್ಲಿ ಬಂದು ಸರಕಾರಿ ಆಸ್ಪತ್ರೆಯ ಎದುರಿನ ಜಾಗದಲ್ಲಿ ಕಾರು ಪಾರ್ಕ್ ಮಾಡಿದ್ದನೆಂದೂ, ವಿಪರೀತ ಕುಡಿತದ ಪರಿಣಾಮವಾಗಿ ಶುಕ್ರವಾರ ದಿನ ಮೃತಪಟ್ಟಿರಬೇಕೆಂದೂ ಶಂಕಿಸಲಾಗಿದೆ.ಶವ ಬಾತುಕೊಂಡಿದ್ದು ವಾಸನೆ ಬರತೊಡಗಿದ ಹಿನ್ನಲೆಯಲ್ಲಿ ಆದಿತ್ಯವಾರ ಬೆಳಿಗ್ಗೆ
ರಾಜ್ಯ ಬಿಜೆಪಿ ಸರಕಾರವು ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸ್ಥಳೀಯ ಆಡಳಿತಕ್ಕೆ ಒತ್ತು ನೀಡಿ ಪಂಚಾಯತ್ ರಾಜ್ ವ್ಯವಸ್ಥೆಗೆ ನೀಡಲಾಗಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿದೆ. ಈ ತಿದ್ದುಪಡಿಯನ್ನು ರಾಜ್ಯ ಸರಕಾರ ಗ್ರಾ.ಪಂ.ಅಧ್ಯಕ್ಷರ ಅಧಿಕಾರ ಮೊಟಕು ಗೊಳಿಸುವ ವಿರುದ್ದ ಸುಳ್ಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುಳ್ಯದ ಪ್ರಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕಾಂಗ್ರೆಸ್
ಸುಳ್ಯ: ಸ್ಕೂಟಿ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಯಲ್ಲಿದ್ದ ಅಣ್ಣ ಮತ್ತು ತಂಗಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಸುಳ್ಯ ತಾಲೂಕಿನ ಎಲಿಮಲೆ ಸಮೀಪ ಸಂಭವಿಸಿದೆ. ಎಲಿಮಲೆ ಮತ್ತು ಜಬಳೆ ಮಧ್ಯೆ ಇಂದು ಮಧ್ಯಾಹ್ನ ಘಟನೆ ಸಂಭವಿಸಿದೆ. ಕಡಪಾಲ ಬಾಜಿನಡ್ಕ ದೇವಿದಾಸ್ ಎಂಬವರ ಪುತ್ರ ನಿಶಾಂತ್ ಚಲಾಯಿಸುತ್ತಿದ್ದ ಸ್ಕೂಟಿ ಮತ್ತು ಮಾರುತಿ ಕಾರು ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ



























