Home Archive by category Fresh News (Page 37)

ಬಿಜೆಪಿಯು ನಮ್ಮ ಹಣ ಕದಿಯುತ್ತಿದೆ : ಕೆ. ಸಿ. ವೇಣುಗೋಪಾಲ್

ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಹಾಗೂ ಕಾಂಗ್ರೆಸ್ಸಿನ ಬ್ಯಾಂಕ್ ಖಾತೆಗಳಿಂದ ಆದಾಯ ತೆರಿಗೆ ಇಲಾಖೆಯು 65.89 ಕೋಟಿ ರೂಪಾಯಿ ಕತ್ತರಿಸಿಕೊಳ್ಳುತ್ತಿದೆ ಇದು ಬಿಜೆಪಿ ಕದಿಯುತ್ತಿರುವ ಹಣ ಎಂದು ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಆಪಾದಿಸಿದರು.ನಾವು ಕೇಂದ್ರದಲ್ಲಿ ಆಳುತ್ತಿದ್ದಾಗ ಬಿಜೆಪಿ ವಿಷಯದಲ್ಲಿ ನಾವು ಹೀಗೆ ಎಂದೂ ಹೀಗೆ ನಡೆದುಕೊಂಡಿಲ್ಲ. ಬಿಜೆಪಿಯು

ಜಮ್ಮು-ಕಾಶ್ಮೀರದ ಮಾಜೀ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮನೆ ಮೇಲೆ ಸಿಬಿಐ ದಾಳಿ

ಜಮ್ಮು ಮತ್ತು ಕಾಶ್ಮೀರದ ಹೈಡಲ್ ಯೋಜನೆ ಗುತ್ತಿಗೆ ನೀಡುವುದರಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಜಮ್ಮು ಕಾಶ್ಮೀರದ ಮಾಜೀ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿತು.ಸತ್ಯಪಾಲ್ ಮಲಿಕ್‌ರಿಗೆ ಸೇರಿದ ಮತ್ತು ಆ ಪ್ರಕರಣ ಸಂಬಂಧಿ 40 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಯಿತು. ಗುರುವಾರ ಮುಂಜಾನೆಯೇ ಸಿಬಿಐ ಅಧಿಕಾರಿಗಳ ತಂಡ ಮಾಜೀ ರಾಜ್ಯಪಾಲರ ಮನೆ ಹೊಕ್ಕಿತು.2200 ಕೋಟಿ ರೂಪಾಯಿ ಮೊತ್ತದ ಹಲವು ಕಿರು ಜಲವಿದ್ಯುತ್ ಯೋಜನೆ

ಇಂಗ್ಲೆಂಡಿನಲ್ಲಿ ಭಾರತೀಯನ ಸಾವು : ಕೊಲೆ ನಡೆಯಿತೇ, ಅಪಘಾತವೇ?

ಲಂಡನ್ : ಇಂಗ್ಲೆಂಡಿನಲ್ಲಿ ಭಾರತೀಯ ಮೂಲದ 36ರ ವಿಘ್ನೇಶ್ ಪಟ್ಟಾಭಿರಾಮನ್ ಎಂಬವರ ಸಾವು ಆಗಿದೆ. ಸೈಕಲಿನಲ್ಲಿ ಮನೆಗೆ ಹೋಗುವಾಗ ಅಪಘಾತವಾಗಿ ಸಾವಾಗಿದೆ ಎಂದು ಒಂದು ವರದಿ ಹೇಳಿದರೆ ಇನ್ನೊಂದು ಅದು ಕೊಲೆ ಎಂದು ವರದಿ ಮಾಡಿದೆ.ಬ್ರಿಟನ್ನಿನ ವೆಲ್ ರೀಡಿಂಗ್‌ನಲ್ಲಿ ಹೋಟೆಲೊಂದರ ಮ್ಯಾನೇಜರ್ ಆಗಿ ವಿಘ್ನೇಶ್ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೋಗುವಾಗ ಹೋಟೆಲಿಗೆ ಹತ್ತಿರದ ಪ್ಲೇಸ್ ಜಂಕ್ಷನ್‌ನಲ್ಲಿ ಸೈಕಲಿನಿಂದ ಅವರು ಬಿದ್ದು ಮೃತರಾಗಿದ್ದಾರೆ. ಬೀಳಲು

ರೈತರ ಖಾತೆ ನಿರ್ಬಂಧಿಸಲು ಆದೇಶ :ಒಲ್ಲೆ ಎಂದ ಎಕ್ಸ್ ಪೋಸ್ಟ್ ಸಂಸ್ಥೆ

ದಿಲ್ಲಿ : ರೈತರ ದಿಲ್ಲಿ ಚಲೋ ಚಳವಳಿಗೆ ಸಂಬಂಧಿಸಿದಂತೆ ಪೋಸ್ಟ್ ಮಾಡುತ್ತಿರುವ 177 ರೈತರ ಎಕ್ಸ್ ಪೋಸ್ಟ್ ಖಾತೆಗಳನ್ನು ನಿರ್ಬಂಧಿಸುವಂತೆ ಒಕ್ಕೂಟ ಬಿಜೆಪಿ ಸರಕಾರದ ಐಟಿ ಸಚಿವಾಲಯ ಹೇಳಿದ್ದು ಆ ಕೋರಿಕೆಯನ್ನು ಸೋಶಿಯಲ್ ಮೀಡಿಯಾ ನೆಟ್‌ವರ್ಕ್ ಎಕ್ಸ್ ಪೋಸ್ಟ್ ಸಂಸ್ಥೆ ಮಾನ್ಯ ಮಾಡಿಲ್ಲ.ಹಿಂದಿನ ಟ್ವಿಟರ್ ಎಕ್ಸ್ ಪೋಸ್ಟ್ ರೂಪ ತಾಳಿದ ಮೇಲೆ ಅದರ ಪೋಸ್ಟ್‌ಗಳು ಹೆಚ್ಚೆಚ್ಚು ಜನಪರ ಹೋರಾಟಗಳ ಪರ ಆಗತೊಡಗಿದೆ ಎನ್ನುವುದು ಕೆಲವರ ಅಂಬೋಣ. ಎಲೆಕ್ಟ್ರಾನಿಕ್ ಮತ್ತು ಮಾಹಿತಿ

ಸುಳ್ಯ: ಹರಿಹರ, ಕೊಲ್ಲಮೊಗ್ರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಬೇಡಿಕೆಗಳ ಬಗ್ಗೆ ಸಿಎಂಗೆ ಮನವಿ

ಸುಳ್ಯ: ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದಿರುವ ಹರಿಹರ ಕೊಲ್ಲಮೊಗ್ರು ಗ್ರಾಮದ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಗ್ರಾಮಸ್ಥರು ಮನವಿ ಸಲ್ಲಿಸಿದರು.ಕಲ್ಮಕಾರು ಶಾಲಾ ಜಮೀನನ್ನು ಶಾಲಾ ಹೆಸರಿನಲ್ಲಿ ಮಾಡಿ ಕೊಡುವಂತೆ, ಬೆಂಡೋಡಿ ಸರಕಾರಿ ಶಾಲೆಗೆ ಶೌಚಾಲಯ, ರಂಗಮಂದಿರ ಮತ್ತಿತರ ಸೌಲಭ್ಯ ಕಲ್ಪಿಸುವಂತೆ, ಸೇರಿದಂತೆ ಗ್ರಾಮ ವಾಸ್ತವ್ಯ ನಡೆದ ಅವಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ವಾಸ್ತವ್ಯ ದಲ್ಲಿ

ಪುತ್ತೂರಿನಲ್ಲಿ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆ ಶುಭಾರಂಭ

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಲಕ್ಷಾಂತರ ಜನರ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್ ಆಗಿದ್ದು, ಇದೀಗ ಪುತ್ತೂರಿನಲ್ಲಿ ತನ್ನ 10ನೇ ಆಭರಣ ಶೋರೂಂ ಉದ್ಘಾಟನೆಗೊಂಡಿತು. ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಶೋರೂಂನ್ನು ಖ್ಯಾತ ನಟಿ ಪ್ರಿಯಾಮಣಿ ಅವರು ಉದ್ಘಾಟಿಸಿದರು. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಅವರು ವೈವಿಧ್ಯಮಯ ವಜ್ರಾಭರಣದ ಸಂಗ್ರಹವನ್ನು ಅನಾವರಣ ಮಾಡಿದರು. ಎಸ್‌ಡಿಪಿಐ ಅಧ್ಯಕ್ಷ ಹಾಜೀ ಇಬ್ರಾಹಿಂ

ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಮಂಗಳೂರಿನ ಯುವಕರು

ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್- 2023 ಆಗಿ ಹೊರಹೊಮ್ಮಿದರು. ಮಂಗಳೂರಿನ ಆರೂರು ಅರ್ಜುನ್ ರಾವ್ ಮತ್ತು ಸಹ-ಚಾಲಕ ಸತೀಶ್ ರಾಜಗೋಪಾಲ್ ಅವರು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾದಿಂದ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಸ್ – 2023 ಕಿರೀಟವನ್ನು ಪಡೆದರು.ಈ ಮಟ್ಟದ ಮೋಟಾರ್‌ಸ್ಪೋರ್ಟ್‌ನಲ್ಲಿ ಮಂಗಳೂರಿನ ಯುವಕನೊಬ್ಬ ಚಾಲಕರ ವಿಭಾಗದಲ್ಲಿ

ಜಸ್ಟ್ ಪಾಸ್ ಪಾಸ್‌ಪೋರ್ಟ್

ಜಾಗತಿಕ ಪಾಸ್‌ಪೋರ್ಟ್ ಪ್ರಭಾವ ಹೇಳುವ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2024ರದು ಹೊರಬಿದ್ದಿದೆ. ಪೋರ್ಬ್ಸ್ ಅದನ್ನು ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ಪಾಸ್‌ಪೋರ್ಟ್ ಪ್ರಭಾವವು ಮತ್ತೆ 5 ಸ್ಥಾನ ಕೆಳಕ್ಕೆ ಇಳಿದು 85ನೇ ರಿಯಾಂಕಿಗೆ ಹೋಗಿದೆ. ಕಳೆದ ಬಾರಿ 80ರಲ್ಲಿತ್ತು. ಭಾರತದ ಪಾಸ್‌ಪೋರ್ಟ್ ಇದ್ದರೆ 58 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದಿತ್ತು. ಈಗ 62 ದೇಶಗಳಿಗೆ ಪ್ರಯಾಣ ಮಾಡಬಹುದು. ಪಾಸ್‌ಪೋರ್ಟ್ಎಂದರೆ ಏನು? ಪಾಸ್ ಎಂದರೆ ಹಾದು ಹೋಗುವುದು.

“ಪ್ರಶ್ನೆಯಾದ ಜಯಲಲಿತಾ ವಜ್ರಾಭರಣ”

ತಮಿಳುನಾಡು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದ ಭ್ರಷ್ಟಾಚಾರ ಸಂಬಂಧ ಆರೋಪ ಸಾಬೀತಾಗಿದ್ದ ದಿವಂಗತ ಜಯಲಲಿತಾ ಅವರ ಚಿನ್ನಾಭರಣ ಒಯ್ಯಲು ಬೆಂಗಳೂರಿನ 36ನೇ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಲಯವು ಮಾರ್ಚ್ 6 ಮತ್ತು 7ನೇ ದಿನಾಂಕಗಳನ್ನು ನೀಡಿದೆ. ಜಯಲಲಿತಾರ ಭ್ರಷ್ಟಾಚಾರ ಪ್ರಕರಣ ಬೆಂಗಳೂರಿನಲ್ಲಿ ವಿಚಾರಣೆ ಆಗಿದ್ದು ಅವರು ಮತ್ತು ಅವರ ಮೂವರು ಸಹಚರರಿಗೆ ತಲಾ 4 ವರುಷ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಆಗ ಜಯಲಲಿತಾರಿಂದ

ಉಡುಪಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024

ಉಡುಪಿ: ವಾಹನ ಚಾಲಕರು ಸಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿ ಕೊಂಡು ರಸ್ತೆ ಅಪಘಾತವನ್ನು ತಡೆಗಟ್ಟುವಲ್ಲಿ ಸಹ ಕರಿಸಬೇಕು ಎಂದು ನಗರದ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಹೇಳಿದ್ದಾರೆ. ಮಣಿಪಾಲದ ಪ್ರಾದೇಶಿಕ ಸಾರಿಗೆ ಕಛೇaರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ವತಿ ಯಿಂದ ಸೋಮವಾರ ಆಯೋಜಿಸಿದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಸ್ತೆ