Home Archive by category Fresh News (Page 433)

ಡಿ.10 ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ ಅಕ್ಷರ ಉತ್ಸವ ವಾಮದಪದವು

ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ 22ನೇ ವರ್ಷದ ಸಂಭ್ರಮ “ಅಕ್ಷರ ಉತ್ಸವ” ವು ಡಿ.10ರಂದು ಶನಿವಾರ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅಕ್ಷರ ಉತ್ಸವವನ್ನು ಉದ್ಘಾಟಿಸುವರು. ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಸಂಜೆ 4

ಆಶ್ರಮದಲ್ಲಿ ಶಾಸಕ ವೇದವ್ಯಾಸ್ ಕಾಮಾತ್ ರ ಹುಟ್ಟುಹಬ್ಬ ದ ಸಂಭ್ರಮಾಚರಣೆ

ಬಿಜೆಪಿಯ ರಾಜ್ಯಧ್ಯಕ್ಷರು ಹಾಗೂ ಸಂಸದರಾದ ಶ್ರೀಯುತ ನಳಿನ್ ಕುಮಾರ್ ಕಟೀಲ್ ಹಾಗೂ ಜನಪ್ರಿಯ ಶಾಸಕರು, ಬಡವರ ಬಂಧು, ಜನ ನಾಯಕ ಮಾನ್ಯ ಶ್ರೀ ಡಿ ವೇದವ್ಯಾಸ್ ಕಾಮತ್ ರವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಯುವಮೋರ್ಚಾ ದಕ್ಷಿಣ ಮಂಡಲದ ವತಿಯಿಂದ ಶ್ರದ್ದಾನಂದ ಆಶ್ರಮ ಆರ್ಯ ಸಮಾಜ ಹಾಗೂ ಭಗಿನಿ ಸಮಾಜ ಅನಾಥಾಶ್ರಮದ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಿ ಮಕ್ಕಳ ಸಮ್ಮುಖದಲ್ಲಿ ಶಾಸಕರ ಹುಟ್ಟುಹಬ್ಬವನ್ನು ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಈ

ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ : ಪದಕ ವಿಜೇತ ಸತೀಶ್ ಖಾರ್ವಿಗೆ ಅದ್ಧೂರಿ ಸ್ವಾಗತ

ಕುಂದಾಪುರ: ಡೆಡ್‍ಲಿಫ್ಟ್‍ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ನನಗೆ, ಕಾಮನ್‍ವೆಲ್ತ್‍ನಲ್ಲೂ ವೈಯಕ್ತಿಕ ದಾಖಲೆ ನಿರ್ಮಿಸಬೇಕೆಂಬ ಹಂಬಲವಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಆದರೆ ಅಲ್ಲಿ ವಿಪರೀತ ಚಳಿಯಿಂದಾಗಿ ಭಾರ ಎತ್ತಲು ಸಾಧ್ಯವಾಗಲಿಲ್ಲ. ಇದರಿಂದ ವೈಯಕ್ತಿಕ ದಾಖಲೆ ಕೈ ತಪ್ಪಿ ಹೋಯಿತು ಎಂದು ಫವರ್ ಲಿಪ್ರರ್ ಕುಂದಾಪುರದ ಸತೀಶ್ ಖಾರ್ವಿ ಹೇಳಿದರು. ನ್ಯೂಜಿಲ್ಯಾಂಡ್‍ನ

ಕುಂದಾಪುರ ಬಾರ್ ಅಸೋಸಿಯೇಶನ್ ವತಿಯಿಂದ ನಟ ರಿಷಬ್ ಶೆಟ್ಟಿ ಅವರಿಗೆ ಸನ್ಮಾನ

ಕುಂದಾಪುರ : ಕಾಲೇಜು ದಿನಗಳಲ್ಲಿ ಇಲ್ಲಿನ ಭಂಡಾರ್‍ಕಾರ್ಸ್ ಕಾಲೇಜು, ನ್ಯಾಯಾಲಯದ ಪರಿಸರದಲ್ಲಿ ಓಡಾಡಿದ್ದ ನೆನಪುಗಳನ್ನು ಹೊಂದಿರುವ ನನಗೆ ಇದೇ ನ್ಯಾಯಾಲಯದ ಸಂಕೀರ್ಣದಲ್ಲಿ ಗೌರವಾನ್ವೀತ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಸನ್ಮಾನ ಪಡೆದುಕೊಳ್ಳಲು ತುಂಬಾ ಹೆಮ್ಮೆಯಾಗುತ್ತಿದೆ ಎಂದು ಕಾಂತಾರ ಚಲನಚಿತ್ರ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅಭಿಮಾನ ವ್ಯಕ್ತಪಡಿಸಿದರು. ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಕುಂದಾಪುರ ಬಾರ್ ಅಸೋಸೀಯೇಶನ್ ಆಶ್ರಯದಲ್ಲಿ ನಡೆದ

ಮೂಡುಬಿದಿರೆ ಪುರಸಭೆಯ ಅಧಿವೇಶನ : ಹಸಿಕಸ ವಿಲೇವಾರಿಯಲ್ಲಿ ಅಡಚಣೆ

ಮೂಡುಬಿದರೆ : ವಸತಿ ಸಮುಚ್ಛಯಗಳಲ್ಲಿನ ಹಸಿಕಸವನ್ನು ಹಂದಿ ಸಾಕಾಣಿಕೆಗಾರರಿಗೆ ರವಾನಿಸಿ ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿ ಎರಡು ಮೂರು ಬಾರಿ ಅಡಚಣೆಯಾಗಿದ್ದು ಇದರಿಂದಾಗಿ ತ್ಯಾಜ್ಯ ದಲ್ಲಿ ಹುಳುಗಳಾಗಿರುವದರಿಂದ ತ್ಯಾಜ್ಯ ಸಂಗ್ರಹವಾಗಿಲ್ಲ, ವಿಲೇವಾರಿ ಮಾಡುವವರಿಗೆ ತಿಳಿಸಿದರೆ ಅವರು ಪುರಸಭೆಯ ಅಧಿಕಾರಿಗಳಿಗೆ ತಿಳಿಸಿ ಎಂದು ಹೇಳುತ್ತಾರೆ. ಹಾಗಾದರೆ ಪುರಸಭೆಯ ಸದಸ್ಯರಾಗಿರುವ ನಮಗೆ ಗೌರವವಿಲ್ಲವೇ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ 23ಕೋಟಿಯಷ್ಟು ಹಣವನ್ನು

ಯುಪಿಸಿಎಲ್ ದೇಶೀಯ ಕಲ್ಲಿದ್ದಲು ಬಳಸುವ ಹುನ್ನಾರ : ಎಲ್ಲೂರು ಗ್ರಾಮ ಸಭೆಯಲ್ಲಿ ವಿರೋಧ

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಜನವಿರೋಧಿ ಯುಪಿಸಿಎಲ್ ಕಂಪನಿ ವಿದೇಶಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ನಡೆಸುವ ಒಡಂಬಡಿಕೆ ಇದ್ದರೂ ಇದೀಗ ಅದು ಜನರಿಗೆ ಸಮಸ್ಯೆಯೊಡ್ಡುವ ದೇಶೀ ಕಲ್ಲಿದ್ದಲು ಬಳಸುವ ಹುನ್ನಾರ ನಡೆಸುತ್ತಿದೆ ಎಂಬುದಾಗಿ ಎಲ್ಲೂರು ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಗ್ರಾಮಸಭೆಯಲ್ಲಿ ವಿಚಾರ ಮಂಡನೆ ಮಾಡಿದ ಗ್ರಾಮಸ್ಥ ನಾಗೇಶ್ ರಾವ್, ರಾಜ್ಯದಲ್ಲಿ ವಿದ್ಯುತ್ ಬರ

ಕಾರು ಢಿಕ್ಕಿ ಅಡ್ಯಾರ್ ಸೆಲೂನ್ ಮಾಲೀಕ ಮೃತ್ಯು

ಮಂಗಳೂರು : ಕಾರು ಅಪಘಾತಕ್ಕೀಡಾಗಿ ಅಡ್ಯಾರ್ ಬಾಳಿಕೆ ಮನೆ ನಿವಾಸಿ ಕೊರಗಪ್ಪ ಸಾಲ್ಯಾನ್ (65) ಎಂಬವರು ಮೃತಪಟ್ಟಿರುವ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮುಂಭಾಗ ಸಂಭವಿಸಿದೆ. ಅಡ್ಯಾರ್ ಗಾರ್ಡನ್ ಎದುರುಗಡೆಯ ಸಂತೋಷ್ ಹೇರ್ ಡ್ರೆಸ್ಸಸ್೯ ಎಂಬ ಸೆಲೂನಿನ ಮಾಲಕರಾಗಿದ್ದ ಇವರು ಸೈಕಲ್ ಮೂಲಕ ರಸ್ತೆ ದಾಟುವಾಗ ಬಿ.ಸಿ.ರೋಡ್ ಕಡೆಯಿಂದ ಅಮಿತ ವೇಗದಲ್ಲಿ ಬಂದ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ದೂರಕ್ಕೆ ಎಸೆಯಲ್ಪಟ್ಟು, ತಲೆಗೆ ಗಂಭೀರ ರೀತಿಯಲ್ಲಿ

ಸಿಂಗಿಂಗ್ ಟಿವಿ ರಿಯಾಲಿಟಿ ಶೋ “ಹಾಡು ನೀ ಹಾಡು” ಸೀಸನ್ 1 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ

ಕರಾವಳಿ ಕರ್ನಾಟಕದ ಪುಟಾಣಿ ಹಾಡುಗಾರರಿಗಾಗಿ ಸಜ್ಜಾಗಿರುವ ಹೊಚ್ಚ ಹೊಸ ಸಿಂಗಿಂಗ್ ಟಿವಿ ರಿಯಾಲಿಟಿ ಶೋ “ಹಾಡು ನೀ ಹಾಡು” ಸೀಸನ್ 1 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಉಡುಪಿ ಇಂದ್ರಾಳಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಸಂಪಾದಕಿ, ಪತ್ರಕರ್ತೆ, ಖ್ಯಾತ ಚಿಂತಕಿ ಡಾ. ಸಂಧ್ಯಾ ಪೈ ಅವರು ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಿರಿಯ ವಯಸ್ಸಿನಲ್ಲಿ ಮಕ್ಕಳ

ಪಂಪ್‌ವೆಲ್ ಹಣದ ಬಂಡಲ್‌ ಪ್ರಕರಣ :  ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿ

ಪಂಪ್‌ವೆಲ್ ಬಳಿ ಕೆಲವು ದಿನಗಳ ಹಿಂದೆ ಮೆಕ್ಯಾನಿಕ್  ಶಿವರಾಜ್ ಎಂಬವರಿಗೆ ಬಿದ್ದು ಸಿಕ್ಕಿದ್ದ ಹಣದ ಬಂಡಲ್‌ಗೆ ಸಂಬಂಧಿಸಿ ಮತ್ತೆ 2,99,500 ರೂ.ಗಳು ಪೊಲೀಸರ ವಶವಾಗಿದೆ. ಹಣದ ಬಂಡಲ್‌ಗಳ ಪ್ರಕರಣದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಈ ಅನಾಮಧೇಯ ಹಣದ ಕಟ್ಟುಗಳ ವಾರಿಸುದಾರರು ಇದ್ದಲ್ಲಿ, ಸಂಬಂಧಪಟ್ಟ ಠಾಣೆಗೆ ಸೂಕ್ತ ಮಾಹಿತಿಯೊಂದಿಗೆ ಭೇಟಿ ನೀಡಿದರೆ ವಾಪಾಸು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದರು. ನ.

ಡಿ.15 : ರಾಜ್ಯ ವಾರ್ತಾ ಆಯುಕ್ತರ ಕಚೇರಿ ಎದುರು ಪ್ರತಿಭಟನೆ

ಬೆಂಗಳೂರು : ಹಿಂದುಳಿದ ವರ್ಗಗಳ ಪತ್ರಕರ್ತರ ಮಾಲೀಕತ್ವದ ಪತ್ರಿಕೆಗಳಿಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿರುವ ಮಾಸಿಕ ಎರಡು ಪುಟ ಜಾಹೀರಾತು ಹಾಗೂ ಮೀಡಿಯಾ ಕಿಟ್ ನೀಡುವಲ್ಲಿ ವಿಳಂಬವಾಗಿದ್ದು, ಸರಕಾರದ ಈ ವಿಳಂಬ ನೀತಿಯನ್ನು ವಿರೋಧಿಸಿ ಡಿಸೆಂಬರ್ 15ರಂದು ಬೆಂಗಳೂರಿನಲ್ಲಿ ರಾಜ್ಯ ವಾರ್ತಾ ಇಲಾಖೆಯ ಆಯುಕ್ತರ ಕಛೇರಿಯ ಮುಂಭಾಗದಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ, ವರದಿಗಾರರ ಸಂಘ ಎಚ್ಚರಿಕೆ