ಈ-ಮಣ್ಣು ಚಲನ ಚಿತ್ರವನ್ನು ದುಬೈನ ಗಲೇರಿಯಾ ಚಿತ್ರಮಂದಿರದಲ್ಲಿ ವಿಶೇಷ ಅತಿಥಿಗಳನ್ನು ಆಹ್ವಾನಿಸಿ ಪ್ರದರ್ಶಿಸಿದ್ದು, ಯು.ಎ.ಇ.ಕನ್ನಡಿಗರಲ್ಲಿ ಸಡಗರ ಮೂಡಿಸಿತ್ತು. ಹೃದಯ ಸ್ವರ್ಶಿ ಮತ್ತು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಈ ಚಲನಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶಿವಧ್ವಜ್ ಶೆಟ್ಟಿ ನಿರ್ದೇಶಿಸಿದ್ದು, ದುಬೈನ ಅನಿವಾಸಿ ಕನ್ನಡಿಗ
ಅಮ್ಮ ಕಲಾವಿದರು ಬಹರೈನ್ ಅರ್ಪಿಸುವ ಸಂಗೀತ ಗಾನ ಸಂಭ್ರಮ 22 ಕಾರ್ಯಕ್ರಮದ ಮುಹೂರ್ತ ಪೂಜೆ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ಆಗಸ್ಟ್ 19ರಂದು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಗಣ್ಯ ಅತಿಥಿಗಳ ಸಮಕ್ಷಮದಲ್ಲಿ ನೆರವೇರಿತು. ಅಮ್ಮ ಕಲಾವಿದರು ಸಂಘಟನೆಯ ಮುಖ್ಯಸ್ಥರಾದ ಮೋಹನದಾಸ್ ರೈ ಎರುಂಬು ಸಾರಥ್ಯದಲ್ಲಿ ನಡೆಯಲಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ತಾಯ್ನಾಡಿಂದ ಖ್ಯಾತ ಗಾಯಕ ತುಳುನಾಡ ಗಾನಗಂಧರ್ವ ಜಗದೀಶ ಆಚಾರ್ಯ ಪುತ್ತೂರು ಮತ್ತು ಅವರ ಬಳಗದ ಯುವ
ಉಳ್ಳಾಲ: ಸಂಚಾರಿ ಠಾಣಾ ಎಎಸ್ ಐ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ತಲಪಾಡಿಯಲ್ಲಿ ನಡೆದಿದ್ದು, ಕೃತ್ಯ ಖಂಡಿಸಿ ಬಸ್ ಸಿಬ್ಬಂದಿ ತಲಪಾಡಿ- ಸ್ಟೇಟ್ ಬ್ಯಾಂಕ್ ಚಲಿಸುವ ಬಸ್ ಬಂದ್ ನಡೆಸಿ ಪ್ರತಿಭಟನೆ ನಡೆಸಿದ್ರು.ಉಷಾ ಹೆಸರಿನ ಸಿಟಿ ಬಸ್ ನಿರ್ವಾಹಕ ರಾಜು ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೆಪ್ಪು ಸಂಚಾರಿ ಠಾಣೆಯ ಎಎಸ್ ಐ ಆಲ್ಬರ್ಟ್ ಲಸ್ರಾದೊ ಇಂದು ಬೆಳಿಗ್ಗೆ ತಲಪಾಡಿ ಬಳಿ ಸಿಟಿ ಬಸ್ಸುಗಳ ವಿರುದ್ಧ ಕೇಸುಗಳನ್ನು
ಕಡಲ ತಡಿಯ ಕರಾವಳಿಯಲ್ಲೀಗ ಆಟಿ ತಿಂಗಳಿನ ಸಂಭ್ರಮ, ಸಡಗರ ಮನೆ ಮಾಡಿದೆ. ವಿವಿಧ ಬಗೆಯ ತಿನಿಸು ತಯಾರು ಮಾಡಿ ತಿನ್ನುವುದೇ ಒಂದು ಖುಷಿ. ಕೇವಲ ಆಹಾರಗಳು ಮಾತ್ರವಲ್ಲ ಆಟೋಟ ಸ್ಪರ್ಧೆಗಳು ಕೂಡ ಕೆಸರಿನ ಗದ್ದೆಯಲ್ಲಿ ವಿಶೇಷ ಮೆರುಗು ನೀಡುತ್ತದೆ. ಇದಕ್ಕಾಗಿಯೇ ಆಟಿ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾದ ವೇದಿಕೆ ಸಿದ್ದಗೊಳ್ಳಿವುದು ಸರ್ವ ಸಾಮಾನ್ಯ. ಇದು ಮೊದಲಿನಿಂದಲೂ ಆಚರಿಸಿಕೊಂಡು ಬಂದ ಪದ್ದತಿ. ಒಂದು ಕಾಲಕ್ಕೆ ಬಡತನದ ಸಂಕೇತವಾಗಿದ್ದ ಆಟಿಯ
ಬರ್ಮಿಂಗಂ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಲಭ್ಯವಾಗಿದೆ 55 ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸಂಕೇತ್ ಮಹಾದೇವ್ ಸರ್ಕಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ
ಸುಳ್ಯ: ಮಂಗಳವಾರ ತಡ ರಾತ್ರಿ ತಂಡವೊಂದು ಯುವಕನ ಮೇಲೆ ಸೋಡಾ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ಳಾರೆಯ ಕಳಂಜ ಎಂಬಲ್ಲಿ ಕಳೆದ ರಾತ್ರಿ ಈ ಹಲ್ಲೆ ನಡೆದಿದ್ದು ಮಸೂದ್ (19) ಎಂಬವರು ಗಂಭೀರವಾಗಿ ಗಾಯಗೊಂಡವರು . ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ ಮಸೂದ್ ಮೂಲತ: ಕಳಂಜದ ನಿವಾಸಿ ಅಲ್ಲ ಎನ್ನುವ
ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಮೋಡೇಲ್ ರೆನಿ ಜಾರ್ಜ್ ಅವರು ಸದ್ಯದಲ್ಲೇ ಸಿಡ್ನಿಯಲ್ಲಿ ನಡೆಯಲಿರುವ ಮಿಸ್ ವರ್ಲ್ಡ್ ಯೂನಿವರ್ಸಲ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಹೊಸದಿಲ್ಲಿಯಲ್ಲಿಯ ನಿವಾಸಿಯಾಗಿರುವ ರೆನಿ ಜಾರ್ಜ್ ಅವರು ನರ್ಸಿಂಗ್ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಇದೀಗ ಹದಿನೈದು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವೃತ್ತಿಯಲ್ಲಿದ್ದಾರೆ. 2022ರ ಮಿಸ್ ಇಂಡಿಯಾ ವರ್ಲ್ಡ್ ಯೂನಿರ್ವಸಲ್ ಕಿರೀಟ ಗೆದ್ದಿರುವ
ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಮಾನವ ಕುವೆಂಪು ಕಲಾ ಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ ಹಾಗೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವ ಏಕೈಕ ಸಂಸ್ಥೆಯಿಂದ ಕುವೆಂಪು 118ನೇ ಜಯಂತಿ ಕರ್ನಾಟಕ ರತ್ನ ಡಾಕ್ಟರ್ ದೇ ಜವರೇಗೌಡ ಜಯಂತಿ ಗುರು-ಶಿಷ್ಯರ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕನ್ನಡ ಸಾಂಸ್ಕೃತಿಕ ಉತ್ಸವ ಹಾಗೂ ಅಬುದಾಬಿ ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರಿಗೆ ಕರ್ನಾಟಕ ರತ್ನ ಡಾಕ್ಟರ್ ದೇ ಜವರೇಗೌಡ ಪ್ರಶಸ್ತಿಯನ್ನು ದಿನಾಂಕ 6
ಹೂಡಿಕೆ ಮತ್ತು ವ್ಯಾಪಾರಕ್ಕೆ ದೊಡ್ಡ ಉತ್ತೇಜನ: ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ ಮೆಂಟ್ ಗ್ರೂಪ್ ಜೊತೆಗೆ ಒಪ್ಪಂದಕ್ಕೆ ಸಹಿ
ದುಬೈ: ಹೂಡಿಕೆಗಳು ಮತ್ತು ವ್ಯಾಪಾರಕ್ಕೆ ದೊಡ್ಡ ಉತ್ತೇಜನ ದೊರೆಯುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ ಮೆಂಟ್ ಗ್ರೂಪ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಲ್ಲಿನ ದುಬೈಎಕ್ಸ್ ಪೊ 2020 ಕಾರ್ಯಕ್ರಮ ನಡೆಯುತ್ತಿರುವ ಪೆವಿಲಿಯನ್‍ನಲ್ಲಿ ಈ ಒಪ್ಪಂದಕ್ಕೆ ಕರ್ನಾಟಕ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಹಾಗೂ ಐಟಿ, ಬಿಟಿ ಸಚಿವ ಸಿ ಎನ್ ಅಶ್ವಥ ನಾರಾಯಣ್ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ
ಕನ್ನಡ ಸಂಘ ಬಹ್ರೈನ್‌ನ ನಿಯೋಗದ ಸದಸ್ಯರು ಇಂದು ಬಹ್ರೈನ್‌ನಲ್ಲಿರುವ ಭಾರತದ ರಾಯಭಾರಿ ಪಿಯೂಷ್ ಶ್ರೀವಾಸ್ತವ ಅವರನ್ನು ಭೇಟಿ ಮಾಡಿದರು. ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ, ಮಾಜಿ ಅಧ್ಯಕ್ಷರು ಮತ್ತು ಕನ್ನಡ ಭವನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಆಸ್ಟಿನ್ ಸಂತೋಷ್, ಕಟ್ಟಡ ನಿಧಿ ಸಂಗ್ರಹಣೆ ಸಮಿತಿಯ ಅಧ್ಯಕ್ಷರಾದ ಅಮರನಾಥ್ ರೈ ಇದ್ದರು. ಭೇಟಿಯ ಸಂದರ್ಭದಲ್ಲಿ ನೂತನ ಕಟ್ಟಡ ನಿರ್ಮಾಣ, ಕರ್ನಾಟಕ

























