ಸುಳ್ಯ: ಹರಿಹರ, ಕೊಲ್ಲಮೊಗ್ರು ಗ್ರಾ.ಪಂ. ವ್ಯಾಪ್ತಿಯ ವಿವಿಧ ಬೇಡಿಕೆಗಳ ಬಗ್ಗೆ ಸಿಎಂಗೆ ಮನವಿ
ಸುಳ್ಯ: ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದಿರುವ ಹರಿಹರ ಕೊಲ್ಲಮೊಗ್ರು ಗ್ರಾಮದ ವಿವಿಧ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಕಲ್ಮಕಾರು ಶಾಲಾ ಜಮೀನನ್ನು ಶಾಲಾ ಹೆಸರಿನಲ್ಲಿ ಮಾಡಿ ಕೊಡುವಂತೆ, ಬೆಂಡೋಡಿ ಸರಕಾರಿ ಶಾಲೆಗೆ ಶೌಚಾಲಯ, ರಂಗಮಂದಿರ ಮತ್ತಿತರ ಸೌಲಭ್ಯ ಕಲ್ಪಿಸುವಂತೆ, ಸೇರಿದಂತೆ ಗ್ರಾಮ ವಾಸ್ತವ್ಯ ನಡೆದ ಅವಳಿ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ವಾಸ್ತವ್ಯ ದಲ್ಲಿ ಸಲ್ಲಿಸಿದ ಮನವಿಗೆ ಆದ್ಯತೆ ನೆಲೆಯಲ್ಲಿ ಪರಿಹಾರ ಹಾಗೂ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಯಿತು.
ಬೆಂಡೋಡಿ ಸೇತುವೆ ಪೂರ್ಣ ಗೊಳಿಸಲು ಅನುದಾನ. ನೀಡುವಂತೆ, ಬೆಂಡೋಡಿ ಸರ್ವಋತು ರಸ್ತೆ ಅಭಿವೃದ್ಧಿಗೆ ಅನುದಾನ, ಬೆಂಡೋಡಿ ಶ್ಮಶಾನ ಅಭಿವೃದ್ಧಿಗೆ ಅನುದಾನ, ಬೆಂಡೋಡಿ ಅಂಗನವಾಡಿಗೆ ಸ್ವಂತ ಜಮೀನು ಹಾಗೂ ಕಟ್ಟಡ ನೀಡುವಂತೆ, ಮಿತ್ತೋಡಿ ಸೇತುವೆ ಪೂರ್ಣಗೊಳಿಸಲು ಕ್ರಮಕ್ಕೆ ಮನವಿ, ಬಾಳುಗೋಡು-ಉಪ್ಪುಕಳ ರಸ್ತೆ ಅಭಿವೃದ್ಧಿ, ಕಂದಾಯ ಸಮಸ್ಯೆ ಪರಿಹರಿಸಲು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಗ್ರಾಮಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್, ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸರಕಾರಿ ಶಾಲೆಗೆ ವಿವಿಧ ಸೌಲಭ್ಯ, ಅನುದಾನ ಸಲ್ಲಿಸುವಂತೆ ಬೆಂಡೋಡಿ ಸರಕಾರಿ ಶಾಲಾ ಮಕ್ಕಳ ಹಾಗೂ ಇತರ ಸರಕಾರಿ ಶಾಲಾ ಮಕ್ಕಳು ಸಿಎಂ ಅವರಿಗೆ ಮನವಿ ಸಲ್ಲಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಜತೆಗಿದ್ದರು. ಬೆಂಡೋಡಿ ಶಾಲೆಯ ಬೇಡಿಕೆಗಳ ಬಗ್ಗೆ ಸಚಿವ ಮಧುಬಂಗಾರಪ್ಪ ಅವರಿಗೂ ಮನವಿ ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಶಾಲಾ ಮುಖ್ಯಶಿಕ್ಷಕಿ ಲಲಿತಾ ಕೆ., ಕೊಲ್ಲಮೊಗ್ರು ಗ್ರಾ.ಪಂ. ಸದಸ್ಯ ಮಾಧವ ಚಾಂತಾಳ, ಬೆಂಡೋಡಿ ಶಾಲಾ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಹೂವಪ್ಪ ಸಂಪ್ಯಾಡಿ, ಅಧ್ಯಕ್ಷ ಕಮಲಾಕ್ಷ ಬೆಂಡೋಡಿ, ಉಪಾಧ್ಯಕ್ಷ ಸುಮಿತ್ರಾ ಬೆಂಡೋಡಿ, ಸದಸ್ಯರಾ ರಾಮಣ್ಣ ಬೆಂಡೋಡಿ, ಕುಮಾರ ಬೆಂಡೋಡಿ, ಯತೀಶ್ ಬೆಂಡೋಡಿ, ಲೀಲಾವತಿ ಬೆಂಡೋಡಿ, ನೀಲಾವತಿ, ಶಿವಣ್ಣ ಪೇರಾಲು, ಪ್ರಮುಖರಾದ ಉದಯ ಶಿವಾಳ, ಹರಿಪ್ರಸಾದ್ ಮಲ್ಲಾಜೆ, ಅಶ್ವಿನ್ ಬೆಂಡೋಡಿ, ಶಿಕ್ಷಕಿ ಜಯಶ್ರೀ, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಪೂರ್ಣಿಮಾ ಬೆಂಡೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾರ್ತಿಕ್ ಅಂಬೆಕಲ್ಲು, ಶಾಲಾ ನಾಯಕಿ ಕಸ್ವಿತಾ ಬೆಂಡೋಡಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.