ಉಳ್ಳಾಲ : ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಲ್ಲಿ ಯಾವುದೇ ಗೊಂದಲವಿಲ್ಲ, ಒಮ್ಮತದ ಅಭ್ಯರ್ಥಿ, ಕಾಂಗ್ರೆಸ್ ಸೋಲಿಸುವುದೇ ನಮ್ಮ ಧ್ಯೇಯವಾಗಿದೆ, ಕಾರ್ಯಕರ್ತರು ನೋವಿನಿಂದ ಇದ್ದಲ್ಲಿ ನೇರ ಬಂದು ತಿಳಿಸಿ, ಸೂಕ್ತ ಅಭ್ಯರ್ಥಿ ಸತೀಶ್ ಕುಂಪಲ ಅವರನ್ನು ಅತ್ಯಧಿಕ ಮತಗಳೊಂದಿಗೆ ಗೆಲ್ಲಿಸುವುದೇ ಮಂಗಳೂರು ಮಂಡಲ ಬಿಜೆಪಿಯ ಗುರಿಯಾಗಿದೆ ಎಂದು ಜಿಲ್ಲಾ ಬಿಜೆಪಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಮುಖ್ಯಮಂತ್ರಿ ಅವರಿಗೆ ಹೂ ನೀಡಿ, ಆಶೀರ್ವಾದ ಪಡೆದರು.ಶುಭವಾಗಲಿ ಎಂದು ಸಿಎಂ ಆಶೀರ್ವದಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಭಾಗೀರಥಿ ಮುರುಳ್ಯ ಅವರು, ಸಾಮಾನ್ಯ ಕಾರ್ಯಕರ್ತೆ ಆಗಿರುವ ನನಗೆ ಚುನಾವಣೆ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಪಕ್ಷದ ಹಿರಿಯ ಮಾರ್ಗದರ್ಶನದಲ್ಲಿ ಕೆಲಸ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಿ.ಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಪಕ್ಷ ಅವಕಾಶ ನೀಡಿದ ಹಿನ್ನಲೆಯಲ್ಲಿ ಎ.12 ರಂದು ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ದಂಪತಿ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಬಳಿಕ ಅವರು ಡಾ.ಎಂ.ಕೆ ಪ್ರಸಾದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು.
ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಟಿಕೆಟ್ ತಪ್ಪುತ್ತಲೇ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರ ಮನೆಯತ್ತ ದೌಡಾಯಿಸುತ್ತಿದ್ದಾರೆ. ಅಭಿಮಾನಿಗಳನ್ನು ಕಂಡು ರಘುಪತಿ ಭಟ್ ಭಾವುಕರಾಗಿದ್ದಾರೆ. ನಾನು ಶಾಕ್ ನಲ್ಲಿದ್ದೇನೆ ಏನು ಹೇಳುವ ಸ್ಥಿತಿಯಲಿಲ್ಲ ಎಂದು ರಘುಪತಿ ಭಟ್ ಹೇಳಿದ್ದರು. ಪಕ್ಷ ನನ್ನನ್ನು ನಡೆಸಿಕೊಂಡ ಬಗ್ಗೆ ತುಂಬಾ ಬೇಸರವಿದೆ. ಕನಿಷ್ಠ ಜಿಲ್ಲಾ ಮಟ್ಟದ ನಾಯಕರು ಕೂಡ ಕರೆ ಮಾಡಿ ಮಾತನಾಡಿಲ್ಲ. ಜಾತಿಯ ಕಾರಣಕ್ಕೆ ನನಗೆ ಟಿಕೆಟ್ ತಪ್ಪಿದೆ ಅನ್ನೋದು
ಚುನಾವಣಾ ರಾಜಕೀಯದಿಂದ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ನಿವೃತ್ತರಾಗಿದ್ದಾರೆ.ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ನಾನು ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದು ಎಂದು ವಿನಂತಿಸುತ್ತೇನೆ ಎಂದಿದ್ದಾರೆ. ಕಳೆದ 40ಕ್ಕೂ ಹೆಚ್ಚು ವರ್ಷದ ರಾಜಕೀಯ ಜೀವನದಲ್ಲಿ ಬೂತ್ ಮಟ್ಟದಿಂದ
ಮುಂಬೈ : ಮಹಾರಾಷ್ಟ್ರದ ಮುಂಬೈಯ ನಗರದಲ್ಲಿ ಕರ್ನಾಟಕ ಸಂಘದ ಮೂಲಕ ನಾಡಿನ ಸಂಸ್ಕೃತಿಕ ವೈಭವವನ್ನು ಇಲ್ಲಿ ಮೇಲಾಯಿಸುತ್ತಿದ್ದಾರೆ, ಸಾಹಿತಿಗಳನ್ನು ಕಲಾವಿದರನ್ನು ಬೆಳೆಸುವಲ್ಲಿ ಸಂಘ 90 ವರ್ಷಗಳ ಗಳಿಂದ ಮಾಡುತ್ತಿರುವುದು ಸೇವೆ ನಿಜಕ್ಕೂ ಅಭಿನಂದನೆಯ ,ಈ ಸಂಭ್ರಮಕ್ಕೆ ಮಹಾನ್ ಸಾಧಕರನ್ನು ವೇದಿಕೆಯಲ್ಲಿ ಬರಮಾಡಿಸಿದ್ದಾರೆ ಇದು ಸಂಘದ ಸೇವಾ ಕಾರ್ಯಕ್ಕೆ ಸ್ಪೂರ್ತಿ ತುಂಬಿದೆ, ಯುವ ಜನಾಂಗಕ್ಕೆ ಇಂಥ ಸಾಧಕರು ಗುರುತಿಸುವುದು ಅಗತ್ಯವಿದೆ ,ಕನ್ನಡದ ದೀಪವನ್ನು ಈ ನಗರದಲ್ಲಿ
ಮುಂಬೈ : ಹೊರನಾಡಿನ ಕನ್ನಡಿಗರಿಗೆ ಕನ್ನಡದ ಭಾಷೆ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನವಿದ್ದು,ಅದು ಅವರನ್ನು ಜಾಗೃತ ಗೊಳಿಸಿ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಕನ್ನಡ ಭಾಷೆಯ ಉಳಿವಿಗಾಗಿ ನಿರಂತರವಾಗಿ ಕೆಲಸ ಕಾರ್ಯಗಳು ಮಹಾರಾಷ್ಟ್ರದಲ್ಲಿ ನಡೆಯುವಷ್ಟು ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮ ನಮ್ಮ ಕನ್ನಡ ನಾಡಿನಲ್ಲೂ ನಡೆಯುವುದಿಲ್ಲ.90 ವರ್ಷಗಳಿಂದ ಕರ್ನಾಟಕ ಸಂಘ ಮಾಡುತ್ತಿರುವ ಕನ್ನಡ ಪರ ಕಾರ್ಯಗಳು ತುಂಬಾ
ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭಾನುವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ “ದಿ ಎಲಿಫೆಂಟ್ ವಿಸ್ಪರರ್ಸ್’ನ ಪ್ರಮುಖ ಪಾತ್ರಧಾರಿ ಗಳಾದ ಕಾವಾಡಿ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮೈಸೂರಿನಲ್ಲಿ ಭಾನುವಾರ ನಡೆದ `ಪ್ರಾಜೆಕ್ಟ್ ಟೈಗರ್’ 50 ವರ್ಷಗಳನ್ನು ಪೂರೈಸಿದ ಸಮಾರಂಭದಲ್ಲಿ, ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಎಲಿಫೆಂಟ್ ವಿಸ್ಪರರ್ಸ್
ನಾಳೆ ರಾಜ್ಯದ ಮುಖ್ಯಮಂತ್ರಿ ಶ್ರೀ. ಪಿಣರಾಯಿ ವಿಜಯನ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ನಾಳೆಯಿಂದ ಮನೆ, ಜಮೀನು ಇಲ್ಲದ 174 ಕುಟುಂಬಗಳು ಸ್ವಂತ ಮನೆ ಹೊಂದಲಿದ್ದು, ಇವರಿಗೆ ಸ್ವಂತ ಮನೆ ಕನಸಾಗಿತ್ತು. ಈ ವಸತಿ ಸಮುಚ್ಚಯಗಳು ಕಣ್ಣೂರು ಜಿಲ್ಲೆಯ ಕದಂಪುರ್, ಕೊಲ್ಲಂ ಜಿಲ್ಲೆಯ ಪುನಲೂರ್, ಕೊಟ್ಟಾಯಂ ಜಿಲ್ಲೆಯ ವಿಜಯಪುರಂ ಮತ್ತು ಇಡುಕ್ಕಿ ಜಿಲ್ಲೆಯ ಕರಿಮಣ್ಣೂರಿನಲ್ಲಿವೆ. ಪ್ರತಿ ವಸತಿ ಸಮುಚ್ಚಯ ನಿರ್ಮಿಸಲು 6.7 ಕೋಟಿಯಿಂದ 7.85 ಕೋಟಿ ವೆಚ್ಚ ಮಾಡಲಾಗಿದೆ.
ವಿಜಯಪುರದ ಗೊಲ್ಲಾಳೇಶ್ವರ ರಥೋತ್ಸವದಲ್ಲಿ ರಥದ ಕಲಶ ಕಟ್ಟುತ್ತಿದ್ದಾಗ ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಗೊಲ್ಲಾಳೇಶ್ವರ ರಥೋತ್ಸವದ ಹಿನ್ನೆಲೆಯಲ್ಲಿ ಸಾಹೇಬಪಟೇಲ್ ಖಾಜಾಪಟೇಲ್ ಎಂಬವರು ರಥದ ತುತ್ತ ತುದಿಯಲ್ಲಿ ಕಲಶ ಕಟ್ಟುತ್ತಿದ್ದರು. ಈ ವೇಳೆ ಸಾಹೇಬಪಟೇಲ್ ಅವರು ಕಾಲು ಜಾರಿ ರಥದಿಂದ ಬಿದ್ದಿದ್ದಾರೆ ಎನ್ನಲಾಗಿದೆ. ಕಲಶ ಕಟ್ಟುವಾಗ ಕೈಯಲ್ಲಿದ್ದ ಹಗ್ಗ ಜಾರಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಕೂಡಲೇ




























