Home Archive by category Fresh News (Page 434)

ಆಸ್ಪತ್ರೆಯಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ : ನರ್ಸಿಂಗ್‌ ವಿದ್ಯಾರ್ಥಿ ಬಂಧನ

ಮಂಗಳೂರು : ಸುರತ್ಕಲ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಹಿಳೆಯರು ಉಡುಪು ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಇರಿಸಿ ದೃಶ್ಯಗಳನ್ನು ಸೆರೆ ಹಿಡಿದ ಆರೋಪದಲ್ಲಿ 21 ವರ್ಷದ ನರ್ಸಿಂಗ್‌ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್‌ವಿದ್ಯಾರ್ಥಿ ಪವನ್‌ ಈ ಕೃತ್ಯವೆಸಗಿದ ಆರೋಪಿ. ಮೂಲತಃ ಕಲಬುರಗಿಯವನಾದ ಪವನ್‌

ಕಾಲೇಜು ವಿದ್ಯಾರ್ಥಿನಿ ರೈಲ್ವೆ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಡಪ್ಪುರದ ಸುರೇಂದ್ರರವರ ಪುತ್ರಿ ಅಂಜನಾ.ಎಸ್(22) ಮೃತಪಟ್ಟವರು.ರಾತ್ರಿ ಊಟ ಮಾಡಿ ಮಲಗಿದ್ದ ವಿದ್ಯಾರ್ಥಿನಿ ಬೆಳಿಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದಳು.ಮನೆಯವರು ಹುಡುಕಾಡಿದಾಗ ಮನೆಯ ಪಕ್ಕದ ರೈಲು ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.ಸ್ಥಳಕ್ಕೆ ಕಾಸರಗೋಡು ನಗರ ಠಾಣಾ ಪೊಲೀಸರು ತೆರಳಿ ಮಹಜರು ನಡೆಸಿದ್ದಾರೆ‌.ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.ಇದು ಆತ್ಮಹತ್ಯೆಯ

ನ್ಯಾಯವಾದಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ದ.ಕ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ

ಮಂಗಳೂರಿನ ಯುವ ನ್ಯಾಯವಾದಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ ವನ್ನು ಖಂಡಿಸಿ ದ.ಕ ಜಿಲ್ಲಾ ವಕೀಲರ ಸಂಘದಿಂದ ಮಂಗಳೂರು ಕೋರ್ಟ್ ಎದುರು ನೂರಾರು ವಕೀಲರಿಂದ ಪ್ರತಿಭಟನೆ ನಡೆಯಿತು. ಬಂಟ್ವಾಳದ ವಕೀಲ ಕುಲದೀಪ್ ಶೆಟ್ಟಿ ಮೇಲೆ ಪುಂಜಾಲಕಟ್ಟೆ ಪೊಲೀಸರ ದೌರ್ಜನ್ಯ ಆರೋಪದಲ್ಲಿ ಸಿವಿಲ್ ಕೇಸ್ ನಲ್ಲಿ ಎಫ್.ಐ.ಆರ್ ದಾಖಲಿಸಿ ರಾತ್ರೋರಾತ್ರಿ ಮನೆಗೆ ನುಗ್ಗಿ ಬಂಧನಗೊಳಿಸಿ, ಅರೆಬೆತ್ತಲಾಗಿ ನ್ಯಾಯವಾದಿಯನ್ನ ಜೀಪಿನಲ್ಲಿ ಎಳೆದುಕೊಂಡು ಹೋಗಿ ದೌರ್ಜನ್ಯ ಆರೋಪವೆಸಗಿ, ನ್ಯಾಯಾವಾದಿ

ಕೋಟೆಕಾರು ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ದಂಪತಿ ಸಹಿತ ನಾಲ್ವರ ಬಂಧನ

ಉಳ್ಳಾಲ : ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದು,ಮಾಂಸ ಧಂದೆಯ ಅಡ್ಡೆಗೆ ಉಳ್ಳಾಲ ಪೊಲೀಸ್ರು ದಾಳಿ ನಡೆಸಿ ದಂಪತಿ ಸಹಿತ ನಾಲ್ವರನ್ನ ಬಂಧಿಸಿದ್ದಾರೆ. ಬೀರಿ ಬಾಡಿಗೆ ಮನೆ ನಿವಾಸಿ ಮೊಹಮ್ಮದ್ ಇಕ್ಬಾಲ್, ಆತನ ಪತ್ನಿ ಅಲಿಮಮ್ಮ, ಉಳ್ಳಾಲ ನಿವಾಸಿ ಶರ್ಫುದ್ದೀನ್,ಇರ್ಶಾದ್ ಅಡ್ಯನಡ್ಕ ಅವರನ್ನು ಉಳ್ಳಾಲ ಪೊಲೀಸ್ರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ವಕೀಲ ಕುಲ್‌ದೀಪ್ ಶೆಟ್ಟಿ ಮೇಲೆ ಪೊಲೀಸ್ ದೌರ್ಜನ್ಯ ಆರೋಪ : ಪುತ್ತೂರು ವಕೀಲರ ಸಂಘದಿಂದ ಪ್ರತಿಭಟನೆ

ಯುವ ವಕೀಲ ಕುಲ್‌ದೀಪ್ ಶೆಟ್ಟಿಯವರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ , ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ವಕೀಲರ ಸಂಘದಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ. ನಡೆಯಿತು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಏಕಾಏಕಿ ಮನೆಗೆ ಆಗಮಿಸಿದ ಪೊಲೀಸರು ವಕೀಲ ಕುಲದೀಪ್‌ಗೆ ಹಲ್ಲೆ ನಡೆಸಿ ಶಿಷ್ಠಾಚಾರ ತೋರದೆ ಅವರ ತಂದೆ ತಾಯಿಗೂ ಹಲ್ಲೆ ನಡೆಸಿ ಉಟ್ಟ

ಕ್ಷುಲ್ಲಕ ಕಾರಣಕ್ಕೆ ಸಹೋದರನ ಕೊಲೆ

ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಬಳಿ ನ್ಯೂ ಲೈಫ್ ಫಿಲಾಶಿಪ್ ಚರ್ಚ್ ಹತ್ತಿರದ ಸೈಟ್ನಲ್ಲಿ ಗಾರೆ ಕೆಲಸ ಮಾಡುವ ನಿಂಗಪ್ಪ ಗೌಡ ಮತ್ತು ಮಹಾದೇವ ಎಂಬ ಸಹೋದರ ನಡುವೆ ಕ್ಷುಲ್ಲಕ್ಕ ಕಾರಣಕ್ಕೆ ಗಲಾಟೆ ನಡೆದಿದ್ದು, ಮಹಾದೇವ ಎಂಬುವವರು ಮೃತಪಟ್ಟಿದ್ದಾರೆ ನಿಂಗಪ್ಪ ಎಂಬುವನು ಮಹಾದೇವನಿಗೆ ಕಬ್ಬಿಣದ ರಾಡಿನಿಂದ ತಲೆಗೆ ಮತ್ತು ಮೈಯಿಗೆ ಬಲವಾಗಿ ಹೊಡೆದು ಹಲ್ಲೆಗೊಳಿಸಿ , ಅಲ್ಲಿಂದ ನಿಂಗಪ್ಪ ಗೌಡನು ಓಡಿ ಹೋಗಿದ್ದು , ಗಾಯಗೊಂಡ ಮಹದೇವನನ್ನು ಪುತ್ತೂರು ಸಾರ್ವಜನಿಕ ಸರ್ಕಾರಿ

ಕುಡುಕನೊಬ್ಬನ ಹತ್ತು ಲಕ್ಷದ ಕಥೆ

ನ.27ರಂದು ನಗರದ ಪಂಪ್ವೆಲ್ ಬಳಿ ಕನ್ಯಾಕುಮಾರಿ ಮೂಲದ ಪಿ. ಶಿವರಾಜ್ (49) ಎಂಬುವವರಿಗೆ ಬಿದ್ದುಕೊಂಡಿದ್ದ ಹತ್ತು ಲಕ್ಷ ರೂಪಾಯಿಯ ನೋಟಿನ ಕಟ್ಟು ಸಿಕ್ಕಿದೆ. ಇವರು ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದು ಬೋಂದೇಲ್‌ನ ಕೃಷ್ಣನಗರದಲ್ಲಿ ವಾಸವಾಗಿದ್ದಾರೆ.ಇವರು ನ.27ರಂದು ಎಂದಿನಂತೆ ಕುಡಿಯುತ್ತಾ ಪಂಪ್‌ವೆಲ್ ಮೇಲ್ಸೇತುವೆ ಬಳಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ  ಪಾರ್ಕಿಂಗ್ ಸ್ಥಳದಲ್ಲಿ ಇಂದು ಚೀಲ ಬಿದ್ದಿತ್ತು. ಅಲ್ಲೇ ಇದ್ದ ಕೂಲಿ ಕಾರ್ಮಿಕ ಚೀಲ ಹಾಗೂ

“ಹರೇಕಳ ಗ್ರಾಮ ಸೌಧ” ಉದ್ಘಾಟನೆ

ಉಳ್ಳಾಲದ ಹರೇಕಳ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ ಉದ್ಘಾಟನೆ ನಡೆಯಿತು. ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಹರೇಕಳ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ ಉದ್ಘಾಟಿಸಿದರು. ನಂತರ ಮಾತನಡಿದ ಅವರು ಗ್ರಾಮ ಪಂಚಾಯಿತಿ ಕಚೇರಿ ಎಂಬುವುದು ಗ್ರಾಮದ ಆತ್ಮ.ಹರೇಕಳ ಗ್ರಾಮ ವಿವಿಧ ಅಭಿವೃದ್ಧಿ ಕಾಮಗಾರಿ ಮೂಲಕ ಮಾದರಿಯಾಗಿ ರೂಪುಗೊಳ್ಳುತ್ತಿದ್ದು ಇನ್ನೂ ಅಭಿವೃದ್ಧಿ ಆಗಬೇಕೆನ್ನುವ

2022ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿ : ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಶ್ರೀಧರ್ ಕುಲಾಲ್ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ಸರಕಾರ ಪ್ರಸ್ತುತ ಪಡಿಸುವ 2022ನೇ ಸಾಲಿನ ಕ್ರೀಡಾ ರತ್ನ ಪ್ರಶಸ್ತಿಗೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಶ್ರೀಧರ್ ಕುಲಾಲ್ ಆಯ್ಕೆಯಾಗಿದ್ದಾರೆ. ಕಂಬಳ ಕ್ಷೇತ್ರದಲ್ಲಿ ಆಗಣ್ಯ ಸಾಧನೆಯನ್ನು ಮಾಡಿ ಯಶಸ್ವಿ ಕ್ರೀಡಾಪಟುವಾಗಿ ಹೊರ ಹೊಮ್ಮಿದ ಇವರನ್ನು ಸರ್ಕಾರ ಗುರುತಿಸಿ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕಟೀಲು ಮೇಳದ ಚೌಕಿ ಸಹಾಯಕ ನಿಧನ

ಕಟೀಲು ಮೇಳದ ಐದನೇ ಮೇಳದ ಚೌಕಿ ಸಹಾಯಕ ಮಣಿನಾಲ್ಕೂರು ಗ್ರಾಮದ ಕೊಡಂಗೆ ನಿವಾಸಿ 45 ವರ್ಷದ ಅಚ್ಯುತ ನಾಯಕ್ ಅವರು ಹೃದಯ ಘಾತದಿಂದ ನಿಧನರಾದ ಮೇಳದ ಚೌಕಿ ಸಹಾಯರಾಗಿದ್ದಾರೆ. ಕಟೀಲು ಮೇಳದ ಯಕ್ಷಗಾನವು ಪ್ರಸ್ತುತ ಕಾಲಮಿತಿ ಯಕ್ಷಗಾನವಾಗಿದ್ದು, ರಾತ್ರಿ 1 ಗಂಟೆಯ ಸುಮಾರಿಗೆ ಯಕ್ಷಗಾನ ಮುಗಿದು ಪರಿಕರಗಳನ್ನು ಜೋಡಿಸುತ್ತಿದ್ದ ವೇಳೆ ಅಚ್ಯುತ ಅವರು ಏಕಾಏಕಿ ಅಸ್ವಸ್ಥತೆಗೊಂಡಿದ್ದಾರೆ ಎನ್ನಲಾಗಿದೆ. ಆಗ ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು